Darshan Thoogudeepa: ಎಸಿಪಿ ಚಂದನ್ ಏನು ದೇವ್ರಾ? ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ತೂಗುದೀಪ್ ರಿಲೀಸ್...
ಡಿ-ಬಾಸ್ ದರ್ಶನ್ ತೂಗುದೀಪ್ ಎಂಬ ಬಿರುದು ಪಡೆದಿದ್ದ ನಟ ದರ್ಶನ್ ಅವರು ಬಾಕ್ಸ್ ಆಫಿಸ್ ಸುಲ್ತಾನ ಆಗಿದ್ದರು. ದರ್ಶನ್ ತೂಗುದೀಪ್ ಅವರ ಸಿನಿಮಾಗಳು ರಿಲೀಸ್ ಆಗುತ್ತವೆ ಅಂದ್ರೆ ಭಾರತದ ಮೂಲೆ ಮೂಲೆಯಲ್ಲೂ ಅಭಿಮಾನಿಗಳು ಕಾಯುತ್ತಿದ್ದರು. ಇದೇ ಕಾರಣ ಹಿಂದಿ ಭಾಷೆಗೆ ಕೂಡ ದರ್ಶನ್ ತೂಗುದೀಪ್ ಅವರ ಕನ್ನಡ ಸಿನಿಮಾಗಳು ಡಬ್ ಆಗಿ ರಿಲೀಸ್ ಆಗುತ್ತಿದ್ದವು. ಹೀಗಿದ್ದಾಗ ರೇಣುಕಾಸ್ವಾಮಿ ಭಾರಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲು ಸೇರಿದ್ದರು ದರ್ಶನ್ ತೂಗುದೀಪ್ ಅವರು. ಆದರೆ, ದರ್ಶನ್ ತೂಗುದೀಪ್ ಅವರನ್ನು ಅರೆಸ್ಟ್ ಮಾಡಿದ್ದ ಎಸಿಪಿ ಚಂದನ್ ಏನು ದೇವ್ರಾ? ಅಂತಾ....
ದರ್ಶನ್ ತೂಗುದೀಪ್ ಅಭಿಮಾನಿಗಳು & ಎಸಿಪಿ ಚಂದನ್ ನಡುವೆ ದೊಡ್ಡ ಗಲಾಟೆ ನಡೆಯುತ್ತಿದೆ. ಅದರಲ್ಲೂ ಎಸಿಪಿ ಚಂದನ್ ಈ ಹಿಂದೆ ನಟ ದರ್ಶನ್ ತೂಗುದೀಪ್ ಅವರ ಬರ್ತ್ ಡೇ ಅಂದ್ರೆ ಹುಟ್ಟುಹಬ್ಬದ ಸಮಯದಲ್ಲಿ, ದರ್ಶನ್ ತೂಗುದೀಪ್ ಮನೆಗೆ ಸೆಕ್ಯುರಿಟಿ ನೀಡಿ ದರ್ಶನ್ ಅವರ ಬಳಿ ಬಂದು ಮಾತನಾಡಿದ್ದ ವಿಡಿಯೋ ವೈರಲ್ ಆಗುತ್ತಿದೆ. ಇದೇ ವಿಡಿಯೋ ಇಟ್ಟುಕೊಂಡು ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಈಗ ಎಸಿಪಿ ಚಂದನ್ ಅವರ ವಿರುದ್ಧ ಮಾತನಾಡುತ್ತಿದ್ದಾರೆ. ಅದರಲ್ಲೂ ಎಸಿಪಿ ಚಂದನ್ ಇದೀಗ ದರ್ಶನ್ ತೂಗುದೀಪ್ ಕೇಸ್‌ನಲ್ಲಿ ಹೀರೋ ಆಗಿದ್ದು, ಈ ಬಗ್ಗೆ ಫ್ಯಾನ್ಸ್ ಪ್ರಶ್ನೆ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲೇ, ಎಸಿಪಿ ಚಂದನ್ ಏನು ದೇವ್ರಾ? ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ತೂಗುದೀಪ್ ರಿಲೀಸ್...

ಎಸಿಪಿ ಚಂದನ್ ಏನು ದೇವ್ರಾ?
ದರ್ಶನ್ ತೂಗುದೀಪ್ ಅವರನ್ನ ಕೋಟಿ ಕೋಟಿ ಅಭಿಮಾನಿಗಳು ಪ್ರೀತಿಸುತ್ತಾರೆ. ಹೀಗೆ ದರ್ಶನ್ ತೂಗುದೀಪ್ ಅವರಿಗೆ ಡಿ-ಬಾಸ್ ಎಂಬ ಬಿರುದು ಕೂಡ ನೀಡಿದ್ದಾರೆ. ಆದರೆ ಇದೇ ಡಿ-ಬಾಸ್ ಎಂಬ ಬಿರುದು ಪಡೆದಿರುವ ನಟ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ, ಬಳ್ಳಾರಿ ಜೈಲಿನಲ್ಲಿ ಪರದಾಡಲು ಎಸಿಪಿ ಚಂದನ್ ಅವರ ಖಡಕ್ ತನಿಖೆ ಕಾರಣ ಎನ್ನಲಾಗುತ್ತಿದೆ. ಈ ಸಮಯದಲ್ಲೇ ಎಸಿಪಿ ಚಂದನ್ ಅವರ ಬಗ್ಗೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ಮತ್ತೊಂದು ಕಡೆ, ಎಸಿಪಿ ಚಂದನ್ ಏನು ದೇವ್ರಾ?....
