ಮೇಘನಾ ರಾಜ್‌ ಜೊತೆ ನಟ ವಿಜಯ್ ರಾಘವೇಂದ್ರ ಮದುವೆಗೆ... Meghana Raj

ಮೇಘನಾ ರಾಜ್ ಅವರು ಪತಿಯನ್ನು ಕಳೆದುಕೊಂಡು ದುಖಃದಲ್ಲಿ ಇದ್ದಾರೆ, ಪ್ರೀತಿಸಿ ಇಡೀ ಕುಟುಂಬ ಸದಸ್ಯರನ್ನು ಒಪ್ಪಿಸಿ ಮದುವೆ ಆಗಿದ್ದ ಮೇಘನಾ ರಾಜ್ & ಚಿರಂಜೀವಿ ಸರ್ಜಾರ ಬದುಕಿನಲ್ಲಿ ವಿಧಿಯಾಟ ಬೇರೆನೇ ಆಗಿತ್ತು. ನಟ ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣ ಹೊಂದಿದ ನಂತರ ಮೇಘನಾ ರಾಜ್ ಅವರು ನೋವಿನಲ್ಲೇ ಜೀವನ ಸಾಗಿಸುತ್ತಿದ್ದಾರೆ. ಹೀಗೆ ಚಿರಂಜೀವಿ ಸರ್ಜಾ ಮರಣ ಹೊಂದುವ ಮೊದಲು ನಟಿ ಮೇಘನಾ ರಾಜ್ ಅವರು ಗರ್ಭಿಣಿ ಆಗಿದ್ದರು...

ಚಿರಂಜೀವಿ ಸರ್ಜಾ ಅವರನ್ನ ಕಳೆದುಕೊಂಡ ನಂತರ ಮೇಘನಾ ರಾಜ್ ಅವರಿಗೆ ಜಗತ್ತೇ ತಲೆ ಮೇಲೆ ಬಿದ್ದಂತೆ ಆಗಿತ್ತು. ಆಗಲೇ ಇಡೀ ಕನ್ನಡ ಸಿನಿಮಾ ರಂಗ ಮೇಘನಾ ರಾಜ್ ಬೆನ್ನಿಗೆ ನಿಂತು ಸಮಾಧಾನ ಹೇಳಿತ್ತು & ಸಾಂತ್ವನ ಹೇಳಿ ಧೈರ್ಯ ತುಂಬಿದ್ದರು. ಹೀಗಿದ್ದಾಗಲೇ ಮೇಘನಾ ರಾಜ್ ಅವರಿಗೆ ಮಗನಾಗಿ ಜನಿಸಿದ ರಾಯನ್ ರಾಜ್ ಸರ್ಜಾ ಹೊಸ ಸಂಭ್ರಮ ತಂದಿದ್ದಾನೆ. ಮಗನ ಆರೈಕೆನ ಮಾಡುತ್ತಾ, ಒಂಟಿಯಾಗಿ ಜೀವನದ ಸಮಯ ಕಳೆಯುತ್ತಿದ್ದಾರೆ ಮೇಘನಾ ರಾಜ್ ಅವರು. ಹೀಗಿದ್ದಾಗಲೇ, ಮೇಘನಾ ರಾಜ್‌ ಜೊತೆ ನಟ ವಿಜಯ್ ರಾಘವೇಂದ್ರ ಮದುವೆಗೆ...

Vijay Raghavendra And Meghana Raj Names Are In Trend On Social Media Now

ನಟಿ ಮೇಘನಾ ರಾಜ್‌ ಮದುವೆಗೆ...

ಮೇಘನಾ ರಾಜ್ ಅವರ ರೀತಿಯಲ್ಲೇ ನಟ ವಿಜಯ್ ರಾಘವೇಂದ್ರ ಅವರು ಕೂಡ ಹೆಂಡತಿಯ ಕಳೆದುಕೊಂಡು, ಕಣ್ಣೀರಲ್ಲಿ ಜೀವನ ಕಳೆಯುವಂತೆ ಆಗಿದೆ. ಒಬ್ಬ ಮಗನ ಜೊತೆಗೆ ವಿಜಯ್ ರಾಘವೇಂದ್ರ ಅವರು ಜೀವನದ ಪಯಣ ಮುಂದುವರಿಸಿದ್ದಾರೆ. ಹೀಗೆ ಕನ್ನಡ ಸಿನಿಮಾ ರಂಗದ ಇಬ್ಬರು ಕಲಾವಿದರ ಬಾಳಲ್ಲಿ ವಿಧಿ ಆಟ ಆಡಿದೆ. ಒಂದು ಕಡೆ ಮೇಘನಾ ರಾಜ್ ಅವರ ಗಂಡ ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣ ಹೊಂದಿದ ನಂತರ ವಿಜಯ್ ರಾಘವೇಂದ್ರ ಅವರ ಹೆಂಡತಿ ಕೂಡ ಅಕಾಲಿಕ ಮರಣ ಹೊಂದಿದರು. ಹೀಗಿದ್ದಾಗಲೇ, ಮೇಘನಾ ರಾಜ್‌ ಜೊತೆ ನಟ ವಿಜಯ್ ರಾಘವೇಂದ್ರ ಮದುವೆಗೆ...

ಅಂದಹಾಗೆ ಮೇಘನಾ ರಾಜ್ ಅವರು 2ನೇ ಮದುವೆ ಆಗುವ ಬಗ್ಗೆ ಕೆಲವು ದಿನಗಳ ಹಿಂದೆ ರಿಯಾಕ್ಷನ್ ಕೊಟ್ಟಿದ್ದ ವಿಡಿಯೋ ವೈರಲ್ ಆಗಿತ್ತು. ನಟಿ ಮೇಘನಾ ರಾಜ್ ಅವರು ತಮ್ಮ ಮಗನ ಭವಿಷ್ಯ ಉಜ್ವಲಗೊಳಿಸಿ, ರಾಯನ್ ರಾಜ್‌ಗೆ ಉತ್ತಮ ಭವಿಷ್ಯ ಕಟ್ಟಿಕೊಡಲು ಈಗ ಸಾಕಷ್ಟು ಕಷ್ಟಪಡುತ್ತಿದ್ದಾರೆ. ಹಾಗೇ ಮತ್ತೊಂದು ಕಡೆ ವಿಜಯ್ ರಾಘವೇಂದ್ರ ಅವರು ಈಗ ತಮ್ಮ ಮಗನ ಭವಿಷ್ಯಕ್ಕಾಗಿ ಒದ್ದಾಡುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ, ನಟ ವಿಜಯ್ ರಾಘವೇಂದ್ರ ಅವರ ಮಗ 10ನೇ ತರಗತಿ ಅಂದ್ರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಾಗಿ ಓದುತ್ತಿರುವ ವಿಡಿಯೋ & ಫೋಟೋ ವೈರಲ್ ಆಗಿತ್ತು. ಈ ಎಲ್ಲಾ ಕಾರಣಕ್ಕೆ, ಮೇಘನಾ ರಾಜ್‌ ಜೊತೆ ನಟ ವಿಜಯ್ ರಾಘವೇಂದ್ರ ಮದುವೆಗೆ ಅಭಿಮಾನಿಗಳೇ ಒತ್ತಾಯ ಮಾಡುತ್ತಿದ್ದಾರೆ!

ವಿಜಯ್ & ಮೇಘನಾ ರಾಜ್‌ ಮದುವೆ ಒತ್ತಾಯ!

ಸೋಷಿಯಲ್ ಮೀಡಿಯಾದಲ್ಲಿ ಇದೀಗ ಮೇಘನಾ ರಾಜ್‌ ಜೊತೆ ನಟ ವಿಜಯ್ ರಾಘವೇಂದ್ರ ಮದುವೆಗೆ ಅಭಿಮಾನಿಗಳು & ನೆಟ್ಟಿಗರು ಒತ್ತಾಯ ಮಾಡುತ್ತಾ ಪೋಸ್ಟ್‌ಗಳನ್ನ ಹಾಕುತ್ತಿದ್ದಾರೆ. ಈ ರೀತಿಯ ಪೋಸ್ಟ್‌ಗಳು ವೈರಲ್ ಆಗುತ್ತಿದೆ. ಅಲ್ಲದೆ ಈ ರೀತಿ ಸೋಷಿಯಲ್ ಮೀಡಿಯಾದಲ್ಲಿ ನಟಿ ಮೇಘನಾ ರಾಜ್‌ ಜೊತೆ ನಟ ವಿಜಯ್ ರಾಘವೇಂದ್ರ ಮದುವೆಗೆ ಒತ್ತಾಯ ಮಾಡ್ತಿರುವ ಬಗ್ಗೆ ಪರ & ವಿರೋಧದ ಮಾತು ಕೂಡ ಕೇಳಿ ಬಂದಿದೆ. ಅಂತಿಮವಾಗಿ ಇದು ಮೇಘನಾ ರಾಜ್‌ ಅವರ ನಿರ್ಧಾರಕ್ಕೆ ಮತ್ತು ವಿಜಯ್ ರಾಘವೇಂದ್ರ ಅವರ ನಿರ್ಧಾರಕ್ಕೆ ಬಿಟ್ಟ ವಿಚಾರ ಅಂತಾ ಇದೀಗ ಹಲವು ಸೋಷಿಯಲ್ ಮೀಡಿಯಾ ಬಳಕೆದಾರರು ಹೇಳುತ್ತಿದ್ದಾರೆ. ಹೀಗಾಗಿ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆಯ ಕಿಚ್ಚು ಹೊತ್ತಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಗೆ ಆಕ್ರೋಶ

ಮೇಘನಾ ರಾಜ್ & ವಿಜಯ್ ರಾಘವೇಂದ್ರ ಅವರು 2ನೇ ಮದುವೆ ಆಗ್ತಾರೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕಾನೂನು ಕ್ರಮಕ್ಕೂ ಚಿಂತನೆ ನಡೆದಿದೆ. ಮತ್ತೊಂದು ಕಡೆ ಈ ರೀತಿ ಯಾವುದೇ ಚಿಂತನೆ ನಡೆದಿಲ್ಲ, ಆದರೂ ಈ ರೀತಿಯಾಗಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಆರೋಪ ಮಾಡಲಾಗಿದೆ. ಒಂದು ಕಡೆ ಈ ರೀತಿಯ ಸೋಷಿಯಲ್ ಮೀಡಿಯಾ ಸುಳ್ಳು ಸುದ್ದಿಗಳ ಬಗ್ಗೆ ನಟಿ ಮೇಘನಾ ರಾಜ್ ಅವರ ಅಭಿಮಾನಿಗಳು ಹಾಗೂ ವಿಜಯ್ ರಾಘವೇಂದ್ರ ಅವರ ಅಭಿಮಾನಿಗಳು ಕೂಡ ಆಕ್ರೋಶವನ್ನ ಹೊರ ಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+