Actor Vishal: ನಟ ವಿಶಾಲ್ ಈಗಿನ ಸ್ಥಿತಿಗೆ ಆ ಚಟ ಕಾರಣವೇ?
ತಮಿಳು ನಟ ವಿಶಾಲ್ ಅವರು ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಇತ್ತೀಚೆಗೆ ಅವರು ಗುರುತು ಸಿಗದ ಸ್ಥಿತಿಯಲ್ಲಿ ಕಾಣಿಸಿಕೊಂಡು ಎಲ್ಲರಿಗೂ ಶಾಕ್ ನೀಡಿದ್ದರು. ಬಳಿಕ ಅವರು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಕೂಡ ಪಡೆದುಕೊಂಡಿದ್ದು, ವಿಶಾಲ್ ಅವರಿಗೆ ವೈರಲ್ ಫೀವರ್ ಇರುವುದು ದೃಢಪಟ್ಟಿತ್ತು.
ಸದ್ಯ ವಿಶಾಲ್ ಅವರು ಇನ್ನಷ್ಟು ದಿನ ಬೆಡ್‌ರೆಸ್ಟ್‌ನಲ್ಲೇ ಇರಬೇಕು ಎಂದು ವೈದ್ಯರು ಸಲಹೆ ನೀಡಿದ್ದು, ಮತ್ತೊಂದೆಡೆ ವಿಶಾಲ್ ಅವರ ಬಗ್ಗೆ ಹಲವು ಗಾಳಿಸುದ್ದಿಗಳು ಕೂಡ ಹರಿದಾಡುತ್ತಿವೆ. ಇತ್ತೀಚೆಗೆ ಮದಗಜರಾಜ ಸಿನಿಮಾದ ಕಾರ್ಯಕ್ರಮದಲ್ಲಿ ವಿಶಾಲ್ ಅವರು ಭಾಗಿಯಾಗಿದ್ದರು. ಆದರೆ, ವಿಶಾಲ್ ಅವರ ಹಾವಭಾವ ಎಲ್ಲವೂ ಭಿನ್ನವಾಗಿತ್ತು. ಅವರ ಕೈ ಮೈಕ್ ಹಿಡಿಯಲು ಕೂಡ ನಡುಗುತ್ತಿತ್ತು. ಇನ್ನು ಅವರು ಮಾತನಾಡುವಾಗ ತೊದಲುತ್ತಿದ್ದರು.

ಇದನ್ನು ಕಂಡ ಅಭಿಮಾನಿಗಳೆಲ್ಲ ವಿಶಾಲ್ ಅವರಿಗೆ ಇದ್ದಕ್ಕಿದ್ದಂತೆ ಏನಾಯಿತು? ಎಂದು ಗಾಬರಿಯಾಗಿದ್ದರು. ವಿಶಾಲ್ ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದರು. ಗಟ್ಟಿಮುಟ್ಟಾಗಿದ್ದ ವಿಶಾಲ್ ಈ ರೀತಿ ಗುರುತು ಸಿಗದ ರೀತಿಯಲ್ಲಿ ಕಾಣಿಸಿಕೊಂಡ ಬಗ್ಗೆ ಹಲವು ಅನುಮಾನಗಳು ಕೂಡ ವ್ಯಕ್ತಪಡಿಸಿದ್ದರು. ವಿಶಾಲ್‌ಗೆ ಏನೋ ಕಾಯಿಲೆ ಎಂದೆಲ್ಲ ವದಂತಿ ಹಬ್ಬಿತ್ತು.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಶಾಲ್ ಅವರಿಗೆ ಸಂಬಂಧಿಸಿದ ಹಲವು ಹಳೆಯ ವಿಡಿಯೋಗಳು ವೈರಲ್ ಆಗುತ್ತಿವೆ. ಇದೀಗ ವಿಶಾಲ್ ಅವರು ಈ ಹಿಂದೆ ತಾವೇ ಹೇಳಿಕೊಂಡಿದ್ದ ಚಟದ ಬಗೆಗಿನ ವಿಡಿಯೋ ಕೂಡ ವೈರಲ್ ಆಗಿದೆ. ಇದನ್ನು ಕಂಡವರು ವಿಶಾಲ್ ಅವರ ಇಂದಿನ ಸ್ಥಿತಿಗೆ ಈ ಚಟವೇ ಕಾರಣ ಇರಬಹುದಾ? ಎಂದೂ ಪ್ರಶ್ನೆ ಮುಂದಿಟ್ಟಿದ್ದಾರೆ.
