Thug life ಕಮಲ್ ಹಾಸನ್ ಲೆಕ್ಕಾಚಾರ ತಲೆಕೆಳಗೆ! ತಮಿಳಿಗರಿಂದಲೇ ಸಿನಿಮಾ ಟ್ರೋಲ್ & ಫ್ಲಾಪ್ ?!
Thug life: ಕನ್ನಡಿಗರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ನಟ ಕಮಲ್ ಹಾಸನ್ ಅವರು ಇದೀಗ ತಮಿಳುನಾಡಿನ ತಮಿಳಿಗರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ. ಹೌದು ಭಾರೀ ದೊಡ್ಡ ಸಕ್ಸಸ್ ಆಗಲಿದೆ, ನಟ ಕಮಲ್ ಹಾಸನ್ ಅವರ ಮಾಸ್ ಸಿನಿಮಾ ಎಂದೆಲ್ಲಾ ಸಿನಿಮಾ ತಂಡ ಹೇಳಿಕೊಂಡಿತ್ತು. ಆದರೆ, ಶುಕ್ರವಾರ ಥಗ್‌ಲೈಫ್ ಸಿನಿಮಾ ತಮಿಳುನಾಡಿನಲ್ಲಿ ಬಿಡುಗಡೆಯಾಗಿದ್ದು ತಮಿಳಿಗರೇ ಈ ಸಿನಿಮಾ ನೋಡಿ ನಗುತ್ತಿದ್ದಾರೆ. ಅದರಲ್ಲಿ ವೈರಲ್ ಆಗಿರುವ ಪೋಸ್ಟ್‌ವೊಂದು ಈ ರೀತಿ ಇದೆ. "ಥಗ್‌ಲೈಫ್ ಸಿನಿಮಾ ಮೊದಲರ್ಧ ಇನ್ನಷ್ಟು ಉತ್ತಮವಾಗಿ ಮಾಡಬಹುದಾಗಿತ್ತು. ಸೆಕೆಂಡ್ ಆಫ್ ಮಾಡದೆ ಇದ್ದರೆ ಇನ್ನೂ ಚೆನ್ನಾಗಿತ್ತು" ಅಂತ ಹಾಕಲಾಗಿದೆ ಇದು ಸಿಕ್ಕಾಪಟ್ಟೆ ವೈರಲ್ ಆಗಿದ್ದು. ಇದನ್ನು ನೋಡಿ ಕನ್ನಡಿಗರು ಸಹ ನಗುತ್ತಿದ್ದಾರೆ.
ಕನ್ನಡ ಭಾಷೆಯ ಜನ್ಮವಾಗಿದ್ದು ತಮಿಳಿನಿಂದ ಎಂದು ಹೇಳಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು ಕಮಲ್ ಹಾಸನ್. ಕನ್ನಡಿಗರಿಂದ ಭಾರೀ ಆಕ್ರೋಶ ವ್ಯಕ್ತವಾದ ಮೇಲೆಯೂ ಕನಿಷ್ಠ ವಿಷಾದವನ್ನೂ ವ್ಯಕ್ತಪಡಿಸಲಿಲ್ಲ. ಕ್ಷಮೆ ಕೇಳಬೇಕು ಎಂದು ಹೈಕೋರ್ಟ್ ಹೇಳಿದ ಮೇಲೆಯೂ ಸಹ ಕಮಲ್ ಹಾಸನ್ ಕ್ಷಮೆ ಕೇಳಲಿಲ್ಲ. ಆದರೆ, ಈ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗಿಲ್ಲ ತಮಿಳುನಾಡಿನಲ್ಲಿ ಬಿಡುಗಡೆ ಮಾಡಿ ಭರ್ಜರಿ ಲಾಭ ಮಾಡಿಕೊಳ್ಳಬೇಕು ಎನ್ನುವ ಕಮಲ್ ಹಾಸನ್ ಅವರ ಲೆಕ್ಕಾಚಾರಗಳು ತಲೆಕೆಳಗಾಗಿವೆ.

ಮೊದಲು ತಮಿಳುನಾಡಿನ ಜನರ ಬಳಿ ಕ್ಷಮೆ ಕೇಳಲಿ!
ಇನ್ನು ಇನ್ನೊಂದು ಟ್ರೋಲ್ ಸಹ ವೈರಲ್ ಆಗಿದೆ. ನಟ ಕಮಲ್ ಹಾಸನ್ ಅವರು ಕನ್ನಡಿಗರ ಕ್ಷಮೆ ಕೇಳುವುದಕ್ಕಿಂತ ಮೊದಲು ತಮಿಳಿಗರ ಬಳಿ ಇಂತಹದ್ದೊಂದು ಕೆಟ್ಟ ಸಿನಿಮಾ ಮಾಡಿದ್ದಕ್ಕಾಗಿ ಕ್ಷಮೆ ಕೇಳಬೇಕು ಅಂತ ಹೇಳಲಾಗುತ್ತಿದೆ. ಇದು ಸಹ ಸಾಕಷ್ಟು ವೈರಲ್ ಆಗಿದೆ.
