ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿಗೆ ಈ ಹೆಸರು ಬಂದಿದ್ದೇಗೆ?

ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ನಿನ್ನೆ (ಜನವರಿ 15) ಬುಧವಾರ ವಿಧಿವಶರಾಗಿದ್ದಾರೆ. ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರು ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. 269 ಚಿತ್ರಗಳಲ್ಲಿ ನಟಿಸಿ 2,400 ಧಾರಾವಾಹಿಗಳಲ್ಲಿ ನಿರ್ದೇಶನದ ಜೊತೆಗೆ ನಟನೆ ಮಾಡಿರುವ ನಟ ಸರಿಗಮ ವಿಜಿ ಅವರ ಅಗಲಿಕೆಗೆ ಚಿತ್ರರಂಗ ಹಾಗೂ ರಾಜಕೀಯ ಗಣ್ಯರು, ಹಾಗೂ ಅವರ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ಸರಿಗಮ ವಿಜಿ ಎಂದೇ ಜನಪ್ರಿಯತೆ ಪಡೆದಿರುವ ಅವರ ಪೂರ್ತಿ ಹೆಸರು ಆರ್‌. ವಿಜಯ್‌ ಕುಮಾರ್‌. ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದ ಇವರನ್ನು ಸರಿಗಮ ವಿಜಿ ಕರೆಯಲಾಗುತ್ತಿತ್ತು. ಆದರೆ ವಿಜಯ್‌ ಕುಮಾರ್‌ ಅವರ ಹೆಸರು ಸರಿಗಮ ವಿಜಿ ಎಂದು ಬದಲಾಗುವುದರ ಹಿಂದೆ ಒಂದು ಕುತೂಹಲಕಾರಿಯಾದ ಕಥೆಯಿದೆ. ಈ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ ಸರಿಗಮ ವಿಜಿ ತಮ್ಮ ಹೆಸರು ಬದಲಾಗಿದ್ದು ಹೇಗೆ ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.

The Remarkable Story Behind Sarigama Viji Name Change

'ಮೊದಲಿನಿಂದಲೂ ನನಗೆ ನಾಟಕ ಬರೆಯುವ ಹುಚ್ಚು ಇತ್ತು. ಎನ್‌ಜಿಎಫ್‌ನಲ್ಲಿ ಇರಬೇಕಾದರೆ ಸಂಸಾರದಲ್ಲಿ ಸರಿಗಮ ಎನ್ನುವ ಒಂದು ನಾಟಕ ಮಾಡಿದೆ. ಆ ನಾಟಕವನ್ನು ನಾನೇ ಬರೆದೆ. ಮೊದಲ ಬಾರಿ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನ ಮಾಡಿದೆವು. ಬಹಳ ಒಳ್ಳೆ ಯಶಸ್ಸು ತಂದುಕೊಟ್ಟಿತು. ಹಾಗೇ ಆ ನಾಟಕಕ್ಕೆ ಸಾಕಷ್ಟು ಬೆಂಬಲ ಸಿಕ್ಕಿತು. ದಿನೇ ದಿನೇ ನಾಟಕ ತುಂಬಾ ಜನಪ್ರಿಯತೆ ಪಡೆಯಿತು. ಬೆಂಗಳೂರಿನ ಎಲ್ಲಾ ಕಡೆ ಪ್ರದರ್ಶನ ಕಂಡಿತು'.

'ಈ ಗಣೇಶೋತ್ಸವ ಹಾಗೂ ರಾಜ್ಯೋತ್ಸವದ ಸಮಯದಲ್ಲಿ ಹದಿನೆಂಟು ಇಪ್ಪತ್ತು ನಾಟಕ ಒಂದು ವಾರ ನಿರಂತರವಾಗಿ ಮಾಡಬೇಕಿತ್ತು. ಈ ರೀತಿ ಎಲ್ಲಾ ಆಗಿ ನಮ್ಮ ನಾಟಕಕ್ಕೆ ಸಾಕಷ್ಟು ಒಳ್ಳೆಯ ಹೆಸರು ಬಂತು. ಕರ್ನಾಟಕದ ಮೂಲೆ ಮೂಲೆಯಲ್ಲೂ ಸಂಸಾರದಲ್ಲಿ ಸರಿಗಮ ನಾಟಕ ಯಶಸ್ವಿಯಾಯಿತು. ಬರೀ ಕರ್ನಾಟಕ ಮಾತ್ರವಲ್ಲ, ಹೆಮ್ಮೆಯಿಂದ ಹೇಳಬೇಕು ಅಂದರೆ ಅಮೇರಿಕಾದಲ್ಲಿ ಈ ನಾಟಕ ಮಾಡಿ ಯಶಸ್ಸು ಗಳಿಸಿದೆ'.

'ಅಂದಿನಿಂದ ಎಲ್ಲರೂ ನನ್ನನ್ನು ವಿಜಿ ಎನ್ನುತ್ತಿದ್ದರು. ಯಾವ ವಿಜಿ ಅಂದಾಗ ಅದೇ ಸಂಸಾರದಲ್ಲಿ ಸರಿಗಮ ನಾಟಕ ಮಾಡುತ್ತಾರಲ್ಲಾ ಆ ವಿಜಯ್‌ ಎಂದು ಹೇಳುತ್ತಿದ್ದರು. ಬರಬರುತ್ತಾ ಅದೇ ನನ್ನ ಹೆಸರಾಗಿ ಹೋಯ್ತು. ಸರಿಗಮ ವಿಜಿ ಎಂದು ನಾನು ಹೆಸರು ಇಟ್ಟುಕೊಳ್ಳಲಿಲ್ಲ. ಎಲ್ಲ ಕರೆದು ಅದಾಗಿಯೇ ಸರಿಗಮ ವಿಜಿ ಅಂತಾ ಹೆಸರು ಬಂತು' ಎನ್ನುವ ಮೂಲಕ ಸಂಸಾರದಲ್ಲಿ ಸರಿಗಮ ಎನ್ನುವ ಒಂದು ನಾಟಕದಿಂದ ತಮ್ಮ ಹೆಸರು ಬದಲಾದ ಬಗೆಯನ್ನು ಪಬ್ಲಿಕ್‌ ಸ್ಪೀಚ್‌ ಕನ್ನಡ ಯೂಟ್ಯೂಬ್‌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸರಿಗಮ ವಿಜಿ ವಿವರಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+