ದರ್ಶನ್ & ಗ್ಯಾಂಗ್‌ಗೆ ಜೈಲಿನ ಮುದ್ದೆ ಊಟ ಸೆಟ್ ಆಗ್ತಿಲ್ಲವಂತೆ: ಹಾಗಾದ್ರೆ ಜೈಲಿಗೆ ಹೋಗುವ ಮೊದಲು ದರ್ಶನ್ ಏನೆಲ್ಲಾ ತಿಂತಾ ಇದ್ರು?
ದರ್ಶನ್ ಕೊಲೆ ಆರೋಪದಲ್ಲಿ ಜೈಲಿಗೆ ಹೋದ ನಂತರ ಒದ್ದಾಡುತ್ತಿದ್ದಾರೆ. ಅದರಲ್ಲೂ ಜೈಲಿನ ಮುದ್ದೆ ಊಟ ದರ್ಶನ್ & ಗ್ಯಾಂಗ್‌ಗೆ ಸೆಟ್ ಆಗುತ್ತಿಲ್ಲ, ಹೀಗಾಗಿ ರಾತ್ರಿ ಪೂರ್ತಿ ಊಟ ಮಾಡದೆ, ನಿದ್ದೆ ಕೂಡ ಮಾಡದೆ ದರ್ಶನ್ ಒದ್ದಾಡಿದ್ದಾರಂತೆ. ಹಾಗಾದ್ರೆ ದರ್ಶನ್ ಜೈಲಿಗೆ ಹೋಗುವ ಮೊದಲು ಏನನ್ನ ತಿಂತಾ ಇದ್ದರು? ದರ್ಶನ್ & ಗ್ಯಾಂಗ್‌ಗೆ ಜೈಲಿನ ಸಿಬ್ಬಂದಿ ಭರ್ಜರಿ ಬಾಡೂಟ ಹಾಕಲು ಸಜ್ಜಾಗಿದ್ದಾರಾ? ಬನ್ನಿ ತಿಳಿಯೋಣ.
ದರ್ಶನ್ ಹೊರಗೆ ಇದ್ದಾಗ ದಿನಾ ಎಣ್ಣೆ ಹೊಡೆದು ಪಾರ್ಟಿ ಮಾಡ್ತಾ ಎಂಜಾಯ್ ಮಾಡ್ತಿದ್ರು ಆದರೆ, ದರ್ಶನ್ ಮಾಡಬಾರದ ಕೀಚಕರ ಸಹವಾಸ ಮಾಡಿ ಇಂದು ಜೈಲಿನಲ್ಲಿ ಕಂಬಿ ಎಣಿಸುತ್ತಾ ಬಿಕ್ಕಿ ಬಿಕ್ಕಿ ಅಳುವ ಸ್ಥಿತಿ ಬಂದಿದೆ. ಹೀಗಿದ್ದಾಗ ಜೈಲಿನ ವಾತಾವರಣ ದರ್ಶನ್ & ಗ್ಯಾಂಗ್‌ಗೆ ಸೆಟ್ ಆಗುತ್ತಿಲ್ಲ. ಇದೇ ಕಾರಣಕ್ಕೆ ಮುದ್ದೆ ಊಟ ತಿನ್ನಲು ಆಗದೆ ದರ್ಶನ್ ಮತ್ತು ಸಹಚರರು ಪರದಾಡುತ್ತಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಪ್ರತಿನಿತ್ಯ ದರ್ಶನ್ ತನ್ನ ಊಟಕ್ಕೆ ಏನು ತಿಂತಾ ಇದ್ದರು ಗೊತ್ತೆ? ಪೂರ್ತಿ ಮಾಹಿತಿಗೆ ಮುಂದೆ ಓದಿ.

ಚಿಕ್ಕನ್, ಫ್ರೂಟ್ಸ್, ಜ್ಯೂಸ್...
