Sonu Nigam: ಕೊನೆಗೂ ಕ್ಷಮೆ ಕೇಳಿದ ಗಾಯಕ ಸೋನು ನಿಗಮ್

ಕನ್ನಡ ನೆಲದಲ್ಲಿ ಕನ್ನಡ ಹಾಡು ಹಾಡಿ ಅಂದಿದ್ದಕ್ಕೆ ಇದಕ್ಕೆ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಾಗಿದ್ದು ಎಂದು ಹೇಳಿದ್ದ ಸೋನು ನಿಗಮ್ ಕೊನೆಗೂ ಕನ್ನಡಿಗರ ಆಕ್ರೋಶಕ್ಕೆ ಮಣಿದಿದ್ದಾರೆ. ಸೋನು ನಿಗಮ್ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾದರೂ ನಾನು ತಪ್ಪೇ ಮಾಡಿಲ್ಲ, ಕಾರ್ಯಕ್ರಮದಲ್ಲಿ ಕೆಲವರು ಕೆರಳಿಸಿದ್ದಕ್ಕೆ ಆ ರೀತಿ ಉತ್ತರ ಕೊಟ್ಟಿದ್ದೆ ಎಂದು ತೇಪೆ ಹಾಕಲು ಪ್ರಯತ್ನಿಸಿದ್ದರು.

ಸೋನು ನಿಗಮ್ ಉದ್ಧಟತನದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸೋಮವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ನಡೆಸಿ ಸೋನು ನಿಗಮ್ ಅವರನ್ನು ಕನ್ನಡ ಚಲನಚಿತ್ರದಿಂದ ಬ್ಯಾನ್ ಮಾಡಲು ನಿರ್ಧಾರ ಮಾಡಲಾಯಿತು. ಕರ್ನಾಟಕದಲ್ಲಿ ಕಾರ್ಯಕ್ರಮ ಕೂಡ ನಡೆಸುವಂತಿಲ್ಲ ಎಂದು ತೀರ್ಮಾನಿಸಲಾಗಿತ್ತು.

sonu nigam apologize karnataka after link kannada to pahalgam attack

ಮತ್ತೆ ತೇಪೆ ಹಚ್ಚಲು ಪ್ರಯತ್ನ

ನಿಷೇಧದ ಬಳಿಕ ಕೂಡ ಉದ್ದನೆ ಪೋಸ್ಟ್ ಹಾಕಿದ್ದ ಸೋನು ನಿಗಮ್ ತಾನು ತಪ್ಪೇ ಮಾಡಿಲ್ಲ ಎಂದು ಸಮರ್ಥನೆ ಮಾಡಿಕೊಳ್ಳಲು ಪ್ರಯತ್ನಿಸಿದ್ದರು. ತಮ್ಮ ಪೋಸ್ಟ್‌ನಲ್ಲಿ "ನಾನು ಕರ್ನಾಟಕದಲ್ಲಿದ್ದಾಗ ಮಾತ್ರವಲ್ಲದೆ ಜಗತ್ತಿನ ಬೇರೆಡೆಯೂ ಭಾಷೆ, ಸಂಸ್ಕೃತಿ, ಸಂಗೀತ, ಸಂಗೀತಗಾರರು, ರಾಜ್ಯ ಮತ್ತು ಜನರಿಗೆ ಅಭೂತಪೂರ್ವ ಪ್ರೀತಿಯನ್ನು ನೀಡಿದ್ದೇನೆ. ವಾಸ್ತವವಾಗಿ, ಹಿಂದಿ ಸೇರಿದಂತೆ ಇತರ ಭಾಷೆಗಳ ಹಾಡುಗಳಿಗಿಂತ ನನ್ನ ಕನ್ನಡ ಹಾಡುಗಳನ್ನು ನಾನು ಹೆಚ್ಚು ಗೌರವಿಸಿದ್ದೇನೆ. ಇದಕ್ಕೆ ಸಾಕ್ಷಿಯಾಗಿ ಸಾಮಾಜಿಕ ಮಾಧ್ಯಮದಲ್ಲಿ 100 ಕ್ಕೂ ಹೆಚ್ಚು ವೀಡಿಯೊಗಳು ಪ್ರಸಾರವಾಗುತ್ತಿವೆ. ಕರ್ನಾಟಕದಲ್ಲಿ ಪ್ರತಿ ಸಂಗೀತ ಕಚೇರಿಗೆ ನಾನು ಸಿದ್ಧಪಡಿಸುವ ಕನ್ನಡ ಹಾಡುಗಳು ನನ್ನ ಬಳಿ ಇವೆ.

ಯಾರಿಂದಲೂ ಅವಮಾನವನ್ನು ಸಹಿಸಿಕೊಳ್ಳುವವನು ನಾನಲ್ಲ. ನನಗೆ 51 ವರ್ಷ, ನನ್ನ ಜೀವನದ ದ್ವಿತೀಯಾರ್ಧ ಮತ್ತು ನನ್ನ ಮಗನಂತಹ ಚಿಕ್ಕವನು ಭಾಷೆಯ ಹೆಸರಿನಲ್ಲಿ ಸಾವಿರಾರು ಜನರ ಮುಂದೆ ನೇರವಾಗಿ ನನ್ನನ್ನು ಬೆದರಿಸಿದ್ದಕ್ಕಾಗಿ ಕೋಪಗೊಳ್ಳುವ ಹಕ್ಕಿದೆ. ಇದು ನನ್ನ ಮೊದಲ ಹಾಡು ಮತ್ತು ನಾನು ಅವರನ್ನು ನಿರಾಸೆಗೊಳಿಸುವುದಿಲ್ಲ ಎಂದು ಹೇಳಿದೆ, ಆದರೆ ನಾನು ಯೋಜಿಸಿದ ರೀತಿಯಲ್ಲಿ ಅವರು ಸಂಗೀತ ಕಚೇರಿಯನ್ನು ಮುಂದುವರಿಸಲು ನನಗೆ ಅವಕಾಶ ನೀಡಬೇಕು. ಪ್ರತಿಯೊಬ್ಬ ಕಲಾವಿದರು ಹಾಡಿನ ಪಟ್ಟಿಯನ್ನು ಸಿದ್ಧಪಡಿಸಿರುತ್ತಾರೆ ಆದ್ದರಿಂದ ಸಂಗೀತಗಾರರು ಮತ್ತು ತಂತ್ರಜ್ಞರು ಸಿಂಕ್ ಆಗಿರುತ್ತಾರೆ. ಆದರೆ ಅವರು ಗದ್ದಲ ಸೃಷ್ಟಿಸಲು ಮತ್ತು ನನ್ನನ್ನು ಹುಚ್ಚುಚ್ಚಾಗಿ ಬೆದರಿಸಲು ಹಠ ಹಿಡಿದಿದ್ದರು. ತಪ್ಪು ಯಾರದು ಎಂದು ಹೇಳಿ?

