ರಿಯಲ್ ಸ್ಟಾರ್ ಉಪೇಂದ್ರ ರಿಯಲ್ ಎಂಟ್ರಿಗೆ ಅಖಾಡ ಸಿದ್ಧ!
ನಟ ಉಪೇಂದ್ರ ಅವರ ಬಹು ನಿರೀಕ್ಷಿತ ಸಿನಿಮಾ 'UI' ಸಂಚಲನ ಸೃಷ್ಟಿ ಮಾಡಿದೆ. ಈಗ ಹೊಸ ವರ್ಷಕ್ಕೆ ಹೊಸ ಸುದ್ದಿಯೊಂದು ಹೊರಬಿದ್ದಿದ್ದು, ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಅದರಲ್ಲೂ ಇಷ್ಟು ದಿನಗಳ ಕಾಲ 'UI' ಸಿನಿಮಾಗೆ ಕಾಯುತ್ತಿದ್ದ ರಿಯಲ್ ಸ್ಟಾರ್ ಉಪೇಂದ್ರ ಅವರ ಫ್ಯಾನ್ಸ್‌ಗೆ ಇನ್ನೇನು ಒಂದೇ ಒಂದು ದಿನದಲ್ಲಿ ಭರ್ಜರಿ ಸುದ್ದಿ ಸಿಗಲಿದೆ.
ಅಂದಹಾಗೆ ನಟ ಉಪೇಂದ್ರ ಅವರು ರಿಯಲ್ ಸ್ಟಾರ್ ಅಂತಾನೆ ದೇಶಾದ್ಯಂತ ಫೇಮಸ್. ಹೊರ ರಾಜ್ಯಗಳಲ್ಲೂ ಸ್ಯಾಂಡಲ್‌ವುಡ್ ನಟನಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಹೀಗಾಗಿ ಇಡೀ ಚಿತ್ರರಂಗ ಉಪೇಂದ್ರ ಅವರ 'UI' ಎಂಟ್ರಿಗೆ ಕಾಯುತ್ತಿದೆ. ಹೀಗಿದ್ದಾಗ ಹೊಸ ಸುದ್ದಿ ಎಲ್ಲ ಕಡೆ ಸಂಚಲನ ಸೃಷ್ಟಿಸಿದೆ. ಅದು ಏನಂದ್ರೆ ಈ ಸಿನಿಮಾದ ಟೀಸರ್ ಬಗ್ಗೆ ಭರ್ಜರಿ ಸುದ್ದಿ, ಕೆಲವು ದಿನಗಳಿಂದ ಎಲ್ಲೆಲ್ಲೂ ಓಡಾಡುತ್ತಿದೆ. ಹೀಗಿದ್ದಾಗಲೇ ಟೀಸರ್ ರಿಲೀಸ್ ಆಗೋದು, ಮತ್ತು ಅದನ್ನ ಲಾಂಚ್ ಮಾಡೋದು ಯಾರು? ಅನ್ನೋ ವಿಷಯ ಕೂಡ ಕನ್ಫರ್ಮ್ ಆಗಿದೆ.

'UI' ಟೀಸರ್ ಯಾವಾಗ ರಿಲೀಸ್?
ಇತ್ತೀಚೆಗೆ UI ಟೀಸರ್ ಬಿಡುಗಡೆ ಬಗ್ಗೆ ವಿಶೇಷವಾಗಿ ಘೋಷಣೆ ಮಾಡಲಾಗಿತ್ತು. ಈ ಹಿನ್ನೆಲೆ, ಭಾರಿ ಕುತೂಹಲ ಕೆರಳಿಸಿತ್ತು ಉಪೇಂದ್ರ ಅವರ ಮುಂದಿನ ಸಿನಿಮಾ ಟೀಸರ್ ಬಿಡುಗಡೆ ಡೇಟ್. ಇದೀಗ ಡೇಟ್ ಕೂಡ ಕನ್ಫರ್ಮ್ ಆಗಿದೆ. ಜನವರಿ 8 ರಂದು ಉಪೇಂದ್ರ ಅವರ ಸಿನಿಮಾದ ಟೀಸರ್ ಭರ್ಜರಿಯಾಗಿ ರಿಲೀಸ್ ಆಗುತ್ತಿದೆ. ಹೀಗೆ ರಿಲೀಸ್ ಆಗಲಿರುವ 'UI' ಟೀಸರ್ ಅನ್ನ ನಟ ಕಿಚ್ಚ ಸುದೀಪ್ ಅವರು ಡಿಜಿಟಲ್ ರಿಲೀಸ್ ಮಾಡಲಿದ್ದಾರೆ. ಹಾಗೇ ಅಂದು ಸಂಜೆಯೆ ನಡೆಯುವ ಬಹುದೊಡ್ಡ ಕಾರ್ಯಕ್ರಮಕ್ಕೆ, ದೊಡ್ಡ ದೊಡ್ಡ ಸ್ಟಾರ್‌ಗಳೇ ಬರುತ್ತಿದ್ದಾರೆ.
ಕುತೂಹಲ ಕೆರಳಿಸಿದ ಕಾರ್ಯಕ್ರಮ
ಮತ್ತೊಂದ್ಕಡೆ UI ಟೀಸರ್ ರಿಲೀಸ್ ಆಗುವ ದಿನ ನಡೆಯುವ ಕಾರ್ಯಕ್ರಮಕ್ಕೆ ಅತಿಥಿಯಾಗಿ, ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರು ಬರುತ್ತಿದ್ದಾರೆ. ಈ ಸಂಭ್ರಮದ ಜೊತೆಗೆ ಹ್ಯಾಟ್ರಿಕ್ ಹೀರೋ ಶಿವಣ್ಣ ಕೂಡ ಉಪ್ಪಿ ಸಿನಿಮಾಗೆ ಸಾಥ್ ನೀಡಲಿದ್ದಾರೆ. ಹೀಗಾಗಿ ಆ ದಿನ ಟೀಸರ್ ಜೊತೆ ಇನ್ನೂ ಏನೇನು ಕುತೂಹಲವನ್ನು ನಟ ಉಪೇಂದ್ರ ಅವರು ರಿವೀಲ್ ಮಾಡಲಿದ್ದಾರೆ ಅಂತಾ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಾಗಿ ಎಲ್ಲಾ ಪ್ರಶ್ನೆಗಳಿಗೆ ಇನ್ನೇನು ಒಂದೇ ಒಂದು ದಿನದಲ್ಲಿ ಸಂಪೂರ್ಣ ಉತ್ತರ ಸಿಗುವ ನಿರೀಕ್ಷೆ ಇದೆ.












Click it and Unblock the Notifications