Sudeep Bigg Boss: ಬಿಗ್‌ ಬಾಸ್‌ಗೆ ಗುಡ್‌ಬೈ ಹೇಳಿಗೆ ಸುದೀಪ್‌ಗೆ ಮಗಳ ಕಡೆಯಿಂದ ವಿಶೇಷ ಸಂದೇಶ

ಕಿಚ್ಚ ಸುದೀಪ್ ಇದೀಗ ಬಿಗ್‌ ಬಾಸ್‌ನಿಂದ ಹೊರಬರುವುದಾಗಿ ಘೋಷಣೆ ಮಾಡಿದ್ದಾರೆ. ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ಸತತ 11 ಆವೃತ್ತಿಗಳಲ್ಲಿ ನಿರೂಪಕರಾಗಿ ಜನಮನ ಗೆದ್ದಿರುವ ಸುದೀಪ್ ಇದೇ ನನ್ನ ಕೊನೆಯ ಬಿಗ್ ಬಾಸ್ ಆಗಿದ್ದು, ಮುಂದಿನ ಆವೃತ್ತಿಯಲ್ಲಿ ನಾನು ನಿರೂಪಣೆ ಮಾಡುವುದಿಲ್ಲ ಎಂದು ಖಚಿತಪಡಿಸಿದ್ದಾರೆ. ಯಾವ ಕಾರಣಕ್ಕೆ ಸುದೀಪ್ ಈ ನಿರ್ಧಾರ ಮಾಡಿದ್ದಾರೆ ಎನ್ನುವುದು ಖಚಿತವಾಗಿ ತಿಳಿದಿಲ್ಲವಾದರೂ, ಹೊರಬರುವುದಂತೂ ಖಚಿತವಾಗಿದೆ.

ಸುದೀಪ್ ಅವರ ನಿರ್ಧಾರದ ಬಗ್ಗೆ ಮಗಳು ಸಾನ್ವಿ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಹ್ಯಾಂಡಲ್‌ನಲ್ಲಿ ಅಪ್ಪನ ಸಂದೇಶದ ಸ್ಕ್ರೀನ್‌ಶಾಟ್ ಹಂಚಿಕೊಂಡಿರುವ ಅವರು, ನಿಮ್ಮ ಪ್ರಯಾಣದ ಬಗ್ಗೆ ನನಗೆ ಹೆಮ್ಮೆಯಿದೆ, ಆ ವೇದಿಕೆ ನಿಮ್ಮನ್ನು ಮಿಸ್ ಮಾಡಿಕೊಳ್ಳಲಿದೆ ಎಂದು ಹೇಳಿದ್ದಾರೆ.

Sudeep Decides to Step Down as Bigg Boss Kannada Host Daughter Saanvi Reaction

"ನಿಮ್ಮ ಈ ಪ್ರಯಾಣದ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ. ನಿಮ್ಮಂತೆ ಯಾರಿಗೂ ಅದನ್ನು ಮಾಡಲು ಸಾಧ್ಯವಿಲ್ಲ. ಆ ವೇದಿಕೆ ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳಲಿದೆ. ಬಿಗ್‌ ಬಾಸ್‌ನಲ್ಲಿಇದುವರೆಗಿನ ನಿಮ್ಮ ಪಯಣವನ್ನು ನೋಡಿ ನನಗೆ ತುಂಬಾ ಖುಷಿಯಾಗಿದೆ. ಬಿಗ್‌ ಬಾಸ್‌ಗಾಗಿ ನೀವು ಮಾಡಿರುವ ಕೆಲಸ, ಪಟ್ಟಿರುವ ಶ್ರಮ ಯಾವುದಕ್ಕೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಈವರೆಗೂ ಬಿಗ್‌ ಬಾಸ್‌ ಕಾರ್ಯಕ್ರಮಗ್ಗೆ ನೀವು ಕೊಟ್ಟಿರುವ ಕೊಡುಗೆ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ" ಎಂದು ಹೇಳಿದ್ದಾರೆ.

ರೂಪೇಶ್ ರಾಜಣ್ಣ ಮತ್ತೊಂದು ಪೋಸ್ಟ್!

ಸುದೀಪ್‌ ಬಿಗ್ ಬಾಸ್ ತೊರೆಯುವ ಬಗ್ಗೆ ಪೋಸ್ಟ್ ಹಾಕಿದ್ದರ ಬಗ್ಗೆ ಬಿಗ್ ಬಾಸ್ ಸ್ಪರ್ಧಿ, ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಕಾರ್ಯಕ್ರಮ ನಿರ್ದೇಶಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪೋಸ್ಟ್ ಹಂಚಿಕೊಂಡಿದ್ದರು. "ಬಿಗ್ ಬಾಸ್ ಎಂಬ ಕಾರ್ಯಕ್ರಮ ನಡೆಸುವ ಕೆಲವು ಕನ್ನಡ ದ್ರೋಹಿಗಳ ನಿಮ್ಮ ಕಿತ್ತೋದ್ ಆಟಕ್ಕೆ ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಕರಾಗಿ ನಿಲ್ಲಿಸಬೇಕಾಗಿದೆ. ಅವರಿಗೆ ಮಾಡಿದ ಅವಮಾನ ಸಹಿಸೋಲ್ಲ, ಎ ಮುಂಬೈ ಮರಾಠಿ ಹಾಗೂ ತಮಿಳ್ ನಿರ್ದೇಶಕ ಮೊದಲು ಬಿಗ್ ಬಾಸ್ ಬಿಡಿ ಇಲ್ಲ ಬಿಗ್ ಬಾಸ್ ನಿಲ್ಲಬೇಕು ಅಸಲಿ ವಿಷಯ ನಾಳೆ ಮಾತಾಡ್ತೀನಿ." ಎಂದಿದ್ದರು. ಇದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕಿತ್ತು.

ಸೋಮವಾರ ಮತ್ತೊಂದು ಪೋಸ್ಟ್ ಹಾಕಿರುವ ಅವರು, "ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಬಿಗ್ ಬಾಸ್ ಆಯೋಜಕರು ಒಪ್ಪಿಕೊಂಡಿದ್ದಾರೆ. ತಮಗೂ ಹಾಗೂ ಕನ್ನಡದ ಪರವಾಗಿ ನಿಂತ ಕಿಚ್ಚ ಸುದೀಪ್ ಅವರಿಗೆ, ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದಗಳು. ನಾನು ಸಹ ನಾಡಿನ ಪರವಾದ ವಿಚಾರವಾಗಿ ಧ್ವನಿ ಎತ್ತಿದ್ದೇನೆ. ಬದಲಾವಣೆ ನೀವೇ ನೋಡುವಿರಿ." ಎಂದಿದ್ದು ಮತ್ತಷ್ಟು ಕುತೂಹಲ ಕೆರಳಿಸಿದೆ.

ನಿಜಕ್ಕೂ ಏನಾಗಿದೆ ಎನ್ನುವುದು ಗೊತ್ತಿಲ್ಲವಾದರೂ, ಆಯೋಜಕರು ಮತ್ತು ಸುದೀಪ್ ನಡುವೆ ಮನಸ್ತಾಪ ಬಂದಿರುವುದು ಮಾತ್ರ ರೂಪೇಶ್ ರಾಜಣ್ಣ ಅವರ ಪೋಸ್ಟ್‌ನಿಂದ ಸ್ಪಷ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+