ಚಿಕ್ಕಣ್ಣ ಕೋಟಿ ಕೋಟಿ ಸಂಭಾವನೆ ಹೆಚ್ಚಿಸಿಕೊಂಡರಾ? ಇನ್ನು ಮುಂದೆ ಕಾಮಿಡಿ ಪಾತ್ರ ಮಾಡಲ್ವಾ?

ಚಿಕ್ಕಣ್ಣ ಸಿನಿಮಾ ರಂಗದಲ್ಲಿ ಸಾಕಷ್ಟು ಕಷ್ಟಪಟ್ಟು, ಗಾರೆ ಕೆಲಸ ಮಾಡುತ್ತಾ ಜೀವನದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಅದರಲ್ಲೂ ಚಿಕ್ಕಣ್ಣ ಅಭಿನಯದ 'ಉಪಾಧ್ಯಕ್ಷ' ಸಿನಿಮಾ, ಬರೋಬ್ಬರಿ 50ನೇ ದಿನ ಪೂರೈಸಲು ಮುನ್ನುಗ್ಗುತ್ತಿದೆ. ಹೀಗಿದ್ದಾಗಲೇ ನಟ ಚಿಕ್ಕಣ್ಣ ಇದೀಗ ತಮ್ಮ ಸಂಭಾವನೆ ಕೋಟಿ ಕೋಟಿ ರೂಪಾಯಿ ಹೆಚ್ಚಿಸಿಕೊಂಡಿದ್ದಾರೆ, ಅಲ್ಲದೆ ಅವರು ಮತ್ತೆ ಕಾಮಿಡಿ ಪಾತ್ರಗಳನ್ನ ಮಾಡುವುದಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ, ಹಾಗಾದರೆ ಇದೆಲ್ಲಾ ಸತ್ಯನಾ? 'ಉಪಾಧ್ಯಕ್ಷ' ಸಿನಿಮಾ ಗಳಿಸಿದ್ದು ಎಷ್ಟು ಕೋಟಿ ರೂಪಾಯಿ? ಬನ್ನಿ ತಿಳಿಯೋಣ.

ಚಿಕ್ಕಣ್ಣ ಕನ್ನಡ ಸಿನಿಮಾ ಲೋಕದ ಕಾಮಿಡಿ ಕಿಂಗ್ ಅಂತಾ ಕರೆಸಿಕೊಂಡಿದ್ದಾರೆ. ಚಿಕ್ಕಣ್ಣ ಅವರು ಮಾತನಾಡುವುದು ಬಿಡಿ, ಅದೆಷ್ಟೋ ಸಿನಿಮಾದಲ್ಲಿ ಬರೀ ಎಂಟ್ರಿ ಕೊಟ್ಟರೆ ಸಾಕು ಪ್ರೇಕ್ಷಕರು ಹೊಟ್ಟೆ ಹಿಡಿದುಕೊಂಡು ನಕ್ಕು ನಕ್ಕು ಸುಸ್ತಾಗಿ ಹೋಗುತ್ತಾರೆ. ಹೀಗೆ ಚಿಕ್ಕಣ್ಣಗೆ ದೊಡ್ಡ ಹೆಸರು ಇದೆ, ಚಿಕ್ಕಣ್ಣಗೆ ಸ್ಯಾಂಡಲ್‌ವುಡ್ ಹೀರೋಗಳು ಕೂಡ ಫಿದಾ ಆಗುತ್ತಾರೆ. ಹೀಗಿದ್ದಾಗ ನಟ ಚಿಕ್ಕಣ್ಣ ಹೀರೋ ಆಗಿ ಕೂಡ ಇದೀಗ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು, ತಮ್ಮ ಮೊದಲ ಸಿನಿಮಾ 'ಉಪಾಧ್ಯಕ್ಷ' ಮೂಲಕ ದೊಡ್ಡ ಗೆಲುವು ಗಳಿಸಿದ್ದಾರೆ. ಇಷ್ಟೆಲ್ಲಾ ಸಂಭ್ರಮದ ನಡುವೆ ಚಿಕ್ಕಣ್ಣ ಕೋಟಿ ಕೋಟಿ ರೂಪಾಯಿ ಸಂಭಾವನೆ ಹೆಚ್ಚಿಸಿಕೊಂಡಿದ್ದು ನಿಜಾನಾ? ಮುಂದೆ ಓದಿ.

