ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ ‘ಭೈರತಿ ರಣಗಲ್’ ಬಗ್ಗೆ ಬಿಗ್ ಅಪ್‌ಡೇಟ್!

ವಯಸ್ಸು 61, ಆದ್ರೂ ನೋಡೋದಕ್ಕೆ ಯಂಗ್ & ಎನೆರ್ಜೆಟಿಕ್. ಮಾಡಿರೋ ಸಿನಿಮಾಗಳು ನೂರಾರು, ಹೀಗಿದ್ರೂ ಶಿವಣ್ಣನ ಖದರ್ ಬದಲಾಗಿಲ್ಲ. ಹೀಗೆ ದೊಡ್ಮನೆ ಹಿರಿಯ ಪುತ್ರ ನಟ ಶಿವರಾಜ್‌ಕುಮಾರ್ ಹಲವು ದಶಕದಿಂದಲು ಕನ್ನಡ ಸಿನಿಮಾ ಪ್ರಿಯರನ್ನ ರಂಜಿಸಿ ಮನಸ್ಸು ಗೆದ್ದಿದ್ದಾರೆ. ಆಕ್ಷನ್ ಆದ್ರೂ ಸೈ, ಪಕ್ಕಾ ಆಕ್ಟಿಂಗ್‌ಗೂ ಜೈ ಅಂತಿದ್ದಾರೆ ಶಿವಣ್ಣ. ಹೀಗಿದ್ದಾಗ 'ಮಫ್ತಿ' ಮುಂದುವರಿದ ಭಾಗ 'ಭೈರತಿ ರಣಗಲ್' ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದೆ.

ಅಷ್ಟಕ್ಕೂ ಈಗಾಗಲೇ ಸಿನಿಮಾ ಶೂಟಿಂಗ್‌ನ ಭಾಗಶಃ ಮುಗಿಸಿರುವ 'ಭೈರತಿ ರಣಗಲ್' ಚಿತ್ರ ಇನ್ನೇನು ತೆರೆಗೆ ಅಪ್ಪಳಿಸಬೇಕು ಅಷ್ಟೇ. ಅಭಿಮಾನಿಗಳು ಕೂಡ 'ಭೈರತಿ ರಣಗಲ್' ನೋಡಿ ಎಂಜಾಯ್ ಮಾಡೋದಕ್ಕೆ ಕಾಯುತ್ತಿದ್ದಾರೆ. ಸಿನಿಮಾ ತಂಡ ಕೂಡ ಇದಕ್ಕೆ ತಕ್ಕ ತಯಾರಿ, ಹಾಗೂ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮತ್ತೊಂದು ಕಡೆ ನಟ ಶಿವಣ್ಣ ಅವರು ಸ್ಪೆಷಲ್ ಟ್ವೀಟ್ ಒಂದನ್ನ ಮಾಡಿದ್ದಾರೆ. ಶಿವಣ್ಣ ಮಾಡಿರುವ ಟ್ವೀಟ್ 'ಭೈರತಿ ರಣಗಲ್' ಸಿನಿಮಾಗೆ ಸಂಬಂಧಿಸಿದ್ದು ಅನ್ನೋದು ಮತ್ತೊಂದು ವಿಶೇಷ. ಹಾಗಾದ್ರೆ ನಟ ಶಿವಣ್ಣ ಟ್ವೀಟ್ ಮಾಡಿ ಹೇಳಿದ್ದು ಏನು? ಮುಂದೆ ಓದಿ.

Sandalwood Star Shivarajkumar Tweet About Bhairathi Ranagal Director Goes Viral

'ಭೈರತಿ ರಣಗಲ್' ಬಗ್ಗೆ ಶಿವಣ್ಣ ಹೇಳಿದ್ದೇನು?

