Yash Toxic update: ಲೀಲಾ ಪ್ಯಾಲೇಸ್‌ನಲ್ಲಿ 'ರಾಜಾಹುಲಿ' ಗಾಂಭೀರ್ಯ ನಡಿಗೆ, ವಿಡಿಯೋ ಫುಲ್ ಟ್ರೆಂಡಿಂಗ್
ಬೆಂಗಳೂರು, ಜುಲೈ 29: ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ (KGF film) ಸರಣಿ ಸಿನಿಮಾಗಳ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ದೇಶಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅವರು ಸದ್ಯ ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' (Toxic) ಸಿನಿಮಾದಲ್ಲಿ ಬ್ಯೂಸಿ ಇದ್ದಾರೆ. ಈ ಮಧ್ಯೆ ಯಶ್ ಅವರ ಹೊಸ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಎಚ್ಚಿಸಿದೆ. ಟಾಪ್ ಟ್ರೆಂಡಿಂಗ್‌ನಲ್ಲಿದೆ.
ಕೆವಿಎನ್ ಪ್ರೊಡಕ್ಷನ್ ಕಡೆಯಿಂದ ಟಾಕ್ಸಿಕ್ ಸಿನಿಮಾ ಚಿತ್ರೀಕರಣ ಇನ್ನೂ ಶುರುವಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ಸಿನಿಮಾ ನಿರೀಕ್ಷಿತ ದಿನಾಂಕದಲ್ಲಿ ಬಿಡುಗಡೆ ಅನುಮಾನ ಎನ್ನಲಾಗುತ್ತಿದೆ. ಈ ಮಧ್ಯೆ ಬೆಂಗಳೂರಿನ ಹೊಸ ವಲಯದಲ್ಲಿ ದೊಡ್ಡ ಸೆಟ್ ಹಾಕಲಾಗಿದೆ ಎಂಬ ಮಾಹಿತಿ ಇದೆ.

ಹೀಗಾಗಿಯೇ ನಟ ಯಶ್ ಅವರು ಬೆಂಗಳೂರಿನ ಲೀಲಾ ಪ್ಯಾಲೇಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಅದೇನೆ ಇರಲಿ ತಮ್ಮನೆಚ್ಚಿನ ನಟ ಯಶ್ ಅವರ ವಿಡಿಯೋ ನೋಡಿರುವ ಅವರ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಬೆಂಗಳೂರಿನ ಲೀಲಾ ಪ್ಯಾಲೇಸ್‌ನಲ್ಲಿ ಸ್ಯಾಂಡಲ್‌ವುಡ್ ರಾಜಾಹುಲಿ ಯಶ್ ಅವರು ನಡೆದು ಬರುತ್ತಾರೆ. ಈ ವೇಳೆ ಅವರ ಬಾಡಿಗಾರ್ಡ್ ಸಿಬ್ಬಂದಿ ಅವರ ಜೊತೆಗಿರುವ ವಿಡಿಯೋ ಸಾಮಾಜಿಕ ಜಾಲತಾಣ (ಎಕ್ಸ್) ನಲ್ಲಿ ವೈರಲ್ ಆಗಿದೆ.

