Darshan Thoogudeepa: ರೇಣುಕಾಸ್ವಾಮಿ ಹೆಣ ಸುಡಲು ನಡೆದಿತ್ತಾ ಸ್ಕೆಚ್? ಛೀ ಥೂ ಅಂತಿದ್ದಾರೆ ಕನ್ನಡಿಗರು!
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಭಾರಿ ದೊಡ್ಡ ಸಂಚಲನ ಸೃಷ್ಟಿ ಆಗಿದ್ದು, ಎಲ್ಲೆಲ್ಲೂ ಈ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಅಲ್ಲದೆ ಕನ್ನಡ ಸಿನಿಮಾ ರಂಗದ ಹೀರೋ ಒಬ್ಬ ಈ ರೀತಿಯಾಗಿ ಕೊಲೆ ಕೇಸ್‌ನಲ್ಲಿ ಲಾಕ್ ಆಗಿರುವುದು ರಾಷ್ಟ್ರೀಯ ಮಾಧ್ಯಮಗಳಿಗೆ ಕೂಡ ಬಲ ನೀಡಿದಂತೆ ಇದೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಸಖತ್ ಗರಂ ಆಗಿದ್ದಾರೆ. ಇದೇ ಸಮಯದಲ್ಲಿ ರೇಣುಕಾಸ್ವಾಮಿ ಹೆಣ ಸುಡಲು ನಡೆದಿತ್ತಾ ಸ್ಕೆಚ್? ಎಂಬ ಆರೋಪ ಕೇಳಿಬಂದಿದೆ! ಯಾಕೆ? ಏನು? ತಿಳಿಯೋಣ ಬನ್ನಿ.
ದರ್ಶನ್ ತೂಗುದೀಪ್ ಕಷ್ಟದಲ್ಲಿ ಇರುವಾಗ ಸ್ನೇಹಿತರೇ ದೂರ ಆಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ದರ್ಶನ್ ಜೈಲಿನಿಂದ ಹೊರಗಡೆ ಇದ್ದ ಸಮಯದಲ್ಲಿ ಎಲ್ಲರೂ ಡಿ-ಬಾಸ್... ಡಿ-ಬಾಸ್... ಅಂತಾ ಗೌರವ ಕೊಡುತ್ತಿದ್ದರು. ಅದರಲ್ಲೂ ಕನ್ನಡ ಸಿನಿಮಾ ರಂಗದ ಹಲವು ಸೆಲೆಬ್ರಿಟಿಗಳು ದರ್ಶನ್ ತೂಗುದೀಪ್ ಕಾಲಿಗೆ ಕೂಡ ಬಿದ್ದಿದ್ದು ಇದೆ. ಹೀಗಿದ್ದಾಗಲೇ ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ್ ಸೆಂಟ್ರಲ್ ಜೈಲು ಸೇರಿದರು. ಹೀಗೆ, ಅಭಿಮಾನಿಗಳ ಪಾಲಿನ ಪ್ರೀತಿಯ ದಾಸ 'ಡಿ-ಬಾಸ್' ದರ್ಶನ್ ಜೈಲು ಸೇರಿದ ನಂತರ ಎಲ್ಲ ಅಲ್ಲೋಲ ಕಲ್ಲೋಲ ಆಗುತ್ತಿದೆ. ಹೀಗಿದ್ದಾಗಲೇ ರೇಣುಕಾ ಸ್ವಾಮಿ ಕೊಲೆ ನಂತರ ಹೆಣವನ್ನು ಸುಡಲು... ಮುಂದೆ ಓದಿ.

ರೇಣುಕಾಸ್ವಾಮಿ ಹೆಣವನ್ನು ಸುಡಲು...
ಸೋಷಿಯಲ್ ಮೀಡಿಯಾದಲ್ಲಿ ಇದೀಗ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಭಾರಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಯಾಕಂದ್ರೆ ಬೇಕು ಬೇಕು ಅಂತಾ, ಉದ್ದೇಶ ಪೂರ್ವಕವಾಗಿ ದರ್ಶನ್ ತೂಗುದೀಪ್ ಅವರನ್ನು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸಿಲುಕಿಸಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ. ಹೀಗಿದ್ದಾಗ ಸೋಷಿಯಲ್ ಮೀಡಿಯಾ ಪೂರ್ತಿ ಈ ಕುರಿತು ಈಗ ಚರ್ಚೆ ನಡೆಯುತ್ತಿದೆ. ಮತ್ತೊಂದು ಕಡೆ ರೇಣುಕಾಸ್ವಾಮಿ ಕೊಲೆ ಆಗುವ ಮೊದಲು ಕಣ್ಣು ಮತ್ತು ಮುಖಕ್ಕೆ ಗಾಯ ಮಾಡಿಕೊಂಡು ಕೂತು ಬೇಡಿಕೊಳ್ಳುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದೆ. ಇಂತಹ ಸಮಯದಲ್ಲೇ ರೇಣುಕಾಸ್ವಾಮಿ ಹೆಣ ಸುಡಲು...
