Master Rohith: ಕಾಟೇರ ಸಿನಿಮಾದ ಬಾಲ ನಟ ರೋಹಿತ್ ಕಾರು ಅಪಘಾತ

ಮೈಸೂರು ನವೆಂಬರ್ 17: ಇತ್ತೀಚಿಗೆ 'ಕಾಟೇರ' ಸಿನಿಮಾ ಸೇರಿದಂತೆ ಕನ್ನಡದ ಹಲವಾರು ಸಿನಿಮಾಗಳಲ್ಲಿ ಬಾಲ ನಟನಾಗಿರುವ ರೋಹಿತ್, ಪ್ರಯಾಣ ಮಾಡುತ್ತಿದ್ದ ವೇಳೆ ಅಪಘಾತವಾಗಿದೆ. ಬಾಲ ನಟನೆಗೆ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದ ರೋಹಿತ್‌ಗೆ ನಿನ್ನೆ ತಡರಾತ್ರಿ ಅಪಘಾತವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶ್ರೀರಂಗಪಟ್ಟಣದಿಂದ ಬೆಂಗಳೂರಿಗೆ ಬರುವ ಹಾದಿಯಲ್ಲಿ ಈ ಅಪಘಾತ ಸಂಭವಿಸಿದೆ. ಕೇರಳದ ಬಸ್‌ವೊಂದು ರೋಹಿತ್ ಅವರಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಕಾರಿನಲ್ಲಿ ಇದ್ದ ರೋಹಿತ್ ಹಾಗೂ ಅವರ ತಾಯಿಗೂ ಗಾಯಗಳಾಗಿವೆ. ಸದ್ಯ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ರೋಹಿತ್.

sandalwood national award winner child actor rohith injured badly in car accident

ಮಾಸ್ಟರ್ ರೋಹಿತ್ ಅವರಿದ್ದ KA11 N 4173 ಸಂಖ್ಯೆಯ ಕಾರು ಹಾಗೂ ಕೇರಳ ಬಸ್‌ ಮುಖಾಮುಖಿ ಡಿಕ್ಕಿಯಾಗಿದೆ. ಮಕ್ಕಳ ದಿನಾಚರಣೆ ಅಂಗವಾಗಿ ಶ್ರೀರಂಗಪಟ್ಟಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಸ್ಟರ್ ರೋಹಿತ್ ಭಾಗಿಯಾಗಿದ್ದರು. ಈ ಕಾರ್ಯಕ್ರಮವನ್ನು ಮುಗಿಸಿಕೊಂಡು ವಾಪಾಸ್‌ ಆಗುವಾಗ ಈ ಅಪಘಾತ ಸಂಭವಿಸಿದೆ.

ಅಪಘಾತದ ವೇಳೆ ರೋಹಿತ್ ಹಾಗೂ ಅವರ ತಾಯಿ, ಒಬ್ಬ ಉಪನ್ಯಾಸಕ ಹಾಗೂ ರೋಹಿತ್‌ ಗೆಳೆಯರು ಇದ್ದರೆಂದು ತಿಳಿದು ಬಂದಿದೆ. ಕಾರಿನಲ್ಲಿ ಇದ್ದ ಎಲ್ಲರಿಗೂ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ವೈದ್ಯರು ಪರೀಕ್ಷಿಸಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆದರೆ ರೋಹಿತ್ ಅವರ ತಲೆ ಬುರುಡೆಗೆ ತೀವ್ರ ಪೆಟ್ಟಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಜೊತೆಗೆ ರೋಹಿತ್‌ ಅವರ ವಸಡು ಒಡೆದು ಹೋಗಿದ್ದು ಅವರಿಗೀಗ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ರೋಹಿತ್ ತಾಯಿಗೂ ಎರಡೂ ಕಾಲುಗಳಿಗೆ ಪೆಟ್ಟಾಗಿದ್ದು ಮೂಳೆ ಮುರಿದಿವೆ ಎನ್ನಲಾಗುತ್ತಿದೆ. ಜೊತೆಗೆ ಜೊತೆಯಲ್ಲಿ ಇದ್ದ್ ಉಪನ್ಯಾಸಕ ಹಾಗೂ ರೋಹಿತ್ ಸ್ನೇಹಿತರಿಗೂ ತೀವ್ರ ಗಾಯಗಳಾಗಿವೆ.

ಮಾಸ್ಟರ್‌ ರೋಹಿತ್ ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ಬಾಲ ನಟರಾಗಿದ್ದಾರೆ. ಇವರ ಅಭಿನಯಕ್ಕೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಜೊತೆಗೆ ಕಾಟೇರ ಸಿನಿಮಾದಲ್ಲೂ ರೋಹಿತ್ ನಟನೆ ಮಾಡಿದ್ದು ರಾಷ್ಟ್ರಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ಅಲ್ಲದೆ ಕಾಟೇರಾ ಸಿನಿಮಾದಲ್ಲಿ ರೋಹಿತ್‌ ನಟನೆಯನ್ನು ಕಂಡು ನಟ ದರ್ಶನ್ ಅವರೂ ಕೂಡ ಹೊಗಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+