Shiva Rajkumar: ಶಿವರಾಜ್ ಕುಮಾರ್ ಆಪರೇಷನ್ ಯಶಸ್ವಿ, ಬೆಂಗಳೂರಿಗೆ ಯಾವಾಗ ಬರ್ತಾರೆ ?
ನಟ ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿ ನಡೆದಿದ್ದು, ಅವರು ಇಷ್ಟರಲ್ಲೇ ಬೆಂಗಳೂರಿಗೆ ಹಿಂದಿರುಗಲಿದ್ದಾರೆ ಎಂದು ವರದಿಯಾಗಿದೆ. ಕಳೆದ ಕೆಲವು ದಿನಗಳಿಂದ ನಟ ಶಿವರಾಜ್ ಕುಮಾರ್ ಅವರ ಅನಾರೋಗ್ಯ ಸಮಸ್ಯೆಯು ಡಾ. ರಾಜ್‌ಕುಟುಂಬದಲ್ಲಿ ಹಾಗೂ ಶಿವರಾಜ್ ಕುಮಾರ್ ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿತ್ತು. ನಟ ಶಿವರಾಜ್ ಕುಮಾರ್ ಅವರು ಸಹ ಆಪರೇಷನ್‌ನ ಬಗ್ಗೆ ಸಣ್ಣ ಆತಂಕ ಇದೆ ಎಂದು ಹೇಳಿದ್ದರು. ಈಗ ಆ ಆತಂಕಗಳು ಕೊನೆಯಾಗಿವೆ. ಡಿಸೆಂಬರ್ 24ರ ಸಂಜೆ ಅಮೆರಿಕದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದಿದೆ ಎನ್ನಲಾಗಿದೆ.
ಶಿವರಾಜ್‌ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿ ಆಗಬೇಕು ಎಂದು ಅವರ ಅಭಿಮಾನಿಗಳು ಹಾಗೂ ಕುಟುಂಬಸ್ಥರು ಹೋಮ - ಹವನ ಹಾಗೂ ಪೂಜೆಗಳನ್ನು ಮಾಡಿದ್ದರು. ಕರ್ನಾಟಕದ ವಿವಿಧ ಭಾಗದಲ್ಲಿ ಅನ್ನಸಂತರ್ಪಣೆ ಸಹ ಮಾಡಲಾಗಿತ್ತು. ರಾಜ್ಯದ ನಟ, ನಟಿಯರು ಸಹ ಶಿವಣ್ಣ ಆರೋಗ್ಯವಾಗಿ ಹಿಂದಿರುಗಬೇಕು ಎಂದು ಪ್ರಾರ್ಥನೆ ಮಾಡಿದ್ದರು. ಅಲ್ಲದೆ ದೇಶದ ಹಲವು ಗಣ್ಯರು ಹಾಗೂ ಸಿನಿಮಾ ನಟ - ನಟಿಯರು ಶಿವರಾಜ್ ಕುಮಾರ್ ಅವರಿಗೆ ಧೈರ್ಯ ತುಂಬಿದ್ದರು. ಬೇಗ ಗುಣಮುಖರಾಗಿ ಬರಲಿ ಎಂದು ಆಶಿಸಿದ್ದರು.
ಶಿವಣ್ಣ ಆರೋಗ್ಯದ ಬಗ್ಗೆ ಮಾಹಿತಿ ಕೊಟ್ಟ ವೈದ್ಯರು
ಡಾ. ಶಿವರಾಜ್‌ಕುಮಾರ್ ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಈ ಶಸ್ತ್ರಚಿಕಿತ್ಸೆಯನ್ನು ಡಾ. ಮುರುಗೇಶ ಮನೋಹರನ್ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನೆರವೇರಿಸಲಾಗಿದೆ. ಶಸ್ತ್ರಚಿಕಿತ್ಸೆಯ ವೇಳೆ ಮತ್ತು ಶಸ್ತ್ರಚಿಕಿತ್ಸೆ ನಂತರದ ಆರೈಕೆ ಸಮಯದಲ್ಲಿ ಡಾ. ಶಿವರಾಜ್‌ಕುಮಾರ್ ಅವರ ಆರೋಗ್ಯ ಸ್ಥಿತಿಯು ಸ್ಥಿರವಾಗಿತ್ತು ಎಂದು ಅವರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಅವರ ಚೇತರಿಕೆ ಕುರಿತು ಮುಂದಿನ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ಹಂಚಿಕೊಳ್ಳಲಾಗುವುದು ಎಂದು ವೈದ್ಯರು ವಿಡಿಯೋ ಸಂದೇಶದ ಮೂಲಕ ತಿಳಿಸಿದ್ದಾರೆ.

