Get Updates
Get notified of breaking news, exclusive insights, and must-see stories!

ರಶ್ಮಿಕಾ ಬಳಿಕ ಮತ್ತೊಬ್ಬ ನಟಿಯೊಂದಿಗೆ ವಿಜಯ್ ದೇವರಕೊಂಡ ಲಿಪ್‌ಲಾಕ್

ರಶ್ಮಿಕಾ ಮಂದಣ್ಣ ಇದೀಗ ಮುಟ್ಟಿದೆಲ್ಲಾ ಚಿನ್ನ. ರಶ್ಮಿಕಾ ಜೊತೆಗೆ ಯಾರೇ ನಟಿಸಿದರೂ ಕೂಡ ಸಿನಿಮಾ ಸೂಪರ್ ಡೂಪರ್ ಅನ್ನೋ ಲೆಕ್ಕಾಚಾರ ಶುರುವಾಗಿದೆ. ಕನ್ನಡ ಸಿನಿಮಾದಿಂದ ಹಿಟ್ ಆದ ರಶ್ಮಿಕಾ ಇದೀಗ ಪರಭಾಷೆಯ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡು ನ್ಯಾಷನಲ್ ಕ್ರಶ್ ಆಗಿದ್ದಾರೆ. ರಶ್ಮಿಕಾ ಜೊತೆಗೆ ತೆಲುಗು ನಟ ವಿಜಯ್ ದೇವರಕೊಂಡ ಲಿಪ್‌ಲಾಕ್ ಮಾಡಿದ್ದೇ ಮಾಡಿದ್ದು ಈ ಜೋಡಿ ಮದುವೆ ಆಗಲಿದೆ ಎನ್ನುವ ಸುದ್ದಿ ಹರಿದಾಡಿದ್ದವು. ಇದೀಗ ವಿಜಯದೇವರಕೊಂಡ ಬೇರೊಂದು ನಟಿಯೊಂದಿಗೆ ಲಿಪ್‌ಲಾಕ್ ಮಾಡಿದ್ದಾರೆ.

ಹೌದು ನಟಿ ಭಾಗ್ಯಶ್ರೀ ಜೊತೆಗೆ ವಿಜಯ್ ದೇವರಕೊಂಡ ಲಿಪ್‌ಲಾಕ್ ಮಾಡಿದ್ದು ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿಜಯ್ ದೇವರಕೊಂಡ ಅಭಿನಯಿಸಿದ 'ಕಿಂಗ್‌ಡಮ್' ಚಿತ್ರದ ರೊಮ್ಯಾಂಟಿಕ್ ಸಾಂಗ್‌ವೊಂದು ರಿಲೀಸ್ ಆಗಿದೆ. ಇದರಲ್ಲಿ ನಟಿಗೆ ವಿಜಯ್‌ ದೇವರಕೊಂಡ ಕಿಸ್‌ ಮಾಡಿದ್ದಾರೆ. ಸದ್ಯ 'ಕಿಂಗ್‌ಡಮ್‌' ಚಿತ್ರದ 'ಹೃದಯಂ ಲೋಪಲ' ಸಾಂಗ್ ರಿಲೀಸ್ ಆಗಿದ್ದು ಸಂಗೀತ ಪ್ರಿಯರ ಮನ ಮುಟ್ಟಿದೆ.

vijay deverakonda liplocks with another actress after rashmika mandanna

ಇದೇ ಮೇ 30ಕ್ಕೆ ಸಿನಿಮಾ ತೆರೆ ಕಾಣಲಿದ್ದು ಈ ಚಿತ್ರಕ್ಕೆ ಗೌತಮ್ ತಿನ್ನನುರಿ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ಮೂಲಕ ವಿಜಯ್ ದೇವರಕೊಂಡ ಜೊತೆಗೆ ಮೊದಲ ಬಾರಿಗೆ ಭಾಗ್ಯಶ್ರೀ ಬೋರ್ಸೆ ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಜೊತೆಗಿನ ಸಿನಿಮಾಗಳ ಬಳಿಕ ವಿಜಯ್‌ ದೇವರಕೊಂಡ ಸಿನಿಮಾ ಅಷ್ಟೊಂದು ಸಕ್ಸಸ್ ಕಂಡಿಲ್ಲ. ಆದರೀಗ 'ಕಿಂಗ್‌ಡಮ್' ಸಿನಿಮಾ ಸೂಪರ್ ಹಿಟ್ ಆಗುವ ನಿರೀಕ್ಷೆ ಇದೆ.

ರಶ್ಮಿಕಾ ಮಂದಣ್ಣ ಜೊತೆಗೆ ವಿಜಯ್‌ ದೇವರಕೊಂಡ ಹಲವಾರು ಸಿನಿಮಾ ಮಾಡಿದ್ದಾರೆ. ಆ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಜೊತೆಗೆ ರಶ್ಮಿಕಾ ಹಾಗೂ ವಿಜಯ್ ಒಂದಾಗುತ್ತಾರೆ ಎನ್ನುವ ಮಾತುಗಳೂ ಹರಿದಾಡಿದ್ದವು. ಇದಕ್ಕೆ ಪುಷ್ಠಿ ನೀಡುವಂತೆ ರಶ್ಮಿಕಾ ಹಾಗೂ ವಿಜಯ್ ಒಟ್ಟಿಗೆ ಓಡಾಡಿರುವುದು ಇದೆ. ಅಲ್ಲದೆ ತಮ್ಮ ಹೊಸ ಸಿನಿಮಾ ಬಂದಾಗಲೂ ರಶ್ಮಿಕಾ ವಿಜಯ್‌ ದೇವರಕೊಂಡ ಕುಟುಂಬಸ್ಥರೊಂದಿಗೆ ರಶ್ಮಿಕಾ ಸಿನಿಮಾ ವೀಕ್ಷಿಸಿರುವುದು ಇದೆ.

