ಲಿವ್-ಇನ್ ರಿಲೇಷನ್‌ಶಿಪ್, ಗುಟ್ಟಾಗಿ ಮದುವೆ, ನಾಲ್ಕೇ ತಿಂಗಳಿಗೆ ಖ್ಯಾತ ನಟಿ ಡಿವೋರ್ಸ್
ಸಿನಿಮಾರಂಗದಲ್ಲಿ ಇದೀಗ ಸೆಲೆಬ್ರಿಟಿಗಳ ಡಿವೋರ್ಸ್ ಅನ್ನೋದು ಟ್ರೆಂಡಾಗಿಬಿಟ್ಟಿದೆ. ಮದುವೆಯಾಗಿ ಮುದ್ದಾದ ಜೋಡಿ ಕರೆಸಿಕೊಂಡವರು, ಹತ್ತಾರು ವರ್ಷ ಜೊತೆಯಾಗಿ ಬದುಕು ನಡೆಸಿದವರು ಡಿವೋರ್ಸ್ ಪಡೆಯುತ್ತಿರುವುದು ಕಾಮನ್ ಆಗಿಬಿಟ್ಟಿದೆ. ಇದೀಗ ಮತ್ತೊಬ್ಬ ಸೆಲೆಬ್ರಿಟಿ ಮದುವೆಯಾದ ಆರೇ ತಿಂಗಳಿಗೆ ಡಿವೋರ್ಸ್ ಪಡೆಯುವ ಮೂಲಕ ಸುದ್ದಿಯಾಗಿದ್ದಾರೆ. ಗುಟ್ಟಾಗಿ ಮದುವೆಯಾಗಿದ್ದ ಈ ನಟಿಯ ಬೇರೊಬ್ಬರ ಜೊತೆ ಸಲುಗೆ ಬೆಳೆಸಿ, ಅಕ್ರಮ ಸಂಬಂಧ ಹೊಂದಿದ್ದರು ಎಂದು ಪತಿಯೇ ಆರೋಪಿಸಿದ್ದಾರೆ ಎಂದು ವರದಿಯಾಗಿದೆ.
ಹಿಂದಿ ಕಿರುತೆರೆಯ ಖ್ಯಾತ ನಟಿ ಅದಿತಿ ಶರ್ಮಾ ಹಾಗೂ ಪತಿ ಅಭಿನೀತ್ ಕೌಶಿಕ್ ಅವರು ಡಿವೋರ್ಸ್ ಪಡೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಈ ಇಬ್ಬರೂ ಗುಟ್ಟಾಗಿ ಮದುವೆಯಾಗಿದ್ದರು. ಅಲ್ಲದೆ ಕೇವಲ ನಾಲ್ಕು ತಿಂಗಳಿಗೇ ಡಿವೋರ್ಸ್ ಪಡೆಯುತ್ತಿರುವುದು ಅಚ್ಚರಿ ಮೂಡಿಸಿದೆ. ಅದಿತಿ ಶರ್ಮಾ ಮೇಲೆ ಪತಿ ಅಭಿನೀತ್ ಗಂಭೀರ ಆರೋಪ ಕೂಡ ಮಾಡಿರುವುದು ಎಲ್ಲರಿಗೂ ಶಾಕ್ ನೀಡಿದೆ.

ಅಪೋಲೆನಾ ಪಾತ್ರಕ್ಕೆ ಹೆಸರುವಾಸಿಯಾಗಿದ್ದ ನಟಿ ಅದಿತಿ ಶರ್ಮಾ ಅವರು ತಮ್ಮ ದೀರ್ಘಕಾಲದ ಗೆಳೆಯನಾದ ಅಭಿನೀತ್ ಕೌಶಿಕ್ ಅವರನ್ನು ರಹಸ್ಯವಾಗಿ ವಿವಾಹವಾಗಿದ್ದರು. ವರದಿಗಳ ಪ್ರಕಾರ ಅದಿತಿ ಮತ್ತು ಅಭಿನೀತ್ ಕಳೆದ ನವೆಂಬರ್ 12ರಂದು ಗೋರೆಗಾಂವ್ ಮನೆಯಲ್ಲಿ ಗುಪ್ತವಾಗಿ ಮದುವೆಯಾಗಿದ್ದರು. ನಟಿಯಾಗಿ ತನ್ನ ವೃತ್ತಿಜೀವನದ ಬಗ್ಗೆ ಕಾಳಜಿ ವಹಿಸಿದ್ದರಿಂದ ಅದಿತಿ ತಮ್ಮ ವಿವಾಹದ ವಿಚಾರವನ್ನು ಬಹಿರಂಗಪಡಿಸದಂತೆ ಹೇಳಿದ್ದಳು ಎಂದು ಅಭಿನೀತ್ ಹೇಳಿಕೊಂಡಿದ್ದಾರೆ.
ʼಕಳೆದ ಒಂದೂವರೆ ವರ್ಷಗಳಿಂದ ಅವಳು ನನ್ನನ್ನು ಮದುವೆಯಾಗಲು ಪಟ್ಟು ಹಿಡಿದಿದ್ದಳು. ಆದರೆ, ನಾನು ಆಗ ಸಿದ್ಧನಾಗಿರಲಿಲ್ಲ. ತಂಬಾ ಒತ್ತಡ ಹಾಕಿದ್ದರಿಂದ ನಾನು ಮದುವೆಗೆ ಒಪ್ಪಿಕೊಂಡೆ. ಮದುವೆಯಾಗಿರುವ ವಿಚಾರ ಬಹಿರಂಗಗೊಂಡರೆ ಅವಕಾಶಗಳು ಕೈತಪ್ಪುತ್ತವೆ ಎಂಬ ಕಾರಣಕ್ಕೆ ಯಾರಿಗೂ ತಿಳಿಯಬಾರದು ಎಂದು ಅವಳು ಒತ್ತಾಯಿಸಿದ್ದಳು. ಹಾಗಾಗಿ ಬಹುತೇಕರಿಗೆ ನಮ್ಮ ಮದುವೆ ವಿಚಾರ ಗೊತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಭಿನೀತ್ ಪರ ವಕೀಲ ರಾಕೇಶ್ ಶೆಟ್ಟಿ ಅವರು ಮದುವೆಯ ಫೋಟೋಗಳನ್ನು ರಿವೀಲ್ ಮಾಡಿದ್ದಾರೆ. ನವೆಂಬರ್ 12ರಂದು ವಿವಾಹವಾಗುವ ಮುನ್ನ ಇವರು ತಮ್ಮ 5 ಬಿಎಚ್‌ಕೆ ಅಪಾರ್ಟ್‌ಮೆಂಟ್‌ನಲ್ಲಿ ಹಲವು ವರ್ಷಗಳಿಂದ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದರು. ಅದಿತಿ ಅವರು ಸಹನಟ ಸಮರ್ಥ್ಯಾ ಗುಪ್ತಾ ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಈ ವಿಚಾರ ಅಭಿನೀತ್‌ಗೆ ತಿಳಿದ ಮೇಲೆ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ವಿವರಿಸಿದ್ದಾರೆ.
ಅದಿತಿ ಟ್ರಯಲ್ ಮದುವೆ ಅಂದ್ರು:
ಅದಿತಿ ಶೂಟಿಂಗ್ ಸಮಯದಲ್ಲಿ ಸಮರ್ಥ್ಯ ಅವರೊಂದಿಗೆ ಆಪ್ತವಾಗಿದ್ದ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದವೂ ನಡೆದಿತ್ತು. ಅಲ್ಲದೆ ತಮ್ಮ ಮದುವೆ ವಿಚಾರವನ್ನು ಪ್ರಸ್ತಾಪಿಸಿದಾಗ, ಅದಿತಿ ಅದು ಸುಮ್ಮನೆ ಆಗಿರುವ ಟ್ರಯಲ್ ಮದುವೆ, ಕಾನೂನುಬದ್ಧವಲ್ಲ ಎಂದು ಹೇಳಿರುವುದಾಗಿ ಆರೋಪ ಕೇಳಿಬಂದಿದೆ. ಇದು ಪೊಲೀಸ್ ಠಾಣೆ ಮೆಟ್ಟಿಲೇರಿ ದೂರುಗಳು ಕೂಡ ದಾಖಲಾಗಿವೆ. ಅದಿತಿ ಅವರ ಕುಟುಂಬವು ಪರಿಹಾರವಾಗಿ ₹25 ಲಕ್ಷ ಕೇಳಿದ್ದಾರೆ, ಅದಿತಿ ತಂದೆ ಅಭಿನೀತ್‌ಗೆ ಕಪಾಳಮೋಕ್ಷ ಮಾಡಿದರು. ಈ ಗಲಾಟೆಯಲ್ಲಿ ಅದಿತಿಯೂ ಗಾಯಗೊಂಡರು ಎಂದು ಅಭಿನೀತ್ ಪರ ವಕೀಲ ರಾಕೇಶ್ ಶೆಟ್ಟಿ ಆರೋಪ ಮಾಡಿದ್ದಾರೆ.












Click it and Unblock the Notifications