Get Updates
Get notified of breaking news, exclusive insights, and must-see stories!

ಸಂಜು ಬಸಯ್ಯ ಪತ್ನಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ವ್ಯಕ್ತಿ: ಕಲಾವಿದ ಖಡಕ್ ಎಚ್ಚರಿಕೆ! ಎಲ್ಲರೂ ಡಿ.ಬಾಸ್ ತರ ಇರಲ್ಲ..

ಬೆಂಗಳೂರು, ಜುಲೈ 12: ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣು ಮಕ್ಕಳ ಬಗ್ಗೆ ಅಶ್ಲೀಲ ಕಾಮೆಂಟ್ ಮಾಡುವುದು, ನಿಂದನೆ, ಕೆಟ್ಟದಾಗಿ ಮೆಸೆಜ್ ಮಾಡುವುದು ಸಾಮಾನ್ಯ ಎಂಬಂತಾಗಬಿಟ್ಟಿದೆ. ವರ್ಷದ ಹಿಂದೆ ನಟಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೆ ಏನೆಲ್ಲ ಆಯಿತು ಎಂಬುದು ಗೊತ್ತಿದೆ. ಇದೀಗ ಹಾಸ್ಯ ಕಲಾವಿದ, ಕಾಮಿಡಿ ಶೋ ಮೂಲಕ ಜನಪ್ರಿಯತೆ ಗಳಿಸಿದ್ದ ಸಂಜು ಬಸಯ್ಯ (Sanju Basayya) ಪತ್ನಿಗೆ ಅಶ್ಲೀಲ ಸಂದೇಶವನ್ನು ವ್ಯಕ್ತಿಯೊಬ್ಬ ಕಳುಹಿಸಿ ಸಿಕ್ಕಿ ಬಿದ್ದಿದ್ದಾರೆ. ಆದರೆ ಸಂಜು ಬಸಯ್ಯ ಅವರು ಮಾಡಿದ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ವಿನಯಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಕಂಚಿಕೆರೆ ಗ್ರಾಮದ ಯುವಕ ಮನೋಜ್. ಈತನೇ ಕಲಾವಿದ ಸಂಜು ಬಸಯ್ಯ ಅವರ ಪತ್ನಿ ಪಲ್ಲವಿ ಅವರಿಗೆ ಕೆಲವು ದಿನಗಳಿಂದ ವೈಯಕ್ತಿಕವಾಗಿ ಅಶ್ಲಿಲ ಫೋಟೋ, ಸಂದೇಶ ಕಳಹಿಸಿದ್ದಾನೆ. ಕೂಡಲೇ ಎಚ್ಚೆತ್ತ ಸಂಜು ಬಸಯ್ಯ ಅವರು ಅತನ ಅಶ್ಲೀಲ ಸಂದೇಶಗಳನ್ನು ಸ್ಕೀನ್ ಶಾಟ್ ತೆಗೆದುಕೊಂಡು ಬೈಲಹೊಂಗಲ ಪೊಲೀಸ್ ಠಾಣೆ ಯಲ್ಲಿ ದೂರು ನೀಡಿದ್ದಾರೆ. ಠಾಣೆಯ ಪೊಲೀಸರು ಸಹಕಾರದದಿಂದ ಪೊಲೀಸರು ಆರೋಪಿಯನ್ನು ಹಿಡಿದು ತಂದು ನಿಲ್ಲಿಸಿದ್ದಾರೆ. ಆತನಿಗೆ ಸರಿಯಾದ ಶಿಕ್ಷೆ ನೀಡಿದ್ದಾರೆ.

Video of Sanju Basayya Exposes Man for Send Obscene Messages to His Wife Issues Stern Warning

ಠಾಣೆಯಲ್ಲಿ ಆರೋಪಿ ಜೊತೆಗೆ ವಿಡಿಯೋ ಮಾಡಿ ಎಚ್ಚರಿಕೆ ನೀಡಿದ ಸಂಜು ಬಸಯ್ಯ ಅವರ ಕಾರ್ಯಕ್ಕೆ ಅಪಾರ ಶ್ಲಾಘನೆ ವ್ಯಕ್ತವಾಗಿದೆ. ಅಲ್ಲದೇ ವ್ಯಕ್ತಿ ಮನೋಜ್‌ನಿಂದಲೇ ತನ್ನಿಂದ ತಪ್ಪಾಗಿದೆ ಎಂದು ತಪ್ಪೊಪ್ಪಿಕೊಳ್ಳುವಂತೆ ಮಾಡಿದ್ದಾರೆ. ಈ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಸಂಜು ಬಸಯ್ಯ ಅವರು ಹಂಚಿಕೊಂಡಿದ್ದಾರೆ. ಸಾರ್ವಜನಿಕರು, ಅವರ ಕಾರ್ಯಕ್ಕೆ ಸೆಲ್ಯೂಟ್ ಎಂದಿದ್ದಾರೆ.