ಹೀಗಾಗಿ ಇವರಿಬ್ಬರದ್ದು ಅದ್ಭುತ ಜೋಡಿ ಅಂತಲೇ ಅಭಿಮಾನಿಗಳು ಅಂದುಕೊಂಡಿದ್ದಾರೆ. ಕಳೆದ ರಶ್ಮಿಕಾ ಹುಟ್ಟುವನ್ನು ವಿದೇಶದಲ್ಲಿ ಆಚರಿಸಿಕೊಂಡಾಗಲೂ ಅವರೊಂದಿಗೆ ವಿಜಯ್‌ ದೇವರಕೊಂಡ ಇದ್ದರು ಎಂದು ಅಭಿಮಾನಿಗಳು ಕಾಮೆಂಟ್ ಮಾಸ್ ಮಾಡಿದ್ದರು. ಹೀಗೆ ರಶ್ಮಿಕಾ ಶೂಟಿಂಗ್ ಹೋದಕಡೆಗಳೆಲ್ಲಾ ವಿಜಯ್‌ ದೇವರಕೊಂಡ ಇರುತ್ತಾರೆ ಅಂತಲೇ ಹೇಳಲಾಗುತ್ತದೆ. ಆದರೆ ಹುಟ್ಟುಹಬ್ಬದಂದು ರಶ್ಮಿಕಾ ಪ್ರವಾಸಕ್ಕೆ ಹೋದ ಫೋಟೋ ಹಂಚಿಕೊಂಡಿದ್ದರಾದರೂ ವಿಜಯ್‌ ದೇವರಕೊಂಡ ಅವರೊಂದಿಗೆ ಪೋಟೋ ಹಂಚಿಕೊಂಡಿಲ್ಲ. ಅಲ್ಲದೆ ಈ ಬಗ್ಗೆ ಯಾವತ್ತೂ ಕೂಡ ರಶ್ಮಿಕಾ ಆಗಲಿ ವಿಜಯ್‌ ಆಗಲಿ ಪ್ರತಿಕ್ರಿಯೆ ನೀಡಿಲ್ಲ.

ಆದರೂ ಅಭಿಮಾನಿಗಳ ಮನದಲ್ಲಿ ಈ ಜೋಡಿ ನಡುವೆ ಸಂಥಿಂಗ್ ಸಂಥಿಂಗ್ ಇದೆ ಅನ್ನೋ ಅನುಮಾನವಂತೂ ಇದ್ದೇ ಇದೆ. ಇದೀಗ ರಶ್ಮಿಕಾ ಮಂದಣ್ಣ ಅವರಿಗೆ ಸಿನಿಮಾ ಒಂದರಲ್ಲಿ ವಿಜಯ್‌ ದೇವರಕೊಂಡ ಲಿಪ್‌ಲಾಕ್ ಮಾಡಿದಂತೆ 'ಕಿಂಗ್‌ಡಮ್' ಚಿತ್ರದ ರೊಮ್ಯಾಂಟಿಕ್ ಸಾಂಗ್‌ನಲ್ಲಿ ನಟಿ ಭಾಗ್ಯಶ್ರೀ ಬೋರ್ಸೆಯೊಂದಿಗೆ ಲಿಪ್‌ಲಾಕ್ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಜೊತೆಗೆ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಸಿನಿಮಾ ಬಗ್ಗೆ

ಕಿಂಗ್‌ಡಮ್ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸ್ಪಂದನೆ ಸಿಕ್ಕಿದೆ. ಜೊತೆಗೆ 10 ಮಿಲಿಯನ್ಸ್ ವೀವ್ಸ್ ಪಡೆದುಕೊಂಡಿದೆ. ಹೀಗಾಗಿ ಸಾಲು ಸಾಲು ಸಿನಿಮಾ ಸೋತರೂ ಈ ಸಿನಿಮಾ ಜಯ ಸಾಧಿಸಲಿದೆ ಎಂದು ವಿಜಯ್ ಭರವಸೆ ಹೊಂದಿದ್ದಾರೆ.

ಸಿನಿಮಾದಲ್ಲಿ ವಿಜಯ್ ಹೇರ್‌ಸ್ಟೈಲ್ ಲುಕ್ ಚೇಂಜ್ ಆಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅವರು ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಯುದ್ಧದ ದೃಶ್ಯಗಳು ಸಿನಿಮಾದಲ್ಲಿ ಇವೆ. ವಿಜಯ್ ಖೈದಿ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದು ವಿಶೇಷ. ಹೀಗಾಗಿ ಈ ಸಿನಿಮಾ ಬಗ್ಗೆ ಭಾರೀ ಕುತೂಹಲ ಮೂಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+