ಸಿನಿಮಾ ಮಾಡುವುದು ಬಿಟ್ಟು ಬರೀ ರಗಳೆ ಮಾಡುತ್ತಿರುವ ಕನ್ನಡ ಸಿನಿಮಾ ಸ್ಟಾರ್ಸ್: ರೊಚ್ಚಿಗೆದ್ದ ಅಭಿಮಾನಿಗಳು!
ಡಾ. ರಾಜ್‌ಕುಮಾರ್ ಮೊಮ್ಮಗ ಯುವ ರಾಜ್‌ಕುಮಾರ್ ಡಿವೋರ್ಸ್ ವಿಚಾರ ಈಗ ದೊಡ್ಡ ಸದ್ದು ಮಾಡುತ್ತಿದೆ. ಚಂದನ್ ಶೆಟ್ಟಿ & ನಿವೇದಿತಾ ಗೌಡ ನಂತರ, ಯುವ ರಾಜ್‌ಕುಮಾರ್ ಡಿವೋರ್ಸ್ ವಿಚಾರ ಕೂಡ ಸಂಚಲನ ಸೃಷ್ಟಿ ಮಾಡಿದೆ. ಹೀಗಿದ್ದಾಗ ಕನ್ನಡ ಸಿನಿಮಾ ಫ್ಯಾನ್ಸ್ ರೊಚ್ಚಿಗೆದ್ದು ಸಿನಿಮಾ ಸ್ಟಾರ್‌ಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಯಾಕೆ ಗೊತ್ತಾ? ಮುಂದೆ ಓದಿ.
ಕನ್ನಡ ಸಿನಿಮಾ ರಂಗಕ್ಕೆ ಸುಮಾರು 100 ವರ್ಷಗಳ ಇತಿಹಾಸವೇ ಇದೆ. ಇನ್ನೇನು ಕೆಲವೇ ಕೆಲವು ವರ್ಷದಲ್ಲಿ ಕನ್ನಡ ಸಿನಿಮಾ ರಂಗ ಬರೋಬ್ಬರಿ 100 ವರ್ಷ ಪೂರೈಸಲಿದೆ. ಹೀಗೆ, ಕನ್ನಡ ಸಿನಿಮಾ ರಂಗ ಶತಕ ಬಾರಿಸುವಲ್ಲಿ ಡಾ. ರಾಜ್‌ಕುಮಾರ್ ಅವರ ಶ್ರಮ ದೊಡ್ಡದು. ಯಾಕಂದ್ರೆ ವರನಟ ಡಾ. ರಾಜ್‌ಕುಮಾರ್ ಅವರು ಹಗಲು & ರಾತ್ರಿ ಶ್ರಮಪಟ್ಟು ನೂರಾರು ಜನರ ಜೊತೆಗೆ ಸೇರಿ ಕನ್ನಡ ಸಿನಿಮಾ ಇಂಡಸ್ಟ್ರಿ ಬೆಳೆಸಿದ್ದರು.

ಆದರೆ ಈಗ, ಡಾ. ರಾಜ್ ಅವರ ಮೊಮ್ಮಗ ಯುವ ರಾಜ್‌ಕುಮಾರ್ ಅವರ ಡಿವೋರ್ಸ್ ವಿಚಾರ ಸಂಚಲನ ಸೃಷ್ಟಿಸಿದೆ. ಹಾಗಾದ್ರೆ ಈ ಬಗ್ಗೆ ಕನ್ನಡ ಸಿನಿಮಾ ಅಭಿಮಾನಿಗಳು ಏನ್ ಹೇಳ್ತಿದ್ದಾರೆ? ಕನ್ನಡ ಸಿನಿಮಾ ರಂಗದ ನಟರ ಬಗ್ಗೆ ಕನ್ನಡ ಅಭಿಮಾನಿಗಳು ಹೇಳುತ್ತಿರುವುದು ಏನು? ಈ ಬಗ್ಗೆ ಬೇರೆ ಇಂಡಸ್ಟ್ರಿಯಲ್ಲಿ ಶುರುವಾದ ಟಾಕ್ ಏನು? ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ರೊಚ್ಚಿಗೆದ್ದ ಕನ್ನಡ ಸಿನಿಮಾ ಫ್ಯಾನ್ಸ್!
