Rashmika Mandanna: ಎಲ್ಲರೆದುರೇ ರಶ್ಮಿಕಾ ಕೈಗೆ ಮುತ್ತಿಟ್ಟ ವಿಜಯ್ ದೇವರಕೊಂಡ: ಇದು ಮದುವೆ ಸಿಗ್ನಲ್ ಎಂದ ಫ್ಯಾನ್ಸ್...
Rashmika & Vijay Video Viral: ನ್ಯಾಷನಲ್ ಕ್ರಷ್ ನಟಿ ರಶ್ಮಿಕಾ ಮಂದಣ್ಣರ ಸಾಲು ಸಾಲು ಸಿನಿಮಾಗಳು ಈ ವರ್ಷ ತೆರೆ ಕಂಡಿವೆ. ಕಳೆದ ವಾರ ನವೆಂಬರ್ 07ರಂದು ತೆರೆ ಕಂಡ 'ದಿ ಗರ್ಲ್ ಫ್ರೆಂಡ್' ಸಕ್ಸಸ್ ಮೀಟ್ ಹೈದರಾಬಾದ್‌ನಲ್ಲಿ ನಡೆಯಿತು. ಈ ವೇಳೆ ಕಾರ್ಯಕ್ರಮಕ್ಕೆ ಅತಿಥಿಯಾಗಿದ್ದ ಆಗಮಿಸಿದ್ದ ನಟ ವಿಜಯ್ ದೇವರಕೊಂಡ ಅವರು ಸ್ನೇಹಿತೆ ನಟಿ ರಶ್ಮಿಕಾ ಕೈಗೆ ಮುತ್ತಿಟ್ಟ ದೃಶ್ಯಗಳು ವೈರಲ್ ಆಗಿವೆ. ಈ ಮೂಲಕ ನಟ-ನಟಿಯರು ತಮ್ಮ ಮದುವೆ ಸಿಗ್ನಲ್ ನೀಡಿದ್ದಾರೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ಕಿಸ್ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ರಶ್ಮಿಕಾ ಮತ್ತು ವಿಜಯ್ ಇಬ್ಬರು ತಮ್ಮ ರಿಲೇಷನ್ ಶಿಪ್ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಕದ್ದು ಮುಚ್ಚಿ ಮಿಟ್ ಆಗುತ್ತಿದ್ದ ಫೋಟೋಗಳು ವೈರಲ್ ಆಗುತ್ತಿದ್ದವು. ಇದರ ಬೆನ್ನಲ್ಲೆ ಇತ್ತೀಚೆಗೆ ಈ ಜೋಡಿ ಗುಟ್ಟಾಗಿ ಕುಟುಂಬದವರ ಉಪಸ್ಥಿತಿಯಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಹೋದಲ್ಲಿ, ಬಂದಲ್ಲಿ ಇಬ್ಬರು ಕೈಯಲ್ಲಿನ ರಿಂಗ್ ಪ್ರದರ್ಶಿಸುತ್ತಲೇ ಇದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ರಶ್ಮಿಕಾ ಕೈಗೆ ಮುತ್ತು ಕೊಡುತ್ತಿದ್ದಂತೆ ನ್ಯಾಷನಲ್ ಕ್ರಷ್ ನಾಚಿ ನೀರಾಗಿದ್ದಾರೆ. ಅಲ್ಲಿಯೇ ಇದ್ದ ಫ್ಯಾನ್ಸ್ ಹರ್ಷದಿಂದ ಕೂಗಿದ್ದಾರೆ.

ಗುಟ್ಟಾಗಿದ್ದ ರಿಲೇಷನ್ ಶಿಪ್, ಎಂಗೇಜ್‌ಮೆಂಟ್ ಮತ್ತು ಮದುವೆ ವದಂತಿಗಳನ್ನು ನಿಜ ಮಾಡಲೆಂದು ಈ ಜೋಡಿ ಹೈದರಾಬಾದ್‌ನಲ್ಲಿ ಸೇರಿತ್ತು ಎಂದು ಫ್ಯಾನ್ಸ್ ಬಣ್ಣಿಸುತ್ತಿದ್ದಾರೆ. "ದಿ ಗರ್ಲ್ ಫ್ರೆಂಡ್' ಸಿನಿಮಾ ಪ್ರಚಾರ ವೇಳೆ 'ನಾನು ವಿಜಯ್ ಅವರನ್ನು ಮದುವೆ ಆಗುತ್ತೇನೆ' ಎಂದು ಇತ್ತೀಚೆಗೆ ಬಹಿರಂಗವಾಗಿ ರಶ್ಮಿಕಾ ಹೇಳಿದ್ದರು. ಅದರ ಬೆನ್ನಲ್ಲೆ ಜನರು ಮತ್ತು ಕ್ಯಾಮೆರಾ ಕಣ್ಣುಗಳ ಮಧ್ಯ ವಿಜಯ್ ರಶ್ಮಿಕಾ ಕೈಗೆ ಕಿಸ್ ಮಾಡಿದ್ದಾರೆ. ಕೆಲವು ಫ್ಯಾನ್ಸ್ 'ರಶ್ಮಿಕಾ ದೇವಕೊಂಡ' ಎಂದು ಕೂಗಿದ್ದಾರೆ.
