Darshan Thoogudeepa: ಪತಿಯೊಂದಿಗೆ ಸಂಕ್ರಾಂತಿ ಹಬ್ಬ ಆಚರಣೆ: ಫೋಟೋ ಶೇರ್ ಮಾಡಿದ ವಿಜಯಲಕ್ಷ್ಮೀ ದರ್ಶನ್

ಚಾಲೆಂಜಿಂಗ್ ಸ್ಟಾರ್‌ ದರ್ಶನ್ ತೂಗುದೀಪ ಅವರ ಮನೆಯಲ್ಲಿ ಮಕರ ಸಂಕ್ರಾಂತಿಯ ಹಬ್ಬದ ಸಡಗರ ಜೋರಾಗಿದೆ. 2025ನೇ ವರ್ಷದ ಮೊದಲ ಹಬ್ಬವನ್ನು ದರ್ಶನ್ ಅವರೊಂದಿಗೆ ಆಚರಿಸಬೇಕು ಅನ್ನೋ ವಿಜಯಲಕ್ಷ್ಮಿ ಅವರ ಆಸೆ ಕೊನೆಗೂ ಈಡೇರಿದೆ. ಹೀಗಾಗಿ ದರ್ಶನ್ ಅವರೊಂದಿಗೆ ಇರುವ ಫೋಟೋವನ್ನು ವಿಜಯಲಕ್ಷ್ಮೀ ಇಂದು ಶೇರ್ ಮಾಡಿದ್ದಾರೆ.

ಹೌದು... ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಚಾಲೆಂಜಿಂಗ್ ಸ್ಟಾರ್‌ ದರ್ಶನ್‌ ತೂಗುದೀಪ ಆರು ತಿಂಗಳ ಕಾಲ ಜೈಲಿನಲ್ಲಿದ್ದು ಹೊರ ಬಂದಿದ್ದಾರೆ. ಅವರನ್ನು ಹೊರಗಡೆ ಕರೆದುಕೊಂಡು ಬರಲು ಪತ್ನಿ ವಿಜಯಲಕ್ಷ್ಮಿ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಬೇಡಿಕೊಳ್ಳದ ದೇವರುಗಳಿಲ್ಲ. ವಿಜಯಲಕ್ಷ್ಮೀ ಅವರ ಸತತ ಪ್ರಯತ್ನ ಹಾಗೂ ಪೂಜಾ ಫಲದಿಂದ ದರ್ಶನ್ ಅವರು ಇಂದು ವಿಜಯಲಕ್ಷ್ಮೀ ಅವರೊಂದಿಗೆ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುವಂತಾಗಿದೆ.

vijayalakshmi shares photo celebrating sankranti festival with husband darshan thoogudeepa

ದರ್ಶನ್‌ ಜೊತೆ ಹಬ್ಬ ಆಚರಿಸಿದ ವಿಜಯಲಕ್ಷ್ಮೀ

ದರ್ಶನ್ ಪೂರ್ಣಾವಧಿ ಜಾಮೀನು ಪಡೆದು ಜೈಲಿನಿಂದ ಹೊರಬಂದ ಬಳಿಕ ಪತ್ನಿ ವಿಜಯಲಕ್ಷ್ಮೀ ತುಂಬಾ ಖುಷಿಯಾಗಿದ್ದಾರೆ. ಪ್ರಸ್ತುತ ಮೈಸೂರಿನ ತಮ್ಮ ಫಾರ್ಮ್‌ ಹೌಸ್‌ನಲ್ಲಿರುವ ದರ್ಶನ್ ಅವರು ಪತ್ನಿ, ಮಗ ಹಾಗೂ ತಮ್ಮ ಸಾಕು ಪ್ರಾಣಿಗಳೊಂದಿಗೆ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಈ ಫೋಟೋವನ್ನು ವಿಜಯಲಕ್ಷ್ಮೀ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪತಿ ದರ್ಶನ್‌ ಜೊತೆಗೆ ಸಾಕುಪ್ರಾಣಿಗಳನ್ನು ನೋಡುತ್ತಿರುವ ಹಿಂಬದಿಯ ಫೋಟೋವನ್ನು ವಿಜಯಲಕ್ಷ್ಮೀ ಹಂಚಿಕೊಂಡಿದ್ದಾರೆ. ವಿಜಯಲಕ್ಷ್ಮೀ ಕೈಯಲ್ಲಿ ಒಂದು ಪಟ್ಟ ನಾಯಿ ಮರಿ ಇದ್ದು ಇಬ್ಬರೂ ಕೂಡ ಸಂತೋಷದಿಂದಿರುವುದು ಕಾಣಬಹುದು.

