ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್
ಟಾಲಿವುಡ್ ನಟ "ಯಂಗ್ ಟೈಗರ್" ಜ್ಯೂನಿಯರ್ ಎನ್ಟಿಆರ್ (ತಾರಕ್) ಅವರು ಸಿಲಿಕಾನ್ ಸಿಟಿ ಬೆಂಗಳೂರಿಗೆ ಭೇಟಿ ನೀಡಿದಾಗಲೆಲ್ಲಾ ಇಲ್ಲಿನ ಕನ್ನಡಿಗರ ಪ್ರೀತಿ ಮಿತಿ ಮೀರಿರುತ್ತದೆ. ಭಾನುವಾರ ಮಹದೇವಪುರದಲ್ಲಿರುವ ಕಿಮ್ಸ್ (KIMS) ಆಸ್ಪತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ, ಕನ್ನಡಿಗರ ಹೃದಯ ಗೆಲ್ಲುವ ಮಾತುಗಳನ್ನಾಡಿದ್ದಾರೆ. ಕನ್ನಡದಲ್ಲೇ ತಮ್ಮ ಭಾಷಣ ಮಾಡಿ ಕನ್ನಡ ನೆಲದ ಬಗ್ಗೆ ಕೊಂಡಾಡಿದ್ದಾರೆ.
ಇಲ್ಲಿಗೆ ಬಂದರೆ ಖುಷಿಯಾಗುತ್ತೆ
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಜ್ಯೂನಿಯರ್ ಎನ್ಟಿಆರ್, ತಮ್ಮ ಮತ್ತು ಕರ್ನಾಟಕದ ನಡುವಿನ ರಕ್ತಸಂಬಂಧವನ್ನು ನೆನಪಿಸಿಕೊಂಡರು. "ಎಲ್ಲರಿಗೂ ನಮಸ್ಕಾರ, ಕರ್ನಾಟಕಕ್ಕೆ ಬಂದಾಗಲೆಲ್ಲ ನನಗೆ ಅಪಾರ ಖುಷಿ ಸಿಗುತ್ತದೆ. ನನ್ನ ತಾಯಿ ಕುಂದಾಪುರದವರು ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಹೀಗಾಗಿ, ನಾನು ಬೆಂಗಳೂರು ಅಥವಾ ಕರ್ನಾಟಕದ ಯಾವುದೇ ಭಾಗಕ್ಕೆ ಬಂದರೂ ಅಪ್ಪನ ಮನೆಯಿಂದ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತದೆ. ರಜೆಯ ಮಜಾ ಕಳೆಯಲು ಮಕ್ಕಳು ಊರಿಗೆ ಬಂದಂತಹ ಅನುಭವವಾಗುತ್ತದೆ. ಈ ಕಾರಣಕ್ಕಾಗಿಯೇ ಕರ್ನಾಟಕ ನನಗೆ ಯಾವಾಗಲೂ ತುಂಬಾ ಸ್ಪೆಷಲ್" ಎಂದರು.

ಅಭಿಮಾನಿಗಳ ನಿಯಂತ್ರಿಸಲು ಲಾಠಿ ಪ್ರಹಾರ
ತಮ್ಮ ನೆಚ್ಚಿನ ನಟನನ್ನು ನೋಡಲು ಮಹದೇವಪುರದ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಕಿಕ್ಕಿರಿದು ತುಂಬಿದ್ದ ಜನಸ್ತೋಮವನ್ನು ಕಂಡು ಪೊಲೀಸರು ಹೈರಾಣಾದರು. ಎನ್ಟಿಆರ್ ಅವರು ತಮ್ಮ ಕಾರಿನ ಸನ್ರೂಫ್ ತೆರೆದು ಅಭಿಮಾನಿಗಳತ್ತ ಕೈಬೀಸುತ್ತಿದ್ದಂತೆ, ಜನಸಮೂಹವನ್ನು ನಿಯಂತ್ರಿಸುವುದು ಅಸಾಧ್ಯವಾಯಿತು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸರು, ಅನಿವಾರ್ಯವಾಗಿ ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಬೇಕಾಯಿತು.
ಜ್ಯೂನಿಯರ್ ಎನ್ಟಿಆರ್ ಅವರ ಮೆರವಣಿಗೆಯ ಎಂಟ್ರಿ ಮತ್ತು ಅವರು ಕನ್ನಡದಲ್ಲಿ ಮಾತನಾಡಿದ ವಿಡಿಯೋ ತುಣುಕುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ. ಅಪ್ಪಟ ಕನ್ನಡದ ಸೊಗಡಿನಲ್ಲೇ ಮಾತನಾಡಿದ ಅವರ ಸರಳತೆಗೆ ಕನ್ನಡಿಗರು ಮತ್ತೊಮ್ಮೆ ಫಿದಾ ಆಗಿದ್ದಾರೆ.
NTR always admires kannada ❤️🥹#NTRInBanglore #NTRForKIMS#NTRNeel
— ಕನ್ನಡಿಗ FANOF R-C-B (@Dboss7899) March 8, 2026
pic.twitter.com/zhS8ivukaL
ಬೆಂಗಳೂರಿನಲ್ಲಿ ನೆಲೆಸಿರುವ ತೆಲುಗು ಮೂಲದ ಜನರು ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಮುಗಿಬಿದ್ದರು. ತೆಲುಗು ಮತ್ತು ಕನ್ನಡ ಎರಡೂ ಭಾಷೆಗಳ ಅಭಿಮಾನಿಗಳ ಘೋಷಣೆಗಳಿಂದ ಆಸ್ಪತ್ರೆಯ ಆವರಣ ಮೊಳಗಿತು. ನೆರೆದಿದ್ದ ಅಭಿಮಾನಿಗಳಲ್ಲಿ ಕೆಲವರು ತಾರಕ್ ಅವರಿಗಾಗಿ ವಿಶೇಷವಾಗಿ ಸಿದ್ಧಪಡಿಸಿದ ಫೋಟೋ ಫ್ರೇಮ್ಗಳು ಮತ್ತು ಚಿತ್ರಪಟಗಳನ್ನು ಉಡುಗೊರೆಯಾಗಿ ನೀಡಿದರು. ಅಭಿಮಾನಿಗಳು ಸೆಲ್ಫಿಗಾಗಿ ನಡೆಸಿದ ಪೈಪೋಟಿಯ ನಡುವೆಯೂ, ನಟ ಕೊಂಚವೂ ಬೇಸರ ಮಾಡಿಕೊಳ್ಳದೆ ನಗುಮುಖದಿಂದಲೇ ಎಲ್ಲರತ್ತ ಕೈಬೀಸಿದರು.

ಸಾವಿರಾರು ಜನರ ನೂಕುನುಗ್ಗಲು, ಪೊಲೀಸರ ಲಾಠಿ ಪ್ರಹಾರ ಮತ್ತು ಹೈರಾಣಾಗಿಸುವ ಬಿಸಿಲಿನ ನಡುವೆಯೂ ಎನ್ಟಿಆರ್ ತಮ್ಮ ತಾಳ್ಮೆ ಕಳೆದುಕೊಳ್ಳಲಿಲ್ಲ. ಕಾರಿನ ಸನ್ರೂಫ್ನಿಂದ ಹೊರಬಂದು ಪ್ರತಿಯೊಬ್ಬ ಅಭಿಮಾನಿಯನ್ನೂ ಗೌರವದಿಂದ ಮಾತನಾಡಿಸುತ್ತಾ, ನಗೆ ಬೀರುತ್ತಾ ಸಾಗಿದ ರೀತಿ ಅಲ್ಲಿ ನೆರೆದಿದ್ದವರ ಮನಗೆದ್ದಿತು. ನನ್ನನ್ನು ನೋಡಲು ಇಷ್ಟೊಂದು ಜನ ಬಂದಿರುವುದು ನನ್ನ ಭಾಗ್ಯ ಎಂದು ಅವರು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು.
Tarak anna waving hands at fans who gathered outside the KIMS Hospitals in Mahadevapura, Bengaluru 💥🌋
— NTR - KING OF MASS (@KingJrNTR) March 8, 2026
Biggest Crowd puller @tarak9999 🧎🔥#NTRNeel #NTRInBengaluru pic.twitter.com/R7cHrkhA4G
ಕನ್ನಡ ಬ್ಯಾನರ್ನಲ್ಲಿ ಎನ್ಟಿಆರ್ ಸಿನಿಮಾ
"ಕೆಜಿಎಫ್" ಮತ್ತು "ಸಲಾರ್" ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಜ್ಯೂನಿಯರ್ ಎನ್ಟಿಆರ್ ಕಾಂಬಿನೇಷನ್ನ NTR 31 ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ಇದು ಹೈ-ವೋಲ್ಟೇಜ್ ಆಕ್ಷನ್ ಸಿನಿಮಾ ಆಗಿರಲಿದ್ದು, ಇದರ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ. ಇದಲ್ಲದೆ ಕೊರಟಾಲ ಶಿವ ನಿರ್ದೇಶನದ "ದೇವರ" ಬಿಡುಗಡೆಯಾದ ನಂತರ, ಅದರ ಮುಂದುವರಿದ ಭಾಗವಾಗಿ "ದೇವರ-2" ಬರಲಿದೆ. ಮೊದಲ ಭಾಗದ ಕಥೆಯ ಮುಂದುವರಿಕೆ ಮತ್ತು ದೇವರ ಹಾಗೂ ವರದ ಪಾತ್ರಗಳ ನಡುವಿನ ಸಂಘರ್ಷ ಈ ಭಾಗದಲ್ಲಿ ಇರಲಿದೆ.
-
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Jobs: ರಾಜ್ಯದ ಕಾರಾಗೃಹ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಹತ್ವದ ಆದೇಶ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ












Click it and Unblock the Notifications