ಅನುಶ್ರೀನ ಮಿಸ್ ಮಾಡಿಕೊಳ್ಳುತ್ತೇನೆ ಎಂದ ಪುಟಾಣಿ: ಮುದ್ದಾದ ವಿಡಿಯೋ ವೈರಲ್!
ಆ್ಯಂಕರ್ ಅನುಶ್ರೀ ಕನ್ನಡದ ಟಾಪ್ ಆ್ಯಂಕರ್‌ಗಳಲ್ಲಿ ಒಬ್ಬರಾಗಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅನುಶ್ರೀ ಅವರ ನಿರೂಪಣೆಯಿಂದಲೇ ಹಲವು ಕಾರ್ಯಕ್ರಮಗಳು ಹಿಟ್ ಆಗಿರುವುದು ಸಹ ಇದೆ. ಅನುಶ್ರೀ ಇದ್ದಲ್ಲಿ ಕಾಮಿಡಿ & ಸೆಂಟಿಮೆಂಟ್ ಇದ್ದೇ ಇರುತ್ತೆ ಎನ್ನುವುದು ಹಲವರ ಅಭಿಪ್ರಾಯ. ಇನ್ನು ಜೀ ಸರಿಗಮಪದಲ್ಲಿ ಅನುಶ್ರೀ ಅವರ ನಿರೂಪಣೆಗೆ ಸಪರೇಟ್ ಫ್ಯಾನ್ ಬೇಸ್ ಇದೆ. ಅಲ್ಲದೇ ಇದೀಗ ಸರಿಗಮಪದಲ್ಲಿ ಅನುಶ್ರೀ ಹಾಗೂ ಪುಟಾಣಿ ಗಾಯಕ ಮನೋಜ್ ಭಾರ್ಗವ್ ಅವರು ಮಾತನಾಡಿರುವ ಮುದ್ದಾದ ವಿಡಿಯೋ ವೈರಲ್ ಆಗುತ್ತಿದೆ.
ಅನುಶ್ರೀ ಕನ್ನಡ ಸಿನಿಮಾರಂಗದ ನಿರೂಪಕಿಯಾಗಿದ್ದಾರೆ. ಟೆಲಿ ಅಂತ್ಯಾಕ್ಷರಿ ಎನ್ನುವ ಕಾರ್ಯಕ್ರಮದ ಮೂಲಕ ಅವರು ಕಿರುತೆರೆಗೆ ನಿರೂಪಕಿಯಾಗಿ ಎಂಟ್ರಿ ಕೊಟ್ಟರು. ಅಲ್ಲದೇ ಕನ್ನಡದ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಬೆಂಕಿಪಟ್ಟಣ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ್ದರು. ಇನ್ನು ಮುರಳಿ ಮೀಟ್ಸ್ ಮೀರಾ ಸಿನಿಮಾದ ಡಬ್ಬಿಂಗ್‌ಗಾಗಿ ಇವರಿಗೆ ರಾಜ್ಯ ಪ್ರಶಸ್ತಿಯೂ ಸಂದಿದೆ.

ಸರಿಗಮಪದಲ್ಲಿ ಬಾಲ ಗಾಯಕ ಮನೋಜ್ ಭಾರ್ಗವ್ ಅವರು ಹಾಡಿನ ಮೂಲಕ ಮಾತ್ರವಲ್ಲ. ಅವರ ಅಭಿನಯ ಹಾಗೂ ಹಾಸ್ಯದಿಂದಲೂ ಫೇಮಸ್ ಆಗಿದ್ದರು. ಸರಿಗಮಪ ವೇದಿಕೆಯ ಮೇಲೆ ಮನೋಜ್ ಭಾರ್ಗವ್ ಹಾಗೂ ಅನುಶ್ರೀ ಮಾತನಾಡುವುದು ವೀಕ್ಷಕರಿಗೆ ಭಾರೀ ಮಜಾ ಕೊಡುತ್ತಿತ್ತು. ತಾಯಿ - ಮಗ ತಮಾಷೆ ಮಾಡುವಂತಿದೆ ಅಂತ ಪ್ರೇಕ್ಷಕರೇ ಕಮೆಂಟ್ ಮಾಡಿರುವುದಿದೆ. ಅನುಶ್ರೀ ಸಹ ದೊಡ್ಡವರೊಂದಿಗೆ ಹಾಗೂ ಸಣ್ಣ ಮಕ್ಕಳೊಂದಿಗೆ ಬೆರೆಯುವುದು ಇದೆ. ಇದೇ ಕಾರಣಕ್ಕೆ ಜನ ಮೆಚ್ಚಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಅನುಶ್ರೀ ಅವರು, ಮನೋಜ್ ಭಾರ್ಗವ್ ಅವರೊಂದಿಗೆ ಮಾತನಾಡುತ್ತಾ ಈ ಸೀಸನ್‌ನ ಅನುಭವ ಹೇಗಿತ್ತು ಅಂತ ಕೇಳಿದ್ದಾರೆ. ಇದಕ್ಕೆ ಮನೋಜ್ ಭಾರ್ಗವ್, ನಾನು ಈ ಸೀಸನ್‌ನಲ್ಲಿ ತುಂಬಾ ಕಲಿತುಕೊಂಡಿದ್ದೇನೆ. ಅಲ್ಲದೇ ಈ ಸೀಸನ್‌ನಲ್ಲಿ ಸಂಗೀತಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಕಲಿಯುವುದಕ್ಕೆ ಅವಕಾಶ ಸಿಕ್ಕಿತು ಅಂತ ಸಹ ಹೇಳಿದ್ದಾರೆ.
ಇಲ್ಲಿಂದ ಹೋದ ಮೇಲೆ ಯಾರನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತೀಯಾ ಎನ್ನುವ ಪ್ರಶ್ನೆಗೆ ನಿಮ್ಮನ್ನೇ (ಅನುಶ್ರೀ) ಅಂತ ಹೇಳಿದ್ದಾರೆ. ಅನುಶ್ರೀ ಹಾಗೂ ಮನೋಜ್ ಭಾರ್ಗವ್ ಮಾತನಾಡುವುದು ಯಾವಾಗಲೂ ಗಮನ ಸೆಳೆಯುತ್ತಿತ್ತು. ಇಬ್ಬರೂ ಮಾತನಾಡುವುದು ಹಾಗೂ ಕಾಮಿಡಿ ಮಾಡುವುದನ್ನು ಜನ ಎಂಜಾಯ್ ಮಾಡುತ್ತಿದ್ದರು. ಆದರೆ, ಇನ್ಮುಂದೆ ನಾವು ಈ ಸಂಭಾಷಣೆಯನ್ನು ಮಿಸ್ ಮಾಡಿಕೊಳ್ಳಲಿದ್ದೇವೆ. ಇಬ್ಬರೂ ಕಾರ್ಯಕ್ರಮದಲ್ಲಿ ಜವಾಬ್ದಾರಿಯಿಂದ ನಡೆದುಕೊಂಡಿದ್ದರು ಅಂತ ಪ್ರೇಕ್ಷಕರು ಹೇಳುತ್ತಿದ್ದಾರೆ.
ಅನುಶ್ರೀ ಅವರನ್ನು ಮಿಸ್ ಮಾಡಿಕೊಳ್ಳುತ್ತೇನೆ ಅಂತ ಮನೋಜ್ ಭಾರ್ಗವ್ ಅವರು ಹೇಳಿದ ಮೇಲೆ ಅನುಶ್ರೀ ಅವರು ಮನೋಜ್ ಭಾರ್ಗವ್‌ನನ್ನು ತಬ್ಬಿಕೊಂಡು ಹಣೆಗೆ ಮುತ್ತಿಟ್ಟಿದ್ದಾರೆ. ತಾಯಿಯ ಅಪ್ಪುಗೆ... ಎನ್ನುವ ಸಾಂಗ್ ಬ್ಯಾಗ್ ಗ್ರೌಂಡ್‌ನಲ್ಲಿ ಪ್ಲೇ ಆಗಿದ್ದು ಭಾವನಾತ್ಮಕ ಕ್ಷಣಗಳಿಗೆ ವೇದಿಕೆ ಸಾಕ್ಷಿಯಾಗಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.












Click it and Unblock the Notifications