'ಸೃಜನ್ ಬಿಗ್ ಬಾಸ್ ಮನೆಗೆ ಬಂದಾಗ ಗುಡ್‌ನ್ಯೂಸ್ ಅಂತಾ ಹೇಳಿದ್ರು'
ಬಿಗ್ ಬಾಸ್ ಕನ್ನಡ ಸೀಸನ್ 11ರ 50ನೇ ದಿನ ಬಿಗ್ ಬಾಸ್ ಮನೆಯಿಂದ ನಟಿ ಅನುಷಾ ರೈ ಹೊರಬಿದ್ದಿದ್ದಾರೆ. ದೊಡ್ಮನೆಯಿಂದ ಹೊರ ಬಂದ ಬಳಿಕ ನಟಿ ಅನುಷಾ ರೈ ತಮ್ಮ ಮೆಚ್ಚಿನ ನಟ ದರ್ಶನ ಬಗ್ಗೆ ಮಾತನಾಡಿದ್ದಾರೆ. ಅಪ್ಪಟ ದರ್ಶನ್ ಅಭಿಮಾನಿಯಾಗಿರುವ ಅನುಷಾ ರೈ ಈ ಹಿಂದೆ ಕೂಡ ದರ್ಶನ್ ಪರ ಮಾತನಾಡಿದ್ದರು.
ಇದೀಗ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ದರ್ಶನ್ ಬಗ್ಗೆ ಎಲ್ಲಾ ವಿಚಾರಗಳನ್ನು ಕೇಳಿ ತಿಳಿದುಕೊಂಡ ಬಗ್ಗೆ ಮಾತನಾಡಿದ್ದಾರೆ. 'ನನ್ನ ಪ್ರಕಾರ ದರ್ಶನ್ ಸರ್‌ಗೆ ಒಳ್ಳೆಯದಾಗಬೇಕು. ಮೊದಲಿಂದನೂ ನಾನು ಕೇಳಿಕೊಳ್ಳುವುದು ಇದೊಂದೇ. ಅವರ ಅಭಿಮಾನಿಯಾಗಿ ಅವರಿಗೆ ಇರುವ ಸಮಸ್ಯೆಗಳು ಆದಷ್ಟು ಬೇಗ ಪರಿಹಾರ ಆಗಬೇಕು. ಈಗ ಆರೋಗ್ಯ ಸಮಸ್ಯೆ ಅಂತಾ ಬೇರೆ ಹೇಳುತ್ತಿದ್ದಾರೆ'.

'ನಾನು ಬಿಗ್ ಬಾಸ್ ಮನೆಯಿಂದ ಬಂದ ತಕ್ಷಣ ಮೊದಲು ಕೇಳಿದ್ದೇ ದರ್ಶನ್ ಸರ್ ಬಿಡುಗಡೆಯಾದರಾ ಅಂತಾ ಅಮ್ಮನನ್ನು ಕೇಳಿದೆ. ಆಗ ಅಮ್ಮ ಬಿಡುಗಡೆ ಆಗಿದ್ದಾರೆ. ಆದರೆ ಒಂದು ತಿಂಗಳ ಮಟ್ಟಿಗೆ ಮಾತ್ರ. ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಆಗಿದೆ. ಆಸ್ಪತ್ರೆ ದಾಖಲಾಗಿದ್ದಾರೆ ಅಂತಾ ಹೇಳಿದರು. ಅದನ್ನು ಕೇಳಿ ಇನ್ನಷ್ಟು ಬೇಜಾರಾಯ್ತು. ಆ ಸಮಸ್ಯೆ ಜೊತೆಗೆ ಇನ್ನೊಂದು ಸಮಸ್ಯೆ ಬಂತಾ ಅವರಿಗೆ ಅಂತಾ ಬೇಸರವಾಯ್ತು' ಎಂದರು.
'ನಾನು ದೇವರಲ್ಲಿ ಪ್ರತಿ ಕ್ಷಣ ಕೇಳಿಕೊಳ್ಳುತ್ತೇನೆ. ದರ್ಶನ್ ಸರ್ ಎಲ್ಲಾ ಸಮಸ್ಯೆಯಿಂದ ಮುಕ್ತರಾಗಿ, ಅವರು ಆರೋಗ್ಯವಂತರಾಗಿ, ಬೇಗ ಸಂಪೂರ್ಣವಾಗಿ ಬಿಡುಗಡೆಯಾಗಲಿ. ಆರೋಪದಿಂದ ಅವರು ಮುಕ್ತರಾಗ ಬೇಕು ಎಂದು ಕೇಳಿಕೊಳ್ಳುತ್ತೇನೆ. ದೇವರು ಅವರನ್ನು ಕಾಪಾಡಬೇಕು ಅಂತಾ ಕೇಳಿಕೊಳ್ಳುತ್ತೇನೆ' ಎಂದು ಹೇಳಿದರು.

'ಬಿಗ್ ಬಾಸ್ ಮನೆಯಲ್ಲಿ ದರ್ಶನ್ ಅವರ ಬಗ್ಗೆ ತುಂಬಾ ಸಲ ಮಾತನಾಡಿದ್ದೇವೆ. ಸೃಜನ್ ಅವರು ಮನೆಯೊಳಗೆ ಬಂದಾಗ ಮಗಾ ಒಂದು ಗುಡ್ ನ್ಯೂಸ್, ನವಗ್ರಹ ಸಿನಿಮಾ ಮತ್ತೆ ರಿಲೀಸ್ ಆಗುತ್ತಿದೆ ಅಂತಾ ಧರ್ಮಗೆ ಹೇಳಿ ಹೋಗಿದ್ದರು. ಹೀಗಾಗಿ ದರ್ಶನ್ ಅವರನ್ನು ತುಂಬಾ ಸಲ ನೆನೆಪಿಸಿಕೊಂಡಿದ್ದೇವೆ. ದಿನಕ್ಕೆ ಒಂದು ಬಾರಿಯಾದರೂ ದರ್ಶನ್ ಬಗ್ಗೆ ಮಾತನಾಡುತ್ತಿದ್ದೆವು. ದರ್ಶನ್ ಅವರು ಬಿಗ್ ಬಾಸ್ ನೋಡುತ್ತಿರಬಹುದಾ..? ಅಂತೆಲ್ಲಾ ಸಹ ಮಾತನಾಡಿದ್ದೇವೆ ಎಂದು ಅನುಷಾ ರೈ ಗ್ಯಾರಂಟಿ ನ್ಯೂಸ್‌ಗೆ ನೀಡಿದ ಸಂದರ್ಶನಲ್ಲಿ ಹೇಳಿದ್ದಾರೆ.
ದರ್ಶನ್ ಮಹಾನ್ ಅಭಿಮಾನಿಗಳ ಅಭಿಮಾನಿ
ಇನ್ನು ಈ ಹಿಂದೆ ದರ್ಶನ್ ಬಗ್ಗೆ ಸುದೀರ್ಘವಾಗಿ ಬರೆದಿದ್ದ ಅನುಷಾ ರೈ, ಅಭಿಮಾನ ಹುಟ್ಟುವುದು ಹೊಗಳಿಕೆಯ ಮಾತಿನಿಂದಲ್ಲ ತೋರಿಸುವ ಪ್ರೀತಿಯಿಂದ. ನಿಮ್ಮ ಅಭಿಮಾನಿಗಳು ನಿಮಗೆ ತೋರಿಸುವರು ಅಭಿಮಾನ ನಿಮ್ಮಲ್ಲಿ ತುಂಬಿಹುದು ಸ್ವಾಭಿಮಾನ. ಸ್ವತ: ತಾವೇ ಸೆಲೆಬ್ರಿಟಿಯಾಗಿದ್ದರೂ ನಿಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿಗಳು ಎಂದು ಕರೆಯುವ ನಿಮ್ಮ ಆ ದೊಡ್ಡತನ ನಿಮ್ಮ ಸೆಲೆಬ್ರಿಟಿಗಳ ಮೇಲೆ ನೀವು ಇಟ್ಟಿರುವ ಪ್ರೀತಿ ಯಾರಿಗೂ ಕಾಣುವುದಿಲ್ಲ. ಆದರೆ ಅದನ್ನು ತಾವು ತೋರಿಸಿದ ಆ ಒಂದು ಪ್ರೀತಿಯ ವಿಧಾನ ನಿಮ್ಮ ಗುಣ ಅಚ್ಚಳಿಯದಂತೆ ಹಚ್ಚೆ ಹಾಕಿಸಿದ ಏಕೈಕ ವ್ಯಕ್ತಿತ್ವ ನಿಮ್ಮದು.

ಮಹಾನ್ ಅಭಿಮಾನಿಗಳ ಅಭಿಮಾನಿ ಎಂದರೆ ತಪ್ಪಾಗಲಾರದು. ನಿಮ್ಮಂತಹ ಕಲಾವಿದ, ಮಗುವಿನಂತ ಮನಸ್ಸಿನ ನೇರ ವ್ಯಕ್ತಿತ್ವದ ಸರದಾರ. ಈ ನಿಮ್ಮ ಗುಣ ಹಾಗೂ ಕಪಟವೇ ಅರಿಯದ ನೀವು ನಿಮಗೆ ಯಾವುದೇ ಸೋಲು ಸಿಗದ ಹಾಗೆ ತಪ್ಪಿಸಿಕೊಂಡು ದೂರ ಹೋಗಲಿ.
ನಿಮಗೆ ತೊಂದರೆ ಕೊಡಬೇಕು ಎಂದು ಪ್ರಯತ್ನ ಪಟ್ಟವರು ನಿಮ್ಮ ಪ್ರೀತಿಯನ್ನು ಪಡೆದು ನಿಮ್ಮ ಪ್ರೀತಿಯಲ್ಲಿ ಅವರು ಕೂಡ ಸೇರಿಕೊಂಡು ನಿಮ್ಮ ಪ್ರೀತಿಯನ್ನು ಅವರು ಅನುಭವಿಸುವಂಥಾಗಲಿ ಎಂದು ಆಶಿಸುತ್ತೇನೆ. ನಿಮಗೆ ಶತ್ರುಗಳೇ ಇಲ್ಲದ ಹಾಗೆ ನೂರಾರು ವರ್ಷ ಸುಖವಾಗಿ ಬಾಳಿ ಎಂದು ನನ್ನ ಹಾರೈಕೆ ನೀವು ನೂರಾರು ವರ್ಷ ಸಂತೋಷವಾಗಿ ಆರೋಗ್ಯವಾಗಿ ಯಶಸ್ಸಿನೊಂದಿಗೆ ನಡೆಯಿರಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದರು.












Click it and Unblock the Notifications