ನಾನು ದೇಶಭಕ್ತನಾಗಿರುವುದರಿಂದ, ವಿಶೇಷವಾಗಿ ಪಹಲ್ಗಾಮ್‌ನಲ್ಲಿ ನಡೆದ ಘಟನೆಯ ನಂತರ ಭಾಷೆ, ಜಾತಿ ಅಥವಾ ಧರ್ಮದ ಹೆಸರಿನಲ್ಲಿ ದ್ವೇಷವನ್ನು ಸೃಷ್ಟಿಸಲು ಪ್ರಯತ್ನಿಸುವ ಯಾರನ್ನೂ ನಾನು ದ್ವೇಷಿಸುತ್ತೇನೆ. ನಾನು ಅವರಿಗೆ ಬುದ್ದಿ ಹೇಳಬೇಕಾಯಿತು ಅದನ್ನು ನಾನು ಮಾಡಿದೆ, ಸಾವಿರಾರು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅದಕ್ಕಾಗಿ ನನ್ನನ್ನು ಹುರಿದುಂಬಿಸಿದರು. ವಿಷಯ ಮುಗಿದು ನಾನು ಒಂದು ಗಂಟೆಗೂ ಹೆಚ್ಚು ಕಾಲ ಕನ್ನಡ ಗೀತೆಗಳನ್ನು ಹಾಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಇದೆಲ್ಲವೂ ಇದೆ.

ಇಲ್ಲಿ ತಪ್ಪು ಯಾರದು ಎಂದು ನಿರ್ಧರಿಸುವುದು ಕರ್ನಾಟಕದ ಪ್ರಜ್ಞಾವಂತ ಜನರಿಗೆ ಬಿಟ್ಟಿದ್ದೇನೆ. ನಿಮ್ಮ ತೀರ್ಪನ್ನು ನಾನು ಸೌಜನ್ಯದಿಂದ ಸ್ವೀಕರಿಸುತ್ತೇನೆ. ಕರ್ನಾಟಕದ ಕಾನೂನು ಸಂಸ್ಥೆಗಳು ಮತ್ತು ಪೊಲೀಸರನ್ನು ನಾನು ಸಂಪೂರ್ಣವಾಗಿ ಗೌರವಿಸುತ್ತೇನೆ ಮತ್ತು ನಂಬುತ್ತೇನೆ ಮತ್ತು ನನ್ನಿಂದ ನಿರೀಕ್ಷಿಸುವದನ್ನು ಅನುಸರಿಸುತ್ತೇನೆ. ನನಗೆ ಕರ್ನಾಟಕದಿಂದ ದೈವಿಕ ಪ್ರೀತಿ ಸಿಕ್ಕಿದೆ ಮತ್ತು ನಿಮ್ಮ ತೀರ್ಪು ಏನೇ ಇರಲಿ, ಯಾವುದೇ ದುರುದ್ದೇಶವಿಲ್ಲದೆ ಅದನ್ನು ಯಾವಾಗಲೂ ಪಾಲಿಸುತ್ತೇನೆ ಎಂದು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.

ಕ್ಷಮಿಸು ಕರ್ನಾಟಕ ಎಂದ ಸೋನು ನಿಗಮ್

ಕನ್ನಡ ಹಾಡು ಕೇಳಿದ್ದಕ್ಕೆ ಆಮೇಲೆ ಹಾಡುತ್ತೇನೆ ಎನ್ನುವುದು ಸರಿ, ಅವರು ಗೂಂಡಾಗಳಂತೆ ವರ್ತಿಸಿದ್ದರೆ ಅವರಿಗೆ ಬುದ್ದಿ ಹೇಳುವುದು ಸರಿ. ಆದರೆ ಕನ್ನಡ ಹಾಡು ಕೇಳಿದ್ದಕ್ಕೆ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಾಯಿತು ಎಂದು ಹೇಳುವುದು ಯಾವ ಲಾಜಿಕ್ ಎಂದು ಜನ ಪ್ರಶ್ನಿಸಿದ ಬೆನ್ನಲ್ಲೇ ಸೋನು ನಿಗಮ್ ಕೊನೆಗೂ ಕ್ಷಮೆ ಕೇಳಿದ್ದಾರೆ. "ಕ್ಷಮಿಸು ಕರ್ನಾಟಕ, ನಿಮ್ಮ ಮೇಲಿನ ಪ್ರೀತಿ, ನನ್ನ ಅಹಂಗಿಂತ ದೊಡ್ಡದು, ಯಾವಗಲೂ ಪ್ರೀತಿಸುತ್ತೇನೆ" ಎಂದು ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+