Singer Prithwi Bhat: ಅಪ್ಪನ ವಿರೋಧದ ನಡುವೆ ಅಂದು ಮದುವೆ, ಈಗ ಅದ್ಧೂರಿ ರಿಸೆಪ್ಷನ್‌

ಸರಿಗಮಪ ಖ್ಯಾತಿಯ ಗಾಯಕಿ ಪೃಥ್ವಿ ಭಟ್‌ ಅವರ ವಿವಾಹ ಎರಡು ತಿಂಗಳ ಹಿಂದೆ ದೇವಸ್ಥಾನವೊಂದರಲ್ಲಿ ನಡೆದಿತ್ತು. ಪೋಷಕರ ವಿರೋಧದ ನಡುವೆಯೂ ಪೃಥ್ವಿ ಭಟ್‌ ಮದುವೆ ಮಾಡಿಕೊಂಡಿದ್ದರು. ತಿಂಗಳುಗಳು ಕಳೆದ ನಂತರ ಅವರು ಅದ್ಧೂರಿಯಾಗಿ ರಿಸೆಪ್ಷನ್‌ ಮಾಡಿಕೊಂಡಿದ್ದಾರೆ. ಖಾಸಗಿ ಚಾನಲ್‌ನಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್‌ ಎಂಬುವವರನ್ನು ಪ್ರೀತಿಸಿ ಗಾಯಕಿ ಮದುವೆಯಾಗಿದ್ದರು. ಈ ಮದುವೆಗೆ ಪೃಥ್ವಿ ಭಟ್‌ ತಂದೆ ವಿರೋಧಿಸಿದ್ದರು, ಅಲ್ಲದೆ ಗಂಭೀರ ಆರೋಪಗಳನ್ನು ಮಾಡಿದ್ದರಿಂದ ಭಾರೀ ವಿವಾದ ಸೃಷ್ಟಿಸಿತ್ತು.

ಪೋಷಕರ ವಿರೋಧದ ನಡುವೆಯೂ ಪೃಥ್ವಿ ಭಟ್‌ ಮಾರ್ಚ್‌ 27ರಂದು ದೇವಾಲಯವೊಂದರಲ್ಲಿ ಅಭಿಷೇಕ್‌ ಅವರನ್ನು ವಿವಾಹವಾಗಿದ್ದರು. ಪೃಥ್ವಿ ಭಟ್ ತಂದೆ ತನ್ನ ಮಗಳ ಮೇಲೆ ವಶೀಕರಣ ಮಾಡಿ, ಈ ಮದುವೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಈ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ಭಾರಿ ವಿವಾದಕ್ಕೂ ಕಾರಣವಾಗಿತ್ತು.

Singer Prithwi Bhat Hosts Grand Reception Amid Family Opposition Marriage

ಈ ಮದುವೆಗೆ ಪೃಥ್ವಿ ಭಟ್‌ ತಂದೆ ಅವರು ವಿರೋಧ ವ್ಯಕ್ತಪಡಿಸಿದ್ದರು. ಮನೆಯವರಿಗೆ ತಿಳಿಸದೆ ಪೃಥ್ವಿ ಭಟ್‌ ಮದುವೆಯಾಗಿದ್ದಕ್ಕೆ ಕೋಪಗೊಂಡಿದ್ದರು. ನನ್ನ ಮಗಳನ್ನು ವಶೀಕರಣ ಮಾಡಿ ಮದುವೆ ಮಾಡಿಸಿದ್ದಾರೆ. ಸಂಗೀತ ಪಾಠ ಹೇಳಿಕೊಡುವ ನರಹರಿ ದೀಕ್ಷಿತ್‌ ಇದಕ್ಕೆಲ್ಲ ಕಾರಣ ಎಂದು ಪೃಥ್ವಿ ಭಟ್‌ ತಂದೆ ಶಾಕಿಂಗ್‌ ಆರೋಪ ಮಾಡಿದ್ದರು. ಇದು ಆಗ ದೊಡ್ಡ ಸುದ್ದಿಯಾಗಿತ್ತು.

