Darshan Prisoner Number: ನಟ ದರ್ಶನ್ ಕೈದಿ ನಂಬರ್ 6106 to 511-ಭಾರೀ ವೈರಲ್
Actor Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಈಗಾಗಲೇ ಬಳ್ಳಾರಿ ಜೈಲು ದರ್ಶನವಾಗಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಟ್ಟಿದ್ದ ಕೈದಿ ನಂಬರ್ 6106 ಬದಲಾವಣೆ ಆಗಿದೆ. ಹಾಗಾದರೆ ಆ ನಂಬರ್ ಯಾವುದು ಹಾಗೂ ವೀಶೇಷತೆ ಏನು ಎಂದು ಇಲ್ಲಿ ತಿಳಿಯಿರಿ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ 2 ತಿಂಗಳು ಕಳೆದಿವೆ. ಇನ್ನು ಪರಪ್ಪನ ಅಗ್ರಹಾರ ಜೈಲಿನಲ್ಲೇ ರೌಡಿ ಶೀಟರ್ ನಾಗನ ಜೊತೆ ದರ್ಶನ್ ರೆಸಾರ್ಟ್ ರೀತಿಯಲ್ಲಿ ರೌಂಡ್ ಟೇಬಲ್ ಪಾರ್ಟಿಯಲ್ಲಿ ಭಾಗಿಯಾಗಿ ಒಂದು ಕೈಯಲ್ಲಿ ಕಾಫಿ ಮಗ್, ಮತ್ತೊಂದು ಕೈಯಲ್ಲಿ ಸಿಗರೇಟ್ ಹಿಡಿದಿ ಹರಟೆ ಹೊಡೆದಿರುವ ಫೋಟೋ ವೈರಲ್ ಆಗಿತ್ತು. ಅಲ್ಲದೆ, ರೌಡಿ ಶೀಟರ್ ಜೊತೆ ವಿಡಿಯೋ ಕಾಲ್ ಮಾಡಿ ಮಾತನಾಡಿರುವ ವಿಡಿಯೋ ಕೂಡ ವೈರಲ್ ಆಗಿದ್ದು, ಇದು ಭಾರೀ ಆಕ್ರೊಶಕ್ಕೆ ಕಾರಣವಾಗಿತ್ತು.

ಇದರ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ 9 ಜನ ಜೈಲಾಧಿಕಾರಿಗಳನ್ನು ಅಮಾನತು ಮಾಡಿದ್ದು, ಬಳಿಕ ಕೋರ್ಟ್ ಆದೇಶದ ಮೇರೆಗೆ ನಟ ದರ್ಶನ್‌ನನ್ನು ಬಳ್ಳಾರಿಯಲ್ಲಿನ ಕೇಂದ್ರ ಕಾರಾಗೃಹಕ್ಕೆ ಇಂದು (ಆಗಸ್ಟ್ 29) ಬೆಳಗ್ಗೆ ಶಿಫ್ಟ್ ಮಾಡಲಾಗಿದೆ. ಈ ವೇಳೆ ದರ್ಶನ್‌ಗೆ ಕೂಲಿಂಗ್ ಗ್ಲಾಸ್, ಜಾಕೆಟ್ ಧರಿಸಲು ಅವಕಾಶ ಮಾಡಿದ್ದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಬೆಳಗಾವಿ ಡಿಐಜಿ ಸೂಚನೆ ನೀಡಿದ್ದರು.
"6106" ಬರೆಸಿಕೊಂಡವರ ಪರದಾಟ: ಮತ್ತೊಂದೆಡೆ ನಟ ದರ್ಶನ್‌ಗೆ ಪರಪ್ಪನ ಅಹಗ್ರಹಾರದಲ್ಲಿ ನೀಡಿದ್ದ ಕೈದಿ ನಂಬರ್ 6106 ಅನ್ನು ಬಳ್ಳಾರಿ ಜೈಲಿನಲ್ಲಿ ಬದಲಾವಣೆ ಮಾಡಿ 511 ಅನ್ನು ನೀಡಲಾಗಿದೆ. ಇದು ಈಗಾಗಲೇ ಕೆಲವು ಅಂಧಾಭಿಮಾನಿಗಳು 6106 ಅನ್ನಯ ನಮ್ಮ ಮೆಚ್ಚಿನ ನಂಬರ್ ಎಂದು ಅಚ್ಚೆ, ಟ್ಯಾಟೂ ಹಾಕಿಸಿಕೊಂಡಿದ್ದರು. ಅಲ್ಲದೆ, ತಮ್ಮ ವಾಹನಗಳ ಮೇಲೂ ಬರೆಸಿಕೊಂಡವರಿಗೆ ಮತ್ತೆ ಅಳಿಸಿ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮತ್ತೊಂದು ಕಥೆ ಕಟ್ಟಿದ ಅಂಧಾಭಿಮಾನಿಗಳು: ಮತ್ತೊಂದೆಡೆ ಇದೀಗ ಕೆಲವರು ಮತ್ತೆ 511 ದರ್ಶನ್ ಅವರ ಲಕ್ಕಿ ನಂಬರ್. 5+1+1=7 ಇದು ದರ್ಶನ್‌ಗೆ ಲಕ್ಕಿ ಎಂದು ಹೇಳಿ ಅಂಧಾಭಿಮಾನವನ್ನು ಮುಂದುವರೆಸಿದ್ದಾರೆ. ಅಲ್ಲದೆ, ಈ ನಂಬರ್‌ನ ಸದ್ದು ಇದೀಗ ಜೋರಾಗಿಯೇ ಇದೆ.












Click it and Unblock the Notifications