Sonakshi Sinha: ಮದುವೆಯಾಗಿ ಒಂದೇ ವಾರಕ್ಕೆ ಆಸ್ಪತ್ರೆಗೆ ಭೇಟಿ ನೀಡಿದ ಸೋನಾಕ್ಷಿ ಸಿನ್ಹಾ: ಕಾರಣವೇನು ತಿಳಿಯಿರಿ...
ಮದುವೆಯಾಗಿ ಕೇವಲ ಒಂದೇ ವಾರದಲ್ಲಿ ನಟಿ ಸೋನಾಕ್ಷಿ ಸಿನ್ಹಾ ಅವರು ಆಸ್ಪತ್ರೆಗೆ ತೆರಳಿದ್ದು ಅವರ ಅಭಿಮಾನಿಗಳಿಗೆ ಅನುಮಾನ ಮೂಡಿಸಿದೆ. ಹೀಗಾಗಿ ಸೋನಾಕ್ಷಿ ಗರ್ಭಿಣಿ ಎನ್ನುವ ಗಾಸಿಪ್‌ಗಳು ಹರಿದಾಡತೊಡಗಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳ ಸುದ್ದಿಗಳು ಬಹುಬೇಗ ವೈರಲ್ ಆಗಿಬಿಡುತ್ತವೆ. ಅದ್ರಲ್ಲೂ ಇತ್ತೀಚೆಗೆ ಮದುವೆಯಾದ ಹಾಗೂ ಮದುವೆಯಾಗಿ ಬ್ರೇಕಪ್ ಆದ ಸುದ್ದಿಗಳು ಹೆಚ್ಚೆಚ್ಚು ವೈರಲ್ ಆಗುತ್ತಿವೆ. ಇವುಗಳ ನಡುವೆ ಸೋನಾಕ್ಷಿ ಸದ್ದಿಲ್ಲದಂತೆ ಸುದ್ದಿಯಾಗಿದ್ದಾರೆ.

ಸೋನಾಕ್ಷಿ ಸಿನ್ಹಾ ಪ್ರೆಗ್ನೆಂಟ್ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಪ್ರೆಗ್ನೆಂಟ್ ಆಗುವುದು ಮದುವೆಗೂ ಮುಂಚೆ, ನಂತರ ಅವರು ಮದುವೆಯಾಗುತ್ತಾರೆ ಎನ್ನುವ ಸುದ್ದಿಗಳು ಇವೆ. ಇದನ್ನ ಅನೇಕರು ಫಾಲೋ ಕೂಡ ಮಾಡಿದ್ದಾರೆ. ಸೋನಾಕ್ಷಿ ಅವರನ್ನೂ ಇದೇ ಸಾಲಿಗೆ ಸೇರಿಸಲಾಗಿದೆ.
ಸೋನಾಕ್ಷಿ ಮದುವೆಗೂ ಮುನ್ನ ಪ್ರೆಗ್ನೆಂಟ್ ಆಗಿದ್ದಾರೆ. ಅದಕ್ಕಾಗಿ ಅವರು ಆಸ್ಪತ್ರೆಗೆ ಹೋಗುತ್ತಿದ್ದಾರೆ ಎನ್ನುವ ಚರ್ಚೆಗಳು ಶುರುವಾಗಿವೆ. ಆದರೆ ಸೋನಾಕ್ಷಿ ಸಿನ್ಹಾ ಈ ಬಗ್ಗೆ ಎಲ್ಲೂ ಕೂಡ ಮಾತನಾಡಿಲ್ಲ. ರಣ್‌ಬೀರ್ ಕಪೂರ್-ಅಲಿಯಾ ಭಟ್, ಹಾರ್ದಿಕ್ ಪಾಂಡ್ಯ-ನತಾಶಾ ಹಾಗೂ ಶ್ರೀದೇವಿ- ಬೋನಿ ಕಪೂರ್ ಜೋಡಿ ಸೇರಿದಂತೆ ಅನೇಕರು ಗರ್ಭಿಣಿ ಆದ ಬಳಿಕ ಮದುವೆಯಾಗಿದ್ದಾರೆ. ಈ ಸಾಲಿನಲ್ಲಿ ಸೋನಾಕ್ಷಿ ಕೂಡ ಇರಬಹುದು ಎನ್ನಲಾಗುತ್ತಿದೆ.
ಇದೇ ಜೂನ್ 23ರಂದು ಸೋನಾಕ್ಷಿ ಮತ್ತು ಜಹೀರ್ ಇಕ್ಬಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯನ್ನು ತರಾತುರಿಯಲ್ಲಿ ಮಾಡಿಕೊಂಡ ಈ ಜೋಡಿ ಕುಟುಂಬಸ್ಥರ ಸಮ್ಮುಖದಲ್ಲಿ ಸಪ್ತಪದಿ ತುಳಿಯಿತು. ಗರ್ಭಿಣಿ ಆದ ಕಾರಣಕ್ಕೆ ಸೋನಾಕ್ಷಿ ಅವರು ತರಾತುರಿಯಲ್ಲಿ ಗುಟ್ಟಾಗಿ ಮದುವೆ ಆಗಿದ್ದಾರೆ ಎಂದು ಅನುಮಾನಿಸಲಾಗುತ್ತಿದೆ. ಆದರೆ ಈ ಬಗ್ಗೆ ಸೋನಾಕ್ಷಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೆ ಸೋನಾಕ್ಷಿಯ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ.