ಶಿವರಾಜ್‌ಕುಮಾರ್ ಅವರಿಗೆ ಏನಾಗಿತ್ತು
ನಟ ಶಿವರಾಜ್‌ಕುಮಾರ್ ಅವರಿಗೆ ಕ್ಯಾನ್ಸರ್ ಸಮಸ್ಯೆ ಇರುವುದು ವರದಿಯಾಗಿತ್ತು. ಈ ವಿಷಯವನ್ನು ಶಿವರಾಜ್ ಕುಮಾರ್ ಅವರೇ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು. ಶಿವರಾಜ್ ಕುಮಾರ್ ಅವರಿಗೆ ಆರೋಗ್ಯ ಸಮಸ್ಯೆ ಇದೆ ಎಂದಷ್ಟೇ ಹೇಳಲಾಗಿತ್ತು. ಈ ವಿಷಯದಲ್ಲಿ ಎಲ್ಲರೂ ಅತ್ಯಂತ ಸೂಕ್ಷ್ಮವಾಗಿ ವರ್ತಿಸಿದ್ದರು. ಶಿವರಾಜ್ ಕುಮಾರ್ ಅವರೇ ಅವರಿಗೆ ಆಪರೇಷನ್ ನಡೆಯಲಿರುವ ವಿಚಾರವನ್ನು ಬಹಿರಂಗಪಡಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಅಮೆರಿಕದ ಪ್ರತಿಷ್ಠಿತ ಫ್ಲೋರಿಡಾದ್ಲಿರುವ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಸರ್ಜರಿ ನಡೆದಿದೆ.
ಡಾ. ಮುರುಗೇಶ್ ಎನ್ನುವವರ ನೇತೃತ್ವದಲ್ಲಿ ಈ ಆಪರೇಷನ್ ಮಾಡಲಾಗಿದೆ.
ಮಂಗಳವಾರ ಈ ಆಪರೇಷನ್ ನಡೆದಿದ್ದು, ಇದು ಸುದೀರ್ಘ ಆಪರೇಷನ್ ಆಗಿತ್ತು ಅಂದಾಜು 5 ಗಂಟೆಗೂ ಹೆಚ್ಚಿನ ಅವಧಿ ಆಪರೇಷನ್ ನಡೆದಿದೆ ಎನ್ನಲಾಗಿದೆ. ಆಪರೇಷನ್ ಮುಗಿದ ಮೇಲೆ ಬೆಂಗಳೂರಿಗೆ ಹಿಂದಿರುಗುವುದಾಗಿ ಶಿವರಾಜ್‌ಕುಮಾರ್ ಅವರು ಹೇಳಿದ್ದರು. ಆಪರೇಷನ್‌ಗೆಂದು ಬೆಂಗಳೂರಿನಿಂದ ಅಮೆರಿಕಗೆ ಹೋಗುವ ಮುನ್ನ ಅವರು ಭಾವುಕ ಸಂದೇಶ ಹಂಚಿಕೊಂಡಿದ್ದರು.

ವಿಡಿಯೋ ಕಾಲ್ ವೈರಲ್: ನಟ ಶಿವರಾಜ್ ಕುಮಾರ್ ಅವರು ಅವರ ಅಭಿಮಾನಿಗಳೊಂದಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿರುವುದು ವೈರಲ್ ಆಗಿದೆ. ಆಪರೇಷನ್‌ಗು ಮುಂಚೆ ಶಿವಣ್ಣ ಅವರು ವಿಡಿಯೋ ಕಾಲ್ ಮಾಡಿದ್ದರು. ಈ ವಿಡಿಯೋ ಹಾಗೂ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮುಂದಿನ ತಿಂಗಳು ಬೆಂಗಳೂರಿಗೆ ಶಿವಣ್ಣ
ಶಿವಣ್ಣ ಅವರಿಗೆ ಮಂಗಳವಾರ ಆಪರೇಷನ್ ಆಗಿದ್ದು, ಇನ್ನೊಂದು ತಿಂಗಳು ಅಮೆರಿಕದಲ್ಲೇ ಚಿಕಿತ್ಸೆ ಹಾಗೂ ವಿಶ್ರಾಂತಿ ಮುಂದುವರಿಯಲಿದೆ ಎಂದು ವರದಿಯಾಗಿದೆ. ನಟ ಶಿವರಾಜ್ ಕುಮಾರ್ ಅವರಿಗೆ ಆಪರೇಷನ್ ಯಶಸ್ವಿಯಾಗಿ ಆಗಿದೆ. ಆದರೆ, ಚಿಕಿತ್ಸೆ ಮುಂದುವರಿಸಬೇಕಿದೆ ಹಾಗೂ ವಿಶ್ರಾಂತಿಯ ಅವಶ್ಯಕತೆಯು ಇದೆ. ಹೀಗಾಗಿ, ವಿಶ್ರಾಂತಿ ಮುಗಿಸಿ ಶಿವರಾಜ್ ಕುಮಾರ್ ಅವರು ಜನವರಿ 26ಕ್ಕೆ ಬೆಂಗಳೂರಿಗೆ ಹಿಂದಿರುಗಲಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications