Siddharth Venugopal: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕಿರುತೆರೆ ಜನಪ್ರಿಯ ನಟ ಸಿದ್ಧಾರ್ಥ್ ವೇಣುಗೋಪಾಲ್ ನಿಧನ

ಮಲಯಾಳಂ ಕಿರುತೆರೆಯ ಖ್ಯಾತ ನಟ ಸಿದ್ಧಾರ್ಥ್ ವೇಣುಗೋಪಾಲ್ (41) ಅವರು ನಿಧನರಾಗಿದ್ದಾರೆ. ಅಭಿಮಾನಿಗಳಿಂದ 'ವಿನಿಶ್' ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಅವರು, ಸೂಪರ್ ಹಿಟ್ ಧಾರಾವಾಹಿ 'ಕಸ್ತೂರಿಮಾನ್' ಮೂಲಕ ಮನೆಮಾತಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಕ್ಯಾನ್ಸರ್ ಕಾಯಿಲೆಯ ವಿರುದ್ಧ ಹೋರಾಡುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಅವರ ಹಠಾತ್ ನಿಧನವು ಮಲಯಾಳಂ ಚಿತ್ರರಂಗ, ಅಭಿಮಾನಿಗಳು ಮತ್ತು ಅವರ ಕುಟುಂಬಕ್ಕೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ.

ಸಿದ್ಧಾರ್ಥ್ ಅವರ ಸಾವಿನ ಸುದ್ದಿಯನ್ನು ಹಿರಿಯ ನಟಿ ಸೀಮಾ ಜಿ. ನಾಯರ್ ಅವರು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ಸಿದ್ಧಾರ್ಥ್ ಅವರ ಅನಾರೋಗ್ಯದ ಸಮಯದಲ್ಲಿ ಸೀಮಾ ಅವರು ಬೆನ್ನೆಲುಬಾಗಿ ನಿಂತು ಸಹಾಯ ಮಾಡಿದ್ದರು. "ಅವನ ಚೇತರಿಕೆಗಾಗಿ ನಾನು ನನ್ನ ಶಕ್ತಿ ಮೀರಿ ಶ್ರಮಿಸಿದೆ, ಆದರೆ ಇಂದು ಅವನು ನಮ್ಮನ್ನು ಅಗಲಿರುವುದು ಹೃದಯವಿದ್ರಾವಕವಾಗಿದೆ. ಸಾವು ಅವನ ನೋವಿಗೆ ಅಂತ್ಯ ಹಾಡಿದ್ದರೂ, ಅವನ ಅಗಲಿಕೆ ನನ್ನನ್ನು ಮಾನಸಿಕವಾಗಿ ಕುಗ್ಗಿಸಿದೆ" ಎಂದು ಅವರು ಭಾವುಕರಾಗಿ ಬರೆದುಕೊಂಡಿದ್ದಾರೆ.

Siddharth Venugopal

ಚಿತ್ರರಂಗದ ಸಂತಾಪ

ನಟ ಕಿಶೋರ್ ಸತ್ಯ ಸೇರಿದಂತೆ ಅನೇಕ ಗಣ್ಯರು ಸಿದ್ಧಾರ್ಥ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಸಿದ್ಧಾರ್ಥ್ ಒಬ್ಬ ಪ್ರತಿಭಾವಂತ ನಟನಾಗಿದ್ದರು ಮತ್ತು ಅಕಾಲಿಕವಾಗಿ ನಮ್ಮನ್ನು ಬಿಟ್ಟು ಹೋಗಿದ್ದಾರೆ ಎಂದು ಅವರು ಸ್ಮರಿಸಿದ್ದಾರೆ. ಸಿದ್ಧಾರ್ಥ್ ಅವರ ಹೋರಾಟದ ದಿನಗಳನ್ನು ನೆನೆಯುತ್ತಾ ಭಾವುಕರಾಗಿ ಮಾತನಾಡಿದ್ದಾರೆ. "ಮತ್ತೊಬ್ಬ ಪ್ರತಿಭಾವಂತ ಕಲಾವಿದನನ್ನು ನಾವು ಬೇಗನೆ ಕಳೆದುಕೊಂಡಿದ್ದೇವೆ. ಸಿದ್ಧಾರ್ಥ್ ವೇಣುಗೋಪಾಲ್ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದರು. ಅವರು ಕಳೆದ ಕೆಲವು ಸಮಯದಿಂದ ಕ್ಯಾನ್ಸರ್ (Cancer) ಕಾಯಿಲೆಯ ವಿರುದ್ಧ ಹೋರಾಡುತ್ತಿದ್ದರು" ಎಂದು ತಿಳಿಸಿದ್ದಾರೆ. ಸಿದ್ಧಾರ್ಥ್ ಅವರ ಕಷ್ಟದ ಸಮಯದಲ್ಲಿ ನೆರವಾದ ಸೀಮಾ ಜಿ.ನಾಯರ್ ಅವರ ಕಾರ್ಯವನ್ನು ಕಿಶೋರ್ ಶ್ಲಾಘಿಸಿದ್ದಾರೆ. ಸಂಕಷ್ಟದಲ್ಲಿರುವ ಕಲಾವಿದರ ಪರವಾಗಿ ನಿಲ್ಲುವ ಮಲಯಾಳಂ ಚಿತ್ರರಂಗದ ಗುಣವನ್ನು ನೆನೆಯುತ್ತಾ, ಸಿದ್ಧಾರ್ಥ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ಆರಂಭಿಕ ಮತ್ತು ವೃತ್ತಿಜೀವನ

ಮೂಲತಃ ತ್ರಿಶೂರ್ ಜಿಲ್ಲೆಯ ಚಾಲಕುಡಿಯವರಾದ ಸಿದ್ಧಾರ್ಥ್ ವೇಣುಗೋಪಾಲ್, ಕಾಲೇಜು ದಿನಗಳಲ್ಲೇ ನಟನೆಯತ್ತ ಆಸಕ್ತಿ ಬೆಳೆಸಿಕೊಂಡಿದ್ದರು. ತಮ್ಮ ವೃತ್ತಿಜೀವನವನ್ನು ಮೊದಲು ನಿರೂಪಕರಾಗಿ ಆರಂಭಿಸಿದ ಅವರು, ನಂತರ ನಿಧಾನವಾಗಿ ಕಿರುತೆರೆ ನಟನೆಯತ್ತ ಹೆಜ್ಜೆ ಇಟ್ಟರು. ಸಿದ್ಧಾರ್ಥ್ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿದ್ದು 'ಕಸ್ತೂರಿಮಾನ್' ಧಾರಾವಾಹಿ. ಈ ಧಾರಾವಾಹಿಯ ಇವರ ಅಭಿನಯ ಎಷ್ಟೊಂದು ಪ್ರಭಾವಶಾಲಿಯಾಗಿತ್ತೆಂದರೆ, ಜನರು ಇವರನ್ನು ಪಾತ್ರದ ಹೆಸರಿನಿಂದಲೇ ಗುರುತಿಸಲು ಶುರುಮಾಡಿದರು. ಇದೇ ಕಾರಣಕ್ಕೆ ಅವರು ತಮ್ಮ ಜನ್ಮನಾಮವಾದ 'ವಿನಿಶ್' ಬದಲಿಗೆ ವೃತ್ತಿಜೀವನದಲ್ಲಿ 'ಸಿದ್ಧಾರ್ಥ್' ಎಂಬ ಹೆಸರನ್ನೇ ಉಳಿಸಿಕೊಂಡರು.

'ಕಸ್ತೂರಿಮಾನ್' ಧಾರಾವಾಹಿಯನ್ನು ಅವರು ಮಧ್ಯದಲ್ಲೇ ಬಿಟ್ಟರೂ ಸಹ, ಪ್ರೇಕ್ಷಕರು ಇವರನ್ನು ಮರೆಯಲಿಲ್ಲ. ಆನಂತರ ಅವರು 'ಭಾಗ್ಯಜಾತಕಂ' ಎಂಬ ಧಾರಾವಾಹಿಯಲ್ಲಿ ನಟಿ ಶಫ್ನಾ ಅವರಿಗೆ ಜೋಡಿಯಾಗಿ ನಾಯಕ ನಟನಾಗಿ ನಟಿಸಿ ಯಶಸ್ವಿಯಾದರು. ಸಿದ್ಧಾರ್ಥ್ ಅವರು ತಾಯಿ ಮತ್ತು ಒಬ್ಬ ತಮ್ಮನನ್ನು ಅಗಲಿದ್ದಾರೆ. ಕಿರುತೆರೆ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಸಿದ್ಧಾರ್ಥ್, ಸಹೋದ್ಯೋಗಿಗಳು ಮತ್ತು ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+