ನನಗೂ ಶಿವಣ್ಣನಿಗೂ ವಯಸ್ಸೇ ಆಗಲ್ಲ: ಹುಟ್ಟುಹಬ್ಬಕ್ಕೆ ವಿಶ್‌ ಮಾಡಿದ ಕಾಫಿ ನಾಡು ಚಂದು

"ನಾನು ಶಿವಣ್ಣ, ಪುನೀತಣ್ಣನ ಅಭಿಮಾನಿ" ಎನ್ನುತ್ತಾ ಸೋಷಿಯಲ್‌ ಮೀಡಿಯಾ ಸ್ಟಾರ್‌ ಆಗಿದ್ದ ಚಿಕ್ಕಮಗಳೂರಿನ ಕಾಫಿನಾಡು ಚಂದು ದಿಢೀರ್‌ ಪ್ರತ್ಯಕ್ಷವಾಗಿದ್ದಾರೆ. ಎಲ್ಲರಿಗೂ ವಿಶೇಷವಾಗಿ ತಮ್ಮ ಸಾಲುಗಳ ಮೂಲಕ ಹುಟ್ಟುಹಬ್ಬಕ್ಕೆ ಶುಭಕೋರುತ್ತಾ ಕರ್ನಾಟಕದ ಮನೆಮಾತಾಗಿದ್ದರು ಚಂದು. ಇಂದು ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರ ಹುಟ್ಟುಹಬ್ಬದ ಪ್ರಯುಕ್ತ ಶಿವಣ್ಣನಿಗೆ ವಿಶ್‌ ಮಾಡಲು ಬೆಂಗಳೂರಿಗೆ ಬಂದಿದ್ದಾರೆ. ನಾನು ಹಾಗೂ ಶಿವಣ್ಣ ಯಾವಾಗಲೂ ಯಂಗ್ ಆಗಿಯೇ ಕಾಣಿಸುತ್ತೇವೆ ಎಂದು ಚಂದು ಹೇಳಿದ್ದಾರೆ.

ಶಿವಣ್ಣನನ್ನು ನೋಡಿ ವಿಶ್‌ ಮಾಡಲು ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಚಂದು ಬಂದಿದ್ದಾರೆ. ಶಿವಣ್ಣ ಹಾಗೂ ಪುನೀತಣ್ಣ ಅಂದ್ರೆ ನನಗೆ ತುಂಬಾ ಇಷ್ಟ. ಅವರ ಹುಟ್ಟುಹಬ್ಬಕ್ಕೆ ಪ್ರತಿ ವರ್ಷವೂ ಬರುತ್ತಿದ್ದೇನೆ. ದೇವರು ಶಿವಣ್ಣನಿಗೆ ಆಯಸ್ಸು, ಆರೋಗ್ಯ ಕೊಡಲಿ ಎಂದು ಕೇಳಿಕೊಳ್ತೀನಿ. ಶಿವಣ್ಣ 63 ವರ್ಷ ಅಂತ ಕಾಣಿಸಿಕೊಳ್ಳುವುದೇ ಇಲ್ಲ ಎಂದಿದ್ದಾರೆ.

Shivanna And I Never Age Coffee Nadu Chandu Birthday Wish To Shivarajkumar

ಶಿವಣ್ಣ ಇನ್ನೂ 43 ವರ್ಷದವರಂತೆ ಕಾಣಿಸುತ್ತಾರೆ. ನನಗೇ ಈಗ 43 ವರ್ಷ ವಯಸ್ಸಾಗಿದೆ. ಅಣ್ಣ ಕೂಡ ಕಡಿಮೆ ವಯಸ್ಸಿನವರಂತೆ ಕಾಣ್ತಾರೆ. ನಾನೇ 20 ವರ್ಷದ ಹುಡುಗನಂತೆ ಕಾಣ್ತೀನಿ. ನಮ್ಮಿಬ್ಬರಿಗೂ ವಯಸ್ಸಾದಂತೆ ಕಾಣಿಸುವುದಿಲ್ಲ. ಹಾಗಾಗಿ ಅವರು ಇನ್ನೂ ಆರೋಗ್ಯದಿಂದ ಚೆನ್ನಾಗಿರಲಿ ಎಂದು ಚಂದು ಶುಭ ಹಾರೈಸಿದ್ದಾರೆ. ಅವರ ಜೋಡಿ ಯಾವತ್ತಿಗೂ ಶಿವ-ಪಾರ್ವತಿ ಇದ್ದಂಗೆ ಎಂದಿದ್ದಾರೆ.

