ಚಿಕ್ಕಣ್ಣನ ಹೀರೋಯಿನ್ ಮಲೈಕಾ ವಸುಪಾಲ್ ಮಸ್ತ್ ಮಸ್ತ್ ಫೋಟೋಸ್!
ಚಿಕ್ಕಣ್ಣ ತುಂಬಾನೆ ಕಷ್ಟಪಟ್ಟು ಇದೀಗ ಹೀರೋ ಆಗಿದ್ದಾರೆ, ಹಾಗೇ ಚಿಕ್ಕಣ್ಣನ ಮೊದಲನೆ ಸಿನಿಮಾ ಭರ್ಜರಿ ಬಂಪರ್ ಕೊಟ್ಟಿದೆ. ಇಷ್ಟೆಲ್ಲಾ ಸಂಭ್ರಮಗಳ ನಡುವೆ ನಟಿ ಮಲೈಕಾಗೂ ಅಂದ್ರೆ ಚಿಕ್ಕಣ್ಣನ ಹೀರೋಯಿನ್‌ಗೆ ಕೂಡ ಭರ್ಜರಿ ಬಂಪರ್ ಸಿಕ್ಕಂತಾಗಿದೆ. ಹೀಗೆ ಈ ಜೋಡಿ ಸಿಲ್ವರ್ ಸ್ಕ್ರೀನ್ ಮೇಲೆ ಭರ್ಜರಿ ಕಮಾಲ್ ಮಾಡಿದೆ. ಇದೇ ಸಮಯದಲ್ಲಿ ನಟಿ ಮಲೈಕಾ, ಸೀರೆ ತೊಟ್ಟು ಮಿಂಚಿದ್ದಾರೆ.
'ಉಪಾಧ್ಯಕ್ಷ' ಸಿನಿಮಾ ಮೂಲಕ ಇದೀಗ ಚಿಕ್ಕಣ್ಣ ಮಿಂಚುತ್ತಿದ್ದಾರೆ. ಅದರಲ್ಲೂ ಹೀರೋ ಆಗಿ ಮೊದಲನೆ ಎಂಟ್ರಿಯಲ್ಲೇ ಚಿಕ್ಕಣ್ಣ ದೊಡ್ಡ ಹವಾ ಎಬ್ಬಿಸಿದ್ದಾರೆ. ಜೊತೆಗೆ 'ಹಿಟ್ಲರ್ ಕಲ್ಯಾಣ' ಧಾರಾವಾಹಿ ನಟಿ ಮಲೈಕಾ ವಸುಪಾಲ್ ಕೂಡ, 'ಉಪಾಧ್ಯಕ್ಷ' ಸಿನಿಮಾದಲ್ಲಿ ಮಿಂಚಿದ್ದು ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಅದರಲ್ಲೂ 'ಉಪಾಧ್ಯಕ್ಷ' ಸಿನಿಮಾ ಈಗಾಗಲೇ ಕೋಟಿ ಕೋಟಿ ರೂಪಾಯಿ ಬಾಚಿದ್ದು, ಭರ್ಜರಿ ಸೌಂಡ್ ಮಾಡುತ್ತಿದೆ.

ಈ ಸಮಯದಲ್ಲೇ ಮಲೈಕಾ ಅವರಿಗೆ ಸಿಕ್ಕಾಪಟ್ಟೆ ಆಫರ್ಸ್ ಕೂಡ ಬರುತ್ತಿವೆಯಂತೆ. ಇನ್ನು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿ ಮಲೈಕಾ ಬ್ಯುಸಿ ಆಗೋದು ಬಹುತೇಕ ಪಕ್ಕಾ ಆಗುತ್ತಿದೆ. ಹಾಗಾದರೆ ಸೀರಿಯಲ್ ಅಂದ್ರೆ ಧಾರಾವಾಹಿ ಕಥೆ ಏನು? ನಟಿ ಮಲೈಕಾ ಧಾರಾವಾಹಿಯನ್ನ ಬಿಟ್ಟು ಫುಲ್ ಟೈಂ ಸಿನಿಮಾಗೆ ಬರ್ತಾರಾ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.
ನ್ಯಾಚ್ಯುರಲ್ ಬ್ಯೂಟಿ ಮಲೈಕಾ!
'ಉಪಾಧ್ಯಕ್ಷ' ಸಿನಿಮಾ ಹೀರೋಯಿನ್ ಮಲೈಕಾ ಅವರು ನ್ಯಾಚ್ಯುರಲ್ ಬ್ಯೂಟಿ ಅಂತಾನೇ ವೈರಲ್ ಆಗುತ್ತಿದ್ದಾರೆ. ಅದರಲ್ಲೂ ಮಲೈಕಾ ಅವರಿಗೆ ಮೊದಲನೆ ಸಿನಿಮಾದಲ್ಲೇ ಕೋಟಿ, ಕೋಟಿ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಇಂತಿಪ್ಪ ನಟಿ ಮಲೈಕಾ ಅವರು ಯಾವುದೇ ಕಾಸ್ಟ್ಯೂಮ್ ಹಾಕಿದ್ರೂ ಮಿಂಚುತ್ತಾರೆ. ಸಾಂಪ್ರದಾಯಿಕ ಉಡುಗೆಯೇ ಆಗಿರಲಿ, ಅಥವಾ ಸಾಂಪ್ರದಾಯಿಕ ಉಡುಗೆಯೇ ಆಗಿರಲಿ. ನಟಿ ಮಲೈಕಾ ತೆರೆ ಮೇಲೆ ಕಮಾಲ್ ಮಾಡುತಿದ್ದಾರೆ. ಹೀಗೆ ಮಲೈಕಾ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚು ಹರಿಸಿದ್ದಾರೆ.

