Actor Dhanush: ತಮಿಳು ನಟ ಧನುಷ್ ಬ್ಯಾನ್ ಬಗ್ಗೆ ಚರ್ಚೆ, ನಿರ್ಮಾಪಕರು-ನಟರ ಮಧ್ಯೆ ಏನಿದು ಮುನಿಸು?

ಬೆಂಗಳೂರು, ಜುಲೈ 31: ತಮಿಳು ನಟ ಧನುಷ್ ಅವರಿಗೂ ವಿವಾದಗಳಿಗೂ ನಂಟು. ಆಗಾಗ ನಟನ ಹೆಸರು ಸಿನಿಮಾದಿಂದ ಮಾತ್ರವಲ್ಲದೇ ವಿವಾದಗಳಿಂದಲೂ ಮುನ್ನೆಲೆಗೆ ಬರುತ್ತಿದೆ. ಇದೀಗ ತಮಿಳು ಸಿನಿಮಾ ನಿರ್ಮಾಪಕರ ಪರಿಷತ್ತು (TFPC) ಸದಸ್ಯರೆಲ್ಲು ತಾತ್ಕಲಿಕವಾಗಿ ಸಿನಿಮಾ ಮಾಡದಿರಲು ನಿರ್ಧರಿಸಿದ್ದಾರೆ. ಈ ಸಂಬಂಧ ನಡೆದ ಚರ್ಚೆ ವೇಳೆ ನಟ ಧನುಷ್ ಸೇರಿದಂತೆ ಹಲವು ನಟರ ಹೆಸರು ಪ್ರಸ್ತಾಪಿಸಿ ಬ್ಯಾನ್ ಕುರಿತು ಚರ್ಚೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನಟ ಧನುಷ್ ಹಲವು ನಿರ್ಮಾಪಕರಿಂದ ಮುಂಗಡ ಹಣ ಪಡೆದು ಡೇಟ್ ನೀಡುತ್ತಿಲ್ಲ. ಒಪ್ಪಿಗೆ ಆಗಿರುವ ಸಿನಿಮಾಗಳ ಸೆಟ್ ಗೆ ಬರುತ್ತಿಲ್ಲ ಎಂಬ ಆರೋಪವನ್ನು ನಿರ್ಮಾಪಕರು ಮಾಡಿದ್ದಾರೆ. ಚಲನಚಿತ್ರ ನಿರ್ಮಾಪಕರ ಮಂಡಳಿ, ಥಿಯೇಟರ್ ಮಾಲೀಕರ ಗುಂಪು, ಮಲ್ಟಿಪ್ಲೆಕ್ಸ್ ಮಾಲೀಕರ ಒಕ್ಕೂಟ ಮತ್ತು ವಿತರಕರ ಒಕ್ಕೂಟದಂತಹ ತಮಿಳು ಸಿನಿಮಾ ಸದಸ್ಯರು ಸಭೆ ಸೇರಿ ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ.

TFPC Members has Discussed of Actor Dhanush Ban and Stop Film s Shooting from November 1

ಸಿನಿಮಾ ತಯಾರಿಸಲು ವೆಚ್ಚ ಹೆಚ್ಚಾಗುತ್ತಿದೆ. ನಟರ ಪೇಮೆಂಟ್ ಗಣನೆಗೆ ತೆಗೆದುಕೊಂಡು, ನಿರ್ಮಾಪಕ ಪರಿಷತ್ತು ಹಾಗೂ ವಿವಿಧ ನಿರ್ಮಾಪಕರ ಸಂಘದವರು ಮುಂದಿನ ಆಗಸ್ಟ್ 15 ರಿಂದ ಯಾವುದೇ ಹೊಸ ಚಿತ್ರೀಕರಣ ಆರಂಭಿಸದಿರಲು ನಿರ್ಧರಿಸಿದ್ದಾರೆ. ಈ ಸಂಬಂಧ ಆಗಸ್ಟ್ 1ರಂದು ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ.