ಫಿಟ್ ಆಂಡ್ ಫೈನ್ ಲುಕ್ ನಲ್ಲಿ ಯಶ್
ವಿಡಿಯೋದಲ್ಲಿ ಫಿಟ್ ಆಂಡ್ ಫೈನ್ ಆಗಿ ಹೊಸ ಲುಕ್ ನಲ್ಲಿ ಕಾಣಸುತ್ತಿರುವ ನಟ ಯಶ್ ಅವರು ಹಾಫ್ ಟೀಶರ್ಟ್ ಹಾಕಿಕೊಂಡು ಇನ್ ಮಾಡಿಕೊಂಡಿದ್ದಾರೆ. ಶೂ ಧರಿಸಿರುವ ಅವರು ಸನ್ ಗ್ಲಾಸ್ ಜೊತೆಗೆ ನಡೆದು ಬರುತ್ತಿದ್ದಾರೆ. ಅಭಿಮಾನಿಗಳು ನಮ್ಮ ರಾಜಾಹುಲಿಯ ಗಾಂಭೀರ್ಯ ನಡಿಗೆ ಇದು ಎಂದೆಲ್ಲ ಬರೆದುಕೊಂಡು, ವಿಡಿಯೋ ಶೇರ್ ಮಾಡಿಕೊಳ್ಳುತ್ತಾ ಅಭಿಮಾನ ಮೆರೆದಿದ್ದಾರೆ.
ನಟ ಯಶ್ ಅವರು ಕೆಜಿಎಫ್ ಮೂಲಕ ಕನ್ನಡ ಚಿತ್ರರಂಗವನ್ನು ತಿರುಗಿ ನೋಡುವಂತೆ ಮಾಡಿದ್ದರು. ಈ ಸಿನಿಮಾಗಳಿಂದಲೇ ಸಖತ್ ಸುದ್ದಿಯಲಿರುವ ಅವರ ಟಾಕ್ಸಿಕ್ ಹೊಸ ಸಿನಿಮಾಗಾಗಿ ದೇಶದ ಸಿನಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.
. @TheNameIsYash 🔥🔥🔥#ToxicTheMovie #YashBOSS pic.twitter.com/22bzgML8LV
— 𝗦𝗵𝗿𝗲𝘆𝗶 ᵀᵒˣᶦᶜ (@NameIsShreyash) July 28, 2024
'ಟಾಕ್ಸಿಕ್' ಇದು ಪ್ಯಾನ್ ವರ್ಲ್ಡ್ ಸಿನಿಮಾ
ಮೂಲಗಳ ಪ್ರಕಾರ, ಇದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ, ಪ್ಯಾನ್ ವರ್ಲ್ಡ್ ಸಿನಿಮಾ ಆಗಲಿದೆ. ಏಕೆಂದರೆ ಯಶ್ ಟಾಕ್ಸಿಕ್ ಸಿನಿಮಾ ಯುರೋಪಿಯನ್ ದೇಶಗಳಲ್ಲಿ ಸಹ ಸಿದ್ಧವಾಗುತ್ತಿದೆ. ಸಾಗರೋತ್ತರ ಬೆಳ್ಳಿ ಪರದೇ ಮೇಲೂ ಯಶ್ ಅವರ ಟಾಕ್ಸಿಕ್ ಸಿನಿಮಾ ಮುಂದಿನ ದಿನಗಳಲ್ಲಿ ಅಬ್ಬರಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಸದ್ಯದ ಮಾಹಿತಿ ಪ್ರಕಾರ, ಟಾಕ್ಸಿಕ್ ಸಿನಿಮಾ ಚಿತ್ರೀಕರಣ ಶುರುವಾಗಿಲ್ಲ ಎಂಬ ಚಿತ್ರತಂಡದಿಂದ ಬಂದ ಅಧಿಕೃತ ಮಾಹಿತಿ ಯಶ್ ಅಭಿಮಾನಿಗಳಿಗೆ ಬೇಸರ ತರಿಸಿದ್ದಂತು ಸುಳ್ಳಲ್ಲ. ಲೀಲಾ ಪ್ಯಾಲೇಸ್‌ನಲ್ಲಿ ಯಶ್ ಅವರ ಫೋಟೋವೊಂದು ವೈರಲ್ ಆಗುತ್ತಿದ್ದು, ಫ್ಯಾನ್ಸ್ ಎಡಿಟ್ ಮಾಡಲಾಗಿದೆ. ಈ ಫೋಟೋದಲ್ಲಿ ಯಶ್ ಅವರು ಸಿಕ್ಸ್ ಪ್ಯಾಕ್ ಬಾಡಿ ಹೊಂದಿರುವಂತೆ ಕಾಣುತ್ತಿದ್ದಾರೆ.












Click it and Unblock the Notifications