2 ವರ್ಷದ ಹಿಂದೆ ಅರಳಿತ್ತು ಪ್ರೀತಿ
ಸದ್ಯ ಸೋನಾಕ್ಷಿಯ 2 ವರ್ಷದ ಪೋಸ್ಟ್ ಕೂಡ ವೈರಲ್ ಆಗುತ್ತಿದ್ದು, ಸೋನಾಕ್ಷಿ 2 ವರ್ಷಗಳ ಹಿಂದೆ ಜಹೀರ್ ಇಕ್ಬಾರ್ ಅವರನ್ನು ಪತಿಯಾಗಿ ಸ್ವೀಕರಿಸಿದ್ದರು ಎನ್ನಲಾಗ್ತಿದೆ. ಎರಡು ವರ್ಷಗಳ ಹಿಂದೆ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರಂತೆ.
ಆದರೆ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಎರಡು ವರ್ಷಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದ್ರೆ ಸೋನಾಕ್ಷಿ ಅವರ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ನೆಟ್ಟಿಗರು ಫೋಟೋ ಹಿಂದಿನ ಸೀಕ್ರೆಟ್ ತಿಳಿಸಿದ್ದಾರೆ. ಸೋನಾಕ್ಷಿ ಫೋಟೋವೊಂದರಲ್ಲಿ ಉಂಗುರವನ್ನು ಹಾಕಿಕೊಂಡು ಯಾರದ್ದೂ ಕೈ ಹಿಡಿದು ನಗುತ್ತಿದ್ದಾರೆ. ಈ ಫೋಟೋದಲ್ಲಿ ಇರುವ ವ್ಯಕ್ತಿ ಕೈ ಜಹೀರ್ ಇಕ್ಬಾಲ್ ಅವರದ್ದೇ ಎನ್ನಲಾಗುತ್ತಿದೆ.
ಗಾಸಿಪ್‌ಗೆ ಉತ್ತರ ನೀಡ್ತಾರಾ ಸೋನಾಕ್ಷಿ...
ಸೋನಾಕ್ಷಿ ಸಿನ್ಹಾ ಬಾಲಿವುಡ್‌ನ ಖ್ಯಾತ ನಟಿಯರ ಸಾಲಿನಲ್ಲಿ ಒಬ್ಬರು. ಅವರು ನಟಿಸಿದ ಕೆಲವೇ ಸಿನಿಮಾಗಳಿಂದಲೇ ಮನೆಮಾತಾದವರು. ದೊಡ್ಡು ಹಣೆಯ ಸುಂದರಿ ಅಂತಲೇ ಹೆಸರು ಪಡೆದ ಸೋನಾಕ್ಷಿ ನೃತ್ಯ, ಡೈಲಾಗ್ ಹಾಗೂ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಅಕ್ಷಯ್ ಕುಮಾರ್, ಸಲ್ಮಾನ್ ಖಾನ್ ಅವರೊಂದಿಗೆ ನಟಿಸುವ ಮೂಲಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

ಹೀಗೆ ಕಡಿಮೆ ಸಿನಿಮಾಗಳಲ್ಲಿ ನಟಿಸಿ ಹಿಟ್ ಆದ ಸೋನಾಕ್ಷಿ ಸದ್ಯ ದೊಡ್ಡ ಸುದ್ದಿಯಾಗಿದ್ದು ಅವರ ತರಾತುರಿ ಮದುವೆಯಿಂದಾಗಿ. ಸೋನಾಕ್ಷಿ ತಾವು ಮದುವೆಯಾಗುವ ವಿಚಾರ ಕುಟುಂಬಸ್ಥರನ್ನು ಬಿಟ್ಟರೆ ಯಾರಿಗೂ ತಿಳಿಸಿಲ್ಲ. ಇದನ್ನು ಯಾಕೆ ಗುಟ್ಟಾಗಿ ಇಟ್ಟರು ಎನ್ನುವ ಅನುಮಾನ ಮೂಡಿದೆ. ಅಷ್ಟಕ್ಕೂ ತರಾತರಿಯಲ್ಲಿ ಸೋನಾಕ್ಷಿ ಮದುವೆಯಾಗಲು ಕಾರಣ ಸೋನಾಕ್ಷಿ ಗರ್ಭಿಣಿ ಆಗಿರಬಹುದು ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ. ಇದಕ್ಕೆ ಸೋನಾಕ್ಷಿ ಉತ್ತರ ನೀಡುತ್ತಾರಾ ಎಂದು ಕಾದು ನೋಡಬೇಕಿದೆ.












Click it and Unblock the Notifications