Rashmika Madanna: ರಶ್ಮಿಕಾರನ್ನು ಅಡ್ಡಹೆಸರಿನಿಂದ ಕರೆದ ವಿಜಯ್ ದೇವರಕೊಂಡ...Video Viral

ಪ್ಯಾನ್ ಇಂಡಿಯಾ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಮತ್ತು ಸ್ನೇಹಿತ ನಟ ವಿಜಯ್ ದೇವರಕೊಂಡ ಅವರು ಅಮೆರಿಕಾದ ನ್ಯೂಯಾರ್ಕ್ ಸಿಟಿಯಲ್ಲಿದ್ದಾರೆ. 43ನೇ ಇಂಡಿಯಾ ಡೇ ಪರೇಡ್ ಮತ್ತು ಯುಎಸ್‌ನಲ್ಲಿ ನಡೆದ ಹಲವಾರು ಇತರ ಕಾರ್ಯಕ್ರಮಗಳಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದಾರೆ. ಅಭಿಮಾನಿಗಳಿಗೆ ಇವರಿಬ್ಬರ ಮೇಲೆ ಕಣ್ಣಿದ್ದು, ರಶ್ಮಿಕಾ, ವಿಜಯ್ ಅವರ ಯುಎಸ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದೇ ವೇಳೆ ರಶ್ಮಿಕಾರನ್ನು ವಿಜಯ್ ಅಡ್ಡ ಹೆಸರಿನಿಂದ (Nickname) ಕರೆದ ವಿಡಿಯೋ ವೈರಲ್ ಆಗಿದೆ.

ಈ ಹಿಂದೆಯು 'ಕಿಂಗಡಮ್' ಸಿನಿಮಾ ಟ್ರೈಲರ್ ರಿಲೀಸ್ ವೇಳೆ ಶುಭಕೋರಿದ್ದ ನಟಿ ರಶ್ಮಿಕಾ ಅವರಿಗೆ ನಿಕ್‌ನೇಮ್ ಮೂಲಕ ಕರೆದಿದ್ದ ವಿಜಯ್ ದೇವರಕೊಂಡ, ಪ್ರೀತಿಯ ಸ್ನೇಹಿತೆಗೆ ಎರಡು ಮೂರು ನಿಕ್ ನೇಮ್ ಇಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ಇವರಿಬ್ಬರು ನ್ಯೂ ಯಾರ್ಕ್‌ನಲ್ಲಿ ಅದ್ಧೂರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ವಿಜಯ್ ಪೋಷಕರು ಅಲ್ಲಿದ್ದಾರೆ ಎಂಬ ಮಾಹಿತಿ ಇದೆ.

Video of Vijay Devarakonda call Rashmika Mandanna by her nickname Rashshi went viral

ಈ ಜೋಡಿಯ ಯುಎಸ್ ಪ್ರವಾಸ ಮೂರು ದಿನದ್ದು ಎನ್ನಲಾಗಿದೆ. ಅಲ್ಲಿ ಕಾರ್ಯಕ್ರಮ ಜೊತೆಗೆ ಅಲ್ಲಿನ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಶುಭಾಶಯ ಕೋರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋ ಕ್ಲಿಪ್‌ನಲ್ಲಿ ರಶ್ಮಿಕಾ ಅಭಿಮಾನಿಗಳ ಜೊತೆಗೆ ಫೋಟೋಗೆ ಫೋಸ್ ಕೊಡುವಾಗ ಹಿಂದಿನಿಮ 'ರಶ್ಶಿ' ಎಂದು ಕೂಗುವ ಧ್ವನಿ ಕೇಳುತ್ತದೆ. ಈ ಧ್ವನಿ ಬೇರೆ ಯಾರದ್ದೂ ಅಲ್ಲ. ಸ್ನೇಹಿತ ವಿಜಯ್ ದೇವಕೊಂಡ ಅವರದ್ದು.

'ರಶ್ಶಿ' ಎಂದು ನಿಕ್ ನೇಮ್ ಕರೆಯುತ್ತಿದ್ದಂತೆ ರಶ್ಮಿಕಾ ಪ್ರತಿಕ್ರಿಯಿಸಿದ್ದಾರೆ. ಅವರೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಿದ್ದ ಅಭಿಮಾನಿಗಳಿಗೆ ರಶ್ಮಿಕಾ ಮತ್ತೆ ನಿಮ್ಮ ಬಳಿ ಬರುತ್ತಾರೆ ಹೇಳುವ ವಿಡಿಯೋ ಹರಿದಾಡುತ್ತಿದೆ. ಇವರಿಬ್ಬರ ಮಧ್ಯದ ಬಾಂಡಿಂಗ್, ಸ್ನೇಹ ಚೆನ್ನಾಗಿದೆ. ಅದು ಪ್ರೀತಿಯಾಗಿ ಬದಲಾಗಿದೆ. ಆದರೆ ಅವರಿಬ್ಬರು ಬಹಿರಂಗವಾಗಿ ಎಲ್ಲಿಯೂ ಹೇಳಿಲ್ಲ. ಆಗಾಗ ಇವರಿಬ್ಬರ ಫೋಟೋ, ವಿಡಿಯೋ ವೈರಲ್ ಮಾಡುವ ಫ್ಯಾನ್ಸ್ ಡೇಟಿಂಗ್ ಬಗ್ಗೆ ಚರ್ಚಿಸುತ್ತಲೇ ಇದ್ದಾರೆ. ಕಿಂಗಡಮ್ ಟ್ರೈಲರ್ ರಿಲೀಸ್ ವೇಳೆ ಪೋಸ್ಟ್‌ನಲ್ಲಿ 'ರಶಿಲೂ' ಎಂದು ವಿಜಯ್ ಬರೆದುಕೊಂಡಿದ್ದರು.

