Toxic: ಇದೇ ಕಾರಣಕ್ಕೆ ಯಶ್‌ ಇಷ್ಟವಾಗೋದು, ಆಪ್‌ ಕಿ ಅದಾಲತ್‌ನಲ್ಲಿ ಆಡಿರೋ ಮಾತಿನಿಂದ ಫ್ಯಾನ್ಸ್ ಹೃದಯ ಕದ್ದ ರಾಕಿಂಗ್ ಸ್ಟಾರ್

Toxic Yash ಪಾತ್ರಗಳು ಮಾತ್ರವಲ್ಲ, ಅವರ ವ್ಯಕ್ತಿತ್ವವೂ ಲಾರ್ಜರ್‌ ದ್ಯಾನ್‌ ಲೈಫ್‌ ಅಂತ ಇತ್ತೀಚೆಗೆ ನಯನತಾರ ಹೇಳಿದ್ದರು. ಹಿರಿಯ ಪತ್ರಕರ್ತ ರಜತ್‌ ಶರ್ಮಾ ನಡೆಸಿಕೊಡುವ ಆಪ್‌ ಕಿ ಅದಾಲತ್‌ ಕಾರ್ಯಕ್ರಮದಲ್ಲಿ ಅದು ಮತ್ತೊಮ್ಮೆ ಸಾಬೀತಾಗಿದೆ. ಅಲ್ಲಿ ಯಶ್‌ ಆಡಿರುವ ಮಾತುಗಳನ್ನು ಕೇಳಿ ಫ್ಯಾನ್ಸ್‌ಗೆ ರಾಕಿಂಗ್‌ ಸ್ಟಾರ್‌ ಮೇಲೆ ಲವ್‌ ಹೆಚ್ಚಾಗಿದೆ. ʼಇದೇ ಇದೇ ಕಾರಣಕ್ಕೆ ಯಶ್‌ ಕಂಡ್ರೆ ಆ ಲೆವೆಲ್‌ಗೆ ಇಷ್ಟ ಆಗೋದು ಅಂತ ಅವರ ಫ್ಯಾನ್ಸ್‌ ಮಾತನಾಡಿಕೊಳ್ತಿದ್ದಾರೆ. ಇಡೀ ಭಾರತದಲ್ಲಿ ಯಶ್‌ ಅವರ ʼಕೆಜಿಎಫ್‌ʼ ಸೀರೀಸ್‌ಗಳು ಮಾಡಿರೋ ಅಬ್ಬರ ಕಡಿಮೆಯದಲ್ಲ. ಆ ಖದರ್‌, ಜನಪ್ರಿಯತೆಯೇ ಅವರ ಟಾಕ್ಸಿಕ್‌ ಸಿನಿಮಾಕ್ಕೂ ಈ ಮಟ್ಟಿನ ಬೆಂಬಲ ಹರಿದುಬರುವಂತೆ ಮಾಡಿದೆ.

Toxic Yash

ನರೇಂದ್ರ ಮೋದಿ ಭಾಗವಹಿಸಿದ್ದ ಶೋ

ರಜತ್‌ ಶರ್ಮಾ ಅವರು ನಡೆಸಿಕೊಡುವ ಆಪ್‌ ಕಿ ಅದಾಲತ್‌ ಕಾರ್ಯಕ್ರಮಕ್ಕೆ ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಜನಪ್ರಿಯತೆ ಇದೆ. ಕಳೆದ 34 ವರ್ಷಗಳಿಂದ ಈ ಶೋ ನಡೆದುಕೊಂಡು ಬರುತ್ತಿದೆ ಅಂದರೆ ಅದ್ಯಾವ ಮಟ್ಟಿನ ಜನಪ್ರಿಯತೆ ಇರಬಹುದು ಊಹಿಸಿ. ಅದಕ್ಕಿಂತಲೂ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಸೇರಿ ಅನೇಕ ರಾಜಕೀಯ ಗಣ್ಯರು, ಬಾಲಿವುಡ್‌ನ ಸ್ಟಾರ್‌ಗಳು ಇದರಲ್ಲಿ ಭಾಗವಹಿಸಿದ್ದಾರೆ. ಹೀಗಾಗಿ ಈ ಶೋಗೆ ಅದರದೇ ಆದ ಘನತೆ ಇದೆ. ಈ ಶೋದಲ್ಲಿ ಭಾಗವಹಿಸೋದು ಅಂದರೆ ಅದೊಂದು ದೊಡ್ಡ ಗೌರವ ಎಂದೇ ಭಾವಿಸಲಾಗುತ್ತೆ.