ಅತ್ಯಂತ ಕೆಟ್ಟ ಸಿನಿಮಾ: ಇನ್ನು ಕಮಲ್ ಹಾಸನ್ ಅವರ ಮೂವಿಗಳು ಸೋಲುವುದು ಹಾಗೂ ಜನರಿಂದ ಟೀಕೆಗೆ ಒಳಗಾಗುವುದು ಇದೇ ಮೊದಲೇನು ಅಲ್ಲ. ಆದರೆ, ಈ ಬಾರಿ ಈ ಸಿನಿಮಾಗೆ ಅತ್ಯಂತ ಕೆಟ್ಟ ಸಿನಿಮಾ ಎನ್ನುವ ವಿಮರ್ಶೆ ಬರುತ್ತಿದೆ. ಶುಕ್ರವಾರ ಈ ಸಿನಿಮಾ ಬಿಡುಗಡೆಯಾದ ಮೇಲೆ ವ್ಯಾಪಕ ಟೀಕೆ ತಮಿಳಿಗರಿಂದಲೇ ಕೇಳಿಬರುತ್ತಿದೆ.
#RetroReview - Kanguva was better than this #ThugLifeReview - Indian2 was better than this#ThugLife #KamalHaasan #STR #Trisha pic.twitter.com/aznlG6kkZl
— செல்வி பவித்ரா (@VLinsta) June 5, 2025
ಹಳೆಯ ಪ್ಲಾಪ್ ಮೂವಿಗಳೇ ಉತ್ತಮ: ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ Thug life ಸಿನಿಮಾಗಿಂತ ಈ ಹಿಂದೆ ಪ್ಲಾಪ್ ಆಗಿರುವ ನಟ ಕಮಲ್ ಹಾಸನ್ ಅವರ ಸಿನಿಮಾಗಳೇ ಉತ್ತಮ ಅಂತ ಹೇಳಲಾಗಿದೆ. Kanguva was better than this & Indian2 was better than this ಎಂದು ಜನ ಪೋಸ್ಟ್ ಮಾಡುತ್ತಿದ್ದಾರೆ. ಈ ಎರಡೂ ತಮಿಳು ಸಿನಿಮಾಗಳು ಸಹ ಸೋಲಿನ ರುಚಿಯನ್ನುಂಡಿದ್ದವು! ಈಗ ಸಿನಿ ಅಭಿಮಾನಿಗಳು ಇದಕ್ಕಿಂತ ಅದೇ ಎಷ್ಟೋ ಚೆನ್ನಾಗಿತ್ತು ಅಂತ ಕಮಲ್ ಹಾಸನ್ ಕಾಲೆಳೆದಿದ್ದಾರೆ. ಭಾರೀ ಸಕ್ಸಸ್ ನಿರೀಕ್ಷೆಯಲ್ಲಿದ್ದ ಕಮಲ್ ಹಾಸನ್ ಅವರ Indian2 ಸಿನಿಮಾ ಫ್ಲಾಪ್ ಆಗಿತ್ತು. ಈ ವೈರಲ್ ಪೋಸ್ಟ್‌ಗಳನ್ನು ನೋಡಿ ಕನ್ನಡಿಗರು ಈ ಸಿನಿಮಾ ಇಲ್ಲಿ ಬಿಡುಗಡೆ ಆಗದೆ ಇರುವುದೇ ಒಳ್ಳೆಯದು ಅಂತ ಕಿಚಾಯಿಸುತ್ತಿದ್ದಾರೆ.
ಕನ್ನಡಿಗರು ಬಚಾವ್: ಇನ್ನು ಇಂತಹ ಕೆಟ್ಟ ಸಿನಿಮಾವನ್ನು ನೋಡುವುದರಿಂದ ಕನ್ನಡಿಗರು ಬಚಾವ್ ಆಗಿದ್ದಾರೆ ಎಂದು ತಮಿಳಿಗರೇ ಹೇಳುತ್ತಿರುವುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಕರ್ನಾಟಕದಲ್ಲಿ ಸಿನಿಮಾ ಬ್ಯಾನ್ ಆಗಿರುವುದು ಒಳ್ಳೆಯದು ಇದರಿಂದ ಅವರಿಗೆ ತಲೆನೋವು ತಪ್ಪಿದೆ ಅಂತ ಹೇಳಲಾಗುತ್ತಿದೆ.












Click it and Unblock the Notifications