Vijay Sethupathi: ರಿಷಬ್ ಶೆಟ್ಟಿ ಜೊತೆ ನಟಿಸುವ ದೊಡ್ಡ ಆಸೆ ನನಗಿದೆ: ಆಸೆ ಬಿಚ್ಚಿಟ್ಟ ನಟ ವಿಜಯ್ ಸೇತುಪತಿ
ದಕ್ಷಿಣ ಭಾರತದ ಚಿತ್ರರಂಗದ ಇಬ್ಬರು ಪ್ರತಿಭಾವಂತ ನಟರಾದ ವಿಜಯ್ ಸೇತುಪತಿ ಮತ್ತು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಒಂದೇ ಸಿನಿಮಾದಲ್ಲಿ ನಟಿಸಿದರೆ ಹೇಗಿರುತ್ತದೆ? ಇಂತಹದೊಂದು ಕುತೂಹಲಕಾರಿ ಪ್ರಶ್ನೆಗೆ ಈಗ ಸ್ವತಃ ವಿಜಯ್ ಸೇತುಪತಿ ಅವರೇ ಉತ್ತರ ನೀಡಿದ್ದಾರೆ. ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ವಿಜಯ್ ಸೇತುಪತಿ ಅವರು ರಿಷಬ್ ಶೆಟ್ಟಿ ಅವರೊಂದಿಗೆ ನಟಿಸುವ ತಮ್ಮ ದೊಡ್ಡ ಆಸೆ ಬಿಚ್ಚಿಟ್ಟಿದ್ದಾರೆ.
ಕಾಂತಾರಕ್ಕೆ ಫಿದಾ ಆಗಿದ್ದ ವಿಜಯ್
'ಗಲಾಟ ಗ್ಲೋರಿಯಸ್ ಐಕಾನ್ಸ್' ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿಜಯ್ ಸೇತುಪತಿ, 'ಕಾಂತಾರ' ಸಿನಿಮಾ ನೋಡಿದ ತಕ್ಷಣ ರಿಷಬ್ ಅವರಿಗೆ ಕರೆ ಮಾಡಿ ಮೆಚ್ಚುಗೆ ಸೂಚಿಸಿದ್ದನ್ನು ನೆನಪಿಸಿಕೊಂಡರು. "ಕಾಂತಾರ ಒಂದು ಅದ್ಭುತ ಸಿನಿಮಾ. ಆ ಮಣ್ಣಿನ ಸೊಗಡನ್ನು ಅನುಭವಿಸಿದವರಿಗೆ ಮಾತ್ರ ಇಂತಹ ಸಿನಿಮಾ ಮಾಡಲು ಸಾಧ್ಯ. ರಿಷಬ್ ಬಿಟ್ಟರೆ ಬೇರೆ ಯಾರೂ ಆ ಪಾತ್ರಕ್ಕೆ ಜೀವ ತುಂಬಲು ಸಾಧ್ಯವಿರಲಿಲ್ಲ. ನಾನು ಅವರಿಗೆ ಕರೆ ಮಾಡಿದಾಗ, ಅವರು ಕೂಡಲೇ ನನ್ನನ್ನು ಗುರುತಿಸಿದ್ದು ಬಹಳ ಖುಷಿ ನೀಡಿತು" ಎಂದು ಮನಬಿಚ್ಚಿ ಮಾತನಾಡಿದರು.

ಇಬ್ಬರೂ ನಟರು 2004ರಲ್ಲೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದನ್ನು ನೆನಪಿಸಿಕೊಂಡ ವಿಜಯ್, "ರಿಷಬ್ ಸಿನಿಮಾ ರಂಗದ ಎಲ್ಲ ವಿಭಾಗಗಳಲ್ಲೂ ಯಶಸ್ವಿಯಾಗಿದ್ದಾರೆ. ನಿಮ್ಮಿಂದ ಪ್ರಶಸ್ತಿ ಪಡೆಯುತ್ತಿರುವುದು ಹೆಮ್ಮೆಯ ವಿಷಯ. ಇದು ಕೇವಲ ವೇದಿಕೆಗಾಗಿ ಹೇಳುತ್ತಿರುವ ಮಾತಲ್ಲ, ನಿಮ್ಮೊಂದಿಗೆ ತೆರೆ ಹಂಚಿಕೊಳ್ಳುವ ಆಸೆ ನನಗಿದೆ ಎಂದು ನೇರವಾಗಿಯೇ ಕೇಳಿಕೊಂಡರು.