ಯಶ್‌ ಮೇಲೆ ಹೆಚ್ಚಿದ ಅಭಿಮಾನ

ಈ ಶೋದಲ್ಲಿ ರಜತ್‌ ಶರ್ಮಾ ಅವರು ಯಶ್‌ ಅವರಿಗೆ ಒಂದು ಪ್ರಶ್ನೆ ಕೇಳಿದ್ದಾರೆ. ನೀವು ದಿನಕ್ಕೆ 700 ಮಂದಿ ಫ್ಯಾನ್ಸ್‌ ಬಂದರೆ ಅಷ್ಟೂ ಜನರಿಗೆ ಸೆಲ್ಫಿ ಕೊಡುತ್ತೀರಾ? ಅಂದರೆ ಎಲ್ಲರಿಗೂ ಜೊತೆಯಾಗಿ ಅಲ್ಲ, ಪ್ರತಿಯೊಬ್ಬರ ಜೊತೆಗೂ ಒಂದೊಂದು ಸೆಲ್ಫಿ ರೀತಿ 200 ಜನರ ಜೊತೆಗೆ ಸೆಲ್ಫಿಗೆ ಪೋಸ್‌ ಕೊಡ್ತೀರ?ʼ ಅಂತ ಕೇಳಿದ್ದಾರೆ. ಯಶ್‌ ಕೊಂಚವೂ ವಿಚಲಿತರಾಗದೇ ʼಖಂಡಿತಾ ಕೊಡ್ತೀನಿ. ನಾನು ಇಡೀ ದಿನ ಫ್ಯಾನ್ಸ್‌ಗೆ ಸೆಲ್ಫಿಗೆ ಪೋಸ್‌ ಕೊಟ್ಟಿದ್ದೂ ಇದೆʼ ಅಂದಾಗ ರಜತ್‌ ಅವರಿಗೆ ಮಾತ್ರವಲ್ಲ, ಅಲ್ಲಿ ನೆರೆದಿದ್ದವರಿಗೂ ಯಬ್ಬ ಅನಿಸಿತು.

ಅಭಿಮಾನಿಗಳಿಗೆ ಲೈಫ್‌ ಟೈಮ್‌ ನೆನಪು

ʼನಮಗೆ ಆ ಕ್ಷಣಕ್ಕೆ ಕಷ್ಟ ಅನಿಸಬಹುದು. ಆದರೆ ಅಭಿಮಾನಿಗಳಿಗೆ ಅದು ಲೈಫ್‌ ಟೈಮ್‌ ಮೆಮೊರಿ. ನೆಚ್ಚಿನ ನಟನ ಜೊತೆಗೆ ಫೋಟೋ ತೆಗೆಸಿಕೊಂಡಿದ್ದನ್ನು ಅವರು ಜೀವನ ಪರ್ಯಂತ ನೆನಪಿಟ್ಟುಕೊಳ್ಳುತ್ತಾರೆ. ನಾನು ಕೊಡುವ ಒಂದು ಪೋಸ್‌ನಿಂದ ಅವರ ಬದುಕಿನ ಸಂಭ್ರಮ ಹೆಚ್ಚುತ್ತೆ ಅಂತಾದರೆ ಕಷ್ಟವಾದರೂ ಸರಿ ನಾನು ಪೋಸ್‌ ಕೊಡುತ್ತೇನೆʼ ಅನ್ನೋ ರೀತಿ ಯಶ್‌ ಅವರ ಮಾತುಗಳಿದ್ದವು.

ಇದ್ಕೇ ಕಣಣ್ಣ ನಿಮ್‌ ಕಂಡ್ರೆ ಅಷ್ಟಿಷ್ಟ

ಯಶ್‌ ಅವರ ಈ ಮಾತು ಕೇಳಿ, ʼಇದ್ಕೆ ಇದ್ಕೆ ಕಣಣ್ಣ ನಿಮ್‌ ಕಂಡ್ರೆ ಅಷ್ಟಿಷ್ಟ ಆಗೋದುʼ ಅಂತ ಫ್ಯಾನ್ಸ್‌ ಖುಷಿಯಿಂದ ಉದ್ಗರಿಸುತ್ತಿದ್ದಾರೆ. ಯಶ್‌ ಅವರ ಈ ಸಿಂಪಲ್‌ ವ್ಯಕ್ತಿತ್ವ, ಅಷ್ಟೆತ್ತರಕ್ಕೆ ಬೆಳೆದಿದ್ದರೂ ಹೆಡ್‌ ವೈಟ್‌ ಇಲ್ಲದೇ ಇರೋದು, ತನ್ನ ವೃತ್ತಿಯನ್ನು ಅವರು ಗೌರವಿಸುವ ರೀತಿ ಎಲ್ಲವೂ ಅಭಿಮಾನಿಗಳ ಕಣ್ಣಲ್ಲಿ ಅವರು ಅಷ್ಟೆತ್ತರ ಬೆಳೆಯುವ ಹಾಗೆ ಮಾಡಿದೆ.

