ದರ್ಶನ್ ಹೇಳಿದ್ದ ‘ಜಲಗಾರ’ ಯಾರು ಎಂದು ಹುಡುಕುತ್ತಿರುವ ಜನ!
ದರ್ಶನ್ ಕೊಲೆ ಆರೋಪದ ಮೇಲೆ ಜೈಲು ಸೇರಿದ ನಂತರ ಜನರಿಗೆ ಅವರ ಬಗ್ಗೆ ಕುತೂಹಲ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ನಟ ದರ್ಶನ್ ಮಾಡಿಕೊಂಡ ಎಡವಟ್ಟುಗಳು ಮತ್ತು ಕಾಂಟ್ರವರ್ಸಿಗಳು. ಅದರಲ್ಲೂ ದರ್ಶನ್ ಒಮ್ಮೆ 'ಜಲಗಾರ' ಎಂಬ ಪದ ಪ್ರಯೋಗ ಮಾಡಿದ್ದರು. ಇದೀಗ ಕರ್ನಾಟಕದ ಜನರು ಕೂಡ ದರ್ಶನ್ ಹೇಳಿದ್ದ ಆ 'ಜಲಗಾರ' ಯಾರು? ಅನ್ನೋದನ್ನ ಹುಡುಕುತ್ತಿದ್ದಾರೆ. ಜಲಗಾರನ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ದರ್ಶನ್ ಮಾಡಿಕೊಳ್ಳದೆ ಇರುವ ಕಾಂಟ್ರವರ್ಸಿ ಇಲ್ಲವೇ ಇಲ್ಲ ಎನ್ನಬಹುದು. ಕೋಟ್ಯಂತರ ಅಭಿಮಾನಿಗಳನ್ನ ನಟ ದರ್ಶನ್ ಸಂಪಾದಿಸಿದ್ದರೂ ಅವರಲ್ಲಿ ತಾಳ್ಮೆ ಇಲ್ಲದ ಕಾರಣಕ್ಕೆ ಹೀಗೆ ವಿವಾದದಲ್ಲಿ ಸಿಲುಕಿದರು, ಕೊನೆಗು ಕೊಲೆ ಆರೋಪಿಯಾಗಿ ಜೈಲು ಸೇರಿದ್ದಾರೆ ಎಂಬುದು ದರ್ಶನ್ ಅವರ ಆತ್ಮೀಯ ಸ್ನೇಹಿತರ ಅಭಿಪ್ರಾಯ. ಅದರಲ್ಲೂ ದರ್ಶನ್ ತಮ್ಮ ಹೆಂಡತಿ & ಮಗನ ಬಗ್ಗೆಯೇ ಕೆಟ್ಟ ಕೆಟ್ಟ ಪದ ಬಳಸಿ ಮಾತನಾಡಿದ್ದರು ಎಂದು ಆರೋಪಿಸಿದ್ದ ಒಂದು ಆಡಿಯೋ ವೈರಲ್ ಆಗಿತ್ತು. ಇದೇ ಆಡಿಯೋದಲ್ಲಿ ದರ್ಶನ್ 'ಜಲಗಾರ' ಎಂಬ ಪದವನ್ನ ಬಳಕೆ ಮಾಡಿದ್ದರು. ಇದೀಗ ಕನ್ನಡಿಗರು 'ಜಲಗಾರ' ಪದದ ಅರ್ಥ ಹುಡುಕುತ್ತಿದ್ದು, ಆ ಅರ್ಥವನ್ನು ನಾವು ತಿಳಿಸುತ್ತೇವೆ ಮುಂದೆ ಓದಿ.

ಹೆಂಡತಿ & ಮಗನ ಬಗ್ಗೆಯೇ ದರ್ಶನ್...
ದರ್ಶನ್ ಈ ಆಡಿಯೋದಲ್ಲಿ ತಮ್ಮ ಹೆಂಡತಿಗೆ ವಿಕೃತವಾಗಿ ಬೈದು, ಬೇರೆಯವರ ಜೊತೆಗೆ ಮಗು ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ರು ಎಂಬ ಆರೋಪ ಕೂಡ ಕೇಳಿಬಂದಿತ್ತು. ಅಲ್ಲದೆ ಪೊಲೀಸರ ಎದುರಲ್ಲೇ ನಿನಗೆ ಅದು ಮಾಡ್ತೀನಿ.. ಇದು ಮಾಡ್ತೀನಿ.. ಅಂತೆಲ್ಲ ಕೆಟ್ಟ ಕೆಟ್ಟದಾಗಿ ಮಾತನಾಡಿದ್ದ ನಟ ದರ್ಶನ್ 'ಜಲಗಾರ' ಎಂಬ ಪದ ಪ್ರಯೋಗ ಮಾಡಿ ತಮ್ಮ ಹೆಂಡತಿಯ ಬಗ್ಗೆ & ಮಗನ ಬಗ್ಗೆ ಕೂಡ ನಿಂದಿಸಿದ್ದರು ಎಂದು ಆರೋಪ ಮಾಡಲಾಗಿತ್ತು.