ವಿಜಯಲಕ್ಷ್ಮೀ ಹಂಚಿಕೊಂಡ ಫೋಟೋ ಕಂಡು ಫ್ಯಾನ್ಸ್ ಹ್ಯಾಪಿ

ಈ ಫೋಟೋವನ್ನು ನೋಡಿದ ಅವರ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ದರ್ಶನ್ ತೂಗುದೀಪ ಹಾಗೂ ವಿಜಯಲಕ್ಷ್ಮೀ ಇಬ್ಬರೂ ಕೂಡ ಮತ್ತೆ ಒಂದಾಗಿದ್ದಾರೆ. ಇವರಿಬ್ಬರ ಬಾಳು ಮತ್ತೆ ಹೊಸದಾಗಿ ಶುರುವಾಗಿದೆ. ಯಾವುದೇ ಕೆಟ್ಟ ದೃಷ್ಟಿ ಈ ಸಂಸಾರದ ಮೇಲೆ ಬೀಳದಿರಲಿ ಎಂದು ಅಭಿಮಾನಿಗಳು ಸಂಕ್ರಾಂತಿ ಹಬ್ಬಕ್ಕೆ ಶುಭ ಹಾರೈಸುತ್ತಿದ್ದಾರೆ.

vijayalakshmi shares photo celebrating sankranti festival with husband darshan thoogudeepa

ಬಳ್ಳಾರಿ ಜೈಲಿನಿಂದ ಹೊರ ಬಂದ ಬಳಿಕ ದರ್ಶನ್ ಮೈಸೂರು ಫಾರ್ಮ್‌ ಹೌಸ್‌ನಲ್ಲೇ ಕಾಲ ಕಳೆಯುತ್ತಿದ್ದಾರೆ. ಅವರ ಆರೋಗ್ಯ ಕೂಡ ದಿನದಿಂದ ದಿನಕ್ಕೆ ಸುಧಾರಣೆ ಕಾಣುತ್ತಿದೆ. ಪ್ರಾಣಿಗಳ ಜೊತೆಗೆ ಹಿತವಾದ ವಾತಾವರಣದಲ್ಲಿ ದರ್ಶನ್ ತಮ್ಮ ನೋವುಗಳೆನ್ನೆಲ್ಲಾ ಮರೆಯುತ್ತಿದ್ದಾರೆ. ಜೈಲಿನಿಂದ ಹೊರ ಬಂದ ಬಳಿಕ ಅವರಿಗೆ ಫಿಸಿಯೋಥೆರಪಿ ಮಾಡಿಸಲಾಗುತ್ತಿದ್ದು ಪ್ರಸ್ತುತ ದರ್ಶನ್‌ಗೆ ಬೆನ್ನು ನೋವು ಕಡಿಮೆಯಾಗಿದೆ. ಆದರೆ ಕಾಲಿನಲ್ಲಿ ಹೆಚ್ಚು ನೋವು ಕಾಣಿಸಿಕೊಳ್ಳುತ್ತಿದ್ದು ಅದಕ್ಕಾಗಿ ಚಿಕಿತ್ಸೆಯನ್ನ ದಾಸ ಪಡೆಯುತ್ತಿದ್ದಾರೆ.

