Darshan Thoogudeepa: ಎಲ್ಲ ಸರಿಹೋಯ್ತು ಅನ್ಕೊಂಡಿದ್ದ ದರ್ಶನ್‌ಗೆ ಎದುರಾಯ್ತು ದೊಡ್ಡ ಆಪತ್ತು
ನಟ ದರ್ಶನ್ ತೂಗುದೀಪ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನು ಪಡೆದು ರಿಲೀಫ್ ಆಗಿದ್ದಾರೆ. ಸದ್ಯ ಅವರು ಮೈಸೂರಿನಲ್ಲಿ ದೇವರ ದರ್ಶನ ಮಾಡುತ್ತಾ ಫಾರ್ಮ್‌ಹೌಸ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ. ಇನ್ನೇನು ಎಲ್ಲ ಸರಿಹೋಯಿತು ಎಂದು ಹಾಯಾಗಿದ್ದ ನಟ ದರ್ಶನ್ ಅವರಿಗೆ ಇದೀಗ ಮತ್ತೊಂದು ದೊಡ್ಡ ಕಂಟಕವೇ ಎದುರಾಗಿದೆ. ದರ್ಶನ್ ಅವರ ಜಾಮೀನು ಭವಿಷ್ಯ ಇದೀಗ ಸುಪ್ರೀಂಕೋರ್ಟ್ ನಿರ್ಧರಿಸಲಿದ್ದು, ಇದಕ್ಕೆ ಸಮಯ ಕೂಡ ನಿಗದಿಯಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳಿಗೂ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ ಮತ್ತೊಂದೆಡೆ ಈ ಜಾಮೀನು ಆದೇಶ ಪ್ರಶ್ನಿಸಿ ಹಾಗೂ ಜಾಮೀನು ರದ್ದು ಕೋರಿ ಪೊಲೀಸರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಮೇಲ್ಮನವಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಜನವರಿ 24ರಂದು ನಡೆಸಲಿದೆ ಎಂದು ಹೇಳಲಾಗುತ್ತಿದೆ. ಪೊಲೀಸರು ಬಲವಾದ ಕಾರಣಗಳನ್ನು ನೀಡಿ ಜಾಮೀನು ರದ್ದಾದರೆ, ದರ್ಶನ್ ಹಾಗೂ ಇತರ ಆರೋಪಿಗಳು ಮತ್ತೆ ಜೈಲಿಗೆ ತೆರಳುವುದು ಅನಿವಾರ್ಯ ಎಂದು ತಿಳಿದುಬಂದಿದೆ.

ಈ ಕೊಲೆ ಕೇಸ್‌ನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳಿಗೂ ಜಾಮೀನು ಸಿಕ್ಕಿತ್ತು. ಬಳಿಕ ಎಲ್ಲರೂ ತುಸು ನಿರಾಳರಾಗಿದ್ದರು. ಇದೀಗ ಪೊಲೀಸರು ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗಿರುವುದರಿಂದ ಅಲ್ಲಿ ಈ ಪ್ರಕರಣ ಮತ್ತೊಂದು ತಿರುವು ಪಡೆದುಕೊಳ್ಳುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ. ಪೊಲೀಸರು ದರ್ಶನ್ ಹಾಗೂ ಇತರ ಆರೋಪಿಗಳ ಜಾಮೀನು ರದ್ದು ಕೋರಲು ಬಲವಾ ಸಾಕ್ಷಿಗಳನ್ನು ಸುಪ್ರೀಂಕೋರ್ಟ್ ಮುಂದೆ ಇಡಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದನ್ನು ಪರಿಗಣಿಸಿ ಸುಪ್ರೀಂಕೋರ್ಟ್ ಆರೋಪಿಗಳ ಜಾಮೀನು ರದ್ದುಗೊಳಿಸುವ ಸಾಧ್ಯತೆ ಇದೆ.
ಕೊಲೆ ಕೇಸ್‌ನಿಂದ ಸದ್ಯ ರಿಲೀಫ್ ಆಗಿದ್ದ ದರ್ಶನ್ ಹಾಗೂ ಇತರ ಆರೋಪಿಗಳಿಗೆ ಢವಢವ ಶುರುವಾಗಿದೆ. ಈ ಹಿಂದೆ ಸರ್ಕಾರವು ಈ ಕೇಸ್‌ನಲ್ಲಿ ವಾದಿಸಲು ವಕೀಲ ಪ್ರಸನ್ನ ಕುಮಾರ್ ಅವರನ್ನು ನೇಮಿಸಿತ್ತು. ಇದೀಗ ಸುಪ್ರೀಂಕೋರ್ಟ್‌ನಲ್ಲಿ ಪೊಲೀಸರ ಪರ ವಕೀಲರಾದ ಅನಿಲ್ ಸಿ.ನಿಶಾನಿ ಅವರು ವಾದ ಮಂಡಿಸಲಿದ್ದಾರೆ. ಈಗಾಗಲೇ ಸರ್ಕಾರ ಇವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು, ನಿಶಾನಿ ಅವರು ದರ್ಶನ್ ವಿರುದ್ಧ ವಾದ ಮಂಡಿಸಲಿದ್ದಾರೆ.
ಕಳೆದ ವಾರ ಪೊಲೀಸರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅದರಂತೆ ಸುಪ್ರೀಂಕೋರ್ಟ್ ಜನವರಿ 24ರಂದು ಅರ್ಜಿ ವಿಚಾರಣೆ ನಡೆಸಲಿದೆ. ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳ ಜಾಮೀನು ಭವಿಷ್ಯವನ್ನು ಸುಪ್ರೀಂಕೋರ್ಟ್ ನಿರ್ಧರಿಸಲಿದೆ. ಇತ್ತೀಚೆಗೆ ಸಂಕ್ರಾಂತಿ ಸಂಭ್ರಮದಲ್ಲಿದ್ದ ದರ್ಶನ್ ಅವರಿಗೆ ಇದರಿಂದ ಆತಂಕ ಶುರುವಾಗಿದೆ.

ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಇತ್ತೀಚೆಗೆ ದರ್ಶನ್ ತಮ್ಮ ಕುಟುಂಬಸ್ಥರೊಂದಿಗೆ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಿದ್ದರು. ಈ ಫೋಟೋಗಳು ವೈರಲ್ ಆಗಿದ್ದವು. ಅಲ್ಲದೆ ಹಲವು ತಿಂಗಳ ಬಳಿಕ ದರ್ಶನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಸಂಕ್ರಾಂತಿಗೆ ಶುಭಾಶಯ ತಿಳಿಸಿದ್ದರು. ಬಳಿಕ ಅವರು ಹಲವು ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆಯುತ್ತಿದ್ದು, ತಮ್ಮ ನೆಚ್ಚಿನ ಮೈಸೂರಿನ ಚಾಮುಂಡಿ ಬೆಟ್ಟಕ್ಕೂ ತೆರಳಿ ದರ್ಶನ ಮಾಡಿ ಬಂದಿದ್ದಾರೆ. ಮತ್ತೊಂದು ಅವರ ಜಾಮೀನು ಭವಿಷ್ಯ ನಿರ್ಧರಿಸಲು ಸುಪ್ರೀಂಕೋರ್ಟ್ ಮುಂದಾಗಿದೆ.












Click it and Unblock the Notifications