Sudeep: ಉಪೇಂದ್ರ ವಿರುದ್ಧ ಸಿಟ್ಟಿಗೆದ್ದ ಸುದೀಪ್ ಅಭಿಮಾನಿಗಳು; ಕಾರಣವೇನು?
ಈ ವರ್ಷದ ಕೊನೆಯಲ್ಲಿ ಕನ್ನಡ ಚಿತ್ರರಂಗಕ್ಕೆ ಆಶಾಭಾವನೆ ಸಿಕ್ಕಿದೆ. ವರ್ಷದ ಕೊನೆಯಲ್ಲಿ ಒಂದೇ ವಾರದ ಅಂತರದಲ್ಲಿ ಬಿಡುಗಡೆಯಾದ ಯುಐ ಮತ್ತು ಮ್ಯಾಕ್ಸ್ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಗೆದ್ದು ಬೀಗಿವೆ. ಎರಡೂ ದೊಡ್ಡ ಸಿನಿಮಾಗಳು ಒಂದೇ ವಾರದ ಅಂತರದಲ್ಲಿ ಬಿಡುಗಡೆಯಾಗಿದ್ದು ಸಿನಿಮಾ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು, ಆದರೆ ಪ್ರೇಕ್ಷಕ ಎರಡೂ ಸಿನಿಮಾಗಳನ್ನು ಅಪ್ಪಿಕೊಂಡಿದ್ದಾನೆ.
ಯುಐ ಸಿನಿಮಾ ನೋಡಿದ್ದ ಸುದೀಪ್ ಚಿತ್ರವನ್ನು ಮನಸಾರೆ ಮೆಚ್ಚಿಕೊಂಡಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ಅವರು ಇಂತಹ ಸಿನಿಮಾ ಮಾಡಲು ನಿಮ್ಮೊಬ್ಬರಿಂದ ಮಾತ್ರ ಸಾಧ್ಯ ಎಂದು ಹೇಳಿದ್ದರು. ಎರಡೂ ಸಿನಿಮಾಗಳು ಈಗಾಗಲೇ ಸಿನಿಮಾ ಯಶಸ್ಸಿನ ಖುಷಿಯಲ್ಲಿವೆ. ಆದರೆ ಶನಿವಾರ ಉಪೇಂದ್ರ ಆಡಿರುವ ಮಾತುಗಳು ಸುದೀಪ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಯುಐ ಸಿನಿಮಾ ಭರ್ಜರಿ ಯಶಸ್ಸಿನ ಬೆನ್ನಲ್ಲೇ ನಟ, ನಿರ್ದೇಶಕ ಉಪೇಂದ್ರ ಮತ್ತು ಚಿತ್ರತಂಡ ಸಕ್ಸಸ್ ಮೀಟ್ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಉಪೇಂದ್ರ ಮ್ಯಾಕ್ಸ್ ಸಿನಿಮಾ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ರೀತಿ ಸುದೀಪ್ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ.
ಉಪೇಂದ್ರ ಹೇಳಿದ್ದೇನು?
ಸಕ್ಸಸ್ ಮೀಟ್ ಸಂದರ್ಭದಲ್ಲಿ ಮಾಧ್ಯಮದವರು ಹಲವು ಪ್ರಶ್ನೆಗಳನ್ನು ಕೇಳಿದರು. ಈ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಒಂದೇ ವಾರದ ಅಂತರದಲ್ಲಿ ಯುಐ ಮತ್ತು ಮ್ಯಾಕ್ಸ್ ಬಿಡುಗಡೆಯಾಗಿದೆ. ಮ್ಯಾಕ್ಸ್ ಬಿಡುಗಡೆಯಾದ ಬಳಿಕ ಯುಐ ಸಿನಿಮಾ ಗಳಿಕೆ ಮೇಲೆ ಪರಿಣಾಮ ಬೀರಿದೆಯಾ ಎಂದು ಪ್ರಶ್ನೆ ಕೇಳಿದರು.
