Anchor Anushree: ಆಂಕರ್ ಅನುಶ್ರೀಗೆ ನಂಬರ್ ಕೊಟ್ಟು ‘ನೈಟ್ ಕಾಲ್ ಮಾಡು’ ಅಂತಾ ಹೇಳಿದ್ದರಾ ಅಚ್ಯುತ್ ಕುಮಾರ್?
ಆಂಕರ್ ಅನುಶ್ರೀ ತುಂಬಾ ಕಷ್ಟಪಟ್ಟು ಈ ಹಂತಕ್ಕೆ ಬಂದವರು. ಒಂದು ಕಾಲದಲ್ಲಿ ಕೇವಲ 500 & 1000 ರೂಪಾಯಿಗೂ ಕಷ್ಟಪಟ್ಟಿದ್ದ ಆಂಕರ್ ಅನುಶ್ರೀ ಅವರು ಇಂದು ಒಂದೊಂದು ಕಾರ್ಯಕ್ರಮ ನಡೆಸಿಕೊಡಲು ಲಕ್ಷ ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇಂತಿಪ್ಪ ಆಂಕರ್ ಅನುಶ್ರೀ ಅವರಿಗೆ 'ಕೆಜಿಎಫ್' ಖ್ಯಾತಿ ನಟ ಗುರುಪಾಂಡ್ಯನ್ ಅಲಿಯಾಸ್ ಅಚ್ಯುತ್ ಕುಮಾರ್ ಅವರು, ನಂಬರ್ ಕೊಟ್ಟು 'ನೈಟ್ ಕಾಲ್ ಮಾಡು' ಅಂತಾ ಹೇಳಿದ್ದರಂತೆ!
ಆಂಕರ್ ಅನುಶ್ರೀ ಅವರು ತಮ್ಮ ನಿರೂಪಣೆ ಮೂಲಕವೇ ಕರ್ನಾಟಕದಲ್ಲಿ ಕೋಟಿ, ಕೋಟಿ ಅಭಿಮಾನಿಗಳನ್ನ ಸೃಷ್ಟಿಸಿಕೊಂಡಿದ್ದಾರೆ. ಆಂಕರ್ ಅನುಶ್ರೀ ಅವರ ನಿರೂಪಣೆ ಅಂದ್ರೆ ಅದು ಕನ್ನಡಿಗರಿಗೆ ಅಚ್ಚುಮೆಚ್ಚು. ಹೀಗಿದ್ದಾಗಲೇ ಆಂಕರ್ ಅನುಶ್ರೀ ಅವರ ವರ್ಚಸ್ಸು ಮತ್ತಷ್ಟು ಹೆಚ್ಚಾಗಿದೆ. ಟಿವಿ ಪರದೆ ಮೇಲೆ ಮಾತ್ರವಲ್ಲ, ಅನೇಕ ದೊಡ್ಡ ದೊಡ್ಡ ಕಾರ್ಯಕ್ರಮಕ್ಕೂ ಅನುಶ್ರೀ ಅವರು ಆಂಕರಿಂಗ್ ಮಾಡುತ್ತಾರೆ. ತಮ್ಮ ನಿರೂಪಣೆ & ನಿರರ್ಗಳ ಕನ್ನಡದಿಂದ ಗಮನ ಸೆಳೆಯುತ್ತಾರೆ. ಆದ್ರೆ ಇಂತಿಪ್ಪ ಆಂಕರ್ ಅನುಶ್ರೀ ಅವರಿಗೆ 'ಕೆಜಿಎಫ್' ಖ್ಯಾತಿಯ ನಟ ಗುರುಪಾಂಡ್ಯನ್ ಅಲಿಯಾಸ್ ಅಚ್ಯುತ್ ಕುಮಾರ್, ನಂಬರ್ ಕೊಟ್ಟು 'ನೈಟ್ ಕಾಲ್ ಮಾಡು' ಅಂತಾ ಹೇಳಿದ್ದರಂತೆ! ಯಾಕೆ ಗೊತ್ತಾ? ಕಾರಣ ತಿಳಿಯಲು ಮುಂದೆ ಓದಿ.

ನಟ ಅಚ್ಯುತ್ ಕುಮಾರ್ ಹೇಳಿದ್ದೇನು?
ಆಂಕರ್ ಅನುಶ್ರೀ ತಮ್ಮ ನಿರೂಪಣೆಯಲ್ಲಿ ಸಾಮಾನ್ಯ ಜನರಿಗೆ ಹತ್ತಿರವಾಗುವ ರೀತಿ ಭಾಷೆ ಬಳಸುತ್ತಾರೆ. ಹಾಗೇ ಆಂಕರ್ ಅನುಶ್ರೀ ಅವರು ತಮ್ಮ ಯುಟ್ಯೂಬ್ ಚಾನೆಲ್‌ಗೆ ಸಿನಿಮಾ & ಸಿನಿಮಾ ಸ್ಟಾರ್‌ಗಳ ಇಂಟರ್ವ್ಯೂವ್ ಮಾಡುತ್ತಾರೆ. ಇದೇ ರೀತಿ ಇತ್ತೀಚೆಗೆ ನಟ ದಿಗಂತ್ & ಲೂಸ್ ಮಾದ ಯೋಗಿ ಅವರನ್ನ ಸಂದರ್ಶನ ಮಾಡುವಾಗ ಘಟನೆ ಒಂದು ನಡೆದಿತ್ತು. ಈ ಇಂಟರ್ವ್ಯೂವ್ ನಡೆಯುವಾಗ ಅನುಶ್ರೀ ಅವರು ನಟ ಅಚ್ಯುತ್ ಕುಮಾರ್ ಅವರಿಗೆ ಪ್ರಾಂಕ್ ಮಾಡಲು ಮುಂದಾಗಿದ್ದರು. ಹೀಗೆ ಪ್ರಾಂಕ್ ಮಾಡುವಾಗ ನಟ ಅಚ್ಯುತ್ ಕುಮಾರ್ ದಿಢೀರ್ ಸಿಟ್ಟಾಗಿಬಿಟ್ಟರು.
ಅಷ್ಟಕ್ಕೂ ಸ್ಯಾಂಡಲ್‌ವುಡ್ ನಟ ದಿಗಂತ್ ಅವರು ಅಚ್ಯುತ್ ಅವರಿಗೆ ಕಾಲ್ ಮಾಡಿ, 'ಅಚ್ಯುತ್ ಅಣ್ಣಾ..' ಎನ್ನುತ್ತಾರೆ. ನಂತರ ಅಚ್ಯುತ್ ಅವರು 'ದಿಗಂತ್ ಅವರೇ ಹೇಳಿ, ಹೇಗಿದ್ದೀರಿ..?' ಅಂತಾ ಪ್ರಶ್ನೆ ಮಾಡುತ್ತಾರೆ. ನಟ ಅಚ್ಯುತ್ ಅವರ ಪ್ರಶ್ನೆಗೆ ಉತ್ತರ ನೀಡುವ ದೂದ್ ಪೇಡ ದಿಗಂತ್ 'ಚೆನ್ನಾಗಿದೀನಿ, ನೀವು ಹೇಗಿದೀರಾ?' ಎನ್ನುತ್ತಾ, 'ಇಲ್ಲಿ ಯಾರೋ ನಿಮಗೆ ಹಾಯ್ ಹೇಳ್ಬೇಕಂತೆ ನೋಡಿ' ಅಂತಾ ಹೇಳಿ ನೇರವಾಗಿ ಆಂಕರ್ ಅನುಶ್ರೀಗೆ ಮೊಬೈಲ್ ಕೊಡುತ್ತಾರೆ.
ಅಚ್ಯುತ್ ಅವರಿಗೆ ಫುಲ್ ಶಾಕ್!
ಆಗಲೇ ನೋಡಿ ಅಸಲಿ ಕಹಾನಿ ಶುರುವಾಗುವುದು, ಆಂಕರ್ ಅನುಶ್ರೀ ಅವರು ನಟ ಅಚ್ಯುತ್ ಅವರ ಕಾಲು ಎಳೆಯಲು 'ಹಾಯ್ ಸರ್, ನಾನು ಬ್ಯಾಂಕಾಕ್‌ನಲ್ಲಿ ನಿಮಗೆ ಸಿಕ್ಕಿದ್ದೆ ಅಲ್ವಾ? ಬೆಂಗಳೂರಿನ ಹುಡುಗಿ ಅಂತಾ ಪರಿಚಯ ಮಾಡ್ಕೊಂಡಿದ್ದೆ. ನೀವು ನನ್ನ ಮಾತನಾಡಿಸಿ ನಿಮ್ಮ ನಂಬರ್ ಕೊಟ್ಟು ನೈಟ್ ಮೆಸೇಜ್ ಮಾಡಿ ಅಂತಾ ಹೇಳಿದ್ರಿ' ಎಂದಿದ್ದಾರೆ.
ಇದಕ್ಕೆ ಅಚ್ಯುತ್ ಅವರು ಉತ್ತರ ನೀಡುವಾಗ ಪಕ್ಕದಲ್ಲೇ ಇದ್ದ ದಿಗಂತ್ & ಲೂಸ್ ಮಾದ ಯೋಗಿ ಜೋರು ಜೋರಾಗಿ ನಗಲು ಶುರು ಮಾಡಿದ್ದಾರೆ. ಆಗ, ಎಚ್ಚೆತ್ತುಕೊಂಡ ಅಚ್ಯುತ್ ಕುಮಾರ್ ಅವರು ಇದು ಪಕ್ಕಾ ಪ್ರಾಂಕ್ ಕಾಲ್ ಅಂತಾ ಕಂಡುಹಿಡಿದರು. ನೀವು ಯಾವ ಚಾನಲ್ ಹೇಳಿ? ಅಂತಾ ಮರು ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋ ಈಗ ಫುಲ್ ವೈರಲ್ ಆಗುತ್ತಿದೆ.











Click it and Unblock the Notifications