ಮಗಳು ಮದುವೆಯಾಗುವ ದಿನ ಬೆಳಗ್ಗೆಯಾದರೂ ನನಗೆ ವಿಷಯ ಹೇಳಬಹುದಿತ್ತು. ನಮ್ಮ ಜೀವನದಲ್ಲಿ ಧಾರೆ ಎರೆಯುವ ಒಂದೇ ಒಂದು ಅವಕಾಶವನ್ನು ಕೂಡ ಕಸಿದುಕೊಂಡರು. ಇಂತವರನ್ನು ನಂಬಿ ಹೆಣ್ಣು ಮಕ್ಕಳನ್ನು ಸಂಗೀತ ತರಗತಿಗೆ ಕಳುಹಿಸುವುದು ಹೇಗೆ ಎಂದು ಆರೋಪಿಸಿದ್ದರು. ಈ ಆಡಿಯೋ ವೈರಲ್‌ ಆದ ಬೆನ್ನಲ್ಲೇ ಪೃಥ್ವಿ ಭಟ್ ತಮ್ಮ ಮದುವೆಯಲ್ಲಿ ನರಹರಿ ದೀಕ್ಷಿತ್‌ ಅವರ ಪಾತ್ರ ಏನು ಇಲ್ಲ ಎಂದು ಸ್ಪಷ್ಟಪಡಿಸಿದ್ದರು.

ಆರತಕ್ಷತೆಗೆ ಸೆಲೆಬ್ರಿಟಿಗಳ ದಂಡು

ಈ ಎಲ್ಲ ಗಲಾಟೆ ತಣ್ಣಗಾದ ಬಳಿ ಗಾಯಕಿ ಪೃಥ್ವಿ ಭಟ್ ಹಾಗೂ ಅಭಿಷೇಕ್ ದಂಪತಿ ಅದ್ಧೂರಿಯಾಗಿ ತಮ್ಮ ಆರತಕ್ಷತೆಯನ್ನು ಹಮ್ಮಿಕೊಂಡಿದ್ದಾರೆ. ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಸರಿಗಮಪ ಕಾರ್ಯಕ್ರಮದ ಗಾಯಕರು, ತೀರ್ಪುಗಾರರು, ಜೀ ಕನ್ನಡ ವಾಹಿನಿ ಸಿಬ್ಬಂದಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ಆಗಮಿಸಿ ಹೊಸಜೋಡಿಗೆ ಶುಭಹಾರೈಸಿದ್ದಾರೆ.

ಈ ರಿಸೆಪ್ಷನ್‌ಗೆ ಗಾಯಕ ವಿಜಯ್‌ ಪ್ರಕಾಶ್‌ ದಂಪತಿ, ಆಂಕರ್‌ ಅನುಶ್ರೀ, ನಟಿ ಮೋಕ್ಷಿತಾ ಪೈ, ಬಿಗ್ಬಾಸ್ ಸೀಸನ್ 11ರ ವಿನ್ನರ್ ಹನುಮಂತ ಲಮಾಣಿ, ನಟ ಒಳ್ಳೆ ಹುಡುಗ ಪ್ರಥಮ್, ಸಿಂಗರ್ ಸುನೀಲ್, ಹಂಸಲೇಖ ಪತ್ನಿ ಲತಾ ಸೇರಿದಂತೆ ಸೆಲೆಬ್ರಿಟಿಗಳ ದಂಡೇ ಇಲ್ಲಿಗೆ ಬಂದು ಶುಭಹಾರೈಸಿದೆ.

ಪೃಥ್ವಿ ಭಟ್ ಮದುವೆಗೆ ಬಂದಿದ್ದ ಹನುಮಂತು ಲಮಾಣಿ ವಿಶೇಷವಾಗಿ ಹಾಡನ್ನು ಹಾಡುವ ಮೂಲಕ ನವ ಜೋಡಿಗೆ ಅಭಿನಂದಿಸಿದ್ದಾರೆ. ವೇದಿಕೆ ಮೇಲೆ ನಿನ್ನ ಮಾರಿ ನೋಡಂಗ್ ಆಗೈತಿ ಎಂಬ ಫೇಮಸ್ ಸಾಂಗ್ ಅನ್ನು ಹಾಡಿದ್ದಾರೆ. ಈ ವೇಳೆ ಹನುಮಂತು ಜೊತೆಗೆ ಪೃಥ್ವಿ ಭಟ್ ಕೂಡ ಧ್ವನಿಗೂಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+