ಇನ್ನು ನಟ ವಿಶಾಲ್ ಅವರು ಈ ಹಿಂದೆ ಸಂದರ್ಶನದಲ್ಲಿ ಮಾತನಾಡುವಾಗ ತಮಗಿದ್ದ ಚಟದ ಬಗ್ಗೆ ವಿವರಿಸಿದ್ದರು. ನಾನು ಮೊದಲು ದಿನಕ್ಕೆ ಬರೋಬ್ಬರಿ 20 ಸಿಗರೇಟ್‌ಗಳನ್ನು ಸೇದುತ್ತಿದ್ದೆ ಅವರು ಖುದ್ದು ವಿಶಾಲ್ ಅವರೇ ಹೇಳಿಕೊಂಡಿದ್ದಾರೆ. ಆದರೆ, ನಾನು ಒಂದೇ ದಿನಕ್ಕೆ ಧೂಮಪಾನ ಮಾಡುವ ಹವ್ಯಾಸವನ್ನು ಬಿಟ್ಟುಬಿಟ್ಟೆ ಎಂದೂ ವಿಶಾಲ್ ಹೇಳಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ವಿಶಾಲ್ ಅವರ ಕೈ ನಡುಗುತ್ತಿರಲು ಇದೂ ಕೂಡ ಕಾರಣ ಇರಬಹುದು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಅಲ್ಲದೆ ವಿಶಾಲ್ ಅವರು ಕೆಟ್ಟ ಹವ್ಯಾಸಗಳನ್ನು ಬಿಟ್ಟ ಬಗ್ಗೆಯೂ ಹೇಳಿಕೊಂಡಿದ್ದಾರೆ. ನಾನು ಮೊದಲಿಗೆ ಸಿಗರೇಟ್ ಸೇದುವುದನ್ನು ಬಿಟ್ಟಿದ್ದೆ. ಬಳಿಕ ಮದ್ಯಪಾನ ಮಾಡುವುದನ್ನು ಕೂಡ ಬಿಟ್ಟೆ. ಎಲ್ಲರೂ ಕೆಟ್ಟ ಹವ್ಯಾಸಗಳನ್ನು ನಿಧಾನವಾಗಿ ಬಿಡುವಂತೆ ಹೇಳುತ್ತಾರೆ. ಆದರೆ, ನಾನು ಒಂದೇ ದಿನದಲ್ಲಿ ಬಿಟ್ಟಿದ್ದೆ ಎಂದು ವಿಶಾಲ್ ಹೇಳಿಕೊಂಡಿದ್ದರು. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮತ್ತೊಂದೆಡೆ ಕಾಲಿವುಡ್‌ನ ಖ್ಯಾತ ಗಾಯಕಿ ಸುಚಿತ್ರಾ ಅವರು ಕೂಡ ನಟ ವಿಶಾಲ್ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಹಲವು ವರ್ಷಗಳ ಹಿಂದೆ ನನ್ನ ಪತಿ ಕಾರ್ತಿಕ್ ಮನೆಯಲ್ಲಿ ಇರಲಿಲ್ಲ, ಆಗ ವಿಶಾಲ್ ಬಂದು ನಮ್ಮ ಮನೆ ಬಾಗಿಲು ತಟ್ಟಿದ್ದ. ವಿಶಾಲ್ ಕುಡಿದ ಅಮಲಿನಲ್ಲಿ ಮದ್ಯದ ಬಾಟಲಿ ಹಿಡಿದುಕೊಂಡು ನಮ್ಮನೆ ಬಾಗಿಲು ಬಡಿದಿದ್ದ ಎಂದು ಆರೋಪಿಸಿ ವಿವಾದಕ್ಕೆ ಕಾರಣವಾಗಿದ್ದಾರೆ. ವಿಶಾಲ್ ಮದ್ಯದ ಅಮಲಲ್ಲಿ ಬಾಗಿಲು ತಟ್ಟಿದ್ದ, ಆತ ತುಂಬಾ ನಶೆಯಲ್ಲಿದ್ದ, ಈಗ ವಿಶಾಲ್‌ನ ಈ ಸ್ಥಿತಿಯಲ್ಲಿ ನೋಡಲು ನನಗೆ ತುಂಬಾ ಸಂತೋಷವಾಗಿದೆ ಎಂದು ಸುಚಿತ್ರಾ ವಿಡಿಯೋದಲ್ಲಿ ಹೇಳಿದ್ದಾರೆ.












Click it and Unblock the Notifications