Actor Vishal: ಪುನೀತ್‌ ರಾಜ್‌ಕುಮಾರ್‌ ತಂಗಿಯನ್ನೇ ವರಿಸಲಿದ್ದಾರಾ ನಟ ವಿಶಾಲ್‌?

ಇತ್ತೀಚೆಗೆ ಅನಾರೋಗ್ಯದ ಕಾರಣದಿಂದ ಭಾರೀ ಸುದ್ದಿಯಲ್ಲಿದ್ದ ತಮಿಳು ನಟ ವಿಶಾಲ್‌, ಒಂದೇ ವಾರದಲ್ಲಿ ಕಂಬ್ಯಾಕ್‌ ಮಾಡಿದ್ದರು. 12 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಮದಗಜರಾಜ ಸಿನಿಮಾ ತೆರೆಗೆ ಬರುವ ಖುಷಿಯಲ್ಲಿದ್ದ ತಮಿಳು ನಟ ವಿಶಾಲ್ ಅಭಿಮಾನಿಗಳಿಗೆ ದೊಡ್ಡ ಆಘಾತವಾಗಿತ್ತು. ವೇದಿಕೆ ಮೇಲೆ ನಟನನ್ನು ನೋಡಿ ಒಂದು ಕ್ಷಣ ಶಾಕ್‌ ಆಗಿದ್ದರು.

ನಡುಗುವ ಧ್ವನಿ, ಮೈಕ್‌ ಹಿಡಿದುಕೊಳ್ಳಲಾಗದೇ ನಡುಗುತ್ತಿದ್ದ ಕೈ, ನಿಂತು ಮಾತನಾಡಲು ಸಾಧ್ಯವಾದಂತಹ ಸ್ಥಿತಿಯಲ್ಲಿ ವಿಶಾಲ್ ಕಾಣಿಸಿಕೊಂಡಿದ್ದರು. ಬಳಿಕ ಚಿಕಿತ್ಸೆ ಪಡೆದು ಕಂಬ್ಯಾಕ್‌ ಮಾಡಿದ ನಟ ವಿಶಾಲ್ ತಮ್ಮ ಅನಾರೋಗ್ಯದ ಬಗ್ಗೆ ಟ್ರೋಲ್‌ ಮಾಡಿದವರಿಗೆ ಸಖತ್‌ ಟಕ್ಕರ್‌ ಕೊಟ್ಟಿದ್ದರು.

ಹೀಗಾಗಿ ಸುದ್ದಿಯಲ್ಲಿರುವ ನಟ ವಿಶಾಲ್ ಹೆಸರು ಇದೀಗ ಮತ್ತೊಂದು ವಿಚಾರಕ್ಕೆ ಮುನ್ನೆಲೆಗೆ ಬಂದಿದೆ. 47 ವರ್ಷ ಆದರೂ ಇನ್ನೂ ಬ್ಯಾಚುಲರ್ ಆಗಿಯೇ ಉಳಿದುಕೊಂಡಿರುವ ವಿಶಾಲ್ ಇದೀಗ ಮದುವೆಗೆ ಸಿದ್ಧರಾಗಿದ್ದಾರಾ? ಎನ್ನುವ ಪ್ರಶ್ನೆಯೊಂದು ಮೂಡಿದೆ. ಈ ಅನುಮಾನಕ್ಕೆ ಕಾರಣವಾಗಿದ್ದು, ನಟಿಯೊಬ್ಬರ ಆ ಒಂದು ಪೋಸ್ಟ್‌.

Vishal Marriage Rumors Emerge After Actress Abhinaya Engagement News

ಹೌದು ಕನ್ನಡದ 'ಹುಡುಗರು' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ತಂಗಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಅಭಿನಯಾ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ಕಿವಿ ಕೇಳಿಸಿದ ಮಾತು ಬಾರದ ತನ್ನ ನ್ಯೂನತೆಯನ್ನು ಮೆಟ್ಟಿ ನಿಂತು ಬೆಳೆದ ನಟಿ ಅಭಿನಯಾ, ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ ಯಶಸ್ಸು ಕಂಡಿದ್ದು, ಇದೀಗ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.

ನಟಿ ಅಭಿನಯಾ ಬಹುಕಾಲದಿಂದ ಪ್ರೀತಿಸುತ್ತಿದ್ದ ವ್ಯಕ್ತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಸಂತಸದ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ದೇವಾಲಯದ ಗಂಟೆಯನ್ನು ಬಾರಿಸುತ್ತಿರುವ ಫೋಟೋವನ್ನು ಶೇರ್‌ ಮಾಡಿದ್ದಾರೆ. ಆದರೆ ಹುಡುಗನ ಫೋಟೋವನ್ನಾಗಲಿ, ಹೆಸರನ್ನಾಗಲಿ ಬಹಿರಂಗಪಡಿಸಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಅಭಿನಯಾಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದ್ದು, ಹುಡುಗ ಯಾರಿರಬಹುದು? ಎನ್ನುವ ಕುತೂಹಲವನ್ನು ಅನೇಕರು ವ್ಯಕ್ತಪಡಿಸಿದ್ದಾರೆ.

Vishal Marriage Rumors Emerge After Actress Abhinaya Engagement News

ಅಭಿನಯಾ ಮದುವೆ ವಿಚಾರ ಹಂಚಿಕೊಳ್ಳುತ್ತಿದ್ದಂತೆ ನಟ ವಿಶಾಲ್‌ ಹೆಸರು ಮುನ್ನೆಲೆಗೆ ಬಂದಿದ್ದು, ಇದಕ್ಕೆ ಕಾರಣ ಕೂಡ ಇದೆ. ವಿಶಾಲ್ ಜೊತೆ ತಳುಕು ಹಾಕಿಕೊಂಡ ನಟಿಯರ ಸಾಲಿನಲ್ಲಿ ಅಭಿನಯಾ ಹೆಸರು ಕೂಡ ಇತ್ತು. ವಿಶಾಲ್ ಜೊತೆ ಮಾರ್ಕ್ ಆಂಟನಿ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದ ಅಭಿನಯಾ, ವಿಶಾಲ್ ಜೊತೆಗಿನ ಡೇಟಿಂಗ್ ಕುರಿತಾಗಿ ಸಖತ್‌ ಸುದ್ದಿಯಾಗಿದ್ದರು.

ಹೀಗಾಗಿ ಅಭಿನಯಾ ಎಂಗೇಜ್ಮೆಂಟ್ ಫೋಟೋ ಹಂಚಿಕೊಳ್ಳುತ್ತಿದ್ದಂತೆ ಫ್ಯಾನ್ಸ್‌ ಹುಡುಗ ಯಾರಿರಬಹುದು? ಎನ್ನುವ ಗೆಸ್‌ಗೆ ನಟ ವಿಶಾಲ್ ಕಡೆ ಕೈ ತೋರಿಸುತ್ತಿದ್ದಾರೆ. ಇದು ಕೇವಲ ಅಭಿಮಾನಿಗಳ ಗೆಸ್‌ ಆಗಿದ್ದು, ಅಭಿನಯಾ ಶೀಘ್ರದಲ್ಲೇ ತಮ್ಮ ಬಾಳ ಸಂಗಾತಿಯನ್ನು ಪರಿಚಯಿಸುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+