ನಾನು ಶಿವಣ್ಣನ ಎಲ್ಲ ಸಿನಿಮಾಗಳನ್ನು ನೋಡಿದ್ದೀನಿ. ಪುನೀತ್‌ ರಾಜ್‌ಕುಮಾರ್‌ ಅವರದ್ದು ಅಪ್ಪು ಸಿನಿಮಾದಿಂದ ನೋಡಿಕೊಂಡು ಬಂದಿದ್ದೇನೆ. ನಾನು ಸಣ್ಣ ಹುಡುಗನಿದ್ದಾಗ ಪುನೀತಣ್ಣ ಸಿನಿಮಾ ಮಾಡಿದ್ರು. ಶಿವಣ್ಣ ಅವರು ಸಿನಿಮಾ ಮಾಡಿದಾಗ ನಾನು ಹುಟ್ಟಿದ್ದೆ. ನಮ್ಮ ತಾಯಿ ಶಿವಣ್ಣನ ಆನಂದ್‌ ಸಿನಿಮಾ ಎಲ್ಲ ನೋಡ್ತಿದ್ರು. ಆಗ ನಾನಿನ್ನೂ ಚಿಕ್ಕ ಹುಡುಗ. ಅವರ ಸಂಯುಕ್ತಾ ಸಿನಿಮಾನ ನೋಡಿದ್ದೆ ಎಂದು ಚಂದು ಹೇಳಿದ್ದಾರೆ.

ನಾನು ಶಿವಣ್ಣ-ಪುನೀತಣ್ಣನ ಅಭಿಮಾನಿ. ಕರ್ನಾಟಕದ ಜನತೆಗೆ ಕಾಫಿ ನಾಡು ಚಂದು ಮಾಡುತ್ತಿರುವ ನಮಸ್ಕಾರಗಳು. ಅಲ್ಲಿದ್ದಾರೆ ಶಿವಾ, ನಿನ್‌ ಮೇಲೆ ನೋಡು ಹವಾ, ಶಿವನನ್ನ ಎದುರು ಹಾಕಿಕೊಂಡ್ರೆ ನೀನಾಗುತ್ತೀಯ ಅನಾಥ ಶವ! ಕಾಲ್‌ ಮೀ ಓಜಿ, ಒರಿಜಿನಲ್‌ ಗ್ಯಾಂಗ್‌ಸ್ಟರ್‌ ಎಂದು ಚಂದು ತಮ್ಮದೇ ಶೈಲಿಯಲ್ಲಿ ಒಂದೆರಡು ಸಾಲುಗಳನ್ನು ಬಿಟ್ಟಿದ್ದಾರೆ. ಬಳಿಕ ಶಿವಣ್ಣನನ್ನು ಭೇಟಿಯಾಗಿ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಶಿವಣ್ಣ-ಗೀತಕ್ಕ ದಂಪತಿಯ ವಿಶೇಷ ಫೋಟೋ ಗಿಫ್ಟ್‌ ನೀಡಿದ್ದಾರೆ.

ನಟ ಶಿವರಾಜ್‌ಕುಮಾರ್‌ ಅವರ ನಿವಾಸದ ಬಳಿ ಇಂದು ಅಭಿಮಾನಿಗಳು ಜಮಾಯಿಸಿದ್ದು, ಹುಟ್ಟುಹಬ್ಬಕ್ಕೆ ಕೇಕ್‌ ಕಟ್‌ ಮಾಡಿ ವಿಶ್‌ ಮಾಡಿದ್ದಾರೆ. ಶಿವಣ್ಣನಿಗೆ ಜೈ ಎಂದು ಘೋಷಣೆಗಳನ್ನು ಕೂಗುತ್ತಾ ಅಭಿಮಾನ ಹೊರಹಾಕಿದ್ದಾರೆ. ಶಿವಣ್ಣನಿಗೆ ಗಿಫ್ಟ್‌ ನೀಡಿ ನೂರ್ಕಾಲ ಬದುಕಿ ಬಾಳಿ ಎಂದು ಮನಸಾರೆ ಹರಸಿದ್ದಾರೆ. ಸಿನಿಮಾರಂಗ ನಟ ನಟಿಯರು ಕೂಡ ಹ್ಯಾಪಿ ಬರ್ತ್‌ಡೇ ಶಿವಣ್ಣ ಎಂದು ಅಭಿನಂದಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+