ಸದ್ಯ ನಡೆಯುತ್ತಿರುವ ಎಲ್ಲ ಸಿನಿಮಾಗಳ ಚಿತ್ರೀಕರಣ, ಇನ್ನಿತರ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಅಕ್ಟೋಬರ್ ಅಂತ್ಯದ ವೇಳೆಗೆ ನಡೆಯುತ್ತಿರುವ ಎಲ್ಲಾ ನಿರ್ಮಾಣ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ನಂತರ ನವೆಂಬರ್ 1 ರಿಂದ ಎಲ್ಲಾ ಸಿನಿಮಾ ಶೂಟಿಂಗ್‌ಗಳಿಗೆ ಪೂರ್ಣ ವಿರಾಮ ಬೀಳುವ ಸಾಧ್ಯತೆ ಇದೆ.

ಶೂಟಿಂಗ್ ಬಂದ್‌ಗೆ ಕರೆ: ಕಾಲಿವುಡ್ ನಲ್ಲಿ ಏನಿದು ಸಮಸ್ಯೆ?

ತಮಿಳಿನಲ್ಲಿ ಕೆಲವು ನಟರು, ಪ್ರದರ್ಶಕರು, ಸಿಬಂದಿ ವರ್ಗ, ವಿವಿಧ ನಿರ್ಮಾಣ ಸಂಸ್ಥೆಗಳಿಂದ ಮುಂಗಡ ಹಣ ಪಡೆಯುತ್ತಾರೆ. ಆದರೆ ಚಿತ್ರೀಕರಣದ ವೇಳೆ ಅವರೆಲ್ಲ ಕಾಣಿಸುವುದೇ ಇಲ್ಲ. ಈ ವಿಳಂಬದಿಂದಾಗಿ ನಿರ್ಮಾಣ ಖುರ್ಚು ವೆಚ್ಚಗಳು ಹೆಚ್ಚಾಗುತ್ತಿವೆ. ಇದು ಹಿಂದಿನಿಂದಲೂ ಇರುವ ಸಮಸ್ಯೆಯಾಗಿದೆ.

ಈ ಸಮಸ್ಯೆ ಕುರಿತು ಚರ್ಚಿಸುವಾಗ ತಮಿಳು ಸಿನಿಮಾ ನಿರ್ಮಾಪಕರ ಪರಿಷತ್ತು ಚರ್ಚಿಸುವಾಗ ಧನುಷ್ ಹೆಸರು ಪ್ರಸ್ತಾಪಿಸಿರುವುದಕ್ಕೆ ತಮಿಳು ಕಲಾವಿದರ ಸಂಘ (ನಾಡಿಗರ್ ಸಂಗಂ) ವಿರೋಧ ವ್ಯಕ್ತಪಡಿಸಿದೆ. ಅಲ್ಲದೇ ಇಂತಹ ನಿರ್ಧಾರ ಕೈಗೊಳ್ಳುವ ಮೊದಲು ನಮ್ಮೊಂದಿಗೆ ಚರ್ಚಿಸಬೇಕು ಎಂದು ಅಭಿಪ್ರಾಯಪಟ್ಟಿದೆ.

ಕಲಾವಿದರ ಸಂಘದಿಂದಲೂ ಸಭೆ

ಸದ್ಯ ನಾಳೆ ಆಗಸ್ಟ್ 1ರಂದು ನಿರ್ಮಾಪಕರ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ. ನಿರ್ಮಾಪಕ ನಡೆಗೆ ಅಸಮಾಧಾನ ವ್ಯಕ್ತಪಡಿಸಿರುವ ತಮಿಳು ಕಲಾವಿದರ ಸಂಘವು ಆಗಸ್ಟ್ 15 ಇಲ್ಲವೇ 16ರಂದು ಸಭೆ ನಡೆಸಿ ನಿರ್ಮಾಪಕರಿಗೆ ಉತ್ತರಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಈ ಎಲ್ಲ ಬೆಳವಣಿಗೆ ನೋಡಿದರೆ ತಮಿಳು ಚಿತ್ರರಂಗದಲ್ಲಿ ನಿರ್ಮಾಪಕರು ಹಾಗೂ ಕಲಾವಿದರು ಎಂಬ ಬಣಗಳು ಉಂಟಾಗಿವೆ. ಹೀಗೆ ಮುಂದುವರಿದೆ ಚಿತ್ರರಂಗ ಇಬ್ಬಾಗ ಆಗಲಿದೆಯೆ? ಎಂಬ ಅನುಮಾನ, ಆತಂಕ ಮೂಡಿದೆ. ಇದೆಲ್ಲಕ್ಕು ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+