Sonu Srinivas Gowda: ಜೈಲಿನಲ್ಲಿ ಈ 23- 24 ವರ್ಷಕ್ಕೆ ಇದೆಲ್ಲಾ ಬೇಕಿತ್ತಾ ಅನಿಸಿತ್ತು!; ಜೈಲಿನ ಅನುಭವ ಬಿಚ್ಚಿಟ್ಟ ಸೋನು

ಬೆಂಗಳೂರು, ಏಪ್ರಿಲ್. 13: ಟಿಕ್ ಟಾಕ್ ರೀಲ್ಸ್‌ಗಳ ಮೂಲಕ ಸದ್ದು ಮಾಡಿ ಬಳಿಕ ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1 ಕ್ಕೆ ಕಾಲಿಟ್ಟು ಸಕತ್ ಫ್ಯಾನ್ ಫಾಲೋಯಿಂಗ್ ಪಡೆದವರು ಸೋನು ಶ್ರೀನಿವಾಸ್ ಗೌಡ. ಆದರೆ, ಇತ್ತೀಚೆಗೆ ಸೋನು ಗೌಡ ಅವರನ್ನು ಪೊಲೀಸರು ಬಂಧಿಸಿದ್ದರು.

ಹೌದು, ಸಿನಿಮಾ ರಂಗಕ್ಕೆ ಕಾಲಿಡುತ್ತಿರುವ 23 ವರ್ಷದ ಸೋನು ಗೌಡ ಉತ್ತರ ಕರ್ನಾಟಕ ಭಾಗದ ಕುಟುಂಬದ 8 ವರ್ಷದ ಬಾಲಕಿಯನ್ನು ಅಕ್ರಮವಾಗಿ ದತ್ತು ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ವಿಚಾರಣೆ ನಡೆಸಿದ್ದ ಪೊಲೀಸರು ಅವರನ್ನು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರು. ಅವರನ್ನು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. 15 ದಿನಗಳ ನ್ಯಾಯಾಂಗ ಬಂಧನದಲ್ಲಿ ಕಳೆದ ಅವರನ್ನು ಏಪ್ರಿಲ್ 6 ರಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

Sonu Srinivas Gowda breaks silence Explains Her Jail Experience

ಜೈಲಿನ ಅನುಭವ ಹೇಳಿಕೊಂಡ ಸೋನು!

ಜಾಮೀನಿನ ಮೇಲೆ ಹೊರ ಬಂದಿರುವ ಸೋನು ಶ್ರೀನಿವಾಸ್ ಗೌಡ, ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಜೈಲಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಜೈಲು ಅನುಭವವನ್ನು ಹೇಳುವಂತೆ ಹಲವು ಫ್ಯಾನ್ಸ್ ಮತ್ತು ಫಾಲೋವರ್ಸ್‌ಗಳು ಮೆಸೇಜ್, ಕಾಮೆಂಟ್‌ಗಳ ಮೂಲಕ ಕೇಳುತ್ತಿದ್ದರು. ಹಾಗಾಗಿ ಅನುಭವ ಹಂಚಿಕೊಳ್ಳುವುದರಲ್ಲಿ ತಪ್ಪಿಲ್ಲ ಎಂದು ಈ ವಿಡಿಯೋ ಮಾಡುತ್ತಿದ್ದೇನೆ ಎಂದು ಯೂಟ್ಯೂಬ್‌ಬಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

"ಮೊದಲಿಗೆ ನನ್ನನ್ನು ಲೀಗಲ್ ವಿಚಾರಣೆ ನಡೆಸುತ್ತಿದ್ದರು. ನಾನು ಅದನ್ನು ಫಾಲೋ ಮಾಡುತ್ತಿದೆ. ಬಳಿಕ ನನ್ನನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿದ್ರು. ಅಲ್ಲಿ ಹೋದ ತಕ್ಷಣ ನಂಗೆ ತುಂಬಾ ಬೇಜಾರ್ ಆಯಿತು. ಅಲ್ಲಿನ ವಾತಾವರಣ, ಜನ ಎಲ್ಲರನ್ನು ನೋಡಿ, ಈ 23- 24 ವರ್ಷಕ್ಕೆ ಇದೇಲ್ಲಾ ಬೇಕಿತ್ತಾ ಅನಿಸಿತು" ಎಂದಿದ್ದಾರೆ.

"ಅಲ್ಲಿ ಇದ್ದವರು ಬೇರೆ ಬೇರೆ ಕೇಸ್‌ಗಳಲ್ಲಿ ಇದ್ದವರು. ಅಂದರೆ, ಹಾಫ್ ಮರ್ಡರ್, ಫುಲ್ ಮರ್ಡರ್ ಮಾಡಿದವರೆಲ್ಲಾ ಇದ್ದರು. ಅವರ ಜೊತೆಗೆಲ್ಲಾ ನಾನು ಇರಬೇಕಾಯಿತು. ಆ ಕ್ಷಣನ ಹೇಗೆ ಹೇಳೋದು ನಂಗೆ ಅರ್ಥ ಆಗುತ್ತಿಲ್ಲ. ಇನ್ನು, ಮುಖ್ಯ ಅಂದ್ರೆ ಅಲ್ಲಿ 3 ದಿನಕ್ಕೆ ಒಮ್ಮೆ ಫೋನ್ ಕೊಡುತ್ತಿದ್ರು. 3 ರಿಂದ 4 ನಿಮಿಷ ಮಾತಾಡಲು ಮೂರು ದಿನ ಕಾಯಬೇಕಿತ್ತು. ಇಲ್ಲಿ ನನ್ನ ಬಳಿ ಫೋನ್ ಇತ್ತು, ಅನ್‌ಲಿಮಿಟೆಡ್ ಕಾಲ್ ಇತ್ತು. ಮಾತಾಡಬೇಕಿದ್ದವರು ಪಕ್ಕದಲ್ಲೇ ಇದ್ದರು, ಆದರೂ ನಾನು ಮಾತಾಡುತ್ತಿರಲಿಲ್ಲ. ಅಲ್ಲಿ ಅವರ ಬೆಲೆ ಗೊತ್ತಾಯಿತು. 4 ಗೋಡೆ ಮಧ್ಯೆ ಇದ್ದು ಅನೇಕ ವಿಚಾರ ಕಲಿತೆ" ಎಂದು ಹೇಳಿಕೊಂಡಿದ್ದಾರೆ.

Sonu Srinivas Gowda breaks silence Explains Her Jail Experience

ಟ್ರೋಲ್ ಪೇಜಸ್‌ಗೆ ಥ್ಯಾಂಕ್ಯೂ ಎಂದ ಸೋನು

ಹದಿನೈದು ದಿನ ನನ್ನ ಫೇವರಿಟ್ ಫುಡ್, ಪೆಟ್ , ಪರ್ಸನ್ ಏನು ಇಲ್ಲದೆ ಇದ್ದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕಷ್ಟದ ಸಮಯದಲ್ಲಿ ಜೊತೆಗೆ ನಿಂತ ಟ್ರೋಲ್ ಪೇಜರ್ಸ್‌ಗೆ ಧನ್ಯವಾದ ಹೇಳಿದ್ದಾರೆ. ನಾನು ಇದನ್ನು ಎಕ್ಸ್‌ಪೇಕ್ಟ್ ಮಾಡಿರಲಿಲ್ಲ. ನೀವೆಲ್ಲಾ ನ್ಯಾಯದ ಪರ ದನಿ ಎತ್ತಿದ್ದಿರ . ಪಾಸಿಟಿವ್ ಆಗಿ ಟ್ರೀಟ್ ಮಾಡಿದ್ದಿರಿ ಎಂಬ ಧನ್ಯವಾದ ಎಂದು ತಿಳಿಸಿದ್ದಾರೆ.

ಜೊತೆಗೆ "ಜೈಲಿನಲ್ಲಿ ತುಂಬಾ ಸೊಳ್ಳೆ ಇರುತ್ತಿತ್ತು. ಈ ಜೀವನ ಬೇರೆ ಅಲ್ಲಿನ ಜೀವನವೇ ಬೇರೆ. ಆದರೆ, ಮನಸ್ಸಿಗೆ ತುಂಬಾ ನೋವಾಗುವುದೇ ಈ ಈ 23- 24 ವರ್ಷಕ್ಕೆ ಜೈಲು, ನ್ಯಾಯಾಂಗ ಬಂಧನ ಎಲ್ಲಾ ನೋಡಿಬಿಟ್ಟೆನಲ್ಲಾ ಅನ್ನೋದು. ಆದರೆ, ನಿಮ್ಮ ಮತ್ತು ಕುಟುಂಬದವರ ಬೆಂಬಲದಿಂದ ಬೇಗ ಹೊರಗೆ ಬಂದಿದ್ದೇನೆ" ಎಂದು ಸೋನು ಭಾವನಾತ್ಮಕವಾಗಿ ಮಾತನಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+