ಶೋಗೆ ಬಂದವರೂ ಸೆಲ್ಫಿ ಕೇಳಿದ್ರು

ರಜತ್‌ ಶರ್ಮಾ ಅವರ ʼಆಪ್‌ ಕಿ ಅದಾಲತ್ʼ ಕಾರ್ಯಕ್ರಮದಲ್ಲಿ ಪ್ರೇಕ್ಷಕರೂ ಭಾಗವಹಿಸುವ ರೂಢಿ ಇದೆ. ಯಶ್‌ ಅವರು ಈ ಕಾರ್ಯಕ್ರಮಕ್ಕೆ ಬರುತ್ತಿರುವುದು ತಿಳಿದು ಅನೇಕ ಯುವ ಜನರು ಈ ಕಾರ್ಯಕ್ರಮದಲ್ಲಿ ಪ್ರೇಕ್ಷಕರಾಗಿ ಭಾಗವಹಿಸಿದ್ದರು. ಅತ್ತ ವೇದಿಕೆ ಮೇಲೆ ತಾನು ದಿನವಿಡೀ ಅಭಿಮಾನಿಗಳ ಸೆಲ್ಫಿಗೆ ಪೋಸ್‌ ನೀಡೋದಾಗಿ ಹೇಳಿದಾಗ ಇಲ್ಲಿದ್ದ ಯಶ್‌ ಅಭಿಮಾನಿಗಳು, ʼಹಾಗಿದ್ರೆ ನಮಗೂ ಸೆಲ್ಫಿ ಕೊಡ್ತೀರʼ ಅಂತ ಕೇಳಿದ್ದಾರೆ.

ಕಾರ್ಯಕ್ರಮದಲ್ಲೇ ಸೆಲ್ಫಿ

ಕಾರ್ಯಕ್ರಮದ ಆಯೋಜಕರಿಗೆ ಅಭ್ಯಂತರ ಇಲ್ಲ ಅಂತಾದರೆ ನನಗೇನೂ ಸಮಸ್ಯೆ ಇಲ್ಲ ಎಂದು ಯಶ್‌ ಹೇಳಿದ್ದಾರೆ. ರಜತ್‌ ಅವರ ಕಡೆಯಿಂದ ಗ್ರೀನ್‌ ಸಿಗ್ನಲ್‌ ಸಿಕ್ಕಿದ್ದೇ ಯಶ್‌ ಕಟಕಟೆಯಿಂದ ಕೆಳಗಿಳಿದಿದ್ದಾರೆ. ಅವರನ್ನು ಮುತ್ತಿಕೊಂಡ ಅಭಿಮಾನಿಗಳಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಸೆಲ್ಫಿ ನೀಡಿದ್ದಾರೆ.

ಆಪ್‌ ಕಿ ಅದಾಲತ್‌ ಮೂಲಕ ಜಗತ್ತಿನೆದುರು ತೆರೆದುಕೊಂಡ ನಮ್ಮನೆ ಹುಡ್ಗ

ನಮ್ಮನೆ ಹುಡ್ಗನಾಗಿ ಯಶ್‌ ʼಆಪ್‌ ಕಿ ಅದಾಲತ್‌ʼ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಯಶ್‌ ಅವರ ಮಾತು ಕೇಳಿ ಬಹಳ ಮಂದಿ ಅವರನ್ನು ಮೆಚ್ಚಿಕೊಂಡಿದ್ದಾರೆ. ಕನ್ನಡದ ಹುಡುಗ ರಾಷ್ಟ್ರದ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಕನ್ನಡಿಗರಿಗೂ ಬಹಳ ಖುಷಿ ತಂದಿದೆ.

ಇನ್ನೆರಡು ವಾರಗಳಲ್ಲಿ ರಾಯನ ಅಬ್ಬರ

ʼಟಾಕ್ಸಿಕ್‌ʼ ಸಿನಿಮಾ ರಿಲೀಸ್‌ಗೆ ಕ್ಷಣಗಣನೆ ಶುರುವಾಗಿದೆ. ಇನ್ನೆರಡು ವಾರಗಳಲ್ಲಿ ರಾಯನ ಅಬ್ಬರ ತೆರೆಗಪ್ಪಳಿಸಲಿದೆ. ಗೀತು ಮೋಹನ್‌ ದಾಸ್‌ ನಿರ್ದೇಶನದ ಈ ಸಿನಿಮಾ ಆಗಸ್ಟ್‌ ೨೬ರಂದು ತೆರೆಗೆ ಬರಲಿದೆ. ಅದರಲ್ಲಿ ರಾಯನ ಎರಡು ಶೇಡ್‌ ಹಾಗೂ ಟಿಕೆಟ್‌ ಎಂಬ ಪಾತ್ರದಲ್ಲಿ ಯಶ್‌ ಮಿಂಚಲಿದ್ದಾರೆ. ಹರೆಯದ ಹುಡುಗ, ಮಧ್ಯ ವಯಸ್ಕ ಹಾಗೂ ವೃದ್ಧನ ಪಾತ್ರದಲ್ಲಿ ಯಶ್‌ ಅಬ್ಬರಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+