ದರ್ಶನ್ ಅವರಿಂದಲೂ ಹೊಗಳಿಕೆ
ಡಿ-ಬಾಸ್ ದರ್ಶನ್ ಅಂದ್ರೆ ಕನ್ನಡ ಸಿನಿಮಾ ರಂಗದಲ್ಲಿ ಒಂದು ಗತ್ತು ಇದೆ ಇನ್ನು ಇವರ ಬೆನ್ನಿಗೆ ಕೋಟ್ಯಂತರ ಅಭಿಮಾನಿಗಳ ಬೆಂಬಲವು ಇದೆ. ಹಾಗೇ ದರ್ಶನ್ ಅವರ ಆತ್ಮೀಯ ವ್ಯಕ್ತಿ ಚಿಕ್ಕಣ್ಣ ಕೂಡ ಹೀರೋ ಆಗಿ ಹೊಸ ಲೈಫ್ ಶುರು ಮಾಡಿದ್ದಾರೆ. ಹೀಗೆ ಚಿಕ್ಕಣ್ಣರ ಸಿನಿಮಾ 'ಉಪಾಧ್ಯಕ್ಷ' ನೋಡಿದ್ದರು ಡಿ-ಬಾಸ್ ದರ್ಶನ್ ಅವರು. ಈ ವೇಳೆ ನಟಿ ಮಲೈಕಾ ಅವರ ನಟನೆಯನ್ನ ಕೂಡ ದರ್ಶನ್ ಅವರು ಮೆಚ್ಚಿಕೊಂಡಿದ್ದಾರೆ. ಹಾಗೇ ಮಲೈಕಾ ಅವರು ಕೂಡ ದರ್ಶನ್ ಅವರಿಂದ ಹೊಗಳಿಕೆ ಪಡೆದಿದು ಖುಷಿಯಾಗಿದ್ದರು.
ಯಶ್ ಅವರಿಂದಲೂ ಭರ್ಜರಿ ವಿಶ್
ಚಿಕ್ಕಣ್ಣ & ರಾಕಿಂಗ್ ಸ್ಟಾರ್ ಯಶ್ ನಡುವೆ ಅಣ್ಣ ತಮ್ಮನ ರೀತಿ ಸಂಬಂಧ ಇದ್ದು. ಅದರಲ್ಲೂ ಸಿನಿಮಾ ಸಹವಾಸ ಬೇಡ ಅಂತಾ ಇದ್ದ ನಟ ಚಿಕ್ಕಣ್ಣ ಅವರಿಗೆ, ಬೆನ್ನೆಲುಬಾಗಿ ನಿಂತ ರಾಕಿಂಗ್ ಸ್ಟಾರ್ ಯಶ್ ಸಾಕಷ್ಟು ಸಹಾಯ ಮಾಡಿದ್ದಾರೆ.

ಚಿಕ್ಕಣ್ಣ ಅವರಿಗೆ ಒಳ್ಳೆ ಒಳ್ಳೆಯ ಪಾತ್ರಗಳನ್ನು ನೀಡಿ, ಅವರ ಸಿನಿಮಾಗೆ ಸಪೋರ್ಟ್ ಕೂಡ ಮಾಡಿದ್ದಾರೆ. ಹೀಗಿದ್ದಾಗ ನಟ ಚಿಕ್ಕಣ್ಣ ಹೀರೋ ಆಗಿ ಎಂಟ್ರಿ ಕೊಟ್ಟಿದ್ದು ಉಪಾಧ್ಯಕ್ಷನಿಗೆ ಯಶ್ ತಬ್ಬಿಕೊಂಡು ಶುಭ ಕೋರಿದ್ದರು. ಇದೇ ವೇಳೆ, ನಟಿ ಮಲೈಕಾ ಅವರಿಗೂ ವಿಶ್ ಮಾಡಿದ್ದರು ನಟ ಯಶ್.
ಕನ್ನಡ ಸಿನಿಮಾ ಕ್ಷೇತ್ರಕ್ಕೆ ನಟ ಚಿಕ್ಕಣ್ಣ 2011ರಲ್ಲಿ ಎಂಟ್ರಿ ಕೊಟ್ಟರು. ಅವರು ಕಿರಾತಕ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದಿದ್ದರು. ಬಳಿಕ ಚಿಕ್ಕಣ್ಣಗೆ, ಸಾಲು ಸಾಲು ಆಫರ್ಸ್ ಬಂದವು. ನೋಡ ನೋಡುತ್ತಲೇ ದೊಡ್ಡದಾಗಿ, ಕನ್ನಡ ಸಿನಿ ರಂಗದಲ್ಲಿ ಬಿಡುವೆ ಇಲ್ಲದ ನಟನಾಗಿ ಬೆಳೆದು ನಿಂತರು ಚಿಕ್ಕಣ್ಣ. ಈ ನಟ ಮೊದಲ ಬಾರಿ ಹೀರೋ ಆಗಿ ನಟಿಸಿದ್ದು, 'ಉಪಾಧ್ಯಕ್ಷ' ಮೂಲಕ ಅಬ್ಬರಿಸಿದ್ದಾರೆ. ಇದೇ ಸಮಯದಲ್ಲಿ ನಟಿ ಮಲೈಕಾ ಕೂಡ ಹೊಸ ಜೀವನ ಶುರು ಮಾಡಿ, ಸಿನಿಮಾ ಜೀವನದಲ್ಲಿ ಮಿಂಚಿದ್ದಾರೆ.












Click it and Unblock the Notifications