Sandalwood Star Chikkanna Movie Upadhyaksha Collection Complete Details And Report

ಚಿಕ್ಕಣ್ಣ ಬದಲಾಗಿ ಹೋದರಾ?

ದುಡ್ಡು & ಯಶಸ್ಸು ಬಂದ ತಕ್ಷಣ ಮನುಷ್ಯ ಬದಲಾಗಿ ಹೋಗುತ್ತಾನೆ ಅನ್ನೋ ಆರೋಪ ನಮ್ಮ & ನಿಮ್ಮೆಲ್ಲರ ಕಿವಿಗೆ ಆಗಾಗ ಬೀಳುತ್ತೆ. ಆದ್ರೆ ನಟ ಚಿಕ್ಕಣ್ಣ ಅವರ ವಿಚಾರದಲ್ಲಿ ಈ ಮಾತು ಸುಳ್ಳು ಅಂತಾ ಖಡಕ್ ಆಗಿ ಹೇಳಬಹುದು. ಯಾಕಂದ್ರೆ ನಟ ಚಿಕ್ಕಣ್ಣ ಜೀವನದಲ್ಲಿ ಇಂದಿಗೂ ಬದಲಾಗಿಲ್ಲ, ಹಾಗೇ ಬದಲಾಗೋದು ಇಲ್ಲ. ಈ ಮಾತನ್ನ ಅವರೇ ಹೇಳಿದ್ದು, ಅಲ್ಲದೆ ತಾವು ಬರೀ ಹೀರೋ ಆಗಿ ಮಾತ್ರ ಉಳಿಯುವುದಿಲ್ಲ ಎಂದಿದ್ದಾರೆ. ಚಿಕ್ಕಣ್ಣ ಅವರ ಮಾತಿನ ಅರ್ಥ ಅವರು ಇನ್ನು ಮುಂದೆ ಕೂಡ ಕಾಮಿಡಿ ಪಾತ್ರಗಳನ್ನು ಮಾಡುತ್ತಾರಂತೆ! ಹಾಗಾದರೆ 'ಉಪಾಧ್ಯಕ್ಷ' ಸಿನಿಮಾ ದುಡಿದಿದ್ದು ಎಷ್ಟು ಕೋಟಿ ರೂಪಾಯಿ ಗೊತ್ತೆ?

12ರಿಂದ 13 ಕೋಟಿ ರೂಪಾಯಿ?

ನಟ ಚಿಕ್ಕಣ್ಣ ಹೀರೋ ಆಗಿ ಅಭಿನಯ ಮಾಡಿದ 'ಉಪಾಧ್ಯಕ್ಷ' ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಅದ್ಧೂರಿಯಾಗಿ ಕೋಟಿ ಕೋಟಿ ಗಳಿಸಿದೆ. ಈ ಸಮಯದಲ್ಲಿ ಚಿಕ್ಕಣ್ಣಗೆ ಕೂಡ ಬಂಪರ್ ಸಿಕ್ಕಿದೆ. ಆದ್ರೆ ಉಪಾಧ್ಯಕ್ಷ ಸಿನಿಮಾ ಎಷ್ಟು ಕೋಟಿ ರೂಪಾಯಿ ಗಳಿಸಿದೆ ಎಂಬ ಕುರಿತು ಈವರೆಗೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೂ ಸುಮಾರು 12ರಿಂದ 13 ಕೋಟಿ ರೂಪಾಯಿ ಗಳಿಕೆ ಮಾಡಿದೆಯಾ? ಎಂಬ ಕುತೂಹಲ ಮೂಡಿದೆ. ಯಾಕಂದ್ರೆ ಇತ್ತೀಚೆಗೆ ಉಪಾಧ್ಯಕ್ಷ ಸಿನಿಮಾದ ನಿರ್ಮಾಪಕ ಉಮಾಪತಿ ಅವರ ಹೇಳಿಕೆ ಹಿನ್ನೆಲೆ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಇದೆಲ್ಲಾ ಏನೇ ಇದ್ದರೂ ಇನ್ನೂ ಉಪಾಧ್ಯಕ್ಷ ಸಿನಿಮಾ ತಂಡ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ, ಉಪಾಧ್ಯಕ್ಷ ಎಷ್ಟು ಗಳಿಸಿದೆ? ಎಂಬ ಬಗ್ಗೆ ಕುತೂಹಲ ಮೂಡಿದೆ.

