9,000 ಕೋಟಿ ರೂಪಾಯಿ ಸಾಲ ಮಾಡಿದ್ದ ವಿಜಯ್ ಮಲ್ಯ ಭಾರತಕ್ಕೆ ವಾಪಸ್... Vijay Mallya
ವಿಜಯ್ ಮಲ್ಯ ಅಂದ್ರೆ ಸಿನಿಮಾ ರಂಗದಿಂದ ಹಿಡಿದು, ಕ್ರಿಕೆಟ್ ಲೋಕದ ತನಕ ದೊಡ್ಡ ಕ್ರೇಜ್ ಇತ್ತು. ವಿಜಯ್ ಮಲ್ಯ 9,000 ಕೋಟಿ ರೂಪಾಯಿ ಸಾಲ ಮಾಡಿದ್ದರೂ ಇಂದಿಗೂ ಅಭಿಮಾನಿ ಬಳಗ ಕಡಿಮೆ ಇಲ್ಲ. ವಿಜಯ್ ಮಲ್ಯ ಲಂಡನ್ ನಗರಕ್ಕೆ ಹೋದ ನಂತರ ದೊಡ್ಡ ಸಂಚಲನ ಸೃಷ್ಟಿಯಾಗಿ, ಆರ್‌ಸಿಬಿ ತಂಡ ಕೂಡ ಸಂಕಷ್ಟಕ್ಕೆ ಸಿಲುಕಿತ್ತು ಎಂಬ ಆರೋಪ ಕೇಳಿಬಂತು. ಹೀಗಿದ್ದಾಗಲೇ, 9,000 ಕೋಟಿ ರೂಪಾಯಿ ಸಾಲ ಮಾಡಿದ್ದ ವಿಜಯ್ ಮಲ್ಯ ಭಾರತಕ್ಕೆ ವಾಪಸ್...
2025ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡವು ಭರ್ಜರಿಯಾಗಿ ಆಡುತ್ತಿದ್ದು, ಇನ್ನೇನು ಕಪ್ ಗೆಲ್ಲುವುದು ಕೂಡ ಗ್ಯಾರಂಟಿ ಆಗಿದೆ. ಆರ್‌ಸಿಬಿ ತಂಡ 2025ರ ಐಪಿಎಲ್ ಟೂರ್ನಿಯ ಅಂಕಪಟ್ಟಿ ಅಂದ್ರೆ ಪಾಯಿಂಟ್ಸ್ ಟೇಬಲ್ ನಂ. 1 ತಂಡವಾಗಿದೆ. ಹೀಗಿದ್ದಾಗ ಬೆಂಗಳೂರಿನ ತಂಡ ಆರ್‌ಸಿಬಿ ಇನ್ನೇನು ಕಪ್ ಗೆದ್ದು ಹೊಸ ಇತಿಹಾಸ ನಿರ್ಮಾಣ ಮಾಡುವುದು ಗ್ಯಾರಂಟಿ ಅಂತಾ ಅಭಿಮಾನಿಗಳು ಕುಣಿದಾಡುತ್ತಿದ್ದಾರೆ. ಹೀಗಿದ್ದಾಗಲೇ, ಆರ್‌ಸಿಬಿ ತಂಡದ ಮಾಲೀಕ ಆಗಿದ್ದ ವಿಜಯ್ ಮಲ್ಯ ಬಗ್ಗೆ ದೊಡ್ಡ ಸುದ್ದಿ ಹಬ್ಬಿದೆ!

ವಿಜಯ್ ಮಲ್ಯ ಭಾರತಕ್ಕೆ ವಾಪಸ್...
ಬೆಂಗಳೂರು ತಂಡ ಆರ್‌ಸಿಬಿ ಅಂದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನ ಈ ಹಂತಕ್ಕೆ ಕಟ್ಟಿ ಬೆಳೆಸುವಲ್ಲಿ ವಿಜಯ್ ಮಲ್ಯ ಪಾತ್ರ ಕೂಡ ದೊಡ್ಡದಾಗಿದೆ. ಯಾಕೆ ಅಂದ್ರೆ ಆರಂಭದಲ್ಲಿ 2008ರ ಸಮಯದಲ್ಲೇ ದುಡ್ಡನ್ನು ಒಳ್ಳೆ ನೀರಿನ ರೀತಿ ಖರ್ಚು ಮಾಡಿದ್ದ ಕೀರ್ತಿ ಇದೇ ವಿಜಯ್ ಮಲ್ಯಗೆ ಸಲ್ಲಬೇಕು. ಆದರೆ ಆ ನಂತರ ಕೆಲವು ವರ್ಷಗಳ ನಂತರ ಸಾಲದ ಸುಳಿಗೆ ಸಿಲುಕಿ, ಕಿಂಗ್‌ಫಿಶರ್ ಮಾಲೀಕರೂ ಆಗಿದ್ದ ವಿಜಯ್ ಮಲ್ಯ ದೇಶ ಬಿಟ್ಟ ಹೋದರು ಎಂಬ ಆರೋಪ ಇದೆ.
