Bigg Boss: ಬಿಗ್‌ಬಾಸ್ ಮನೆ ಸುತ್ತ 300 ಪೊಲೀಸರ ನಿಯೋಜನೆ, ಅಷ್ಟಕ್ಕೂ ಅಲ್ಲಿ ಆಗಿದ್ದೇನು?
ಬಿಗ್‌ಬಾಸ್ ಮನೆಯ ಸುತ್ತಲೂ ನೂರಾರು ಪೊಲೀಸರು ಹೈಅಲರ್ಟ್ ಆಗಿರುವ ವಿಚಾರದ ಬಗ್ಗೆ ಸದ್ಯ ಗಮನ ಸೆಳೆಯುತ್ತಿದೆ. ಇಷ್ಟಕ್ಕೂ ಬಿಗ್‌ಬಾಸ್ ಮನೆಯ ಸುತ್ತ ನೂರಾರು ಪೊಲೀಸರು ಬರಲು ಕಾರಣವೇನು ಎಂದು ಮೊದಲಿಗೆ ಎಲ್ಲರೂ ಶಾಕ್ ಆಗಿದ್ದರು. ಅಸಲಿಗೆ ಈ ಘಟನೆ ನಡೆದಿರುವುದು ಕನ್ನಡ ಬಿಗ್‌ಬಾಸ್ ಮನೆಯ ಬಳಿ ಅಲ್ಲ. ಬದಲಿಗೆ ತೆಲುಗು ಬಿಗ್‌ಬಾಸ್ ಮನೆಯ ಬಳಿ ಎಂದು ತಿಳಿದುಬಂದಿದೆ.
ಬಿಗ್ ಬಾಸ್ ತೆಲುಗು ಸೀಸನ್ 8ರ ಗ್ರ್ಯಾಂಡ್ ಫೈನಲ್ ಇರುವ ಕಾರಣಕ್ಕೆ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಿಗ್‌ಬಾಸ್ ಮನೆ ಬಳಿ ಹೈಅಲರ್ಟ್ ಆಗಿದ್ದರು ಎನ್ನಲಾಗಿದೆ. ನಡೆಯುತ್ತಿದೆ. ಜುಬಿಲಿ ಹಿಲ್ಸ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿರುವ ಬಿಗ್ ಬಾಸ್ ಮನೆ ಬಳಿ ಸುಮಾರು 300 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು ಹೈದರಾಬಾದ್ ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಇಷ್ಟಕ್ಕೂ ಯಾವ ಸೀಸನ್‌ನಲ್ಲೂ ಈ ರೀತಿ ಪೊಲೀಸ್ ಬಂದೋಬಸ್ತ್ ಇರಲಿಲ್ಲ ಎನ್ನಲಾಗಿದೆ. ಆದರೆ, ಅಸಲಿ ಕಾರಣವೆಂದರೆ ಕಳೆದ ವರ್ಷ ಬಿಗ್‌ಬಾಸ್ ಸೀಸನ್ ವೇಳೆ ಗ್ರ್ಯಾಂಡ್ ಫಿನಾಲೆ ಬಳಿಕ ಭಾರಿ ಗಲಾಟೆ ನಡೆದಿತ್ತು. ಬಿಗ್‌ಬಾಸ್ ಸ್ಪರ್ಧಿಗಳ ಮೇಲೆ ಕೆಲವರು ದಾಳಿ ಕೂಡ ಮಾಡಿದ್ದರು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೆ, ವಿಜೇತ ಸ್ಪರ್ಧಿ ಅಭಿಮಾನಿಗಳು ಕೂಡ ಕಿರಿಕ್ ಮಾಡಿದ್ದರು. ಇದರಿಂದ ಸರ್ಕಾರಿ ಬಸ್‌ಗಳು ಹಾಗೂ ಹಲವು ಕಾರುಗಳು ಕೂಡ ಹಾನಿಗೆ ಒಳಗಾಗಿದ್ದವು.