ಈ ತಾರಾ ಜೋಡಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇವರನ್ನು ಒಟ್ಟಿಗೆ ನೋಡಿದ ಅಭಿಮಾನಿಗಳು ಹೃದಯಸ್ಪರ್ಶಿಯಾಗಿ ಪ್ರತಿಕ್ರಿಯಿಸಿದ್ದಾರೆ. "ನಿಜ ಜೀವನ ಗೆಳತಿ, ರಶ್ಮಿಕಾ ವಿಜಯ್ ಎಂದು ಹಾರ್ಟ್ ಸಿಂಬಾಲ್ ಹಾಕಿದ್ದಾರೆ. ಮತ್ತೊಬ್ಬರು ಫೈನಲಿ ಒಂದಾದ ಜೋಡಿ' ಅಂತೆಲ್ಲ ಬರೆದುಕೊಂಡಿದ್ದಾರೆ. 'ಈ ದಂಪತಿ ನೋಡಿ ರೋಮಾಚನಗೊಂಡೆನು' ಎಂದು ಇನ್ನೊಬ್ಬರು ಹಾರ್ಟ್ ಎಮೋಜಿ ಹಾಕಿದ್ದಾರೆ. ಈ ಜೋಡಿಯ ಮದುವೆ ಅಪಾರ ಫ್ಯಾನ್ಸ್ ಬಳಗ ಕಾಯುತ್ತಿದೆ.
Aww, the way he kissed her hand 🥹 and the way she looks at him 🥹. She loves him so much, and it's visible in her eyes 🥹
— Rashmika Delhi Fans (@Rashmikadelhifc) November 12, 2025
Hey bhagwan is Jodi ko humesha khush rakhna 🙏🥹❤️
Our Cutu bachcha deserves all the love and success 🥺#RashmikaMandanna ❤️#VijayDeverakonda ❤️ pic.twitter.com/q89iHfpGs8
ಮದುವೆ ಯಾವಾಗ?
ಮುಂದಿನ ವರ್ಷ 2026ರ ಫೆಬ್ರುವರಿಯಲ್ಲಿ ಉದಯಪುರದಲ್ಲಿ ರಶ್ಮಿಕಾ ಮತ್ತು ವಿಜಯ್ ದೇವಕೊಂಡ ಮದುವೆ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಈ ವರೆಗೆ ನಿಶ್ಚಿತಾರ್ಥ ಮತ್ತು ಮದುವೆ ದಿನಾಂಕದ ಬಗ್ಗೆ ಬಹಿರಂಗವಾಗಿ ಈ ಸೆಲೆಬ್ರೆಟಿಗಳು ತಿಳಿಸಿಲ್ಲ.
ರಶ್ಮಿಕಾ 'ಚಲೋ' ಸಿನಿಮಾ ಮೂಲಕ ತೆಲುಗಿಗೆ ಪಾದಾರ್ಪಣೆ ಮಾಡಿದರು. ಬಳಿಕ 2018ರಲ್ಲಿ ವಿಜಯ್ ಅವರೊಂದಿಗೆ 'ಗೀತ ಗೋವಿಂದಂ' ಸಿನಿಮಾದಲ್ಲಿ ನಟಿಸಿದರು. ಆ ಸಿನಿಮಾ ಸಖತ್ ಸೌಂಡ್ ಮಾಡಿತ್ತು. ಇವರಿಬ್ಬರು ಹಿಟ್ ಪೇರ್ ಲಿಸ್ಟ್ ಗೆಸೇರಿದರು. ಅಲ್ಲಿಂದಲೇ ಇವರಿಬ್ಬರ ಮಧ್ಯೆ ಘಾಡ ಸ್ನೇಹ ಸಂಬಂಧ ಚಿಗುರಿತ್ತು. ಬಳಿಕ ಅವರಿಬ್ಬರು 'ಡಿಯರ್ ಕಾಮ್ರೇಡ್' ಸಿನಿಮಾದಲ್ಲಿ ಮತ್ತೆ ಜೊತೆಯಾದರು. ದಿನ ಕಳೆದಂತೆ ಅವರಿಬ್ಬರ ಸ್ನೇಹ ಪ್ರೀತಿಯಾಗಿ ಬದಲಾಯಿತು. ಅಲ್ಲಿಂದ ಅವರಿಬ್ಬರು ವಿದೇಶಗಳಲ್ಲಿ, ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಕದ್ದು ಮುಚ್ಚಿ ಮೀಟ್ ಆಗುತ್ತಿದ್ದರು. ಕೆಲವೊಮ್ಮೆ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದುಂಟು. ಅನೇಕ ಹಬ್ಬಗಳನ್ನು ರಶ್ಮಿಕಾ ವಿಜಯ್ ಮನೆಯಲ್ಲಿ ಆಚರಿಸಿದ ಫೋಟೋಗಳು ಸಹ ಈ ಹಿಂದೆ ವೈರಲ್ ಆಗಿದ್ದವು.
ಸದ್ಯ ಊಹಾಪೋಹಗಳಿಗೆ ಈ ಜೋಡಿ ತೆರೆ ಎಳೆದಿದ್ದು. ಶೀಘ್ರವೇ ರಶ್ಮಿಕಾ-ವಿಜಯ್ ಮದುವೆ ಆಗುವುದರಲ್ಲಿದ್ದಾರೆ. ಈ ಜೋಡಿಗೆ ಅವರ ಫ್ಯಾನ್ಸ್ ಶುಭ ಹಾರೈಸುತ್ತಿದ್ದಾರೆ. ರಶ್ಮಿಕಾ 'ದಿ ಗರ್ಲ್ ಫ್ರೆಂಡ್' ಸಕ್ಸಸ್ ಖುಷಿಯಲ್ಲಿದ್ದಾರೆ.












Click it and Unblock the Notifications