9,000 ಕೋಟಿ ರೂಪಾಯಿ ಸಾಲ ಮಾಡಿದ್ದ ವಿಜಯ್ ಮಲ್ಯ ಭಾರತಕ್ಕೆ ವಾಪಸ್ ಯಾವಾಗ? ವಿಜಯ್ ಮಲ್ಯ ಭಾರತಕ್ಕೆ ವಾಪಸ್ ಬರೋದಿಲ್ವಾ? ಅನ್ನೋ ಪ್ರಶ್ನೆಗಳು ಕಾಡುತ್ತಿದ್ದ ವೇಳೆಗೆ ಹೊಸ ಸಂಚಲನ ಸೃಷ್ಟಿಯಾಗಿದೆ, ಕರ್ನಾಟಕ ಮೂಲದ ಶ್ರೀಮಂತ ಉದ್ಯಮಿಯೂ ಆಗಿದ್ದ ವಿಜಯ್ ಮಲ್ಯ ಇದೀಗ ತಮ್ಮ ಸಾಲ ತೀರಿಸಿದ್ದಾರೆ.
ಅದ್ರಲ್ಲೂ ವಿಜಯ್ ಮಲ್ಯ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಈಗ ಸಾಲ ತೀರಿದ್ದು, ಬಡ್ಡಿ ಸಮೇತ ಸಾಲ ಚುಕ್ತಾ ಆಗಿದೆ. ಇಂತಹ ಸಮಯದಲ್ಲೇ, 9,000 ಕೋಟಿ ರೂಪಾಯಿ ಸಾಲ ಮಾಡಿದ್ದ ವಿಜಯ್ ಮಲ್ಯ ಭಾರತಕ್ಕೆ ವಾಪಸ್ ಬರ್ತಾರೆ ಅನ್ನೋ ಸುದ್ದಿ ಹಬ್ಬಿದೆ! ಆರ್‌ಸಿಬಿ ಅಭಿಮಾನಿಗಳು ಕೂಡ ಆಶ್ಚರ್ಯಗೊಂಡಿದ್ದಾರೆ...
ವಿಜಯ್ ಮಲ್ಯ ಹವಾ ಬಲು ಜೋರು!
ಹೌದು, 9,000 ಕೋಟಿ ರೂಪಾಯಿ ಸಾಲ ಮಾಡಿದ್ದ ವಿಜಯ್ ಮಲ್ಯ ಭಾರತಕ್ಕೆ ವಾಪಸ್ ಬರ್ತಾರೆ ಅನ್ನೋ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿದೆ. ಯಾಕಂದ್ರೆ ಒಂದು ಕಡೆ ಈಗಾಗಲೇ ವಿಜಯ್ ಮಲ್ಯ ಅವರ ಸಾಲ ತೀರಿ ಹೋಗಿದೆ, ಇನ್ನೊಂದು ಕಡೆ ಆರ್‌ಸಿಬಿ ತಂಡ 2025ರ ಐಪಿಎಲ್ ಟೂರ್ನಿ ಗೆಲ್ಲುವುದು ಗ್ಯಾರಂಟಿ ಅಗಿದೆ. ಹೀಗಿದ್ದಾಗ ಆರ್‌ಸಿಬಿ ಫೈನಲ್‌ಗೆ ಎಂಟ್ರಿ ಕೊಟ್ಟರೆ ವಿಜಯ್ ಮಲ್ಯ ಭಾರತಕ್ಕೆ ಬರುತ್ತಾರೆ & ಖುದ್ದಾಗಿ ವಿಜಯ್ ಮಲ್ಯ ಅವರು ಆರ್‌ಸಿಬಿ ಮ್ಯಾಚ್ ನೋಡ್ತಾರೆ ಅನ್ನೋ ಗಾಳಿ ಸುದ್ದಿ ಸೋಷಿಯಲ್ ಮೀಡಿಯಾದ ತುಂಬಾ ಸಂಚಲನ ಸೃಷ್ಟಿ ಮಾಡಿದೆ. ಆದರೆ ವಿಜಯ್ ಮಲ್ಯ ಅವರು ಭಾರತಕ್ಕೆ ಬರುವ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಸಿಕ್ಕಿಲ್ಲ, ಹೀಗಾಗಿ ಇದು ಗಾಳಿ ಸುದ್ದಿ ಎನ್ನಲಾಗಿದೆ!












Click it and Unblock the Notifications