ದರ್ಶನ್ ಮಾತನಾಡಿದ್ದು ಎಂದು ಆರೋಪಿಸಿದ್ದ ಆಡಿಯೋ ಆಗಿನ ಕಾಲಕ್ಕೆ ಸದ್ದು ಮಾಡುವ ಜೊತೆಗೆ, ದರ್ಶನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಜನರು 'ಜಲಗಾರ' ಪದದ ಅರ್ಥ ಹುಡುಕಿ ಹುಡುಕಿ ಸುಸ್ತಾಗಿದ್ದಾರೆ. ಹಾಗಾದ್ರೆ 'ಜಲಗಾರ' ಅಂದ್ರೆ ಏನು ಗೊತ್ತೆ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ, ಜಲಗಾರ ಪದದ ಅರ್ಥ ತಿಳಿಯಲು ಮುಂದೆ ಓದಿ.
ದರ್ಶನ್ ಹೇಳಿದ್ದ 'ಜಲಗಾರ' ಯಾರು?
'ಜಲಗಾರ' ಅಂದ್ರೆ ಮೈಸೂರು ಸುತ್ತಮುತ್ತ ಹಳ್ಳಿಗಳಲ್ಲಿ ಬಳಸುವ ಶಬ್ಧವಾಗಿದೆ, ಈ ಪದವನ್ನು ಸಫಾಯಿ ಕರ್ಮಚಾರಿಗಳನ್ನ ಗುರುತು ಹಿಡಿಯಲು ಬಳುಸುತ್ತಾರೆ ಅಲ್ಲಿನ ಹಳ್ಳಿಗಳ ಜನರು. ಈ ಶಬ್ಧ ಬಳಸಿ ಪತ್ನಿಗೆ ಬೈದಿದ್ದರು ನಟ ದರ್ಶನ್ ಎಂಬ ಆರೋಪ ಕೇಳಿಬಂದಿತ್ತು. ಈ ಕೇಸ್ ಕೂಡ ತಿರುವು ಪಡೆಯುವ ಸಾಧ್ಯತೆ ಈಗ ದಟ್ಟವಾಗಿದೆ. ಅಲ್ಲದೆ ಪತ್ನಿ & ಮಗನ ಬಗ್ಗೆಯೇ ದರ್ಶನ್ ಈ ರೀತಿ ಮಾತನಾಡಿದ್ದು ಭಾರಿ ಆಕ್ರೋಶಕ್ಕೆ ಕೂಡ ಕಾರಣವಾಗಿತ್ತು.
ದರ್ಶನ್‌ಗೆ ಕಠಿಣ ಶಿಕ್ಷೆ ಭಯ?
ಇಷ್ಟು ದಿನಗಳ ಕಾಲ ಕೊಲೆ ಮಾಡಿದರೆ ಅದಕ್ಕೆ, ಭಾರಿ ದೊಡ್ಡ ಶಿಕ್ಷೆ ಎಂದರೆ ಜೀವಾವಧಿ ವಿಧಿಸುತ್ತಿದ್ದರು. ಆದರೆ ಇದೀಗ ಕಾನೂನು ಕೂಡ ಬದಲಾಗಿದ್ದು ದರ್ಶನ್ ಅವರ ಪ್ರಕರಣದ ಬಗ್ಗೆ ಫ್ಯಾನ್ಸ್‌ಗೆ ಆತಂಕ ಶುರುವಾಗಿದೆ. ಹಾಗಿದ್ರೆ ಹೊಸ ಕಾನೂನಿನ ಪ್ರಕಾರ ಕೊಲೆ ಆರೋಪಿಯ ವಿರುದ್ಧ ಅಪರಾಧ ಸಾಬೀತು ಮಾಡಿದರೆ ಗರಿಷ್ಠ ಯಾವ ಶಿಕ್ಷೆಯ ವಿಧಿಸಬಹುದು? ದರ್ಶನ್ ಅವರ ಕೇಸ್ ಕೂಡ ಹೊಸ ಕಾನೂನಿನ ಅಡಿಯಲ್ಲೇ ದಾಖಲಾಗಿದೆಯಾ? ಆ ಬಗ್ಗೆ ಪೂರ್ಣ ಮಾಹಿತಿಗೆ ಮುಂದೆ ಓದಿ.
