ಜೀ ಕನ್ನಡದ ಸರಿಗಮಪ ಕಾರ್ಯಕ್ರಮಕ್ಕೆ ಸರ್ಪ್ರೈಸ್ ಎಂಟ್ರಿ ಕೊಟ್ಟ ಶಿವಣ್ಣ, ಗೀತಕ್ಕ
ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಎಂಗ್ ಆ್ಯಂಡ್ ಎನೆರ್ಜಿಟಿಕ್ ಹೀರೋ ನಮ್ಮ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಅರವತ್ತು ಪ್ಲಸ್ ವಯಸ್ಸಾಗಿರುವ ಶಿವಣ್ಣ ಅವರ ಎನೆರ್ಜಿಗೆ ಹಾಗೂ ವಿಲ್ ಪವರ್‌ಗೆ ಮ್ಯಾಚ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಕ್ಯಾನ್ಸರ್ ಚಿಕಿತ್ಸೆ ಪಡೆದು ಬೆಂಗಳೂರಿಗೆ ವಾಪಸ್ ಆಗಿರುವ ಶಿವಣ್ಣ ಇದೀಗ ದಿಢೀರ್ ಕಾರ್ಯಕ್ರಮವೊಂದರ ವೇದಿಕೆ ಮೇಲೆ ಪ್ರತ್ಯಕ್ಷ ಆಗಿದ್ದಾರೆ.
ಕರುನಾಡ ಚರ್ಕವರ್ತಿ ಶಿವರಾಜ್ ಕುಮಾರ್ ಅವರು ಕಳೆದ ಕೆಲವು ತಿಂಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿರುವ ವಿಚಾರ ಹೊರ ಬಿದ್ದಿತ್ತು. ಶಿವಣ್ಣಗೆ ಅನಾರೋಗ್ಯದ ವಿಚಾರ ತಿಳಿದು ಅಭಿಮಾನಿಗಳು ಬೇಸರಗೊಂಡಿದ್ದು, ಅವರು ಬೇಗ ಹುಷಾರಾಗಲಿ ಎಂದು ಹಾರೈಸಿ ಪೂಜೆ-ಪ್ರಾರ್ಥನೆಗಳನ್ನು ಮಾಡಿದ್ದರು.

ಅಭಿಮಾನಿಗಳ ಪ್ರಾರ್ಥನೆ, ಕುಟುಂಬಸ್ಥರ ಶ್ರಮ, ಆಪ್ತರ ಹಾರೈಕೆ ಹಾಗೂ ತಮ್ಮ ವಿಲ್ ಪವರ್‌ನಿಂದ ಶಿವಣ್ಣ ಆಪರೇಷನ್ ಬಳಿಕ ಬಹುಬೇಗ ಚೇತರಿಸಿಕೊಂಡಿದ್ದಾರೆ. ಅಲ್ಲದೇ ಸಾಲು ಸಾಲು ಸಿನಿಮಾಗಳು, ಕಿರುತೆರೆ ಶೋಗಳು, ಸಿನಿಮಾ ಇವೆಂಟ್‌ಗಳು ಹೀಗೆ ಸದಾ ಬ್ಯೂಸಿ ಇರುತ್ತಿದ್ದ ಶಿವಣ್ಣ ಇದೀಗ ಮತ್ತೆ ಕಂಬ್ಯಾಕ್ ಮಾಡಿದ್ದಾರೆ.
ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದ ಈ ವಾರದ ಸಂಚಿಕೆಯಲ್ಲಿ ಶಿವಣ್ಣ ಹಾಗೂ ಗೀತಕ್ಕ ವಿಶೇಷ ಅತಿಥಿಗಳಾಗಿ ಸರ್ಪ್ರೈಸ್ ಎಂಟ್ರಿ ಕೊಟ್ಟಿದ್ದಾರೆ. ಶಿವಣ್ಣ ವೇದಿಕೆ ಮೇಲೆ ಬರುತ್ತಿದ್ದಂತೆ ಸರಿಗಮಪ ಸ್ಪರ್ಧಿಗಳು, ತೀರ್ಪುಗಾರರು, ಜ್ಯೂರಿ ಮೆಂಬರ್ಸ್, ನಿರೂಪಕಿ ಅನುಶ್ರೀ ಹಾಗೂ ಇತರ ಅತಿಥಿಗಳು ಶಾಕ್ ಆಗಿದ್ದು, ಶಿವಣ್ಣನನ್ನು ನೋಡಿ ಭಾವುಕರಾಗಿದ್ದಾರೆ.
ಈ ವಾರ ಸರಿಗಮಪ ಕಾರ್ಯಕ್ರಮದಲ್ಲಿ ಚಂದನವನದ ಮಹಾನಟಿಯರಾದ ತಾರಾ, ಸುಧಾರಾಣಿ ಹಾಗೂ ಶ್ರುತಿ ವಿಶೇಷ ಅತಿಥಿಗಳಾಗಿ ಬಂದಿದ್ದಾರೆ. ಅಲ್ಲದೇ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ ಹಾಗೂ ಇತರ ಕಾರ್ಯಕ್ರಮದ ತಾರೆಗಳ ಮಹಾ ಮನೋರಂಜನೆ ನಡೆಯುತ್ತಿದ್ದು, ಶಿವಣ್ಣನ ಎಂಟ್ರಿ ಈ ವಿಶೇಷ ಕ್ಷಣದ ರಂಗನ್ನು ಇನ್ನಷ್ಟು ಹೆಚ್ಚಿಸಿದೆ.

ತಾರಾ, ಸುಧಾರಾಣಿ ಹಾಗೂ ಶ್ರುತಿ ಸರಿಗಮಪ ಕಾರ್ಯಕ್ರಮ ಹಾಗೂ ಹಾಡುಗಳ ಬಗ್ಗೆ ಮಾತನಾಡುವಾಗ ಶಿವಣ್ಣ ಹಾಗೂ ಗೀತಕ್ಕ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ನಿರೂಪಕಿ ಅನುಶ್ರೀ ಜೀವನವನ್ನೇ ಗೆದ್ದು ಬಂದಂತಹ ನಿಜವಾದ ಗೆಲುವಿನ ಸರದಾರರು ಎಂದು ಶಿವಣ್ಣ ಅವರನ್ನು ತಬ್ಬಿ ಕಣ್ಣೀರಿಟ್ಟಿದ್ದಾರೆ. ಒಂದು ಕ್ಷಣ ಸಂಪೂರ್ಣ ಕಾರ್ಯಕ್ರಮ ಭಾವುಕರಾಗಿದ್ದು, ಸುಧಾರಾಣಿ, ಶ್ರುತಿ ಹಾಗೂ ತಾರಾ ವೇದಿಕೆ ಓಡೋಡಿ ಬಂದು ಶಿವಣ್ಣ ಮತ್ತು ಗೀತಕ್ಕ ಅವರನ್ನು ತಬ್ಬಿ ಕಣ್ಣೀರಿಟ್ಟಿದ್ದಾರೆ. ಸದ್ಯ ಪ್ರೋಮೋ ಬಿಡುಗಡೆಯಾಗಿದ್ದು, ಶಿವಣ್ಣ ಅವರನ್ನು ಮತ್ತೆ ವೇದಿಕೆ ಮೇಲೆ ಕಂಡ ಅಭಿಮಾನಿಗಳು ಕೂಡ ಭಾವುಕರಾಗಿದ್ದಾರೆ.











Click it and Unblock the Notifications