ನಟಿ ರಮ್ಯಾ ಜೊತೆಗಿನ ಫೋಟೋ ವೈರಲ್; ವಿನಯ್ ರಾಜ್‌ಕುಮಾರ್ ಹೇಳಿದ್ದೇನು?
ನಟಿ ರಮ್ಯಾ ಅವರ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಇತ್ತೀಚೆಗೆ ಅವರು ನಟ ವಿನಯ್ ರಾಜ್‌ಕುಮಾರ್ ಅವರೊಂದಿಗೆ ಹೆಚ್ಚು ಕ್ಲೋಸ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಇದರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇತ್ತೀಚೆಗೆ ರಮ್ಯಾ ಅವರೊಂದಿಗೆ ವಿನಯ್ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಒಟ್ಟಿಗೆ ಊಟ ಮಾಡಿದ ಫೋಟೋಗಳನ್ನು ಹಂಚಿಕೊಂಡಿದ್ದರು. ದರ್ಶನ್ ಅವರ ಅಭಿಮಾನಿಗಳು ಕೆಟ್ಟದಾಗಿ ಕಾಮೆಂಟ್, ಮೆಸೇಜ್ ಮಾಡಿದ ವಿಚಾರವಾಗಿಯೂ ರಮ್ಯಾಗೆ ಬೆಂಬಲಕ್ಕೆ ವಿನಯ್ ನಿಂತಿದ್ದರು. ಇದರ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನಲ್ಲಿ ಹೊಸ ವದಂತಿ ಹಬ್ಬಿದೆ. ರಮ್ಯಾ ಹಾಗೂ ವಿನಯ್ ಸದ್ಯದಲ್ಲೇ ಸಿಹಿಸುದ್ದಿ ನೀಡಲಿದ್ದಾರೆ ಎಂದು ಚರ್ಚೆಯಾಗುತ್ತಿದೆ. ಇತ್ತೀಚೆಗೆ ಮತ್ತೊಂದು ಫೋಟೋ ಕೂಡ ವೈರಲ್ ಆಗಿದೆ. ಈ ವಿಚಾರದ ಬಗ್ಗೆ ವಿನಯ್ ರಾಜ್‌ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ರಮ್ಯಾ ಹಾಗೂ ವಿನಯ್ ರಾಜ್ಕುಮಾರ್ ಅವರ ಫೋಟೋಶೂಟ್ ವಿಡಿಯೋ ವೈರಲ್ ಆಗಿತ್ತು. ಇಬ್ಬರೂ ಸೇರಿ ಹೊಸ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದರಲ್ಲಿ ವಿನಯ್ ಹಾಗೂ ರಮ್ಯಾ ಒಳ್ಳೆಯ ಪೋಸ್ ಕೊಟ್ಟಿದ್ದರು. ಆದರೆ ಇದು ಮ್ಯಾಗಜೀನ್‌ವೊಂದಕ್ಕೆ ಮಾಡಿಸಿದ್ದ ಫೋಟೋಶೂಟ್ ಎಂದು ಹೇಳಲಾಗಿತ್ತು. ಇದಾದ ಬಳಿಕ ಇಬ್ಬರೂ ಹಲವು ಬಾರಿ ಭೇಟಿಯಾಗಿರುವ ಫೋಟೋಗಳು ವೈರಲ್ ಆಗಿದ್ದವು.

ಸೆಲ್ಫಿ ಫೋಟೋಸ್ ವೈರಲ್
ನಟಿ ರಮ್ಯಾ ಅವರು ಮಿರರ್ ಸೆಲ್ಫಿ ಜೊತೆಗೆ ನಟ ವಿನಯ್ ರಾಜ್ಕುಮಾರ್ ಅವರ ಫೋಟೋ ಕೂಡ ಅಪ್ಲೋಡ್ ಮಾಡಿದ್ದರು. ಇದರಲ್ಲಿ ವಿನಯ್ ಅವರು ಮೊಬೈಲ್ ನೋಡುತ್ತಾ ನಗುತ್ತಿರುವ ಫೋಟೋ ಇತ್ತು. ಈ ಫೋಟೋ ಜೊತೆಗೆ ಪ್ರೀತಿಯನ್ನು ಯಾವಾಗಲೂ ನೆನಪಿಡಿ ಎಂದು ಕೂಡ ಬರೆದುಕೊಂಡಿದ್ದರು. ಆಗಿನಿಂದಲೂ ಹಲವು ವದಂತಿ ಹಬ್ಬಿತ್ತು.
ಇತ್ತೀಚೆಗೆ ವಿನಯ್ ರಾಜ್ಕುಮಾರ್ ಅವರ ಸೆಲ್ಫಿಗೆ ಕಿಸ್ ಮಾಡುವಂತಹ ಪೋಸ್ ಕೊಟ್ಟಿದ್ದರು ರಮ್ಯಾ, ಈ ಫೋಟೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇಬ್ಬರ ನಡುವಿನ ಬಾಂಡಿಂಗ್ ನೋಡಿ ಗಾಸಿಪ್ ಕೂಡ ಹಬ್ಬಿದೆ. ವಿನಯ್ ಹಾಗೂ ರಮ್ಯಾ ಇಬ್ಬರೂ ಮದುವೆಯಾಗಿಲ್ಲದ ಕಾರಣ, ಇತ್ತೀಚೆಗೆ ಇಷ್ಟು ಕ್ಲೋಸ್ ಆಗಿ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದರು. ಈ ಬಗ್ಗೆ ವಿನಯ್ ರಾಜ್‌ಕುಮಾರ್ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ. ತಮ್ಮ ಹಾಗೂ ರಮ್ಯಾ ನಡುವಿನ ಬಾಂಡಿಂಗ್ ಅನ್ನು ವಿನಯ್ ಬಿಚ್ಚಿಟ್ಟಿದ್ದಾರೆ.

'ಹೆಚ್ಚಾಗಿ ಮೀಟ್ ಆಗ್ತೀವಿ'
'ಅದು ಸಿನಿಮಾಗಾಗಿ ಮಾಡಿಸಿದ್ದ ಫೋಟೋಶೂಟ್ ಅಲ್ಲ, ಮ್ಯಾಗಜೀನ್‌ಗಾಗಿ ಮಾಡಿಸಿದ ಫೋಟೋಶೂಟ್ ಎಂದಿದ್ದಾರೆ ವಿನಯ್. 'ಇಬ್ಬರ ನಡುವಿನ ಬಾಂಡಿಂಗ್ ಬಗ್ಗೆ ಮಾತನಾಡಿದ ವಿನಯ್ ರಾಜ್‌ಕುಮಾರ್, ಅವರು ನನಗೆ ಚಿಕ್ಕವಯಸ್ಸಿನಿಂದಲೂ ಗೊತ್ತಿದೆ. ಅಭಿ ಸಿನಿಮಾದ ಟೈಮಿಂದಲೂ ರಮ್ಯಾ ಅವರ ಪರಿಚಯ ಇದೆ. ಆಗ ನಾನು ಎಂಟನೇ ತರಗತಿಯಲ್ಲಿ ಓದುತ್ತಿದ್ದೆ. ಆಗಿನಿಂದಲೂ ತುಂಬಾ ಚೆನ್ನಾಗಿ ಗೊತ್ತು. ರಮ್ಯಾ ಅವರು ನನಗೆ ತುಂಬಾ ಒಳ್ಳೆಯ ಫ್ರೆಂಡ್. ಆಗಾಗ ಮೀಟ್ ಮಾಡುತ್ತಿರುತ್ತೇವೆ' ಎಂದು ಕ್ಲಾರಿಟಿ ಕೊಟ್ಟಿದ್ದಾರೆ.












Click it and Unblock the Notifications