ಅಂದಹಾಗೆ ಈ ಪ್ರಶ್ನೆ ಕೇಳಿರುವುದು ಬೇರೆ ಯಾರೂ ಅಲ್ಲ, ದರ್ಶನ್ ತೂಗುದೀಪ್ ಅವರ ಕೇಸ್ ಬಗ್ಗೆ ಪದೇ ಪದೇ ಮಾತನಾಡುವ ಲಾಯರ್ ಜಗದೀಶ್ ಅವರು ಇದೀಗ ಎಸಿಪಿ ಚಂದನ್ ಏನು ದೇವ್ರಾ? ಎಂಬ ಪ್ರಶ್ನೆಯನ್ನ ಕೇಳಿದ್ದಾರೆ. ಅಷ್ಟಕ್ಕೂ ಈ ರೀತಿಯಾಗಿ ಲಾಯರ್ ಜಗದೀಶ್ ಅವರು ಮಾತನಾಡಿದ್ದು ಇದೀಗ ವೈರಲ್ ಆಗುತ್ತಿದ್ದು, ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಎಸಿಪಿ ಚಂದನ್ ಏನು ದೇವ್ರಾ? ಎಂದು ಲಾಯರ್ ಜಗದೀಶ್ ಅವರು ಪ್ರಶ್ನೆ ಕೇಳಿರುವ ವಿಡಿಯೋ ಶೇರ್ ಮಾಡುತ್ತಿದ್ದಾರೆ.
ಎಸಿಪಿ ಚಂದನ್ ಏನು ದೇವ್ರಾ?
ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್ ತೂಗುದೀಪ್ ಅವರು ಇದೀಗ ಜೈಲಿನಿಂದ ರಿಲೀಸ್ ಆಗುವ ಬಗ್ಗೆ ಮಾತನಾಡುತ್ತಾ ಲಾಯರ್ ಜಗದೀಶ್ ಅವರು, 'ನಮ್ಮ ದರ್ಶನ್ ನಿರಪರಾಧಿನಾ ಬರಬಹುದಾ ಅಂತ ಕೇಳ್ತಾ ಇದ್ದಾರೆ. ನಿರಪರಾಧಿ ಅಂತಾ ಹೇಳುವುದಕ್ಕೆ ಇನ್ನೂ ಸಮಯ ಇದೆ. ಯಾಕಂದ್ರೆ ಚಾರ್ಜ್‌ಶೀಟ್ ಹಾಕಿಬಿಟ್ಟಿದ್ದಾರೆ. ಆದರೆ ಒಂದಂತು ನಿಜ, ದರ್ಶನ್ ಹೊರಗಡೆ ಬರಬೇಕು. ಆಗಿರುವ ಕೊಲೆ ತಪ್ಪಿಸಲು ಆಗಲ್ಲ, 17 ಜನ ಮಾಡಿದ್ದು ಕೊನೆಯಲ್ಲಿ ಯಾವನ್ ಮಾಡಿದ್ದ ಅಂತಾ ಹೆಂಗೆ ಗೊತ್ತಾಯ್ತು ಎಸಿಪಿ ಚಂದನ್‌ಗೆ? ಎಸಿಪಿ ಚಂದನ್ ಏನು ದೇವ್ರಾ? ದೇವ್ರಾ?....' ಅಂತಾ ಲಾಯರ್ ಜಗದೀಶ್ ಅವರು ದರ್ಶನ್ ತೂಗುದೀಪ್ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್ ಆಗ್ತಿದೆ.
ಎಸಿಪಿ ಚಂದನ್ ಬಗ್ಗೆ ಡಿ-ಬಾಸ್ ಫ್ಯಾನ್ಸ್...
ಬಳ್ಳಾರಿ ಜೈಲಲ್ಲಿ ಪರದಾಡುತ್ತಿರುವ ದರ್ಶನ್ ತೂಗುದೀಪ್ ಅವರು ಜಾಮೀನು ಪಡೆದು, ಅದ್ಧೂರಿಯಾಗಿ ಜೈಲಿನಿಂದ ರಿಲೀಸ್ ಆಗಿ ಬರಲಿದ್ದಾರೆ. ಈ ಮೂಲಕ ಬಳ್ಳಾರಿ ಜೈಲಿಂದ ಬೆಂಗಳೂರು ತನಕ ಹೆಲಿಕಾಪ್ಟರ್ ಮೂಲಕ ದರ್ಶನ್ ತೂಗುದೀಪ್ ಅವ್ರನ್ನ ಕರೆಸಿಕೊಳ್ಳಬೇಕು ಎಂಬ ಆಸೆಯಲ್ಲಿ ಅಭಿಮಾನಿಗಳು ಇದ್ದರು. ಹೀಗಿದ್ದಾಗಲೇ ನಟ ದರ್ಶನ್ ಅವರ ಜಾಮೀನು ಅಂದ್ರೆ ಬೇಲ್ ಅರ್ಜಿ ರಿಜೆಕ್ಟ್ ಆಗಿ ಭಾರಿ ದೊಡ್ಡ ಆಘಾತ ಎದುರಾಗಿತ್ತು. ಇದೇ ಸಮಯದಲ್ಲಿ ಎಸಿಪಿ ಚಂದನ್ ಅವರ ಬಗ್ಗೆ ದರ್ಶನ್ ತೂಗುದೀಪ್ ಅವರ ಫ್ಯಾನ್ಸ್ ಆಕ್ರೋಶ ಹೊರ ಹಾಕುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿಡಿಯೋಗಳು ಓಡಾಡ್ತಿವೆ. ಅಲ್ಲದೆ ಬಾಸ್ ಹೊರಗೆ ಬಂದ ಮೇಲೆ ನಾವೇ ನಂಬರ್ 1 ಅಂತಿದ್ದಾರೆ ಫ್ಯಾನ್ಸ್.











Click it and Unblock the Notifications