Shiva Rajkumar: ಹ್ಯಾಟ್ರಿಕ್ ಹೀರೋ ಶಿವ ರಾಜ್‌ಕುಮಾರ್‌ ಎಷ್ಟು ಕೋಟಿ ಆಸ್ತಿ ಒಡೆಯ ಗೊತ್ತಾ ?

Shiva Rajkumar: ಕನ್ನಡ ಚಿತ್ರರಂಗದ ಮೇರು ಪ್ರತಿಭೆ ಹಾಗೂ ಹ್ಯಾಟ್ರಿಕ್‌ ಹೀರೋ ನಟ ಶಿವ ರಾಜ್‌ಕುಮಾರ್‌ ಅವರು ಸದಾ ಚಿರಯುವಕ. ಅವರಿಗೆ 62 ವರ್ಷ ವಯಸ್ಸಾಗಿದೆ ಅಂದರೆ ಯಾರೂ ನಂಬಲ್ಲ. ಕನ್ನಡ ಚಿತ್ರರಂಗದ ಮೇರು ಪ್ರತಿಭೆ ಶಿವ ರಾಜ್‌ಕುಮಾರ್.‌ ಖಡಕ್‌ ಮಾತು ಸದಾ ಹಾಸ್ಯ ಮನೋಭಾವ ಇರುವ ಶಿವ ರಾಜ್‌ಕುಮಾರ್‌ ಅವರು ಎಲ್ಲಾ ಭಾಷೆಗಳಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ. ಈಚೆ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರೊಂದಿಗೆ ಸ್ಕ್ರೀನ್‌ ಶೇರ್‌ ಮಾಡಿಕೊಂಡ ಮೇಲೆ ಶಿವಣ್ಣನ ಕ್ರೇಜ್ ತಮಿಳಿನಲ್ಲೂ ಭರ್ಜರಿ ಹೆಚ್ಚಳವಾಗಿದೆ. ಹಾಗಾದರೆ ಶಿವಣ್ಣ ಎಷ್ಟು ಕೋಟಿಯ ಒಡೆಯ, ಅವರ ಬಳಿ ಇರುವ ಆಸ್ತಿ ಎಷ್ಟು ಎನ್ನುವ ಕಂಪ್ಲೀಟ್‌ ಡೀಟೆಲ್ಸ್‌ ಇಲ್ಲಿದೆ ನೋಡಿ..

ಶಿವ ರಾಜ್‌ಕುಮಾರ್‌ ಅವರನ್ನು ಕನ್ನಡಿಗರು ಆತ್ಮೀಯವಾಗಿ ಶಿವಣ್ಣ ಅಂತಲೇ ಕರೆಯುತ್ತಾರೆ. ಶಿವಣ್ಣ ಸಹ ಅಷ್ಟೇ ಗೌರವವನ್ನು ಉಳಿಸಿಕೊಂಡಿದ್ದಾರೆ. ಶಿವಣ್ಣ ವಿವಾದಗಳಿಂದ ದೂರ ಉಳಿದಿದ್ದಾರೆ. ಯಾವುದೇ ವಿವಾದಗಳು ಬಂದರೂ ಅದನ್ನು ಹೇಗೆ ನಿಭಾಯಿಸಬೇಕು ಹಾಗೂ ಎಲ್ಲಿ ಎಷ್ಟು ಮಾತನಾಡಬೇಕು ಎನ್ನುವ ಜಾಣ್ಮೆ ಗೊತ್ತಿರುವ ನಟ ಶಿವಣ್ಣ. ಕನ್ನಡ ಚಿತ್ರರಂಗದಲ್ಲಿ ಹ್ಯಾಟ್ರಿಕ್‌ ಗೆಲುವುಗಳನ್ನು ಕೊಟ್ಟು ಮಿಂಚಿದ ಶಿವಣ್ಣ. ವಿಭಿನ್ನ ಪಾತ್ರಗಳಿಂದ ಕನ್ನಡಿಗರನ್ನು ರಂಜಿಸುತ್ತಲ್ಲೇ ಇದ್ದಾರೆ.

Shiva Rajkumar Hat-trick hero Shiva Rajkumar do you know how many crores of assets he owns

ಶಿವಣ್ಣ ಕ್ರಿಯೇಟ್‌ ಮಾಡಿರುವ ಕೆಲವು ರೆಕಾರ್ಡ್‌ಗಳನ್ನು ಇಂದಿಗೂ ಮತ್ತೊಬ್ಬ ನಟನಿಂದ ಬ್ರೇಕ್‌ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಅವರ ಓಂ ಸಿನಿಮಾ ಕ್ರೇಜ್‌ನ ಬಗ್ಗೆಯಂತೂ ಹೇಳುವುದೇ ಬೇಡ. ಈಗಲೂ ಆ ಸಿನಿಮಾ ಹಾಗೂ ಅದರಲ್ಲಿನ ಶಿವ ರಾಜ್‌ಕುಮಾರ್‌ ಅಭಿನಯವನ್ನು ಮೊದಲ ಬಾರಿ ನೋಡುತ್ತಿರುವಂತೆ ನೋಡಿ ಅಭಿಮಾನಿಗಳು ಆಸ್ವಾದಿಸುತ್ತಾರೆ.

ಈಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಶಿವರಾಜ್‌ಕುಮಾರ್‌ ಅವರ ಪತ್ನಿ ಗೀತಾ ಶಿವ ರಾಜ್‌​ಕುಮಾರ್ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಆ ಸಂದರ್ಭದಲ್ಲಿ ಸಲ್ಲಿಸಲಾಗಿದ್ದ ಅಫಿಡವಿಟ್‌ನಲ್ಲಿ ಶಿವಣ್ಣ ಅವರ ಆಸ್ತಿ ವಿವರ ಬಹಿರಂಗವಗಿತ್ತು. ಹಾಗಾದರೆ, ಶಿವಣ್ಣನ ಬಳಿ ಇರುವ ಆಸ್ತಿ ಎಷ್ಟು ಎನ್ನುವ ಮಾಹಿತಿ ಇಲ್ಲಿದೆ.

62ರ ವಯಸ್ಸಿನಲ್ಲೂ ಶಿವಣ್ಣ ಅವರ ಕ್ರೇಜ್‌ ಕಡಿಮೆಯಾಗಿಲ್ಲ. ಇಂದಿಗೂ ಕನ್ನಡ ಚಿತ್ರರಂಗ ಸೇರಿದಂತೆ ಭಾರತೀಯ ಸಿನಿಮಾ ರಂಗದಲ್ಲಿ ಶಿವಣ್ಣ ಬಹುಬೇಡಿಕೆಯ ನಟರಾಗಿದ್ದಾರೆ. ಪ್ರತಿ ಸಿನಿಮಾಗೂ ಇಂತಿಷ್ಟು ಕೋಟಿ ರೂಪಾಯಿ ಅಂತ ಶಿವಣ್ಣ ಪಡೆಯುತ್ತಾರೆ. ಶಿವ ರಾಜ್‌ಕುಮಾರ್‌ ಅವರ ಮೂಲ ಹೆಸರು ಎಂಎಸ್ ಪುಟ್ಟಸ್ವಾಮಿ ಅಂತ. ಆ ಹೆಸರಿನಲ್ಲೇ ಆದಾಯದ ದಾಖಲೆಗಳು ಇವೆ ಎನ್ನಲಾಗಿದೆ.

ಶಿವರಾಜ್‌ ಕುಮಾರ್‌ ಅವರ ಆಸ್ತಿ ವಿವರ ಇಲ್ಲಿದೆ

ನಟ ಶಿವರಾಜ್‌ಕುಮಾರ್‌ ಬ್ಯಾಂಕ್ ಬ್ಯಾಲೆನ್ಸ್ ಮೊತ್ತವು 4.82 ಕೋಟಿ ರೂಪಾಯಿ ಇದೆ. ಶಿವಣ್ಣ ಬಳಿ ಬರೋಬ್ಬರಿ 18 ಕೋಟಿ ರೂಪಾಯಿ ಮೊತ್ತದ ಚರಾಸ್ತಿ ಇದೆ. 31 ಕೋಟಿಯ ರೂಪಾಯಿ ಸ್ಥಿರಾಸ್ತಿ. 2022-2023ರಲ್ಲಿ ಶಿವಣ್ಣ ಅವರ ಆದಾಯ ವಿವರ ಉತ್ತಮವಾಗಿ. ಆ ವರ್ಷದಲ್ಲಿ ಶಿವಣ್ಣ ಹಾಗೂ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್‌ 2,97,27,100 ಆದಾಯವಿತ್ತು. ಶಿವ ರಾಜ್‌ಕುಮಾರ್‌ ಅವರ ಬಳಿ 22,58,338 ರೂಪಾಯಿ ನಗದು ಇದೆ ಹೇಳಲಾಗಿದೆ.

ಶಿವಣ್ಣನ ಹೆಸರಲ್ಲಿ 17 ಕೋಟಿ ಸಾಲ: ಇನ್ನು ಕೋಟ್ಯಾಂತರ ರೂಪಾಯಿ ಆಸ್ತಿಯ ಒಡೆಯನಾಗಿರುವ ಶಿವ ರಾಜ್‌ಕುಮಾರ್‌ ಅವರ ಹೆಸರಿನಲ್ಲಿ ಸಾಲವೂ ಇದೆ ಎನ್ನಲಾಗಿದೆ. ಶಿವಣ್ಣ ಅವರ ಹೆಸರಿನಲ್ಲಿ 17 ಕೋಟಿ ರೂಪಾಯಿ ಸಾಲ ಬಾಕಿ ಇದೆ. ಅದರಲ್ಲಿ ಸಾಲ 3 ಕೋಟಿ ರೂಪಾಯಿ ಆಗಿದ್ದರೆ. ಅಡ್ವಾನ್ಸ್ 13.6 ಕೋಟಿ ರೂಪಾಯಿ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+