'ದಯವಿಟ್ಟು ಮೋಸ ಹೋಗಬೇಡಿ': ತುಕಾಲಿ ಸಂತೋಷ್ ದಂಪತಿ ಹೀಗಂದಿದ್ಯಾಕೆ..?
ನಟ ತುಕಾಲಿ ಸಂತೋಷ್ ಹಾಗೂ ಮಾನಸ ಸದ್ಯ ಕಿರುತೆರೆಯ ಜನಪ್ರಿಯ ಜೋಡಿ. ಕಾಮಿಡಿ ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದ ತುಕಾಲಿ ಸಂತೋಷ್ ಬಿಗ್ ಬಾಸ್ ಕನ್ನಡ ಸೀನಸ್ 10ರಲ್ಲಿ ಸ್ಪರ್ಧಿಯಾಗಿ ಮತ್ತಷ್ಟು ಜನರಿಗೆ ಹತ್ತಿರವಾದರು. ಬಿಗ್ ಬಾಸ್ ಬಳಿಕ ತುಕಾಲಿ ಸಂತೋಷ್ ಪತ್ನಿ ಮಾನಸ ಕೂಡ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಕಿರುತೆರೆ ಪ್ರೇಕ್ಷಕರಿಗೆ ಈ ಜೋಡಿ ಎಂದರೆ ಅಚ್ಚುಮೆಚ್ಚು.
ಸದ್ಯ ಕಿರುತೆರೆ ಶೋಗಳಲ್ಲಿ ಬ್ಯೂಸಿಯಾಗಿರುವ ಈ ಇಬ್ಬರು ಏಕಾಏಕಿ 'ಯಾರೂ ಕೂಡ ಮೋಸ ಹೋಗಬೇಡಿ' ಎಂದು ಮನವಿ ಮಾಡಿಕೊಂಡಿದ್ದಾರೆ. ವಿಡಿಯೋ ಮೂಲಕ ವಾಸ್ತವತೆಯನ್ನು ತುಕಾಲಿ ಸಂತೋಷ್ ಹಾಗೂ ಮಾನಸ ವಿವರಿಸಿದ್ದಾರೆ.

"ನನ್ನ ಮಾನಸ ಸಂತೋಷ್ ಎನ್ನುವ ಅಫಿಷಿಯಲ್ ಇನ್ಸ್ಟಾಗ್ರಾಮ್ ಪೇಜ್ ಹ್ಯಾಕ್ ಆಗಿದೆ. ಆ ಅಕೌಂಟ್‌ನಿಂದ ನೀವು 40 ಸಾವಿರ ರೂಪಾಯಿ ಇನ್ವೆಸ್ಟ್ ಮಾಡಿ, ನಿಮಗೆ ವಾಪಸ್ 4.90 ಲಕ್ಷ ರೂ. ವಾಪಸ್ ಕೊಡುತ್ತೇವೆ. ಅಂತ ಮೇಸೆಜ್ ಕಳುಹಿಸುತ್ತಿದ್ದಾರೆ. ದಯವಿಟ್ಟು ಯಾರೂ ಕೂಡ ಅದನ್ನು ನಂಬಬಾರದು. ನಂಬಿ, ದುಡ್ಡು ಹಾಕಿ ಕಳೆದುಕೊಳ್ಳಬೇಡಿ. ನನ್ನ ಅಕೌಂಟ್ ಹ್ಯಾಕ್ ಆಗಿರುವುದರಿಂದ ಬೇರೆ ಯಾರೋ ರೀತಿ ಮೇಸೆಜ್ ಹಾಕುತ್ತಿದ್ದಾರೆ" ಎಂದು ಮಾನಸ ವಿವರಿಸಿದರು.
ಇನ್ನು, ತುಕಾಲಿ ಸಂತೋಷ್ ಮಾತಾಡಿ, "ಈ ಅಕೌಂಟ್‌ನಿಂದ ಮೇಸೆಜ್ ಹಾಕುವುದು ಮಾತ್ರವಲ್ಲದೇ, ಪೋಸ್ಟ್‌ಗಳನ್ನು ಕೂಡ ಹಾಕುತ್ತಿದ್ದಾರೆ. ನನಗೆ 4.90 ಲಕ್ಷ ರೂಪಾಯಿ ಬಂದಿದೆ ಎಂದು ಸುಳ್ಳು ಪೋಸ್ಟ್‌ಗಳನ್ನು ಕೂಡ ಶೇರ್ ಮಾಡುತ್ತಿದ್ದಾರೆ. ದಯವಿಟ್ಟು ಆ ಅಕೌಂಟ್‌ನಿಂದ ಏನಾದರೂ ಮೇಸೆಜ್ ಬಂದರೆ, ಯಾವುದಕ್ಕೂ ರೀಪ್ಲೆ ಮಾಡುವುದಕ್ಕೆ ಹೋಗಬೇಡಿ. ಇದೇ ರೀತಿ ನಾನು ಬಿಗ್ಬಾಸ್ ಶೋನಿಂದ ಹೊರಗೆ ಬಂದಾಗ ನನ್ನ ಇನ್‌ಸ್ಟಾಗ್ರಾಮ್ ಅಕೌಂಟ್ ಕೂಡ ಹ್ಯಾಕ್ ಆಗಿತ್ತು. ಮತ್ತೆ ನಾನು ಹೊಸದಾಗಿ ಅಕೌಂಟ್ ಕ್ರಿಯೆಟ್ ಮಾಡಿಕೊಂಡೆ" ಎಂದರು.
ಈಗ ಮಾನಸಳ ಪೇಜ್ ಕೂಡ ಹ್ಯಾಕ್ ಆಗಿದೆ. ದಯವಿಟ್ಟು ಯಾರೂ ಕೂಡ ಆ ಪೇಜ್‌ನಿಂದ ಬರುವ ಮೇಸೆಜ್‌ಗಳಿಗೆ ರಿಯಾಕ್ಟ್ ಮಾಡುವುದಕ್ಕೆ ಹೋಗಬೇಡಿ. ಆ ಪೇಜ್‌ನ ಫಾಲೋ ಕೂಡ ಮಾಡಬೇಡಿ. ಅವರು ಕೆಲವು ಲಿಂಕ್‌ಗಳನ್ನು ಕಳುಹಿಸುತ್ತಾರೆ. ದಯವಿಟ್ಟು ಆ ಲಿಂಕ್‌ಗಳನ್ನು ಒಪನ್ ಮಾಡಬೇಡಿ. ಆ ಲಿಂಕ್ ಇಂದಾನೇ ನಿಮ್ಮ ಅಕೌಂಟ್‌ನಲ್ಲಿರುವ ದುಡ್ಡು ಸಮೇತ ಹೋಗುತ್ತಂತೆ. ಲಿಂಕ್‌ಗಳನ್ನು ಮಾತ್ರ ಯಾರೂ ಓಪನ್ ಮಾಡಬೇಡಿ ಎಂದು ತುಕಾಲಿ ಸಂತೋಷ್ ದಂಪತಿ ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications