ಶಾರುಖ್ ಖಾನ್ ಸಿನಿಮಾಗೆ ಸಿಕ್ಕ ಸರ್ಟಿಫಿಕೇಟ್ ಯಾವುದು? A ಅಥವಾ U/A?

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅಭಿನಯದ ಬಹು ನಿರೀಕ್ಷಿತ 'ಡಂಕಿ' ಸಿನಿಮಾ, ಇನ್ನೇನು ಕೆಲವೇ ದಿನದಲ್ಲಿ ಬೆಳ್ಳಿತೆರೆ ಮೇಲೆ ಅಬ್ಬರಿಸಲಿದೆ. ಇದಕ್ಕಾಗಿ ಅಂತಿಮ ಹಂತದ, ಅಗತ್ಯ ಸಿದ್ಧತೆಗಳನ್ನ ಶಾರುಖ್ ಫ್ಯಾನ್ಸ್ ಮಾಡಿಕೊಳ್ಳುತ್ತಿದ್ದಾರೆ. ಹೀಗಿದ್ದಾಗ ಶಾರುಖ್ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಸರ್ಟಿಫಿಕೇಟ್ ಕೂಡ ಕೊಟ್ಟಿದೆ. ಹಾಗಾದರೆ 'ಡಂಕಿ' ಸಿನಿಮಾಗೆ ಸಿಕ್ಕ ಸರ್ಟಿಫಿಕೇಟ್ ಯಾವುದು?

ಶಾರುಖ್ ಖಾನ್ & ರಾಜ್‌ ಕುಮಾರ್ ಹಿರಾನಿ, ಈ ಕ್ರೇಜಿ ಕಾಂಬಿನೇಷನ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಡಂಕಿ'. ಈ ಸಿನಿಮಾವು ಇನ್ನೇನು ಇದೇ ತಿಂಗಳ ಅಂತ್ಯಕ್ಕೆ ರಿಲೀಸ್ ಆಗಲಿದೆ. ಹೀಗೆ ಶಾರುಖ್ ಮತ್ತೊಮ್ಮೆ ಸಿಲ್ವರ್ ಸ್ಕ್ರೀನ್ ಮೇಲೆ ಹೊಸ ಹೊಸ ದಾಖಲೆ ಸೃಷ್ಟಿಸಲು ಸಜ್ಜಾಗಿದ್ದಾರೆ. ಹೀಗಿದ್ದಾಗ ಪ್ರಚಾರ ಅಬ್ಬರ ಕೂಡ ಜೋರಾಗಿದೆ. ಮತ್ತೊಂದು ಕಡೆ ಡಿಸೆಂಬರ್ 21ಕ್ಕೆ ಡಂಕಿ ರಿಲೀಸ್ ಆಗಲಿರುವ ಹಿನ್ನೆಲೆಯಲ್ಲಿ ಸೆನ್ಸಾರ್‌ ಮಂಡಳಿಯಲ್ಲಿ ಎಕ್ಸಾಮ್ ಬರೆದಿದೆ ಶಾರುಖ್ ಅವರ ಸಿನಿಮಾ. ಹಾಗಾದರೆ ಶಾರುಖ್ ಖಾನ್ ಅಭಿನಯಿಸಿರುವ ಬಹು ನಿರೀಕ್ಷಿತ 'ಡಂಕಿ'ಗೆ ಸಿಕ್ಕ ಸರ್ಟಿಫಿಕೇಟ್ ಯಾವುದು?

