‘ಟಗರು’ ಡಾಲಿ ಟು ‘ಕೋಟಿ’ ಡಾಲಿ: ಹಿಂಗಿದೆ ನೋಡಿ ಟಗರು ವಿಲನ್ ಹವಾ!

ಡಾಲಿ ಧನಂಜಯ್ ಯಾವುದೇ ಪಾತ್ರಕ್ಕೂ ಸೈ ಅನ್ನೋ ನಟ. ಹಾಗೇ ಕಾಲ ಕಾಲಕ್ಕೆ ತನ್ನ ಮ್ಯಾನರಿಸಂ ಹಾಗೂ ಸ್ಟೈಲ್ ಚೇಂಜ್ ಮಾಡಿಕೊಳ್ಳುತ್ತಲೇ, ಅಭಿಮಾನಿಗಳಿಗೆ ಹತ್ತಿರವಾಗುವ ಕಥೆಗಳನ್ನ ನಟ ಡಾಲಿ ತೆಗೆದುಕೊಂಡು ಬಂದು ಗೆದ್ದಿದ್ದಾರೆ. ಇದೀಗ ಯುಗಾದಿ ಹಬ್ಬದಲ್ಲೇ ಮತ್ತೊಂದು ಸರ್ಪ್ರೈಸ್ ಕೊಟ್ಟಿರುವ ಡಾಲಿ, ಫ್ಯಾನ್ಸ್ ಮನಸ್ಸಿಗೆ ಮುದ ನೀಡಿದ್ದಾರೆ!

ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬಂದು, ಒಂದೇ ಒಂದು ಬ್ರೇಕ್ ಸಿಗಲಿ ಅಂತಾ ಕಾಯುತ್ತಿದ್ದ ಡಾಲಿ ಧನಂಜಯ್‌ಗೆ ಸಾಲು ಸಾಲು ಸೋಲು ಬೆನ್ನು ಹತ್ತಿದ್ದವು. ಆದ್ರೆ ಈ ನಟನಿಗೆ ಕೈಹಿಡಿದ ಸಿನಿಮಾ 'ಟಗರು'. ನಟ ಶಿವಣ್ಣ ಅಭಿನಯಿಸಿದ್ದ ಈ ಸಿನಿಮಾ ಕನ್ನಡಿಗರ ಮನಸ್ಸು ಮಾತ್ರವಲ್ಲ, ಇಡೀ ಭಾರತದ ಹೃದಯ ಗೆದ್ದಿತ್ತು. ಸಿನಿಮಾದಲ್ಲಿ ವಿಲನ್ ಆಗಿ ಮಿಂಚಿ ಹೊಸ ಹಾದಿಗೆ ಹೆಜ್ಜೆ ಇಟ್ಟರು ನಟ ರಾಕ್ಷಸ ಡಾಲಿ ಧನಂಜಯ್. ಈ ಮೂಲಕ ಡಾಲಿ ಧನಂಜಯ್ ಬದುಕಿನಲ್ಲಿ 'ಟಗರು' ಸಿನಿಮಾ ಬರೋ ತನಕ ಒಂದು ಲೆಕ್ಕ, 'ಟಗರು' ಸಿನಿಮಾ ಬಂದ ನಂತರ ಇನ್ನೊಂದು ಲೆಕ್ಕ ಎಂಬಂತಾಗಿದೆ. ಹೀಗಿದ್ದಾಗಲೇ 'ಕೋಟಿ' ಡಾಲಿ ಆಗಿದ್ದಾರೆ ಧನಂಜಯ್!

Upcoming Movie Poster Of Daali Dhananjay Has Been Released

ಡಾಲಿ ಧನುಗೆ ಪರಮ್ ನಿರ್ದೇಶನ!