ಇದಕ್ಕೆ ಉತ್ತರ ನೀಡಿದ ಉಪೇಂದ್ರ ಯಾವ ಮ್ಯಾಕ್ಸ್ ಕೂಡ ನನಗೆ ಗೊತ್ತಿಲ್ಲ, ನಾವು ಯುಐ ಸಿನಿಮಾ ಬಗ್ಗೆ ಮಾತ್ರ ಗಮನ ಹರಿಸಿದ್ದೇವೆ, ನಮ್ಮ ಸಿನಿಮಾ ಕಲೆಕ್ಷನ್ ಮಾತ್ರ ನೋಡುತ್ತೇವೆ. ಇದು ಮಾರುಕಟ್ಟೆ ನಾವು ಒಂದು ವಸ್ತುವನ್ನು ಮಾರುತ್ತೇವೆ ಎಂದರೆ ಅಕ್ಕ ಪಕ್ಕದಲ್ಲಿ ಇನ್ನೊಬ್ಬರು ಬಂದು ಅಂಗಡಿ ಇಡುತ್ತಾರೆ ನಾವು ಅವರ ಬಗ್ಗೆ ತಲೆ ಕೆಡಿಸಿಕೊಳ್ಳಲು ಆಗಲ್ಲ, ನಮ್ಮ ವ್ಯಾಪಾರ ನಾವು ಮಾಡುತ್ತೇವೆ, ಇಲ್ಲಿ ಅನೇಕ ತೆಲುಗು, ತಮಿಳು ಸಿನಿಮಾ ಬರುತ್ತವೆ ನಾವ್ಯಾಕೆ ತಲೆ ಕೆಡಿಸಿಕೊಳ್ಳಬೇಕು ಎಂದಿದ್ದಾರೆ.
ಮ್ಯಾಕ್ಸ್ ಸಿನಿಮಾ ಬಿಡುಗಡೆಯಾಗಿರುವುದೇ ಗೊತ್ತಿಲ್ಲ ಎಂದು ಉಪೇಂದ್ರ ಹೇಳಿರುವುದು ಸುದೀಪ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಸುದೀಪ್ ಅವರು ನಾನು ಉಪೇಂದ್ರ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. ಯುಐ ಸಿನಿಮಾ ಬಿಡುಗಡೆ ಕೇಳಿದ್ದಾಗ, ನಾನು ಯುಐ ಸಿನಿಮಾಗೆ ಕಾಯುತ್ತಿದ್ದೇನೆ, ಸಿನಿಮಾ ಬಿಡುಗಡೆ ಮಾಡುವುದು ನಿರ್ಮಾಪಕರ ಜವಾಬ್ದಾರಿ ಅವರೂ ಎಲ್ಲಾ ಲೆಕ್ಕಾಚಾರ ಹಾಕಿಕೊಂಡಿರುತ್ತಾರೆ ಎರಡೂ ಸಿನಿಮಾ ಗೆಲ್ಲಲಿ ಎಂದು ಆಶಿಸಿದ್ದರು.
ಆದರೆ ಇಂದು ಉಪೇಂದ್ರ ಮ್ಯಾಕ್ಸ್ ಸಿನಿಮಾ ಬಗ್ಗೆ ಕೇಳಿದಾಗ ಹಂಗೆ ಮಾತನಾಡುವ ಬದಲು, ಎರಡೂ ಸಿನಿಮಾ ಕಲೆಕ್ಷನ್ ಚನ್ನಾಗಿದೆ ಎಂದಿದ್ದರೂ ಸಾಕಿತ್ತು, ಹಿರಿಯ ನಟರಾಗಿ ಮತ್ತೊಬ್ಬ ನಟನ ಕನ್ನಡ ಸಿನಿಮಾ ಬಗ್ಗೆ ಹೀಗೆ ಮಾತನಾಡಬಾರದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications