Deepika Padukone Video: ನಟಿ ದೀಪಿಕಾ ಪಾಪರಾಜಿ ಕ್ಯಾಮೆರಾ ಬ್ಲಾಕ್: ಆಕ್ರೋಶದ ಬಳಿಕ ವಿಡಿಯೋ ಡಿಲೀಟ್
ನವದೆಹಲಿ, ಮೇ 10: ದೀಪಿಕಾ ಪಡುಕೋಣೆಯವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಅವರು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಅವರು ಕ್ಯಾಮೆರಾ ಮುಂದೆ ಬಲು ನಿರಾಕರಿಸಿದ ವಿಡಿಯೋ ವೈರಲ್ ಆಗಿತ್ತು. ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಆ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ.
ಬಾಲಿವುಡ್ ಚೆಂದದ ದಂಪತಿಗಳಲ್ಲಿ ಒಬ್ಬರಾದ ನಟಿ ದೀಪಿಕಾ (Deepika Padukone) ಹಾಗೂ ಪತಿ ನಟ ರಣವೀರ್ ಸಿಂಗ್ (Ranveer Singh) ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ವರ್ಷ ಸೆಪ್ಟಂಬರ್ ನಲ್ಲಿ ಮಗು ಬರುವ ಕುರಿತು ಇನ್‌ಸ್ಟಾಗ್ರಾಮ್ ನಲ್ಲಿ ದೀಪಿಕಾ ಪಡುಕೋಣೆ ಪೋಸ್ಟ್ ಹಾಕಿದ್ದರು.

ಅದರ ಬೆನ್ನಲ್ಲೆ ದೀಪಿಕಾ ಪಡುಕೋಣೆ ದಂಪತಿ ಪೋಷಕರ ಜೊತೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಸಿಕೊಂಡಿದ್ದಾರೆ. ಈ ವೇಳೆ ದೀಪಿಕಾ ಫೋಟೋ ತೆಗೆಯಲು, ವಿಡಿಯೋ ಮಾಡಲು ಪಾಪರಾಜಿಗಳು ಎದುರಾಗಿದ್ದಾರೆ. ಆಗಿ ವಿಡಿಯೋ ಮಾಡದಂತೆ ಹೇಳಿದ್ದಾರೆ. ಸ್ವತಃ ತಾವೇ ಕೈಯಿಂದ ಕ್ಯಾಮೆರಾ ಬ್ಲಾಕ್ ಮಾಡಲು ದೀಪಿಕಾ ಮುಂದಾಗಿದ್ದ ವಿಡಿಯೋ ವೈರಲ್ ಆಗಿತ್ತು.
ವಿಡಿಯೋ ಶೇರ್‌ಗೆ ಅಭಿಮಾನಿಗಳ ಆಕ್ರೋಶ
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪಾಪರಾಜಿಗಳಲ್ಲಿ ಒಬ್ಬರು ಹಂಚಿಕೊಂಡಿದ್ದರು. ನಂತರ ವಿಡಿಯೋ ನೋಡಿದ ಒಂದಷ್ಟು ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ನಕಾರಾತ್ಮಕ ಕಾಮೆಂಟ್ ಗಳನ್ನು ಮಾಡಿದ್ದರು. ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೆ ಆ ವಿಡಿಯೋ ಡಿಲೀಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ದೀಪಿಕಾ ಪಡುಕೋಣೆ ಮುಂಬೈನಲ್ಲಿ ಕ್ಯಾಮೆರಾ ಮುಂದೆ ಸಿಕ್ಕಿದ್ದರ ಕುರಿತು ಪಾಪರಾಜಿ ವಿಡಿಯೋ ಹಾಕಿದ್ದ. ಇದಕ್ಕೆ ದೀಪಿಕಾ ಅವರ ಅಭಿಮಾನಿಗಳು ಸ್ಟಾರ್ ದಂಪತಿಯ ಖಾಸಗಿತನವನ್ನು ಗೌರವಿಸಬೇಕು. ಇಷ್ಟವಿಲ್ಲವಾದರೂ ವಿಡಿಯೋ, ಫೋಟೋ ಕ್ಲಿಕ್ಕಿಸುವುದೇಕೆ ಎಂದು ಪಾಪರಾಜಿಗಳಿಗೆ ವಿನಂತಿಸಿ ಕಾಮೆಂಟ್ ಮಾಡಿದ್ದಾರೆ.

ನಟಿಯ ಖಾಸಗಿತನ, ಗೌಪ್ಯತೆ ಗೌರವಿಸಿ
ದೀಪಿಕಾಗೆ ಫೋಟೊ ಕ್ಲಿಕ್ಕಿಸಿಕೊಳ್ಳಲು ಇಷ್ಟವಿಲ್ಲ ಎಂದಾದ ಮೇಲೆ ನೀವೇಕೆ ಇಲ್ಲಿ ಪೋಸ್ಟ್ ಮಾಡಿದ್ದೀರಿ. ಅವರದ್ದೆ ಆದ ಖಾಸಗಿತನ, ಗೌಪ್ಯತೆ ಇರುತ್ತದೆ. ಅದನ್ನು ನೀವು ಗೌರವಿಸಬೇಕು ಎಂದು ಮತ್ತೊಬ್ಬರು ಅಭಿಮಾನಿ ಪ್ರತಿಕ್ರಿಯಿಸಿದ್ದಾರೆ. ಭಾರತೀಯ ಮಾಧ್ಯಮದವರನ್ನು ಹೀಗೆಯೇ ನಡೆಸಿಕೊಳ್ಳಬೇಕು.. ಸಾಕು..ಸಾಕು. ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.
ಇನ್ನೂ ಕಳೆದ ವರ್ಷ ಮುಂಬೈನಲ್ಲಿ ಜರುಗಿದ ಮನೀಶ್ ಮಲ್ಹೋತ್ರಾ ಅವರ ಗ್ರ್ಯಾಂಡ್ ಬ್ರೈಡಲ್ ಕೌಚರ್ ಶೋ ನಲ್ಲಿ ದೀಪಿಕಾ ಪಡುಕೋಣೆ ಅವರ ಪತಿ ರಣವೀರ್ ಸಿಂಗ್ ರ‍್ಯಾಂಪ್ ವಾಕ್ ಮಾಡಿದ್ದರು. ಆಗ ದೀಪಿಕಾ ತಮ್ಮ ಅಂಜು ಭವ್ನಾನಿ ಅವರೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆಗಲೂ ಅವರು ಪಾಪರಾಜಿಗಳಿಗೆ ಫೋಟೋ ತೆಗೆಯಲು ಅವಕಾಶ ನೀಡಿರಲಿಲ್ಲ.












Click it and Unblock the Notifications