ನಮ್ಮಿಬ್ಬರ ರಕ್ತ ಒಂದೇ
ಬಳಿಕ ಮಾತನಾಡಿದ ರಿಷಬ್ ಶೆಟ್ಟಿ, ವಿಜಯ್ ಸೇತುಪತಿ ಅವರ ಮೇಲಿರುವ ಗೌರವವನ್ನು ಹಂಚಿಕೊಂಡರು. ವಿಜಯ್ ಸರ್ ನನಗೆ ಫೋನ್ ಮಾಡಿ ಇಂಗ್ಲಿಷ್‌ನಲ್ಲಿ ಮಾತನಾಡಲು ಶುರು ಮಾಡಿದರು. ಆದರೆ ನಾನು ಅವರಿಗೆ ತಮಿಳಿನಲ್ಲೇ ಉತ್ತರಿಸಿದೆ. ಅಂದಿನಿಂದ ನಮ್ಮ ಸ್ನೇಹ ಮುಂದುವರಿದಿದೆ. ಅವರ ಸಿನಿಮಾಗಳು ಮತ್ತು ಸಂದರ್ಶನಗಳು ನನಗೆ ತುಂಬಾನೇ ಇಷ್ಟ. ವಡಿವೇಲು ಅವರ ಡೈಲಾಗ್‌ನಂತೆ ನಮ್ಮಿಬ್ಬರ ಆಲೋಚನೆಗಳು 'ಸೇಮ್ ಬ್ಲಡ್' ಇದ್ದಂತೆ ಎಂದು ಹಾಸ್ಯದ ಮೂಲಕವೇ ಆತ್ಮೀಯತೆಯನ್ನು ವ್ಯಕ್ತಪಡಿಸಿದರು.
ಇಬ್ಬರ ಆಲೋಚನಾ ಲಹರಿ, ಸರಳತೆ ಮತ್ತು ಸಿನಿಮಾವನ್ನು ನೋಡುವ ದೃಷ್ಟಿಕೋನ ಒಂದೇ ಆಗಿರುವುದರಿಂದ "ನಮ್ಮಿಬ್ಬರ ರಕ್ತ ಒಂದೇ" ಎಂಬ ಅರ್ಥದಲ್ಲಿ ಆ ಡೈಲಾಗ್ ಬಳಸಿದರು. ಈ ಇಬ್ಬರು ಸ್ಟಾರ್ ನಟರು ಒಂದೇ ಪರದೆಯ ಮೇಲೆ ಬಂದರೆ ಅದು ಭಾರತೀಯ ಚಿತ್ರರಂಗದ ದೊಡ್ಡ ಮೈಲಿಗಲ್ಲಾಗುವುದರಲ್ಲಿ ಸಂಶಯವಿಲ್ಲ. ರಿಷಬ್ ಶೆಟ್ಟಿ ಅವರ ಮುಂದಿನ ಬಹುನಿರೀಕ್ಷಿತ 'ಕಾಂತಾರ-1' ಅಥವಾ ವಿಜಯ್ ಸೇತುಪತಿ ಅವರ ಮುಂದಿನ ಪ್ರಾಜೆಕ್ಟ್‌ಗಳಲ್ಲಿ ಇಬ್ಬರೂ ಜೊತೆಯಾಗಲಿದ್ದಾರೆಯೇ ಎಂದು ಕಾದು ನೋಡಬೇಕಿದೆ.
ವಿಜಯ್ ಸೇತುಪತಿ ಅವರು "ನಿಮ್ಮ ಜೊತೆ ನಟಿಸುವ ಆಸೆ ಇದೆ" ಎಂದು ಹೇಳಿರುವುದು ಈಗ ಸಿನಿಮಾ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ರಿಷಬ್ ಶೆಟ್ಟಿ ಸದ್ಯ 'ಕಾಂತಾರ: ಚಾಪ್ಟರ್ 2' ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದರಲ್ಲಿ ವಿಜಯ್ ಸೇತುಪತಿ ಅವರಿಗೆ ಯಾವುದಾದರೂ ಪ್ರಮುಖ ಪಾತ್ರ ಸಿಗಬಹುದೇ ಅಥವಾ ವಿಜಯ್ ಅವರ ಮುಂದಿನ ತಮಿಳು ಸಿನಿಮಾದಲ್ಲಿ ರಿಷಬ್ ಕಾಣಿಸಿಕೊಳ್ಳಲಿದ್ದಾರೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.
-
ಪ್ರೇಮ್ ಬರೆದ ಹಾಡು ಅಕ್ಷರ ರೂಪದ ಬೆತ್ತಲೆ ಸಿನೆಮಾ ತೋರಿಸಿದಂತಿದೆ: ಅರುಣ್ ಜೋಳದಕೂಡ್ಲಿಗಿ ಬರಹ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ












Click it and Unblock the Notifications