ಹೀಗೆ ಕಾಲಕ್ಕೆ ತಕ್ಕಂತೆ ಹೊಸ ಹೊಸ ಸಿನಿಮಾಗಳನ್ನ ಕನ್ನಡಿಗರ ಮುಂದೆ ಇಡುತ್ತಿರುವ ಈ ನಮ್ಮ ಡಾಲಿ ಧನು ಅವರು, ಈಗ 'ಕೋಟಿ' ಅನ್ನೋ ಟೈಟಲ್ ಅಡಿ ಏನೋ ಡಿಫರೆಂಟ್ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಛಾಪು ಮೂಡಿಸಿದ್ದ ಪರಮ್‌ ನಿರ್ದೇಶನದ ಈ ಸಿನಿಮಾ ಸಂಚಲನ ಸೃಷ್ಟಿಸಿದೆ. ಕಿರುತೆರೆಯಲ್ಲಿ ಹಲವು ಪ್ರಯೋಗಗಳ ಮೂಲಕವೇ ಗಮನ ಸೆಳೆದಿದ್ದರು ಪರಮ್. ಇದೀಗ ಡಾಲಿ ಧನಂಜಯ್ ಜೊತೆ ಸೇರಿ ಬೆಳ್ಳಿ ಪರದೆ ಮೇಲೆ ಹೊಸ ಕಮಾಲ್ ಮಾಡಲು ಸಜ್ಜಾಗಿದ್ದಾರೆ. ಇದಕ್ಕೆ ಬೇಕಾದ ತಯಾರಿಗಳನ್ನು ಡಾಲಿ ಧನು ಕೂಡ ಅಚ್ಚುಕಟ್ಟಾಗಿ ಮಾಡಿಕೊಳ್ಳುತ್ತಿದ್ದಾರೆ.

ನಿರ್ಮಾಪಕನಾಗಿ ಗೆದ್ದಿದ್ದ ಡಾಲಿ!

ಧನಂಜಯ್ ಪ್ರೊಡ್ಯೂಸರ್ ಡಾಲಿ ಆಗಿಯೂ ಮಿಂಚುತ್ತಿದ್ದಾರೆ. ಸಾಲು, ಸಾಲು ಹಿಟ್ ಸಿನಿಮಾ ಕೊಟ್ಟಿರುವ ಡಾಲಿ ನಟನೆ ಕೂಡ ಕೈಬಿಟ್ಟಿಲ್ಲ. ಈಗ ಧನಂಜಯ್‌ರ 'ಕೋಟಿ' ಸಿನಿಮಾ ಅದೇ ಸಾಲಿಗೆ ಸೇರುವ ನಿರೀಕ್ಷೆ ಇದ್ದು ತನ್ನ ಪೋಸ್ಟರ್ ಮೂಲಕ, ನಿರೀಕ್ಷೆ ಭಾರ ಹೆಚ್ಚಿಸಿದೆ 'ಕೋಟಿ' ಸಿನಿಮಾ. ಡಾಲಿ ಧನಂಜಯ್ ಅವರು ಈಗಾಗಲೇ ಹಲವು ಬಗೆಯ ಪಾತ್ರಗಳನ್ನ ಮಾಡಿದ್ದು ಈಗ ಹೊಸ ಅವತಾರದಲ್ಲಿ ಎಂಟ್ರಿ ಕೊಡುತ್ತಾರಾ? ಎಂಬ ಕುತೂಹಲ ಮೂಡಿದೆ. ಹೀಗೆ, 'ಕೋಟಿ' ಸಿನಿಮಾದ ಪೋಸ್ಟರ್ ನೋಡುತ್ತಿದ್ದರೆ ಏನೋ ಸ್ಪೆಷಲ್ ಆಗಿ ಕಾಮನ್ ಮ್ಯಾನ್ ಸ್ಟೋರಿಯನ್ನ ವಿವರಿಸೋದಕ್ಕೆ ಸಜ್ಜಾದಂತೆ ಕಾಣುತ್ತಿದೆ ಸಿನಿಮಾ ತಂಡ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+