Shah Rukh Khan Starrer Dunki Movie Got UA Certificate

ಶಾರುಖ್ ಅಬ್ಬರ ಬಲು ಜೋರು

ಮೊದಲೇ ಹೇಳಿದಂತೆ ಕಿಂಗ್‌ ಖಾನ್‌ ಶಾರುಖ್‌ರ ಬಹು ನಿರೀಕ್ಷಿತ 'ಡಂಕಿ' ಡಿ. 21 ಕ್ಕೆ ವರ್ಲ್ಡ್‌ ವೈಡ್‌ ಗ್ರ್ಯಾಂಡ್‌ ರಿಲೀಸ್‌ ಆಗಲಿದೆ. ಈಗಾಗಲೇ ಡಂಕಿ ಸಿನಿಮಾದ ಟ್ರೇಲರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಶಾರುಖ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಹಾಗೇ 'ಪಠಾಣ್‌' ಸಿನಿಮಾ ಮತ್ತು 'ಜವಾನ್‌' ಸಿನಿಮಾ ಬಳಿಕ ಮತ್ತೊಂದು ಇಂಡಸ್ಟ್ರಿ ಹಿಟ್ ಸಿನಿಮಾಗೆ ಅಭಿಮಾನಿಗಳು ಸಜ್ಜಾಗಿದ್ದಾರೆ. ಹೀಗಿದ್ದಾಗ ಸೆನ್ಸಾರ್ ಮಂಡಳಿಯಲ್ಲಿ ಶಾರುಖ್ ಖಾನ್ ಅವರ ಸಿನಿಮಾ ಈಗ, 'ಯು/ಎ' (U/A) ಸರ್ಟಿಫಿಕೇಟ್ ಪಡೆದಿದೆ.

ಏನಿದು 'ಡಂಕಿ' ಸಿನಿಮಾ ಕಥೆ?

'ಡಂಕಿ' ಸಿನಿಮಾ 2 ಗಂಟೆ 41 ನಿಮಿಷ‌ ಇರಲಿದ್ದು, ಈ ಸಿನಿಮಾವನ್ನು ನೋಡಿದ ಸೆನ್ಸಾರ್‌ ಬೋರ್ಡ್‌ ಗ್ರೀನ್ ಸಿಗ್ನಲ್ ನೀಡಿದೆ. 'ಡಂಕಿ' ಸಿನಿಮಾದಲ್ಲಿ ಶಾರುಖ್ ಖಾನ್‌ರ ಜೊತೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಸೇರಿ ದೊಡ್ಡ ತಾರಾಬಳಗವೇ ಇದೆ. 'ಡಂಕಿ' ಜಗತ್ತೇ ಕಾಯುತ್ತಿರುವ ಸಿನಿಮಾ ಆಗಿದ್ದು ನಾಲ್ಕು ಜನ ಸ್ನೇಹಿತರು ದೇಶವನ್ನ ಬಿಟ್ಟು ಮತ್ತೊಂದು ದೇಶಕ್ಕೆ ಹೋಗುವುದೆ ಚಿತ್ರ ಕಥೆ. '3 ಇಡಿಯಟ್ಸ್' 'ಲಗೆ ರಹೋ ಮುನ್ನಾಭಾಯಿ' 'ಪಿಕೆ' & 'ಸಂಜು' ಸೇರಿದಂತೆ 'ಮುನ್ನಾಭಾಯಿ ಎಂಬಿಬಿಎಸ್' ರೀತಿ ಅತ್ಯುತ್ತಮ ಸಿನಿಮಾ ನೀಡಿದ್ದ ರಾಜ್‌ಕುಮಾರ್ ಹಿರಾನಿ ಇದೇ ಮೊದಲ ಬಾರಿ, ಶಾರುಖ್‌ರ ಜೊತೆಗೆ ಸೇರಿ 'ಡಂಕಿ' ಸಿನಿಮಾ ನಿರ್ದೇಶನ ಮಾಡಿದ್ದಾರೆ.

Shah Rukh Khan Starrer Dunki Movie Got UA Certificate

ಒಟ್ನಲ್ಲಿ ಬಾಲಿವುಡ್ ಶೇಕ್ ಮಾಡೋದಕ್ಕೆ ಮತ್ತೊಮ್ಮೆ ಬಾಲಿವುಡ್ ಬಾದ್ ಶಾ ಶಾರುಖ್, ಭರ್ಜರಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಕಿಂಗ್ ಖಾನ್ ಫ್ಯಾನ್ಸ್. ಭಾರತದ ಜೊತೆಗೆ ಜಗತ್ತಿನ ಮೂಲೆ ಮೂಲೆಯಲ್ಲೂ ಶಾರುಖ್ ಖಾನ್ ಅವರಿಗೆ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಇವರೆಲ್ಲಾ 'ಡಂಕಿ' ಸಿನಿಮಾ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+