ಹೌದು ನಟ ಶಿವಣ್ಣ ಅವರ ಆತ್ಮೀಯತೆ ಅಂದ್ರೆ ಹಾಗೆ. ಯಾರನ್ನ ಅವರು ತುಂಬಾ ಅಂದ್ರೆ ತುಂಬಾ ಹಚ್ಚಿಕೊಳ್ತಾರೋ ಅವರ ಜೊತೆಗೆ ಸ್ನೇಹ & ಪ್ರೀತಿಯಿಂದ ಇರ್ತಾರೆ. ಹೀಗೆ ಸಿನಿಮಾ ತಂಡದ ಪ್ರತಿಯೊಬ್ಬರನ್ನು ಶಿವಣ್ಣ ಪ್ರೀತಿಯಿಂದ & ಸ್ನೇಹದಿಂದ ಮಾತನಾಡಿಸುತ್ತಾರೆ. ಈ ರೀತಿ ಪ್ರತಿಯೊಬ್ಬರ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ ಹ್ಯಾಟ್ರಿಕ್ ಹೀರೋ. ಇನ್ನು ಬಿಡುಗಡೆಗೆ ಸಜ್ಜಾಗುತ್ತಿರುವ 'ಭೈರತಿ ರಣಗಲ್' ಸಿನಿಮಾಗೆ ಒಂದು ಸ್ಪೆಷಲ್ ಸುದ್ದಿ ಸಿಕ್ಕಿದೆ. ಅಂದಹಾಗೆ ಈ ಚಿತ್ರದ ಡೈರೆಕ್ಟರ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಕುರಿತು ಶಿವಣ್ಣ ಸ್ಪೆಷಲ್ ಟ್ವೀಟ್ ಮೂಲಕ ವಿಷ್ ಮಾಡಿದ್ದಾರೆ.

ಸಿಹಿಸುದ್ದಿಗೆ ಕಾಯುತ್ತಿದ್ದಾರೆ ಅಭಿಮಾನಿಗಳು

ಹ್ಯಾಟ್ರಿಕ್ ಹೀರೋ ಮತ್ತು ದೊಡ್ಮನೆ ದೊಡ್ಮಗ ನಟ ಶಿವರಾಜ್‌ ಕುಮಾರ್ ಸಾಲು ಸಾಲು ಹಿಟ್ ಸಿನಿಮಾಗಳನ್ನ ಕನ್ನಡಿಗರ ಎದುರು ಇಡುತ್ತಿದ್ದಾರೆ. ಇದೇ ರೀತಿ ಮೊನ್ನೆ ಮೊನ್ನೆ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದರು ಶಿವರಾಜ್‌ ಕುಮಾರ್. 'ಘೋಸ್ಟ್' ಈಗಾಗಲೇ ರಾಜ್ಯದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ರಿಲೀಸ್ ಆಗಿ ಅಬ್ಬರಿಸಿದೆ. ಹೀಗಿದ್ದಾಗ 'ಭೈರತಿ ರಣಗಲ್' ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದ್ದು, 2024ರ ಆರಂಭದಲ್ಲೇ ಸಿಹಿಸುದ್ದಿ ಸಿಗುವ ಸಾಧ್ಯತೆ ದಟ್ಟವಾಗಿದೆ.

Sandalwood Star Shivarajkumar Tweet About Bhairathi Ranagal Director Goes Viral

ಒಟ್ನಲ್ಲಿ ನಟ ಶಿವಣ್ಣ ಏನೇ ಮಾಡಿದ್ರೂ ಡಿಫರೆಂಟ್ ಅನ್ನೋದು 'ಭೈರತಿ ರಣಗಲ್' ಚಿತ್ರದ ಮೂಲಕ ಸಾಬೀತಾಗುತ್ತಿದೆ. ಈಗಾಗಲೇ ಮಫ್ತಿ ಸಿನಿಮಾ ಕನ್ನಡ ಸಿನಿಮಾ ರಂಗದಲ್ಲಿ ಹೊಸ, ಹೊಸ ದಾಖಲೆ ಬರೆದಾಗಿದೆ. ಇದರ ಜೊತೆ ಈಗ 'ಭೈರತಿ ರಣಗಲ್' ಕೂಡ ಬಾಕ್ಸ್ ಆಫೀಸ್ ಧೂಳ್ ಮಾಡಲು ಬರುತ್ತಿದೆ. ಇನ್ನ ಕೆಲವೇ ದಿನದಲ್ಲಿ ಅಭಿಮಾನಿಗಳಿಗೆ 'ಭೈರತಿ ರಣಗಲ್' ಬಗ್ಗೆ ಬಿಗ್ ಅಪ್‌ಡೇಟ್ ಸಿಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+