ಮರಣದಂಡನೆ ಶಿಕ್ಷೆಗೆ ಅವಕಾಶ?
ಹೊಸದಾಗಿ ಜಾರಿಗೆ ಬಂದ ಕಾನೂನು ಪ್ರಕಾರ ಅಪರಾಧ ನಡೆದ ಸ್ಥಳದಲ್ಲಿ ತನಿಖಾಧಿಕಾರಿಗಳು ವಿಡಿಯೋ ಮಾಡಬೇಕು. ಹಾಗೇ ಕೇಸ್ ವಿಚಾರಣೆ ಮುಗಿದ 45 ದಿನದಲ್ಲಿ ತೀರ್ಪು ನೀಡಬೇಕು. ಸಾಮೂಹಿಕ ಹತ್ಯೆ, ಸಾಮೂಹಿಕ ಅತ್ಯಾಚಾರ, ಸರಗಳ್ಳತನ ರೀತಿ ಪ್ರಕರಣಗಳನ್ನ ದಾಖಲಿಸಲು ಈವರೆಗೆ ನಿರ್ದಿಷ್ಟ ಸೆಕ್ಷನ್ ಇರಲಿಲ್ಲ. ಈ ಹೊಸ ವ್ಯವಸ್ಥೆಯಲ್ಲಿ ಅವು ಇರಲಿವೆ ಎಂದು ಕೇಂದ್ರ ತಿಳಿಸಿದೆ. ಹೀಗಿದ್ದಾಗ ಕೊಲೆ ಕೇಸ್‌ನಲ್ಲಿ ಕೂಡ ಗರಿಷ್ಠ ಮರಣದಂಡನೆ ಶಿಕ್ಷೆ ನೀಡುವುದಕ್ಕೆ ಕೂಡ ಅವಕಾಶ ಇದೆ ಎನ್ನಲಾಗಿದೆ.
ದರ್ಶನ್ ಅಲಿಯಾಸ್ ರೌಡಿ ದರ್ಶನ್?
2011ರ ಸಮಯದಲ್ಲಿ ತನ್ನ ಹೆಂಡತಿ ಮೇಲೆಯೇ ದರ್ಶನ್ ರಾಕ್ಷಸನ ರೀತಿ ಹಲ್ಲೆ ಮಾಡಿರುವುದು ಸೇರಿದಂತೆ, ಪದೇ ಪದೇ ದರ್ಶನ್ & ಗ್ಯಾಂಗ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿವೆ. ಹೀಗೆ ಕನ್ನಡ ನಾಡಿನಲ್ಲಿ ತನ್ನ ಪಟಾಲಂ ಕಟ್ಟಿಕೊಂಡು ದರ್ಶನ್ & ಗ್ಯಾಂಗ್ ಜನರಿಗೆ ಹಾಗೂ ಹಲವು ನಿರ್ಮಾಪಕ, ನಿರ್ದೇಶಕರಿಗೆ ಟಾರ್ಚರ್ ಮಾಡಿದೆ ಎಂಬ ಆರೋಪ ಇದೆ. ಹೀಗಾಗಿಯೇ ಇದೀಗ, ದರ್ಶನ್ ಮತ್ತು ಆತನ ಸಹಚರರ ವಿರುದ್ಧ ರೌಡಿಶೀಟ್ ತೆರೆಯಲು ಕನ್ನಡ ನಾಡಿನ ಪೊಲೀಸರು ಅಂತಿಮ ಹಂತದ ಸಿದ್ಧತೆ ನಡೆಸಿದ್ದಾರೆ. ಈ ಹಿನ್ನೆಲೆ ಎಲ್ಲಾ ದಾಖಲೆಗಳನ್ನ ಸಂಗ್ರಹಿಸುವ ಮೂಲಕ, ದರ್ಶನ್ & ಗ್ಯಾಂಗ್‌ಗೆ ಶಾಕ್ ನೀಡಲು ಸಜ್ಜಾಗಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ.
-
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ












Click it and Unblock the Notifications