Sandalwood Star Chikkanna Movie Upadhyaksha Collection Complete Details And Report

ಚಿಕ್ಕಣ್ಣ ಎಂಟ್ರಿ ಸೂಪರ್ ಗುರೂ!

ಕನ್ನಡ ಸಿನಿಮಾ ಕ್ಷೇತ್ರಕ್ಕೆ ಚಿಕ್ಕಣ್ಣ 2011ರಲ್ಲಿ ಎಂಟ್ರಿ ಕೊಟ್ಟರು. ಕಿರಾತಕ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಬಂದರು. ನಂತರ ಚಿಕ್ಕಣ್ಣಗೂ ಸಾಲು ಸಾಲು ಆಫರ್ಸ್ ಬಂದವು. ನೋಡ ನೋಡುತ್ತಲೇ ದೊಡ್ಡದಾಗಿ ಕನ್ನಡ ಸಿನಿ ರಂಗದಲ್ಲಿ ಬಿಡುವೆ ಇಲ್ಲದ ನಟನಾಗಿ ಬೆಳೆದು ನಿಂತರು ಚಿಕ್ಕಣ್ಣ. ಈ ನಟ ಮೊದಲ ಬಾರಿ ಹೀರೋ ಆಗಿ ನಟಿಸಿದ್ದು ಉಪಾಧ್ಯಕ್ಷ ಮೂಲಕ ಅಬ್ಬರಿಸಿದ್ರು. ಈಗ ಹೀರೋ ಆಗಿದ್ದರು ಕೂಡ ಅವರು ಕಾಮಿಡಿ ಪಾತ್ರಗಳನ್ನು ಮಾಡುವೆ ಎಂದು ಹಲವು ಸಂದರ್ಶನದಲ್ಲಿ ಹೇಳಿದ್ದು ವೈರಲ್ ಆಗುತ್ತಿದೆ, ಹಾಗೇ ಅಭಿಮಾನಿಗಳು ಕೂಡ ನಟ ಚಿಕ್ಕಣ್ಣ ಅವರ ಈ ಗುಣಕ್ಕೆ ಫಿದಾ ಆಗಿದ್ದಾರೆ.

45 ರೂಪಾಯಿಗೆ ಕೆಲಸ ಶುರುವಾಯ್ತು...

ಹಾಸ್ಯನಟ ಚಿಕ್ಕಣ್ಣ ಈಗ ಹೀರೋ ಆಗಿದ್ದಾರೆ, ಆದರೆ ಅವರು ಸಿನಿಮಾ ಇಂಡಸ್ಟ್ರಿಗೆ ಬಂದು ದೊಡ್ಡ ಹೆಸರು ಮಾಡುವ ಮೊದಲು ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎಂಬುದು ಗಮನಾರ್ಹ. ಹೀಗೆ ಚಿಕ್ಕಣ್ಣ ಗಾರೆ ಕೆಲಸಕ್ಕೆ ಸೇರಿದ ನಂತರ ಅವರಿಗೆ ಸಿಗುತ್ತಿದ್ದ ಹಣ ಎಷ್ಟು ಗೊತ್ತಾ? ಕೇವಲ 45 ರೂಪಾಯಿ. ಹೀಗೆ 45 ರೂಪಾಯಿಗೆ ತಮ್ಮ ಕೆಲಸ ಶುರು ಮಾಡಿದ್ದ ಚಿಕ್ಕಣ್ಣಗೆ ಇದೀಗ ಒಂದು ಸಿನಿಮಾಗೆ ಎಷ್ಟು ಕೋಟಿ ರೂಪಾಯಿ ಸಿಗುತ್ತೆ? ಉಪಾಧ್ಯಕ್ಷ ಚಿತ್ರದಲ್ಲಿ ಚಿಕ್ಕಣ್ಣಗೆ ಎಷ್ಟು ಕೋಟಿ ಸಿಕ್ಕಿದೆ ಗೊತ್ತಾ? ಅಂತಾ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ, ಜನರು ಚರ್ಚೆಯನ್ನ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+