ಕನ್ನಡ ಸಿನಿಮಾ ರಂಗ ಸಂಕಷ್ಟದಲ್ಲಿ ನರಳುತ್ತಿದೆ, ಇನ್ನು ಸ್ವಲ್ಪ ದಿನ ಹೀಗೆ ಹೋದರೆ ಇಡೀ ಚಿತ್ರರಂಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕನ್ನಡ ಚಿತ್ರರಂಗ ಬಾಗಿಲು ಮುಚ್ಚುವ ಆತಂಕವೂ ಇದೆ ಅಂತಿದ್ದಾರೆ ಅಭಿಮಾನಿಗಳು. ಹೀಗಿದ್ದಾಗ ಕನ್ನಡ ಸಿನಿಮಾ ಸ್ಟಾರ್ಸ್ ಮಾತ್ರ, ವರ್ಷಕ್ಕೆ 2 & 3 ಸಿನಿಮಾ ಮಾಡುವುದು ಬಿಟ್ಟು ಬರೀ ಡಿವೋರ್ಸ್, ಗಲಾಟೆ ಅಂತಾ ರಗಳೆ ಮಾಡ್ತಿದ್ದಾರೆ ಅಂತಾ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೆ ಈಗಲಾದರೂ ನಿಮ್ಮ ನಿಮ್ಮ ರಗಳೆ ಬಿಟ್ಟು ಕನ್ನಡ ಸಿನಿಮಾ ರಂಗ ಉಳಿಸಲು ಮುಂದಾಗಿ ಎಂದು ಮನವಿ ಮಾಡ್ತಿದ್ದಾರೆ ಸೋಷಿಯಲ್ ಮೀಡಿಯಾದಲ್ಲಿ ಕನ್ನಡ ಅಭಿಮಾನಿಗಳು.
2019ರಲ್ಲಿ ಯುವ ಮದುವೆ ಆಗಿತ್ತು
ದೊಡ್ಮನೆ ಮೊಮ್ಮಗನ ಮದುವೆ ಅದ್ಧೂರಿಯಾಗಿ ಬೆಂಗಳೂರಿನಲ್ಲಿ ನೆರವೇರಿಸಿತ್ತು ಕುಟುಂಬ. ಅಷ್ಟಕ್ಕೂ ಯುವ ರಾಜ್‌ಕುಮಾರ್ & ಶ್ರೀದೇವಿ ಅವರು 2018ರ ಜುಲೈ 5 ರಂದು ಮೈಸೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ರು. ಹಾಗೇ 2019ರ ಮೇ 26 ರಂದು ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಅವರ ಮದುವೆ ಆಗಿತ್ತು. ರಾಜಧಾನಿ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿ, ಅದ್ಧೂರಿಯಾಗಿ ಯುವ ರಾಜ್‌ಕುಮಾರ್ & ಶ್ರೀದೇವಿ ಅವರ ಮದುವೆ ಸಮಾರಂಭ ನಡೆದಿತ್ತು. ಹೀಗಿದ್ದಾಗ ದಿಢೀರ್, ಇಬ್ಬರು ಬೇರೆ ಆಗುತ್ತಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಿಗೆ ಆಘಾತ ನೀಡಿದೆ.
ಡಾ. ರಾಜ್ ಕುಟುಂಬದಲ್ಲಿ ಮೌನ
ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಅವರ ವಿಚ್ಛೇದನ ವಿಚಾರ ಈಗ ಎಲ್ಲೆಲ್ಲೂ ಸಂಚಲನ ಎಬ್ಬಿಸಿದೆ. ಅದರಲ್ಲೂ ಡಾ. ರಾಜ್‌ಕುಮಾರ್ ಅವರ ಕುಟುಂಬದಲ್ಲಿ ಈ ಕುರಿತು ಮೌನ ಆವರಿಸಿದೆ. ಅಭಿಮಾನಿಗಳು ಕೂಡ ಈ ಸುದ್ದಿ ಕೇಳಿ ನೋವು ಪಟ್ಟಿದ್ದಾರೆ. ಹೀಗಾಗಿ ಈ ಘಟನೆಗಳಿಗೆ ಆದಷ್ಟು ಬೇಗ ಬ್ರೇಕ್ ಬೀಳಬೇಕು, ನಾವು ಕೇಳಿದ ಸುದ್ದಿ ಸುಳ್ಳಾಗಲಿ ಅಂತಾ ಅಭಿಮಾನಿಗಳು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಈ ಬೆನ್ನಲ್ಲೇ ದೊಡ್ಮನೆ ಹಿರಿಯರು, ಈ ವಿಚಾರವನ್ನ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡು ಸಮಸ್ಯೆ ಸರಿ ಮಾಡೋದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಈಗಲಾದರೂ ಈ ಸಮಸ್ಯೆ ಸರಿ ಆಗುತ್ತಾ? ಅಥವಾ ಮತ್ತಷ್ಟು ಜಟಿಲವಾಗಿ ಮುಂದುವರಿಯುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications