'ಪುಷ್ಪ' ನಟಿಗೆ ಕಮಿಟ್‌ಮೆಂಟ್‌ ಕೇಳಿದ ಸ್ಟಾರ್‌ ನಟ, ಯಾರು ಗೊತ್ತಾ?

ರಿಯಾಲಿಟಿ ಶೋಗಳ ಮೂಲಕ ಖ್ಯಾತಿ ಗಳಿಸಿದ್ದ ಅನಸೂಯ ಭಾರದ್ವಾಜ್‌ ಅವರು ಇತ್ತೀಚೆಗೆ ತೆರೆಕಂಡ ಪುಷ್ಪ ಸರಣಿ ಸಿನಿಮಾಗಳಲ್ಲಿ ತಮ್ಮ ಪಾತ್ರದ ಮೂಲಕ ಸಿನಿರಸಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆದರೆ ಚಿತ್ರರಂಗದಲ್ಲಿ ತಮಗೆ ಎದುರಾದ ಕಹಿ ಅನುಭವಗಳನ್ನು ಅನಸೂಯ ಭಾರದ್ವಾಜ್‌ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ಈ ವೇಳೆ ಸ್ಟಾರ್‌ ನಟರೊಬ್ಬರು ತಮಗೆ ಆ ಕಮಿಟ್‌ಮೆಂಟ್‌ ಕೇಳಿದ್ದರು ಎಂದು ಹೇಳಿದ್ದಾರೆ.

ಸಂದರ್ಶನದಲ್ಲಿ ಈ ಬಗ್ಗೆ ಅನಸೂಯ ಅವರು ನೇರವಾಗಿ ಮಾತನಾಡಿದ್ದಾರೆ. ಸ್ಟಾರ್‌ ನಟರೊಬ್ಬರು ಹಾಗೂ ನಿರ್ದೇಶಕರು ನನಗೆ ಕಮಿಟ್‌ಮೆಂಟ್‌ ಕೇಳಿದರು. ಇದಕ್ಕೆ ನಾನು ಒಪ್ಪಿರಲಿಲ್ಲ. ಈ ಕಾರಣದಿಂದ ನನಗೆ ಅವಕಾಶಗಳು ಕೈತಪ್ಪಿದವು ಎಂದು ಅನಸೂಯ ಹೇಳಿದ್ದಾರೆ.

Telugu Actress Anasuya Bharadwaj Opens Up About Bitter Experiences In Cinema

ಸ್ಟಾರ್ ಹೀರೋಗಳೊಂದಿಗೆ ನಾನು ಅದಕ್ಕೆ ನೋ ಹೇಳಿದ್ದಕ್ಕೆ ಚಿತ್ರರಂಗದಲ್ಲಿ ಅವಕಾಶಗಳು ಕೈತಪ್ಪಿವೆ. ಹುಡುಗಿ ಮತ್ತು ಹುಡುಗರ ನಡುವೆ ಆಕರ್ಷಣೆ ಸಾಮಾನ್ಯ. ಚಿತ್ರರಂಗದಲ್ಲಿ ಮಾತ್ರವಲ್ಲ, ಯಾವುದೇ ಕ್ಷೇತ್ರದಲ್ಲಿದ್ದರೂ ಅದು ಕಾಮನ್ ಆಗಿಬಿಟ್ಟಿದೆ ಎಂದೂ ಬೋಲ್ಡ್‌ ಆಗಿ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ಅನೇಕ ನಟರು, ನಿರ್ದೇಶಕರು, ನಿರ್ಮಾಪಕರು ಇದನ್ನೇ ಅವಕಾಶಗಳ ಹೆಸರಿನಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಈ ಅನುಭವ ನನಗೂ ಆಗಿದೆ ಎಂದಿದ್ದಾರೆ.

ಸ್ಟಾರ್ ಹೀರೋ ಕಮಿಂಟ್‌ಮೆಂಟ್‌ ಕೇಳಿದ್ದಕ್ಕೆ ನಾನು ನೇರವಾಗಿ ಇಲ್ಲ ಎಂದೇ ಹೇಳಿದ್ದೆ. ಬಳಿಕ ದೊಡ್ಡ ಡೈರೆಕ್ಟರ್‌ವೊಬ್ಬರು ಕೂಡ ಕಮಿಟ್‌ಮೆಂಟ್‌ ಕೇಳಿದಾಗಲೂ ನಾನು ಅದನ್ನ ನಯವಾಗಿ ತಿರಸ್ಕರಿಸಿದೆ. ಇದಾದ ನಂತರ ನನಗೆ ಅವಕಾಶಗಳು ಹತ್ತಿರ ಸುಳಿಯಲು ಸಹ ಅವರು ಬಿಡಲಿಲ್ಲ. ಹೆಣ್ಣುಮಕ್ಕಳಿಗೆ ಇಂತಹ ಅನುಭವ ಆದಾಗ ನಿರಾಕರಿಸುವುದು ಮಾತ್ರವಲ್ಲ, ಅದರಿಂದ ಮುಂದೆ ಬರುವ ಸಮಸ್ಯೆಗಳನ್ನು ಎದುರಿಸುವ ಧೈರ್ಯವೂ ಇರಬೇಕು ಎಂದು ಹೇಳಿದ್ದಾರೆ.

ನಮಗೆ ಪಾತ್ರಗಳು ಇಂತಹ ಕೆಲಸಗಳಿಂದ ಸಿಗುವುದಕ್ಕಿಂತ ನಮ್ಮಲ್ಲಿರುವ ಕಲೆ, ಪ್ರತಿಭೆಯನ್ನು ನೋಡಿ ಪಾತ್ರಗಳನ್ನು ಕೊಟ್ಟರೆ ತುಂಬಾ ಚೆನ್ನಾಗಿರುತ್ತೆ. ಈ ಪಾತ್ರಕ್ಕೆ ಆಕೆ ಬರದಿದ್ದರೇನು? ಈ ಪಾತ್ರ ಇವಳೇ ಚೆನ್ನಾಗಿ ಮಾಡ್ತಾಳೆ ಅನ್ನೋ ಅವಕಾಶಗಳು ಸಿಕ್ಕರೆ ಒಳ್ಳೆಯದು. ಆ ವಾತಾವರಣ ಸೃಷ್ಟಿಯಾದಾಗ ಅನೇಕ ಹುಡುಗಿಯರು ಈ ಸಿನಿಮಾ ಕ್ಷೇತ್ರಕ್ಕೆ ನೆಮ್ಮದಿಯಾಗಿ ಕಾಲಿಡುತ್ತಾರೆ ಎಂದು ಅನಸೂಯ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

Telugu Actress Anasuya Bharadwaj Opens Up About Bitter Experiences In Cinema

ಇಂಡಸ್ಟ್ರಿಯಲ್ಲಿ ಸುಲಭ ಎನ್ನುವುದು ಸರಿಯಲ್ಲ. ಅನೇಕರು ಚಿತ್ರರಂಗಕ್ಕೆ ಕಾಲಿಟ್ಟರೂ ಇಲ್ಲಿನ ಸ್ಥಿತಿಗತಿಗಳೇ ಬೇರೆಯಾಗಿದೆ. ಇದರಿಂದ ಅವರು ಸುಲಭದ ದಾರಿಯನ್ನು ಹುಡುಕುತ್ತಿದ್ದಾರೆ. ಹತ್ತು ಜನ ತಪ್ಪು ಮಾಡುತ್ತಿದ್ದಾಗ ನಾನೂ ಅದನ್ನೇ ಮಾಡುತ್ತೇನೆ ಎನ್ನುವುದು ತಪ್ಪು. ಸುಲಭವಾದ ಮಾರ್ಗಕ್ಕಿಂತ ಕಷ್ಟಪಟ್ಟು ಪ್ರಯತ್ನಿಸುವುದು, ಕಲೆಯಲ್ಲಿ ನಂಬಿಕೆ ಇಡುವುದು ಉತ್ತಮ ಎಂದು ಕಿವಿಮಾತು ಹೇಳಿದ್ದಾರೆ.

ಪ್ರತಿಭಾವಂತರನ್ನು ಪ್ರೋತ್ಸಾಹಿಸಿದರೆ ಮಾತ್ರ ಹೆಣ್ಣು ಮಕ್ಕಳು ಚಿತ್ರರಂಗಕ್ಕೆ ಕಾಲಿಡುತ್ತಾರೆ. ಸೋಶಿಯಲ್‌ ಮೀಡಿಯಾದಲ್ಲಿ ನನ್ನನ್ನು ಇಷ್ಟಪಡುವವರಿಗೆ ಮಾತ್ರ ನಾನು ಫೋಟೋಗಳನ್ನ ಶೇರ್‌ ಮಾಡಿಕೊಳ್ಳುತ್ತೇನೆ. ನಾನು ಯಾವ ಫೋಟೋ ಹಂಚಿಕೊಳ್ಳುತ್ತೇನೆ ಎನ್ನುವುದು ನನಗೆ ಬಿಟ್ಟ ವಿಚಾರ ಎಂದು ಕಾಮೆಂಟ್‌ ಮಾಡುವವರಿಗೆ ತಿರುಗೇಟು ನೀಡಿದ್ದಾರೆ. ಸದ್ಯ ಅನಸೂಯ ಅವರು ಸ್ಟಾರ್‌ನಟನಿಂದ ಕಮಿಟ್‌ಮೆಂಟ್‌ ಕೇಳಿದ ಬಗ್ಗೆ ನೀಡಿದ ಹೇಳಿಕೆ ಸಂಚಲನ ಸೃಷ್ಟಿಸಿದ್ದು, ಅವರ ಹೆಸರು ಬಹಿರಂಗಪಡಿಸಿಲ್ಲ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+