ಸಾಮಿ ಸಾಮಿ ಹಾಡಿಗೆ ರಶ್ಮಿಕಾ ಸ್ಟೆಪ್

ಇಂಡಿಯಾ ಡೇ ಪರೇಡ್ ಕಾರ್ಯಕ್ರಮದ ವೇದಿಕೆಯಲ್ಲಿ ನಿರೂಪಕರ ಒತ್ತಾಯದ ಮೇರೆಗೆ 'ಪುಷ್ಪ: ದಿ ರೈಸ್' ಚಿತ್ರದ 'ಸಾಮಿ ಸಾಮಿ' ಹಾಡಿಗೆ ಕುಣಿಯುತ್ತಾರೆ. ನಟಿ ಜೊತೆಗೆ ಸ್ಟೆಪ್ ಹಾಕಲು ವಿಜಯ್ ದೇವರಕೊಂಡ ಬಾರದ ಹಿಂದೆ ಸರಿಯುತ್ತಾರೆ. ರಶ್ಮಿಕಾ ಜೊತೆಗೆ ವೇದಿಕೆಯಲ್ಲಿ ಕೆಲವು ಹೆಜ್ಜೆ ಹಾಕಿದ ವಿಡಿಯೋ ಸಹ ವೈರಲ್ ಆಗಿದೆ.

ಎರಡು ದಿನಗಳಿಂದ ಯುಎಸ್‌ನಲ್ಲಿರುವ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ 43 ನೇ ಇಂಡಿಯಾ ಡೇ ಪೆರೇಡ್‌ನಲ್ಲಿ ಗ್ರ್ಯಾಂಡ್ ಮಾರ್ಷಲ್‌ಗಳಾಗಿ ಪಾಲ್ಗೊಂಡಿದ್ದರು. ಅಭಿಮಾನಿಗಳತ್ತ ಕೈ ಬೀಸಿದ್ದರು. ಈ ವೇಳೆ ಇವರಿಬ್ಬರ ಆತ್ಮೀಯತೆ, ನಡವಳಿಕೆ ನೋಡಿದರೆ ಇವರು ಡೇಟಿಂಗ್ ಮಾಡುತ್ತಿರುವುದು ಸತ್ಯ ಎಂದು ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ.

ಹೊಸ ಸಿನಿಮಾದ ರಶ್ಮಿಕಾ-ವಿಜಯ್...

ಈಗಾಗಲೇ ವಿಜಯ್ ಮತ್ತು ರಶ್ಮಿಕಾ 'ಗೀತ ಗೋವಿಂದಂ' ಮತ್ತು 'ಡಿಯರ್ ಕಂಪೇಡ್' ಎಂಬ ಎರಡು ಹಿಟ್ ಚಿತ್ರಗಳನ್ನು ನೀಡಿದ್ದಾರೆ. 'ಗೀತ ಗೋವಿಂದಂ'ಗೆ ಏಳು ವರ್ಷ ತುಂಬಿದ್ದನ್ನು ರಶ್ಮಿಕಾ ಇನ್ಸ್‌ಟಾಗ್ರಾಮ್‌ನಲ್ಲಿ ಶೂಟಿಂಗ್ ಫೋಟೋ ಹಂಚಿಕೊಂಡು ನೆನಪಿಸಿಕೊಂಡಿದ್ದರು. ಇದೀಗ ಈ ಜೋಡಿ ಮತ್ತೊಂದು ಸಿನಿಮಾದಲ್ಲಿ ಜೊತೆಯಾಗಿ ನಟಿಸಲಿದ್ದಾರೆ. ರಾಹುಲ್ ಸಂಕೃತ್ಯಾನ್ ನಿರ್ದೇಶನದ 'ವಿಡಿ 14' ನಲ್ಲಿ ವಿಜಯ್‌ಗೆ ರಶ್ಮಿಕಾ ನಾಯಕಿ ಎಂಬ ಸುದ್ದಿ ಹಬ್ಬಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+