ಅಲ್ಲದೆ ಇತ್ತೀಚೆಗೆ ನಟ ಅಲ್ಲು ಅರ್ಜುನ್ ಸಿನಿಮಾ ಪ್ರದರ್ಶನದ ಥಿಯೇಟರ್ ಬಳಿ ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ್ದ ಘಟನೆಯಿಂದಲೂ ಪೊಲೀಸರು ಎಚ್ಚೆತ್ತುಕೊಂಡಿದ್ದು, ಭದ್ರತಾ ಕ್ರಮವಾಗಿ ಅವರು ಮುಂಚೆಯೇ ಬಿಗ್‌ಬಾಸ್ ಮನೆಯ ಸುತ್ತ ಪೊಲೀಸರನ್ನು ನಿಯೋಜಿಸಿರುವುದಾಗಿ ವರದಿಯಾಗಿದೆ. ಈ ಬಾರಿಯೂ ಸ್ಪರ್ಧಿಗಳು ಶೋ ಮುಗಿಸಿ ಹೊರಬಂದಾಗ ಏನಾದರೂ ಅನಾಹುತಗಳು ನಡೆಯಬಹುದು ಎಂದು ಅವಲೋಕಿಸಿ, ಮುಂಚೆಯೇ ಪೊಲೀಸರು ಅಲರ್ಟ್ ಆಗಿದ್ದಾರೆ ಎನ್ನಲಾಗಿದೆ.

ಇನ್ನು ತೆಲುಗು ಬಿಗ್‌ಬಾಸ್ ಸೀಸನ್ 8ರ ವಿನ್ನರ್ ಆಗಿ ಕನ್ನಡಿಗ ನಿಖಿಲ್ ಮಲಿಯಕ್ಕಲ್ (Nikhil Maliyakkal) ಹೊರಹೊಮ್ಮಿದ್ದಾರೆ. ನಿನ್ನೆ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ನಿಖಿಲ್ ಅವರನ್ನು ವಿನ್ನರ್ ಎಂದು ಘೋಷಿಸಲಾಗಿದ್ದು, ವಿಶೇಷ ಅತಿಥಿಯಾಗಿ ಆಗಮಿಸಿದ್ದ ನಟ ರಾಮ್ ಚರಣ್ ಅವರು ವಿನ್ನರ್ ಹೆಸರು ಅನೌನ್ಸ್ ಮಾಡಿದರು.
ವೋಟಿಂಗ್‌ನಲ್ಲೂ ನಿಖಿಲ್ ಅವರನ್ನು ಮುನ್ನಡೆ ಸಾಧಿಸಿ ಗೌತಮ್ ಅವರನ್ನು ರನ್ನರ್ ಅಪ್ ಮಾಡುವಲ್ಲಿ ಯಶಸ್ವಿಯಾದರು. ಇದರೊಂದಿಗೆ ತೆಲುಗು ಬಿಗ್‌ಬಾಸ್ ಸೀಸನ್ 8ರ ವಿನ್ನರ್ ಜೊತೆಗೆ 55 ಲಕ್ಷ ರೂಪಾಯಿ ನಗದು ಬಹುಮಾನವನ್ನು ನಿಖಿಲ್ ಪಡೆದಿದ್ದಾರೆ. ಇದರ ಜೊತೆಗೆ ನಿಖಿಲ್‌ಗೆ ಮಾರುತಿ ಸುಜುಕಿ ಬ್ರಾಂಡ್ ನ್ಯೂ ಡಿಜೈರ್ ಕಾರು ಕೂಡ ಬಹುಮಾನವಾಗಿ ಸಿಕ್ಕಿದೆ. ದಕ್ಷಿಣ ಭಾರತದ ಕಿರುತೆರೆ ನಟ, ಕನ್ನಡ ಹಾಗೂ ತೆಲುಗು ಟಿವಿ ಕಾರ್ಯಕ್ರಮಗಳಲ್ಲಿ ಹಲವು ಪಾತ್ರಗಳಿಗೆ ಹೆಸರುವಾಸಿಯಾಗಿರುವ ನಿಖಿಲ್ ಮಲಿಯಕ್ಕಲ್ ಕರ್ನಾಟಕದ ಮೈಸೂರು ಮೂಲದವರು.












Click it and Unblock the Notifications