ಮುಂದುವರೆದ ದರ್ಶನ್‌ಗೆ ಚಿಕಿತ್ಸೆ

ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆ ವೈದ್ಯರ ಸಲಹೆಯಂತೆ ಮೈಸೂರಿನಲ್ಲಿ ದರ್ಶನ್ ಚಿಕಿತ್ಸೆ ಪಡೆಯುತ್ತಿದ್ದು, ತಮ್ಮ ಶೂಟಿಂಗ್ ಕೆಲಸಗಳನ್ನೂ ನಿಧಾನವಾಗಿ ಶುರು ಮಾಡಿದ್ದಾರೆ. ಜೈಲಿನಿಂದ ಬಂದ ಬಳಿಕ ದರ್ಶನ್ ಸಂಪೂರ್ಣವಾಗಿ ಬದಲಾದಂತೆ ಕಾಣುತ್ತಿದ್ದಾರೆ. ಇನ್ನೂ ಇತ್ತ ಪವಿತ್ರಾ ಗೌಡ ದೆಹಲಿಗೆ ಹೋಗಲು ಕೋರ್ಟ್ ಅನುಮತಿ ಪಡೆದುಕೊಂಡಿದ್ದಾರೆ.

ಪಾಠ ಕಲಿಯದ ಪವಿತ್ರಾ

ಇಷ್ಟೆಲ್ಲಾ ಆದರೂ ಕೂಡ ಕೋರ್ಟ್‌ ವಿಚಾರಣೆ ವೇಳೆ ಪವಿತ್ರಾ ಗೌಡ ದರ್ಶನ್ ಅವರನ್ನು ಮಾತನಾಡಿಸಲು ಪ್ರಯತ್ನಪಟ್ಟಿದ್ದು ಕಂಡು ಬಂದಿದೆ. ಅಷ್ಟೇ ಅಲ್ಲ ಪವಿತ್ರಾ ಜೈಲಿನಿಂದ ಹೊರ ಬಂದ ಬಳಿಕ ದರ್ಶನ್ ಹೆಸರಿನಲ್ಲಿ ಪೂಜೆ ಕೂಡ ಮಾಡಿಸಿದ್ದಾರೆ. ಇದಕ್ಕೆ ಬಂಡತನ ಎನ್ನಬೇಕೋ ಹುಚ್ಚುತನ ಅನ್ಬೇಕೋ ಗೊತ್ತಿಲ್ಲ.

ದರ್ಶನ್ ಈ ಪವಿತ್ರಾ ಗೌಡ ಸಹವಾಸದಿಂದಲೇ ಜೈಲಿಗೆ ಹೋಗುವಂತಾಯಿತು. ಆಕೆಯಿಂದಲೇ ಇಷ್ಟೆಲ್ಲಾ ಅವಮಾನ ಪಡುವಂತಾಯಿತು. ದರ್ಶನ್ ಮಾತ್ರವಲ್ಲ ದರ್ಶನ್ ಕುಟುಂಬಸ್ಥರಿಗೂ ಈ ಘಟನೆಯಿಂದ ಸಾಕಷ್ಟು ನೋವಾಗಿದೆ. ಇಲ್ಲಿ ತಪ್ಪು ಯಾರೇ ಮಾಡಿದ್ದರೂ ಅವಮಾನ ಅನುಭವಿಸಿದ್ದು ಮಾತ್ರ ಕುಟುಂಬಸ್ಥರು. ಹೀಗಾಗಿ ಜೈಲಿನಿಂದ ಹೊರ ಬಂದ ಬಳಿಕವಾದರೂ ಪವಿತ್ರಾ ಪಾಠ ಕಲಿಯಬೇಕಿತ್ತು. ಆದರೆ ಪವಿತ್ರಾ ದರ್ಶನ್ ಅವರನ್ನು ಮಾತನಾಡಿಸುವ ಪ್ರಯತ್ನವನ್ನು ಮಾಡುತ್ತಲೇ ಇದ್ದಾರೆ. ಇದರಿಂದಾಗಿ ದರ್ಶನ್ ಬಾಳಲ್ಲಿ ಮಾರಿಯಾಗಿ ಬಂದ ಈಕೆ ಈಗಲಾದರೂ ಆ ಹಾಲಿನಂತ ಸಂಸಾರವನ್ನು ದೂರದಿಂದ ನೋಡಿ ಸುಮ್ಮನಾಗುತ್ತಾಳಾ ಅಥವಾ ಅದರಲ್ಲಿ ಹುಳಿ ಹಿಂಡುವಂತಹ ಕೆಲಸ ಮಾಡ್ತಾಳಾ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+