ದರ್ಶನ್ ಕೋಟಿ ಕೋಟಿ ಸಂಭಾವನೆ ಪಡೆಯುವ ನಟ. ಹೀಗಾಗಿ ದರ್ಶನ್ ಜೀವನ ಶೈಲಿ ಕೂಡ ಭರ್ಜರಿ ಐಷಾರಾಮಿ ಆಗಿತ್ತು. ಅದರಲ್ಲೂ ದರ್ಶನ್ ಪ್ರತಿ ದಿನ ತಮ್ಮ ದೇಹದ ಪೌಷ್ಠಿಕಾಂಶ ಕಾಪಾಡಿಕೊಳ್ಳಲು ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದರಂತೆ. ಈಗ ದರ್ಶನ್‌ಗೆ ಅದು ಯಾವುದೂ ಇಲ್ಲ, ಪರಪ್ಪನ ಅಗ್ರಹಾರ ಜೈಲಲ್ಲಿ ರಾಗಿ ಮುದ್ದೆ ಮುರಿದು ನುಂಗಬೇಕು ಅಷ್ಟೇ. ಆದರೆ ಜೈಲಿನ ಊಟದಲ್ಲಿ ಉಪ್ಪು & ಖಾರ ಹೆಚ್ಚಾಗಿ ಹಾಕುವುದಿಲ್ಲ. ಹೀಗಾಗಿ ಸಪ್ಪೆ ಊಟ ತಿಂದು ದರ್ಶನ್ ನರಳಾಡುತ್ತಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೇ ಮನೆ ಊಟ ಬೇಕು ಎಂದು ದರ್ಶನ್ ಕೋರ್ಟ್‌ಗೆ ಮನವಿ ಸಲ್ಲಿಸುವ ಸಾಧ್ಯತೆ ದಟ್ಟವಾಗಿದೆ.
ಬೆಂಗಳೂರಿನ ರೌಡಿಗಳಿಗೆ ಭಯ!
ಹೌದು, ಬೆಂಗಳೂರಲ್ಲಿ ರೌಡಿಸಮ್ ಜೋರಾಗಿದೆ. ಕರ್ನಾಟಕದ ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರಿನಲ್ಲಿ ರೌಡಿಗಳ ಹಾವಳಿ ಜಾಸ್ತಿ. ಹೀಗಿದ್ದಾಗ ದರ್ಶನ್ & ಗ್ಯಾಂಗ್ ವಿರುದ್ಧ ಕೇಳಿಬಂದ ಕೊಲೆ ಆರೋಪದ ವೇಳೆ, ದರ್ಶನ್ ಮೊಬೈಲ್ ಫೋನ್‌ನಲ್ಲಿ ಭಾರಿ ಆಘಾತಕಾರಿ ಮಾಹಿತಿ ಸಿಕ್ಕಿತ್ತು. ದರ್ಶನ್ ಜೊತೆಗೆ ಬೆಂಗಳೂರಿನ ರೌಡಿಗಳೂ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆ ನಂತರವೇ ನೋಡಿ ಶುರುವಾಗಿದ್ದು ಅಸಲಿ ಆಟ!
ದರ್ಶನ್ ರೌಡಿಗಳ ಜೊತೆ ಸಂಪರ್ಕದಲ್ಲಿ ಇದ್ದರು ಎಂಬ ಆರೋಪ ಕೇಳಿಬಂದಿತ್ತು ಹೀಗಾಗಿ ಅಲರ್ಟ್ ಆಗಿರುವ ಕರ್ನಾಟಕ ಪೊಲೀಸರು ರೌಡಿಗಳ ಹೆಡೆಮುರಿ ಕಟ್ಟಲು ಸಜ್ಜಾಗಿದ್ದಾರೆ. ಮತ್ತೊಂದು ಕಡೆ ರಣಹೇಡಿ ರೌಡಿಪಡೆ ಪೊಲೀಸರ ಗುಂಡಿನಿಂದ ಜೀವ ಉಳಿಸಿಕೊಳ್ಳಲು ಊರು ಬಿಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಸುದ್ದಿ ಈಗ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಓಡಾಡುತ್ತಿದೆ. ಕರ್ನಾಟಕ ಪೊಲೀಸರ ಖದರ್ ಮತ್ತೊಮ್ಮೆ ಸದ್ದು ಮಾಡ್ತಿದೆ. ಅಲ್ಲದೆ ಈ ಕೇಸ್‌ನಲ್ಲಿ ಲಾಕ್ ಆಗುವ ಭಯ ಮತ್ತಷ್ಟು ರೌಡಿಗಳಿಗೆ ಕಾಡುತ್ತಿದೆ, ಎಂಬ ಮಾತು ಸದ್ದು ಮಾಡುತ್ತಿದೆ.












Click it and Unblock the Notifications