ಕೆಟ್ಟ ಕಾಮೆಂಟ್ ಮಾಡುವವರೇ ಹುಷಾರ್: ನಾನು ಬಿಡಲ್ಲ

ಮನೋಜ್ ಜೊತೆಯಲ್ಲೇ ನಿಂತು ವಿಡಿಯೋ ಮಾಡಿರುವ ಸಂಜು ಬಸಯ್ಯ ಅವರು ಕೆಟ್ಟದಾಗಿ ಮೆಸೆಜ್ ಮಾಡುವವರಿಗೆ ಎಚ್ಚರಿಕೆ ನೀಡಿದ್ದದಾರೆ. ಪೋಸ್ಟ್‌ಗೆ ಯಾರಾದರೂ ಕೆಟ್ಟದಾಗಿ ಕಾಮೆಂಟ್ ಇಲ್ಲವೇ ವೈಯಕ್ತಿಕವಾಗಿ ಕೆಟ್ಟ ಕೆಟ್ಟ, ಅಶ್ಲೀಲ ಸಂದೇಶ ಕಳುಹಿಸದರೆ ನಾವು ಅದೆಲ್ಲವನ್ನು ಗಮನಿಸುತ್ತೇವೆ. ಕೆಟ್ಟದಾಗಿ ಕಾಮೆಂಟ್ ಮಾಡಿದಾಗ ನೋಡಿ ಕೈ ಬಿಡುತ್ತಾರೆ ಎಂದುಕೊಳ್ಳಬಹುದು. ಇಲ್ಲಿಯವರೆಗೆ ನಾವು ಸುಮ್ಮನಿದ್ದೇವೆ. ಇನ್ನುಮುಂದೆ ಸುಮ್ಮನಿರಲ್ಲ. ಕೆಟ್ಟ ಕಾಮೆಂಟ್ ಮಾಡುವವರಿಗೆ ಇಂತದ್ದೇ ಶಿಕ್ಷೆ ಆಗಲಿದೆ. ಕಾಮೆಂಟ್, ಮೆಸೆಜ್‌ಗಳ ಬಗ್ಗೆ ತೆಲೆ ಕೆಡಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

Video of Sanju Basayya Exposes Man for Send Obscene Messages to His Wife Issues Stern Warning

ನಾವು ಸಾಮಾಜಿಕ ಜಾಲತಾಣದಲ್ಲಿ ಇರುವವರು, ಅಲ್ಲಿಂದ ಬೆಳೆಯುವವರು. ಇದು ನಮ್ಮ ಜೀವನ, ಸೋಷಿಯಲ್ ಮೀಡಿಯಾದಿಂದ ಜೀನವ ನಡೆಯುತ್ತೆ. ಹೀಗೆ ಯಾರಾದರೂ ಮಾಡಿದರೆ ಸುಮ್ಮನಿರಲ್ಲ. ನಿಮ್ಮನೆ ಆಗಲಿ, ನಮ್ಮನೆಯವರೇ ಆಗಲಿ ಅಕ್ಕ ತಂಗಿಯರಂತೆ ಬೇರೆಯವರನು ತಿಳಿದುಕೊಳ್ಳಬೇಕು. ಇನ್ಮುಂದೆ ಕಾಮೆಂಟ್ ಮಾಡುವವರು, ಮೆಸೆಜ್ ಮಾಡುವವರು ಅರಿವಿಟ್ಟುಕೊಂಡು ಮೆಸೆಜ್ ಮಾಡಿ ಎಂದು ವಿನಂತಿಸಿಕೊಂಡಿದ್ದಾರೆ.

ರೇಣುಕಾಸ್ವಾಮಿ-ಡಿ.ಬಾಸ್ ಕೇಸ್ ನೆನಪಿಸಿದ ಘಟನೆ..

ಹೌದು, ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ಎಂದು ಚಿತ್ರದುರ್ಗದಿಂದ ರೇಣುಕಾಸ್ವಾಮಿ ಅಪಹರಿಸಿ ತಂದು ಶೆಡ್ ನಲ್ಲಿಟ್ಟು ಹಿಂಸೆ ನೀಡಲಾಗಿತ್ತು. ಸ್ಟಾರ್ ನಟ ದರ್ಶನ್ ಮತ್ತು ಸಹಚರರು ಹಲ್ಲೆ ಮಾಡಿ, ಮೃತ ದೇಹ ಚರಂಡಿಗೆ ಬಿಸಾಕಿದ್ದರು ಎಂದು ಪೊಲೀಸರು ಚಾರ್ಜ್ ಶೀಟ್‌ನಲ್ಲಿ ತಿಳಿಸಿದ್ದಾರೆ. ಈ ಸಂಬಂಧ 17 ಆರೋಪಿಗಳನ್ನು ಬಂಧಿಸಲಾಗಿತ್ತು. ನಂತರ ಏನೆಲ್ಲ ಆಯಿತು ಎಂಬುದು ರಾಜ್ಯದ ಜನರಿಗೆ ಗೊತ್ತೇ ಇದೆ.

ಪ್ರೇಯಸಿಗೆ ಅಶ್ಲೀಲ ಸಂದೇಶ ಕಳುಹಿಸಿದಕ್ಕಾಗಿ ಒಬ್ಬ ಸ್ಟಾರ್ ನಟ ನಡೆದುಕೊಂಡ ರೀತಿಗೂ ಹಾಗೂ ಸ್ವಂತ ಪತ್ನಿ ವಿಚಾರದಲ್ಲಿ ಕಿರಿಯ ಹಾಸ್ಯ ಕಲಾವಿದ ನಡೆದುಕೊಂಡು ರೀತಿಗೂ ಬಹಳಷ್ಟು ವ್ಯತ್ಯಾಸ ಇಲ್ಲಿ ಕಾಣಿಸುತ್ತದೆ. ಸಂಜು ಬಸಯ್ಯ ಅವರು ಈ ನೆಲದ ಕಾನೂನಿಗೆ, ಪೊಲೀಸ್ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿದ್ದಾರೆ. ತಪ್ಪಿತಸ್ಥ ವ್ಯಕ್ತಿ ಮನೋಜ್‌ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ. ಅವರ ಮಾನವೀಯ ನಡೆ ಸಾಕಷ್ಟು ಜನ ಹೃದಯ ಗೆದ್ದಿದೆ..

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+