ದರ್ಶನ್ ಅಭಿಮಾನಿಗಳು ಹೇಳಿದ್ದು ಏನು?
ಹೌದು, ರೇಣುಕಾಸ್ವಾಮಿ ಕೊಲೆ ಆಗುವ ಮೊದಲು ಕಣ್ಣು & ಮುಖಕ್ಕೆ ಗಾಯ ಮಾಡಿಕೊಂಡು ಕೂತು ದರ್ಶನ್ & ಗ್ಯಾಂಗ್ ಎದುರು ಬೇಡಿಕೊಳ್ಳುತ್ತಿರುವ ಫೋಟೋಗೆ ಭರ್ಜರಿ ಕಮೆಂಟ್‌ಗಳು ದರ್ಶನ್ ಅವರ ಅಭಿಮಾನಿಗಳಿಂದ ಬರುತ್ತಿವೆ. ಅದ್ರಲ್ಲೂ ಬಹುತೇಕರು ಈ ಫೋಟೋ ನೋಡಿ ಹೇಳಿರುವುದು ಏನು ಅಂದ್ರೆ, ಈ ರೀತಿಯಾಗಿ ಒಬ್ಬ ವ್ಯಕ್ತಿಯನ್ನು ಹಿಂಸೆ ಮಾಡಬಾರದಾಗಿತ್ತು ಅಂತಾ.
ಆದರೂ ಇನ್ನು ಕೆಲವರು ವಿಕೃತ ಮನಸ್ಕರು, ರೇಣುಕಾಸ್ವಾಮಿ ಹೆಣವನ್ನು ಅಲ್ಲೇ ಸುಟ್ಟು ಹಾಕಿದ್ದರೆ ಅಥವಾ ಬೇರೆ ಕಡೆಗೆ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದ್ದರೆ ನೀವು ಜೈಲಿಗೆ ಹೋಗುತ್ತಿರಲಿಲ್ಲ ಎಂದು ಐಡಿಯಾ ಕೊಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೀಗೆ ವಿಕೃತವಾಗಿ ಕಮೆಂಟ್ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಇದೀಗ ಭಾರಿ ಆಕ್ರೋಶ ಮೊಳಗಿದ್ದು, ಸೋಷಿಯಲ್ ಮೀಡಿಯಾದ ಬಳಕೆದಾರರು ಸೂಕ್ತ ಕ್ರಮಕ್ಕೆ ಆಗ್ರಹ ಮಾಡುತ್ತಿದ್ದಾರೆ.
ದರ್ಶನ್ ಬೆನ್ನಿಗೆ ಹೊಸ ಕಂಟಕ?
ಕನ್ನಡ ಸಿನಿಮಾ ರಂಗದ ಸೂಪರ್ ಸ್ಟಾರ್ ಆಗಿ ಮೆರೆದಿದ್ದ ದರ್ಶನ್ ತೂಗುದೀಪ್ ಸಾಕಷ್ಟು ಸಂಕಷ್ಟ ಎದುರಿಸುವ ಪರಿಸ್ಥಿತಿ ಬಂದಿದೆ. ಯಾಕಂದ್ರೆ ಪರಪ್ಪನ ಅಗ್ರಹಾರ ಜೈಲಿನ ಒಳಗೆ, ಮನಸ್ಸಿಗೆ ಬಂದಂತೆ ಬದುಕುತ್ತಿದ್ದ ಫೋಟೋಸ್ ಈಗ ವೈರಲ್ ಆಗುತ್ತಿವೆ. ಇದೆಲ್ಲಾ ಮಾನ್ಯ ನ್ಯಾಯಾಲಯಕ್ಕೆ ತಲುಪಿದರೆ ದರ್ಶನ್ ತೂಗುದೀಪ್‌ಗೆ ಸಂಕಷ್ಟ ಗ್ಯಾರಂಟಿ ಅಂತಾ ಹೇಳ್ತಾ ಇದ್ದಾರೆ ಕಾನೂನು ತಜ್ಞರು. ಹೀಗಾಗಿ ನಟ ದರ್ಶನ್ ತೂಗುದೀಪ್ ವಿರುದ್ಧ ಇದೀಗ ಹೊಸ ಕಂಟಕ ಎದುರಾದಂತೆ ಕಾಣುತ್ತಿದೆ. ಭವಿಷ್ಯದಲ್ಲಿ ಜಾಮೀನು ಪಡೆದು ದರ್ಶನ್ ತೂಗುದೀಪ್ ಹೊರಗೆ ಬರಲು ಇದು ಸಮಸ್ಯೆ ಮಾಡಬಹುದು ಎನ್ನಲಾಗುತ್ತಿದೆ. ಆದರೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳೇ ಈ ಫೋಟೋಸ್ ವೈರಲ್ ಮಾಡುತ್ತಾ, ನಮ್ಮ ಬಾಸ್ ಹಂಗೆ & ಹಿಂಗೆ ಅಂತಾ ಪೋಸ್ಟ್ ಹಾಕುತ್ತಿದ್ದಾರೆ.












Click it and Unblock the Notifications